ಬಿಬಿಎಂಪಿ 2 ವಾರ್ಡ್​ಗಳ ಉಪಚುನಾವಣೆ ಫಲಿತಾಂಶ; ಕಾವೇರಿಪುರದಲ್ಲಿ ಬಿಜೆಪಿ, ಸಗಾಯಪುರದಲ್ಲಿ ಮೈತ್ರಿ ಅಭ್ಯರ್ಥಿ ಗೆಲುವು

ಉಪಮೇಯರ್ ರಮೀಳಾ ಉಮಾಶಂಕರ್ ಮತ್ತು ವಿ.ಏಳುಮಲೈ ನಿಧನದಿಂದ ತೆರವಾಗಿದ್ದ ಕಾವೇರಿಪುರ ಮತ್ತು ಸಗಾಯಪುರ ವಾರ್ಡ್​ಗಳಿಗೆ ಮೇ 29ರಂದು ಉಪಚುನಾವಣೆ ನಡೆದಿತ್ತು.

HR Ramesh | news18
Updated:May 31, 2019, 12:16 PM IST
ಬಿಬಿಎಂಪಿ 2 ವಾರ್ಡ್​ಗಳ ಉಪಚುನಾವಣೆ ಫಲಿತಾಂಶ; ಕಾವೇರಿಪುರದಲ್ಲಿ ಬಿಜೆಪಿ, ಸಗಾಯಪುರದಲ್ಲಿ ಮೈತ್ರಿ ಅಭ್ಯರ್ಥಿ ಗೆಲುವು
ಪಲ್ಲವಿ ಬಸಪ್ಪ, ಪಳನಿ ಅಮ್ಮಾಳ್
HR Ramesh | news18
Updated: May 31, 2019, 12:16 PM IST


ಬೆಂಗಳೂರು: ಬಿಬಿಎಂಪಿಯ ಎರಡು ವಾರ್ಡ್​ಗಳಿಗೆ ಮೌನ್ನೆ ನಡೆದಿದ್ದ ಉಪಚುನಾವಣೆಯಲ್ಲಿ ಬಿಜೆಪಿ ಒಂದರಲ್ಲಿ ಗೆಲುವು ಕಂಡರೆ, ಮತ್ತೊಂದು ವಾರ್ಡ್​ನಲ್ಲಿ ಮೈತ್ರಿ ಅಭ್ಯರ್ಥಿ ಗೆಲುವಿನ ನಗೆ ಬೀರಿದ್ದಾರೆ. ಕಾವೇರಿಪುರ ವಾರ್ಡ್​ನಲ್ಲಿ ಬಿಜೆಪಿ ಅಭ್ಯರ್ಥಿ ಪಲ್ಲವಿ ಚನ್ನಪ್ಪ ಹಾಗೂ ಸಗಾಯಪುರದಲ್ಲಿ ಮೈತ್ರಿ ಅಭ್ಯರ್ಥಿ ಪಳನಿ ಅಮ್ಮಾಳ್ ಜಯಶೀಲರಾಗಿದ್ದಾರೆ.

Loading...

ಉಪಮೇಯರ್ ರಮೀಳಾ ಉಮಾಶಂಕರ್ ಮತ್ತು ವಿ.ಏಳುಮಲೈ ನಿಧನದಿಂದ ತೆರವಾಗಿದ್ದ ಕಾವೇರಿಪುರ ಮತ್ತು ಸಗಾಯಪುರ ವಾರ್ಡ್​ಗಳಿಗೆ ಮೇ 29ರಂದು ಉಪಚುನಾವಣೆ ನಡೆದಿತ್ತು. ಕಾವೇರಿಪುರದಲ್ಲಿ ಶೇ.44.82ರಷ್ಟು ಮತದಾನ ಹಾಗೂ ಸಗಾಯಪುರದಲ್ಲಿ ಶೇ.39.54ರಷ್ಟು ಮತದಾನವಾಗಿತ್ತು. ಎರಡು ವಾರ್ಡ್​ಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಮತ ಎಣಿಕೆ ಕೇಂದ್ರಗಳ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ 11 ಗಂಟೆಗೆ ಎರಡು ಕ್ಷೇತ್ರಗಳ ಫಲಿತಾಂಶ ಹೊರಬಿದ್ದಿದೆ.
ಮೈತ್ರಿ ಆಡಳಿತದ ಗೂಂಡಾಗಿರಿ ಮುಂದೆ ಬಿಜೆಪಿಯ ನೈತಿಕತೆ ಗೆದ್ದಿದೆ. ಮೈತ್ರಿ ಸರ್ಕಾರದ ದುರಾಡಳಿತಕ್ಕೆ ಜನತೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಕಾವೇರಿಪುರದ ನೂತನ ಸದಸ್ಯ ಉಮೇಶ್​ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.
ಕಾವೇರಿಪುರ ವಾರ್ಡ್​ನಲ್ಲಿ ಬಿಜೆಪಿ ಅಭ್ಯರ್ಥಿ ಪಲ್ಲವಿ ಚನ್ನಪ್ಪ 9507 ಮತ ಗಳಿಸಿದ್ದರೆ, ಮೈತ್ರಿ ಅಭ್ಯರ್ಥಿ ಸುಶೀಲಾ ಸುರೇಶ್​ 9429 ಮತಗಳನ್ನು ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ಕೇವಲ 78 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ಸಗಾಯಪುರ ವಾರ್ಡ್​ನಲ್ಲಿ ಕಾಂಗ್ರೆಸ್​ನ ಪಳನಿ ಅಮ್ಮಾಳ್​ 7182 ಮತಗಳನ್ನು ಪಡೆದಿದ್ದರೆ, ಪಕ್ಷೇತರ ಅಭ್ಯರ್ಥಿ ಮಾರಿಮುತ್ತು 4143 ಮತಗಳನ್ನು ಪಡೆದುಕೊಂಡಿದ್ದಾರೆ. ಇನ್ನು ಬಿಜೆಪಿ ಅಭ್ಯರ್ಥಿ ಎ.ಜೇಯೇರೀಮ್ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

First published:May 31, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...