ಬಿಬಿಎಂಪಿ ಟಾಯ್ಲೆಟ್ ಕರ್ಮಕಾಂಡ: ನ್ಯೂಸ್18 ವರದಿಗೆ ಎಚ್ಚೆತ್ತ ಬಿಬಿಎಂಪಿ


Updated:August 28, 2018, 7:12 PM IST
ಬಿಬಿಎಂಪಿ ಟಾಯ್ಲೆಟ್ ಕರ್ಮಕಾಂಡ: ನ್ಯೂಸ್18 ವರದಿಗೆ ಎಚ್ಚೆತ್ತ ಬಿಬಿಎಂಪಿ
ಬಿಬಿಎಂಪಿ ಸುಲಭ್ ಶೌಚಾಲಯ

Updated: August 28, 2018, 7:12 PM IST
- ಶ್ಯಾಮ್ ಎಸ್. ನ್ಯೂಸ್18 ಕನ್ನಡ

ಬೆಂಗಳೂರು(ಆ. 28): ಬಿಬಿಎಂಪಿ ವ್ಯಾಪ್ತಿಯಲ್ಲಿ ಪಾಲಿಕೆಗೆ ಸೇರಿದ 780 ಸಾರ್ವಜನಿಕ ಶೌಚಾಲಯಗಳಿದ್ದು, ಆ ಪೈಕಿ 520 ಟಾಯ್ಲೆಟ್ ಗಳನ್ನು ಯಾರು ಯಾರಿಗೆ ಟೆಂಡರ್ ಕೊಡಲಾಗಿದೆ? ಅವರ ಟೆಂಡರ್ ಅವಧಿ ಯಾವಾಗ ಮುಗಿಯುತ್ತೆ? ಎಷ್ಟು ಕಲೆಕ್ಷನ್ ಆಗಿದೆ ? ಎಂಬ ಮಾಹಿತಿಯೇ ಪಾಲಿಕೆ ಬಳಿಯಿಲ್ಲ. ಅದೂ ಅಲ್ಲದೆ ಎಷ್ಟೋ ಟಾಯ್ಲೆಟ್​ಗಳ ಟೆಂಡರ್ ಅವಧಿ ಮುಗಿದಿದ್ದರೂ ರಾಜಕೀಯ ನಾಯಕರ ಚೇಲಾಗಳು ಅಕ್ರಮವಾಗಿ ಟಾಯ್ಲೆಟ್​ನಲ್ಲಿ ಕಲೆಕ್ಷನ್ ಮಾಡ್ತಿದ್ದಾರೆ. ನಿಗದಿತ ಈ ವಿಷಯವನ್ನು ಹಾಗೂ ಇಲ್ಲಿ ಟೆಂಡರ್ ಪಡೆಯೋಕೆ ಯಾರಾರ ಪ್ರಭಾವ ಬೇಕು ಎಂಬುದನ್ನ ನ್ಯೂಸ್18 ಕನ್ನಡ ಆಗಸ್ಟ್ 11ರಂದು ಕುಟುಕು ಕಾರ್ಯಾಚರಣೆಯಲ್ಲಿ ಬಹಿರಂಗ ಪಡಿಸಿತ್ತು. ಈ ವರದಿಯಿಂದ ಎಚ್ಚೆತ್ತುಕೊಂಡ ಬಿಬಿಎಂಪಿ ವಾರ್ಡ್ ಮಟ್ಟದ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಇಮ್ರಾನ್ ಪಾಷ ಅವರು, ಈ ಶೌಚಾಲಯಗಳ ಕುರಿತು ಸಮರ್ಪಕವಾಗಿ ನಿರ್ವಹಣೆ ಮಾಡುವಂತೆ ಪಾಲಿಕೆ ಆಯುಕ್ತರಿಗೆ ಪತ್ರ ಬರೆದು ಕೋರಿದ್ದಾರೆ. ಅಲ್ಲದೆ ನಗರದಲ್ಲಿರುವ ಒಟ್ಟು ಶೌಚಾಲಯಗಳ ಸಂಖ್ಯೆ, ಖಾಸಗಿ ನಿರ್ವಹಣೆಗೆ ನೀಡಿರುವ ಶೌಚಾಲಯಗಳ ಸಂಖ್ಯೆ ಹಾಗೂ ಬೂಟ್ ಆಧಾರದ ಮೇಲೆ ನಿರ್ವಹಣೆ ಮಾಡುತ್ತಿರುವ ಹಾಗೂ ನಿವೃತ್ತ ಪೌರ ಕಾರ್ಮಿಕರ ಮುಖಾಂತರ ನಿರ್ವಹಣೆ ಮಾಡುತ್ತಿರುವ ಟಾಯ್ಲೆಟ್​ಗಳ ಸಂಖ್ಯೆಯ ಬಗ್ಗೆ ಮಾಹಿತಿ ನೀಡುವಂತೆ ಕೋರಿದ್ದಾರೆ.

ಬಿಬಿಎಂಪಿ ಶೌಚಾಲಯ ಕರ್ಮಕಾಂಡ; ನ್ಯೂಸ್18 ರಿಯಾಲಿಟಿ ಚೆಕ್​ನಲ್ಲಿ ಹಗರಣ ಬಯಲು
First published:August 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...