ಶೀಘ್ರವೇ ಏರಿಕೆ ಆಗಲಿದೆ ಇಂದಿರಾ ಕ್ಯಾಂಟೀನ್​ ಆಹಾರ ದರ; ಬಿಬಿಎಂಪಿ ಚಿಂತನೆ

ಗುತ್ತಿಗೆದಾರ ಸದ್ಯ ಒಂದು ಊಟಕ್ಕೆ 22 ರೂಪಾಯಿ ಚಾರ್ಜ್ ಮಾಡುತ್ತಿದ್ದಾರೆ. ಈ ಪೈಕಿ ಸರ್ಕಾರ ಮತ್ತು ಬಿಬಿಎಂಪಿ 12 ರೂಪಾಯಿ ಭರಿಸಿ, ಗ್ರಾಹಕರಿಗೆ 10 ರೂಪಾಯಿಗೆ ನೀಡಲಾಗುತ್ತಿದೆ. ಆದರೆ, ಈಗ ಬೆಲೆ ಏರಿಕೆಗೆ ಚಿಂತನೆ ನಡೆಸಲಾಗಿದೆ.

ಇಂದಿರಾ ಕ್ಯಾಂಟೀನ್​

ಇಂದಿರಾ ಕ್ಯಾಂಟೀನ್​

  • Share this:
ಬೆಂಗಳೂರು (ಫೆ.29): ಇಂದಿರಾ ಕ್ಯಾಂಟೀನ್​ನಲ್ಲಿ ಕಡಿಮೆ ದರದಲ್ಲಿ ಜನಸಾಮನ್ಯರಿಗೆ ಊಟ ನೀಡಲಾಗುತ್ತಿದೆ. ಇದರಿಂದ ಬಿಬಿಎಂಪಿಗೆ ತೀವ್ರ ಹೊರೆ ಆಗುತ್ತಿದ್ದು, ಇದನ್ನು ತಪ್ಪಿಸಲು ಊಟ ಹಾಗೂ ತಿಂಡಿ ದರ ಪರಿಷ್ಕರಣೆ ಮಾಡಲು ಚಿಂತನೆ ನಡೆಸಲಾಗಿದೆ.

ಇಂದಿರಾ ಕ್ಯಾಂಟೀನ್​ನಲ್ಲಿ ಹಾಲಿ 10 ರೂಪಾಯಿಗೆ ಊಟ ಹಾಗೂ 5 ರೂಪಾಯಿಗೆ ತಿಂಡಿ ಸಿಗುತ್ತಿದೆ. ಶೀಘ್ರವೇ ದರ ಪರಿಷ್ಕರಣೆ ನಡೆಯಲಿದೆ. ಹೊಸ ದರ ಜಾರಿಗೆ ಬಂದರೆ ಊಟದ ಬೆಲೆ 15 ರೂಪಾಯಿ ಹಾಗೂ ತಿಂಡಿ ಬೆಲೆ 10 ರೂಪಾಯಿ ಆಗಲಿದೆ. ಹೊರೆ ತಪ್ಪಿಸಲು ಈ ಕ್ರಮ ಅನಿವಾರ್ಯ ಎನ್ನುವುದು ಬಿಬಿಎಂಪಿ ಮೂಲಗಳ ಮಾಹಿತಿ.

ಗುತ್ತಿಗೆದಾರ ಸದ್ಯ ಒಂದು ಊಟಕ್ಕೆ 22 ರೂಪಾಯಿ ಚಾರ್ಜ್ ಮಾಡುತ್ತಿದ್ದಾರೆ. ಈ ಪೈಕಿ ಸರ್ಕಾರ ಮತ್ತು ಬಿಬಿಎಂಪಿ 12 ರೂಪಾಯಿ ಭರಿಸಿ, ಗ್ರಾಹಕರಿಗೆ 10 ರೂಪಾಯಿಗೆ ನೀಡಲಾಗುತ್ತಿದೆ. ಪ್ರತಿ ಊಟಕ್ಕೆ 12 ರೂಪಾಯಿ ಸಬ್ಸಿಡಿ ಭರಿಸುತ್ತಿರುವುದು ದೊಡ್ಡ ಹೊರೆಯಾಗಿದೆ.

ಇದನ್ನೂ ಓದಿ: ಆಡಳಿತ - ವಿರೋಧ ಪಕ್ಷಗಳ ನಡುವಿನ ಜಗಳದಲ್ಲಿ ಬಡವಾದ ಇಂದಿರಾ ಕ್ಯಾಂಟೀನ್; ಬಡವರ ತುತ್ತಿಗೂ ಕೈಇಡಲಿದೆಯಾ ಸರ್ಕಾರ?

ಕಳೆದ ಒಂದು ವರ್ಷದಿಂದ ಸರ್ಕಾರ ಇಂದಿರಾ ಕ್ಯಾಂಟೀನ್​ಗೆ ಅನುದಾನ ನೀಡಿಲ್ಲ. ಬಿಬಿಎಂಪಿಯೇ ಈ ಖರ್ಚನ್ನು ನಿರ್ವಹಣೆ ಮಾಡುತ್ತಿದೆ. ಹೀಗಾಗಿ, ಈ ಬಾರಿ ಇಂದಿರಾ ಕ್ಯಾಂಟೀನ್​ಗೆ ಹೊಸದಾಗಿ ಟೆಂಡರ್ ಆಹ್ವಾನಿಸಿದೆ. ಹೊಸ ಗುತ್ತಿಗೆ ಜೊತೆ ಹೊಸ ದರ ಜಾರಿಗೆ ತರಲು ಚಿಂತನೆ ನಡೆದಿದೆ.

ಹಾಲಿ ದರ.
ಊಟ 10 ರೂಪಾಯಿ.
ಬೆಳಗ್ಗಿನ ತಿಂಡಿ 5 ರೂಪಾಯಿ.

ಪರಿಷ್ಕೃತ ದರ (ಜಾರಿಗೆ ಬಂದಲ್ಲಿ)
ಊಟ 15 ರೂಪಾಯಿ.
ಬೆಳಗ್ಗಿನ ತಿಂಡಿ 10 ರೂಪಾಯಿ.

ವಿರೋಧ ವ್ಯಕ್ತಪಡಿಸಿದ್ದ ಬಿಜೆಪಿ:

ಬೆಳಗ್ಗೆ 5 ರೂ. ಗೆ ತಿಂಡಿ ಹಾಗೂ ಉಳಿದ ಎರಡೂ ಹೊತ್ತು 10 ರೂ. ಗೆ ಊಟ ಕೊಡುವ ಈ ಯೋಜನೆ ಅಂದಿನ ವಿರೋಧ ಪಕ್ಷವಾದ ಬಿಜೆಪಿಯ ವ್ಯಾಪಕ ಟೀಕೆಗೆ ಗುರಿಯಾಗಿದ್ದರೂ, ಜನರ ನಡುವೆ ಈ ಯೋಜನೆ ಭಾರೀ ಮೆಚ್ಚುಗೆಗೆ ಪಾತ್ರವಾಗಿದ್ದು ಮಾತ್ರ ಸುಳ್ಳಲ್ಲ.

ಬಿಬಿಎಂಪಿ ವ್ಯಾಪ್ತಿಯ 173 ವಾರ್ಡ್​ಗಳಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲಾಗಿತ್ತು. ಕ್ಯಾಂಟೀನ್ ನಿರ್ಮಾಣಕ್ಕೆ ಜಾಗದ ಕೊರತೆ ಇದ್ದ ಸ್ಥಳಗಳಲ್ಲಿ 18 ಮೊಬೈಲ್ ಕ್ಯಾಂಟೀನ್​ಗಳನ್ನೂ ತೆರೆಯಲಾಗಿತ್ತು. ಬೆಂಗಳೂರು ಹೊರತುಪಡಿಸಿ ಹುಬ್ಬಳ್ಳಿ, ದಾವಣಗೆರೆ, ಮೈಸೂರು, ಕೊಡಗು ನಂತಹ ದ್ವಿತೀಯ ದರ್ಜೆಯ ನಗರಗಳಲ್ಲೂ ಇಂದಿರಾ ಕ್ಯಾಂಟೀನ್ ತೆರೆಯಲಾಗಿತ್ತು.
First published: