BBMP: ವಾರ್ಡ್ ಮೀಸಲಾತಿ ವಿಚಾರದಲ್ಲಿ ಭಾರೀ ಗೊಂದಲ; ಮೂರು ಸಾವಿರ ಸನಿಹ ಆಕ್ಷೇಪಣೆ

ಬಿಬಿಎಂಪಿ ಚುನಾವಣೆಗೆ ನಿಧಾನವಾಗಿ ಸರ್ಕಾರ ಸಿದ್ಧತೆಗಳನ್ನ ಮಾಡಿಕೊಳ್ತಿದೆ. ಸುಪ್ರಿಂ ಕೊಟ್ಟ ಡೆಡ್ ಲೈನ್ ಒಳಗೆ ಚುನಾವಣೆ ಪ್ರಕ್ರಿಯೆ ಮುಗಿಸ್ಬೇಕು ಅಂತ ರಾಜ್ಯ ತೀರ್ಮಾನ ಮಾಡಿದ್ದು, ಈಗಾಗಲೇ ವಾರ್ಡ್ ಮರುವಿಂಗಡಣೆಯನ್ನ ಫೈನಲ್ ಮಾಡಿದೆ.

ಬಿಬಿಎಂಪಿ

ಬಿಬಿಎಂಪಿ

  • Share this:
ಬೆಂಗಳೂರು - ಬಿಬಿಎಂಪಿ ವಾರ್ಡ್ ಮರುವಿಂಗಡಣೆ (bbmp ward delimitation 2022) ಸಾಕಷ್ಟು ಆಕ್ಷೇಪಣೆಗಳ ಮಧ್ಯೆ ಮುಗಿಯಿತು. ಇದೀಗ ಮೀಸಲಾತಿ ವಿಚಾರದಲ್ಲಿ ಆರಂಭದಿಂದಲೇ ಕೈ ಪಾಳಯ (Congress) ವಿರೋಧಿಸ್ತಿದೆ. ಒಂದಲ್ಲ, ಎರಡಲ್ಲ ಬರೋಬ್ಬರಿ ಮೂರು ಸಾವಿರ ಸನಿಹ ಆಕ್ಷೇಪಣೆ ಬಂದಿದ್ದು, ಕೈ ನಾಯಕರು ಇದೀಗ ಕೋರ್ಟ್ (Court) ಹೋಗಲು ರೆಡಿಯಾಗ್ತಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಇನ್ನೂ ಕಾಲ ಕೂಡಿ ಬರ್ತಿಲ್ಲ. ಬೆಂಗಳೂರು 198 ಇದ್ದ ವಾರ್ಡ್​ಗಳ ಸಂಖ್ಯೆಯನ್ನ ಮರುವಿಂಗಡಣೆ ಮಾಡಿ 243 ಕ್ಕೆ ಏರಿಕೆ ಮಾಡಿದಾಗ್ಲೂ ಸಾಕಷ್ಟು ವಿರೋಧ ಕೇಳಿ ಬಂದಿತ್ತು. ಇದೀಗ ಮೀಸಲಾತಿ ಪ್ರಕಟ ವಿಚಾರದಲ್ಲೂ ಅದೇ ರೀತಿ ಆಗಿದೆ. ಆರಂಭದಿಂದಲೇ ಕೈ ನಾಯಕರು ಪ್ರತಿಭಟನೆ (Congress Leaders) ಮಾಡಿ ಹೋರಾಟ ಮಾಡಿದ್ರು.ಇದೀಗ ಮೀಸಲಾತಿ ಕರಡು‌ ಆಕ್ಷೇಪಣೆ ಸಲ್ಲಿಸಲು ಬುಧವಾರ‌ ಕೊನೆಯ ದಿನವಾಗಿದೆ. ಮಂಗಳವಾರದವರೆಗೆ ಎರಡು ಸಾವಿರ ಆಕ್ಷೇಪಣೆ ಸಲ್ಲಿಕೆಯಾಗಿದ್ದವು. ಕೊನೆಯ ದಿನ ಸಾವಿರ ಸನಿಹ ಆಕ್ಷೇಪಣೆಗಳು ಸರ್ಕಾರಕ್ಕೆ ಸಲ್ಲಿಕೆಯಾಗಿದೆ.

ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಮೀಸಲಾತಿ ಪ್ರಕಟಿಸಿರುವ ಬಿಬಿಎಂಪಿ (Bruhat Bengaluru Mahanagara Palike), ಮೀಸಲಾತಿ ಪಟ್ಟಿಗೆ ಸಾರ್ವಜನಿಕರಿಂದ, ವಿರೋಧ ಪಕ್ಷದಿಂದ ಮಾತ್ರವಲ್ಲ ಸ್ವಪಕ್ಷದಲ್ಲೆ ಕೆಲವರಿಂದ ಆಕ್ಷೇಪವಾಗಿದೆ.

ಮೀಸಲಾತಿಯಲ್ಲಿರೋ ಪ್ರಮುಖ ಆಕ್ಷೇಪಗಳು

ಬಿಬಿಎಂಪಿ - 2020ರ ಕಾಯ್ದೆ ಉಲ್ಲಂಘನೆ

ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ನೀಡದಿರೋದು

ಕೆಲ ವಿಧಾನಸಭಾ ಕ್ಷೇತ್ರದಲ್ಲಿ ಮೀಸಲಾತಿ ಗೊಂದಲದ ಗೂಡಾಗಿರುವುದು

ಪುಲಕೇಶಿ ನಗರ ವಿಧಾನಸಭಾ ಕ್ಷೇತ್ರ  -ಎಲ್ಲ ಏಳು ವಾರ್ಡ್ ಗಳಲ್ಲಿ ಮೀಸಲಾತಿ ನೀಡಿರುವುದು

ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರ- 5 ವಾರ್ಡ್ ಸಾಮಾನ್ಯ

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ - 5 ವಾರ್ಡ್ ಸಾಮಾನ್ಯ

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ -  4 ವಾರ್ಡ್ ಸಾಮಾನ್ಯ ಮೀಸಲಾತಿ

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ - 5 ವಾರ್ಡ್ ಗಳಿಗೆ ಸಾಮಾನ್ಯ ಮೀಸಲಾತಿ

ಕಾವಲ್ ಬೈರಸಂದ್ರ ವಾರ್ಡ್ ನಲ್ಲಿ ಹಿಂದೆ ಇದ್ದ ಮೀಸಲಾತಿ ಮುಂದುವರಿಕೆ

ಇದನ್ನೂ ಓದಿ:  National Flag: ಧ್ವಜ ಖರೀದಿಸದಿದ್ದರೆ ರೇಷನ್ ಕೊಡಲ್ವಾ? ಬಿಜೆಪಿ ಎಂಪಿಯ ಹೇಳಿಕೆಯಿಂದ ವಿವಾದ

ಇಷ್ಟೆಲ್ಲಾ ಗೊಂದಲಗಳಿರೋದ್ರಿಂದ ಇದು ಬಿಜೆಪಿಗೆ ಅನುಕೂಲವಾಗೋ ನಿಟ್ಟಿನಲ್ಲಿ ಇದೆ ಅನ್ನೋದು ಕಾಂಗ್ರೆಸ್ ನ ವಾದ. ಇದಕ್ಕೆ ಪೂರಕ ಎನ್ನುವಂತೆ ಏಳು ದಿನದಲ್ಲಿ ಬರೋಬ್ಬರಿ ಮೂರವರೆ ಸಾವಿರ ಆಕ್ಷೇಪಣೆಗಳು ಬಂದಿವೆ.

bbmp-ward-reservation-over-3000-objections-shtv-mrq
ಸಾಂಕೇತಿಕ ಚಿತ್ರ


ಕಾನೂನು ಹೋರಾಟದ ಎಚ್ಚರಿಕೆ

ಕೂಡಲೇ ಈ ಎಲ್ಲಾ ಗೊಂದಲಗಳನ್ನ ಸರಿಪಡಿಸದಿದ್ರೆ ಕಾನೂನು ಹೋರಾಟ ಮಾಡೋ ಎಚ್ಚರಿಕೆಯನ್ನ ಕಾಂಗ್ರೆಸ್ ನೀಡಿದೆ.

ಒಟ್ಟಿನಲ್ಲಿ ವಾರ್ಡ್ ಮೀಸಲಾತಿ ವಿಚಾರದಲ್ಲಿ ಆಕ್ಷೇಪಣೆ ಸಲ್ಲಿಸೋಕೆ ಇಂದು ಕೊನೆಯ ದಿನವಾಗಿತ್ತು. ಇದೀಗ ಬಂದಿರೋ ದೂರುಗಳನ್ನು ಆಧರಿಸಿ ನಗರಾಭಿವೃದ್ಧಿ ಇಲಾಖೆ ಕೆಲ ಬದಲಾವಣೆ ಮಾಡಿ ಅಂತಿಮವಾಗಿ ಅಧಿಸೂಚನೆ ಪ್ರಕಟ ಮಾಡಲಿದೆ.

ಚುನಾವಣೆಗ ಬಿಜೆಪಿ ಸಿದ್ಧತೆ

ಬಿಬಿಎಂಪಿ ಚುನಾವಣೆಗೆ ನಿಧಾನವಾಗಿ ಸರ್ಕಾರ ಸಿದ್ಧತೆಗಳನ್ನ ಮಾಡಿಕೊಳ್ತಿದೆ. ಸುಪ್ರಿಂ ಕೊಟ್ಟ ಡೆಡ್ ಲೈನ್ ಒಳಗೆ ಚುನಾವಣೆ ಪ್ರಕ್ರಿಯೆ ಮುಗಿಸ್ಬೇಕು ಅಂತ ರಾಜ್ಯ ತೀರ್ಮಾನ ಮಾಡಿದ್ದು, ಈಗಾಗಲೇ ವಾರ್ಡ್ ಮರುವಿಂಗಡಣೆಯನ್ನ ಫೈನಲ್ ಮಾಡಿದೆ. ಆದ್ರೆ ತರಾತುರಿಯಲ್ಲಿ ನಿಗಧಿ ಮಾಡಿರೋ ಮೀಸಲಾತಿ ವಿಚಾರಕ್ಕೆ ಭಾರೀ ವಿರೋಧ ವ್ಯಕ್ತವಾಗ್ತಿದೆ.

243 ವಾರ್ಡ್​ಗಳಾಗಿ 24 ಹೊಸ ವಾರ್ಡ್​

ಬಿಬಿಎಂಪಿ ಎಲೆಕ್ಷನ್​ ನಡೆಸಲು ಸಜ್ಜಾಗುತ್ತಿರೋ ಸರ್ಕಾರ, ಜುಲೈ 14ರಂದು ಬಿಬಿಎಂಪಿ ವಾರ್ಡ್ ಮರು ವಿಂಗಡಣೆ ಮಾಡಿ ಅಂತಿಮ ಆದೇಶ ಪ್ರಕಟಿಸಿದೆ. 198 ಇದ್ದ ವಾರ್ಡ್ ಗಳನ್ನು (Ward) ಡಿ ಲಿಮಿಟೇಷನ್ (Delimitation) ಮಾಡಿ‌ 243 ವಾರ್ಡ್​ಗಳಾಗಿ ವಿಂಗಡಿಸಿದೆ. ಸಾರ್ವಜನಿಕ ವಲಯದಿಂದ ಬಂದಿದ್ದ 2,500ಕ್ಕೂ ಅಧಿಕ ಆಕ್ಷೇಪಣಾ ಅರ್ಜಿ ವಿಲೇವಾರಿ ಮುಕ್ತಾಯಗೊಂಡಿದೆ.

bbmp-ward-reservation-over-3000-objections-shtv-mrq
ಸಾಂದರ್ಭಿಕ ಚಿತ್ರ


ಇದನ್ನೂ ಓದಿ:  Bengaluru: ಪತ್ನಿ ತಲೆ ಮೇಲೆ ಮೂತ್ರ ವಿಸರ್ಜಿಸಿ ಕಿರುಕುಳ, ಇವನೆಂಥಾ ಗಂಡ?

ಸಾರ್ವಜನಿಕರಿಂದ ಸಲಹೆ, ಸೂಚನೆಗಳನ್ನು ಅಳವಡಿಸಿ ಸಣ್ಣ ಪುಟ್ಟ ಬದಲಾವಣೆ ಮಾಡಿ ಡಿಲಿಮಿಟೇಷನ್ ಮಾಡಿ ರಾಜ್ಯ ಸರ್ಕಾರ ಅಧಿಕೃತ ಪ್ರಕಟಣೆ ಹೊರಡಿಸಿದೆ. ನಟ ದಿವಂಗತ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್​ (Puneeth Rajkumar) ಅವರಿಗೆ ಮತ್ತೊಮ್ಮೆ ಸರ್ಕಾರ ಗೌರವ ಸಲ್ಲಿಸಿದೆ. ಬಿಬಿಎಂಪಿ ವಾರ್ಡ್​ಗಳ ಮರು ವಿಂಗಡಣೆ ಮಾಡಿ, ವಾರ್ಡ್​ ನಂಬರ್​ 55ಕ್ಕೆ ದಿವಂಗತ ನಟ ಪುನೀತ್ ರಾಜ್ ಕುಮಾರ್ ಹೆಸರು ನಾಮಕರಣ ಮಾಡಿದೆ.
Published by:Mahmadrafik K
First published: