ನಾಡಹಬ್ಬ ದಸರಾ ಆಚರಣೆ ಮುಗಿಯುತ್ತಿದ್ದಂತೆ ಸಿಲಿಕಾನ್ ಸಿಟಿಯಲ್ಲಿ ಮತ್ತೆ ಆಪರೇಷನ್ ಒತ್ತುವರಿ ತೆರವು (encroachment) ಇಂದಿನಿಂದ ಆರಂಭವಾಗಲಿದೆ. ರಾಜಕಾಲುವೆ (Raja Kaluve) ಒತ್ತುವರಿ ಮಾಡಿಕೊಂಡ ಜಾಗವನ್ನು ವಶಕ್ಕೆ ಪಡೆಯಲು ಬಿಬಿಎಂಪಿ (BBMP) ಭರ್ಜರಿ ತಯಾರಿ ನಡೆಸಿದ್ದು, ಪ್ರತಿಷ್ಠಿತ ಕಂಪನಿಗಳಿಗೆ ನಡುಕ ಶುರುವಾಗಿದೆ. ಕಳೆದ ತಿಂಗಳು ನಗರದಲ್ಲಿ ಜೆಸಿಬಿ ಘರ್ಜನೆ ಸದ್ದು ಮಾಡಿತ್ತು. ಮಳೆಯ (Bengaluru Rains) ಪರಿಣಾಮ ಮುಳುಗಡೆಯಾದ ಪ್ರದೇಶಗಳಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯ ಮಾಡಲಾಗಿತ್ತು. ಆದರೆ ಕೆಲವರು ಇದರ ವಿರುದ್ಧ ಹೈಕೋರ್ಟ್ (Highcourt) ಮೊರೆ ಹೋಗಿದ್ದರು. ಈ ಸಂಬಂಧ ಕೋರ್ಟ್ ಪ್ರಕರಣ ಇತ್ಯರ್ಥ ಮಾಡಿದ್ದು, ಜಂಟಿ ಸರ್ವೇ ನಡೆಸಿ ಡೆಮಾಲಿಷನ್ ಪ್ರಕ್ರಿಯೆ ನಡೆಸುವಂತೆ ಬಿಬಿಎಂಪಿ ಹಾಗೂ ಕಂದಾಯ ಇಲಾಖೆಗೆ ಸೂಚನೆ ನೀಡಿತ್ತು. ಆ ಹಿನ್ನೆಲೆಯಲ್ಲಿ ಇಂದಿನಿಂದ ತೆರವು ಕಾರ್ಯಚರಣೆ ನಡೆಯಲಿದೆ.
ಇದೇ ವೇಳೆ ಬೊಮ್ಮನಹಳ್ಳಿ, ಮಹದೇವಪುರ, ನೆಲಮಂಗಲ, ಯಲಹಂಕ ಸೇರಿದಂತೆ ಪಾಲಿಕೆ ವಿವಿಧ ವಲಯಗಳಲ್ಲಿ ಹಲವಾರು ಸ್ವತ್ತುಗಳ ತೆರವು ಕಾರ್ಯ ನಡೆಯಬೇಕಿದೆ. ಸರ್ವೇಯರ್ ಕೊರತೆ, ಮಾಲೀಕರ ಧಾವೆ ಸೇರಿದಂತೆ ಕಾರಣಾಂತರಗಳಿಂದ ಕಾಲುವೆ ಒತ್ತುವರಿ ತೆರವು ಕಾರ್ಯ ವಿಳಂಬವಾಗಿತ್ತು.
10 ಹೆಚ್ಚು ಸ್ವತ್ತುಗಳ ಜಂಟಿ ಸರ್ವೇ ಕಾರ್ಯ
ಇದೀಗ ಮತ್ತೆ ಬುಲ್ಡೋಜರ್ ಆಪರೇಷನ್ ನಡೆಯಲಿದ್ದು, ಬಾಗ್ಮನೆ ಟೆಕ್ ಪಾರ್ಕ್, ನಲಪಾಡ್ ಅಕಾಡೆಮಿ, ದಿವ್ಯಶ್ರೀ, ಪೂರ್ವಾಪಾರ್ಕ್ ರಿಡ್ಜ್ ಸೇರಿದಂತೆ 10 ಹೆಚ್ಚು ಸ್ವತ್ತುಗಳ ಜಂಟಿ ಸರ್ವೇ ಕಾರ್ಯ ನಡೆದಿದೆ.
ಇನ್ನೂ ಪ್ರತಿಷ್ಠಿತ ಕಂಪನಿಗಳಿಂದ ಹಾಗೂ ವಿಲ್ಲಾಗಳಿಂದ ರಾಜಕಾಲುವೆ ಒತ್ತುವರಿ ಮಾಡಿಕೊಂಡಿರೋದು ಈಗಾಗಲೇ ದೃಢವಾಗಿದೆ. ಮಳೆ ಬಂದಾಗ ಬಿಬಿಎಂಪಿ ವಿರುದ್ಧ ಬಾಯಿ ಬಡ್ಕೋಳೋ ಶ್ರೀಮಂತರಿಂದಲ್ಲೆ ಒತ್ತುವರಿ ಆಗಿದೆ.
ಒತ್ತುವರಿ ಲಿಸ್ಟ್ ಬಿಡುಗಡೆ
ಕಂದಾಯ ಇಲಾಖೆಯ ಒತ್ತುವರಿ ಲಿಸ್ಟ್ ಬಿಡುಗಡೆ ಮಾಡಿದೆ. ಇಕೋ ಸ್ಪೇಸ್ಗೆ ದೊಡ್ಡ ಗಂಡಾಂತರ ಎದುರಾಗಿದೆ. 500 ಮೀಟರ್ ಉದ್ದದ, 40-50 ಅಡಿ ಅಗಲದ ರಾಜಕಾಲುವೆ ಒತ್ತುವರಿ ಮಾಡಿಕೊಂಡಿದೆ. ಹೀಗಾಗಿ ಇಕೋಸ್ಪೇಸ್ ಒಳಗಿರುವ 12 ಅಂತಸ್ತಿನ ಮೂರು ಕಟ್ಟಡಗಳು ಡೆಮಾಲಿಷನ್ ಫಿಕ್ಸ್ ಎಂದು ಹೇಳಲಾಗ್ತಿದ್ದು, ಕಂದಾಯ ಇಲಾಖೆಯಿಂದ ನೋಟಿಸ್ ಜಾರಿ ಸಾಧ್ಯತೆ ಇದೆ.
30 ವಿಲ್ಲಾಗಳ ಡೆಮಾಲಿಷನ್ ಆಗುತ್ತಾ?
ಇನ್ನೂ ಸಾವಳಕೆರೆಯಿಂದ ಬೆಳ್ಳಂದೂರು ಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆ ಪೂರ್ವ ಪಾರ್ಕ್ರಿಡ್ಜ್ ನ ಮೂರು ವಿಲ್ಲಾಗಳು, ರೈನ್ ಬೋ ಲೇಔಟ್ 30 ವಿಲ್ಲಾಗಳು ಡೆಮಾಲಿಷನ್ ಮಾಡಲು ಅಧಿಕಾರಿಗಳು ತಯಾರಿ ನಡೆಸಿದ್ದಾರೆ.
ಒಟ್ಟಾರೆ ಇಷ್ಟು ದಿನ ಒತ್ತುವರಿ ಇಲ್ಲ ಅಂತ ನಾಟಕ ಅಡ್ತಿದ ಪ್ರತಿಷ್ಠಿತ ಕಂಪನಿ, ವಿಲ್ಲಾಗಳು ಇಂದು ಬಟಾಬಯಲಾಗುವ ಸಾಧ್ಯತೆ ಇದೆ. ಇಷ್ಟಾದ ಮೇಲೂ ನಾಳೆ ಬೃಹತ್ ಒತ್ತುವರಿ ಕಾರ್ಯಚರಣೆ ನಡೆಯುತ್ತಾ? ಅಥವಾ ಮತ್ತೆ ಬಿಬಿಎಂಪಿ ಹೊಸ ನಾಟಕ ಆಡುತ್ತಾ ಎನ್ನುವುದೇ ಸದ್ಯಕ್ಕೆ ಸಾರ್ವಜನಿಕ ವಲಯದಲ್ಲಿರುವ ಪ್ರಶ್ನೆ.
ಇದನ್ನೂ ಓದಿ: Veer Savarkarಗೆ ಅಪಮಾನ ಮಾಡೋರು ರೌರವ ನರಕಕ್ಕೆ ಹೋಗ್ತಾರೆ: ಬಿ ಎಲ್ ಸಂತೋಷ್
ಲಾಲ್ಬಾಗ್ನಲ್ಲಿ ನಡೆಯಲಿದೆ ಹಬ್ಬ!
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವವರಿಗೆ (Bengaluru News) ಇದೀಗ ಸಾವಯವ ಪದಾರ್ಥಗಳನ್ನ ಖರೀದಿಸಲು ಉತ್ತಮ ಅವಕಾಶವಿದೆ. ಹೌದು, ಮುಂದಿನ ವಾರಾಂತ್ಯಕ್ಕೆ ಲಾಲ್ಬಾಗ್ (Bengaluru Lal Bagh) ಎರಡು ದಿನಗಳ ಕಾಲ 'ಸಾವಯವ ಹಬ್ಬ' (Bengaluru Organic Festival) ನಡೆಯಲಿದೆ.
2004 ರಿಂದ ಜೈವಿಕ್ ಕೃಷಿಕ್ ಸೊಸೈಟಿ ನಿರಂತರವಾಗಿ ಪ್ರತಿ ವರ್ಷ ಸಾವಯವ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದೆ. ಆದರೆ ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದಾಗಿ ಈ ಕಾರ್ಯಕ್ರಮ ನಡೆದಿರಲಿಲ್ಲ. ಈಗ ಮತ್ತೊಮ್ಮೆ 'ಸಾವಯವ ಹಬ್ಬ'ವನ್ನ ಆಚರಿಸುವ ಮೂಲಕ ಗ್ರಾಹಕರು ಹಾಗೂ ರೈತರಿಗೂ ಸಾವಯವ ಪದಾರ್ಥಗಳ ಖರೀದಿ ಹಾಗೂ ಮಾರಾಟಕ್ಕೆ ಉತ್ತಮ ವೇದಿಕೆ ಕಲ್ಪಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ