• Home
  • »
  • News
  • »
  • state
  • »
  • BBMP: ನೆರೆ, ಬರ ನಿರ್ವಹಣೆ ಮಾಡದಷ್ಟು ಆರ್ಥಿಕ ದಿವಾಳಿಯಾಗಿದ್ಯಾ ಬಿಬಿಎಂಪಿ? ವಿಶ್ವಬ್ಯಾಂಕ್ ಬಳಿ ಸಾಲು ಕೇಳಲು ಚಿಂತನೆ

BBMP: ನೆರೆ, ಬರ ನಿರ್ವಹಣೆ ಮಾಡದಷ್ಟು ಆರ್ಥಿಕ ದಿವಾಳಿಯಾಗಿದ್ಯಾ ಬಿಬಿಎಂಪಿ? ವಿಶ್ವಬ್ಯಾಂಕ್ ಬಳಿ ಸಾಲು ಕೇಳಲು ಚಿಂತನೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜಧಾನಿ ನಮ್ಮ ಬೆಂಗಳೂರು ವರ್ಷಕ್ಕೆ 5 ಲಕ್ಷ ಕೋಟಿ ಮೌಲ್ಯದ ಐಟಿ ಎಕ್ಸ್ ಪೋರ್ಟ್ ನಡೆಸುತ್ತಿರುವ ದೇಶದ ಏಕೈಕ ಮೆಟ್ರೋ ಪಾಲಿಟನ್ ಸಿಟಿ ಆಗಿದೆ. ಹೀಗಿದ್ರೂ ಬೆಂಗಳೂರಿನಲ್ಲಾಗುವ ಪಾಕೃತಿಕ ವಿಕೋಪ ನಿರ್ವಹಣೆ ಮಾಡಲು ವಿಶ್ವ ಬ್ಯಾಂಕ್ ಮೊರೆ ಹೋಗಲು ಬಿಬಿಎಂಪಿ ಚಿಂತನೆ ನಡೆಸಿದೆ.

  • Share this:

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (Bruhat Bengaluru Mahanagara Palike) ಬೆಂಗಳೂರನ್ನು (Bengaluru) ‌ನಿಭಾಯಿಸುವ ಶಕ್ತಿ ಇಲ್ಲವಾ? ನೆರೆ, ಬರ ನಿರ್ವಹಣೆ ಮಾಡದಷ್ಟರ ಮಟ್ಟಿಗೆ ಆರ್ಥಿಕ ದಿವಾಳಿಯಾಗಿ ಹೋಗಿದ್ಯಾ ಬಿಬಿಎಂಪಿ? ವಿಶ್ವ ಮಟ್ಟದಲ್ಲಿ ಮತ್ತೊಮ್ಮೆ ಬೆಂಗಳೂರಿನ ಮಾನ ಹರಾಜು ಹಾಕಲು‌ ಬಿಬಿಎಂಪಿ ಮುಂದಾಗಿದೆಯಾ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಜಾಗತಿಕ ಮಟ್ಟದಲ್ಲಿ ವಿಶ್ವ ಬ್ಯಾಂಕ್ (World Bank) ಮುಂದೆ ಸಾಲದ ರೂಪದಲ್ಲಿ (Loan) ಸಹಾಯ ಪಡೆಯಲು ಮುಂದಾಗಿದೆ. ಬೆಂಗಳೂರು (Namma Bengaluru) ದೇಶದಲ್ಲಿ ಎರಡನೇ ಅತಿ ಹೆಚ್ಚು GDP ಹೊಂದಿರುವ ನಗರವಾಗಿದೆ. ರಾಜ್ಯದ ಬೊಕ್ಕಸಕ್ಕೆ 60% ಆದಾಯವನ್ನು ಬೆಂಗಳೂರು ನೀಡುತ್ತದೆ. ಆದರೂ ಬೆಂಗಳೂರು ಅಭಿವೃದ್ಧಿಗಾಗಿ (Bengaluru Development) ವಿಶ್ವಬ್ಯಾಂಕ್ ಮುಂದೆ ಕೈ ಚಾಚಲು ಬಿಬಿಎಂಪಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈಗಾಗಲೇ ಪ್ರಾಥಮಿಕ ಚರ್ಚೆಗಳು ನಡೆದಿರೋದನ್ನು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ (Tushar Giri Nath, Chief Commissioner, BBMP) ಹೇಳಿದ್ದಾರೆ.


ರಾಜಧಾನಿ ನಮ್ಮ ಬೆಂಗಳೂರು ವರ್ಷಕ್ಕೆ 5 ಲಕ್ಷ ಕೋಟಿ ಮೌಲ್ಯದ ಐಟಿ ಎಕ್ಸ್ ಪೋರ್ಟ್ ನಡೆಸುತ್ತಿರುವ ದೇಶದ ಏಕೈಕ ಮೆಟ್ರೋ ಪಾಲಿಟನ್ ಸಿಟಿ ಆಗಿದೆ. ಹೀಗಿದ್ರೂ ಬೆಂಗಳೂರಿನಲ್ಲಾಗುವ ಪಾಕೃತಿಕ ವಿಕೋಪ ನಿರ್ವಹಣೆ ಮಾಡಲು ವಿಶ್ವ ಬ್ಯಾಂಕ್ ಮೊರೆ ಹೋಗಲು ಬಿಬಿಎಂಪಿ ಚಿಂತನೆ ನಡೆಸಿದೆ.


ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಹಣ ಹೊಂದಿಸಲು ಬಿಬಿಎಂಪಿ ಪರದಾಡುತ್ತಿದೆಯಾ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ಈ ಬಗ್ಗೆ ಸರ್ಕಾರದ ಕಾರ್ಯದರ್ಶಿ ಜೊತೆ ಚರ್ಚೆ ಮಾಡಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಬಿಬಿಎಂಪಿ ಹೇಳಿದೆ.


ವಿಶ್ವ ಬ್ಯಾಂಕ್​​ನಿಂದ ಸಾಲ‌ ಕೇಳಲು ತಯಾರಿ


ಬೆಂಗಳೂರು ಸೇರಿದಂತೆ ರಾಜ್ಯದಲ್ಲಾಗಿರುವ ನೆರೆ, ಬರ ನಿರ್ವಹಣೆಗೂ ವಿಶ್ವ ಬ್ಯಾಂಕ್​​ನಿಂದ ಸಾಲ‌ ಕೇಳಲು ತಯಾರಿ ನಡೆಸಿದೆ. ಬೆಂಗಳೂರಿನ K100 ವ್ಯಾಲಿ ಪ್ರಾಜೆಕ್ಟ್ ರೀತಿಯಲ್ಲೇ ನಗರದ ರಾಜ ಕಾಲುವೆಗಳನ್ನು ಮೇಲ್ದರ್ಜೆಗೆ ಏರಿಸಲು ಬಿಬಿಎಂಪಿಯಿಂದ ಪ್ಲ್ಯಾನ್ ಮಾಡಿಕೊಂಡಿದೆ.


BBMP thinking to take loan from world bank mrq
ತುಷಾರ್ ಗಿರಿನಾಥ್​, ಮುಖ್ಯ ಆಯುಕ್ತರು


ಬೆಂಗಳೂರಿಗೆ ಇದೆಂಥಾ ದುಸ್ಥಿತಿ?


ಈಗಾಗಲೇ ಜಗತ್ತಿನ ಹಲವು ದೇಶದ ರಾಜ್ಯಗಳಿಗೆ, ಕಾಂಟಿನೆಂಟ್​ಗೆ ವಿಶ್ವಬ್ಯಾಂಕ್ ಸಾಲ ಪೂರೈಸುತ್ತಿದೆ. ಇದೇ ಮಾದರಿಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯಕ್ಕೆ ಸಾಲ ಮಾಡಲು ಬಿಬಿಎಂಪಿ ಚಿಂತನೆ ನಡೆಸಿದ್ದು, ಈ ಸಂಬಂಧ ಚರ್ಚೆಗಳು ಸಹ ನಡೆಯುತ್ತಿವೆ. ವಿಶ್ವದ ಪ್ರತಿಷ್ಟಿತ 450 IT & BT ಕಂಪೆನಿಗಳು ನೆಲೆಯೂರಿರುವ ಬೆಂಗಳೂರಿಗೆ ಇದೆಂಥಾ ದುಸ್ಥಿತಿ ಎಂದು ಜನರು ಕೇಳುತ್ತಿದ್ದಾರೆ.


ಇದನ್ನೂ ಓದಿ:  RSS Camp: ರಾಜ್ಯದಲ್ಲಿ ಶುರುವಾಯ್ತು ಮತ್ತೊಂದು ದಂಗಲ್​; ಶಾಲೆಯಲ್ಲಿ ಆರ್​ಎಸ್​ಎಸ್​ ತಾಲೀಮು


ತುಷಾರ್ ಗಿರಿ ನಾಥ್ ಹೇಳಿದ್ದೇನು?


ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ತುಷಾರ್ ಗಿರಿ ನಾಥ್, ಹವಾಮಾನ  ವೈಪರೀತ್ಯದಿಂದಾಗುವ ಹಾನಿಗೆ ಏನು ಮಾಡಬೇಕು ಎಂಬುದಕ್ಕೆ ಮೊದಲ ಆದ್ಯತೆ ನೀಡುತ್ತಿದ್ದಾರೆ. ಬೇರೆ ದೇಶಗಳಲ್ಲಿ ಧನಸಹಾಯ ಮತ್ತು ನೆರವು ನೀಡುತ್ತಿದ್ದಾರೆ. ಬೆಂಗಳೂರು ನಗರ ಸೇರಿದಂತೆ ರಾಜ್ಯದಲ್ಲಿಯ ಬರ, ಪ್ರವಾಹ ನಿರ್ವಹಣೆಗೆ ಸಂಬಂಧಿಸಿದಂತೆ ಯಾವ ಯೋಜನೆಗಳಿಗೆ ನೆರವು ಪಡೆಯಬೇಕು ಎಂಬುದರ ಬಗ್ಗೆ ಅಧಿಕಾರಿಗಳ ಜೊತೆ ಪ್ರಾಥಮಿಕ ಮಟ್ಟದಲ್ಲಿ ಚರ್ಚೆಗಳು ನಡೆದಿದೆ ಎಂದು ತಿಳಿಸಿದರು.


BBMP thinking to take loan from world bank mrq
ತುಷಾರ್ ಗಿರಿನಾಥ್, ಬಿಬಿಎಂಪಿ ಮುಖ್ಯ ಆಯುಕ್ತರು


ಮಾತುಕತೆ ನಂತರ ಅಧಿಕಾರಿಗಳ ಜೊತೆ ನಾವು ಮತ್ತೊಮ್ಮೆ ಚರ್ಚೆ ನಡೆಸುತ್ತವೆ. ನಮ್ಮ ಯಾವ ಯೋಜನೆಗಳಿಗೆ ಅನುದಾನ ಬೇಕು ಎಂಬುದರ ಬಗ್ಗೆ ಹೇಳುತ್ತವೆ. ಒಪ್ಪಿಗೆಯಾದಲ್ಲಿ ಈ ವಿಚಾರದಲ್ಲಿ ಮುಂದುವರಿತ್ತೇವೆ ಎಂದು ತಿಳಿಸಿದರು. ವಿಶ್ವಬ್ಯಾಂಕ್ ಸಿಬ್ಬಂದಿಗೆ K100 ವ್ಯಾಲಿ ಪ್ರಾಜೆಕ್ಟ್ ತೋರಿಸಿದ್ದು, ಅವರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.


ಇದನ್ನೂ ಓದಿ:  Bengaluru: ಮೋದಿ ಬಂದು ಹೋದ ಮೇಲೆ ಕಿತ್ತು ಹೋದ ರಸ್ತೆ; ಅಂದು ಸುಮ್ಮನಿದ್ದ, ಸರ್ಕಾರ ಇಂದು ಕೇಳಿದ್ಯಾಕೆ?


ಎಷ್ಟು ಅನುದಾನ ಕೇಳ್ತಿರೋದು?


K100 ವ್ಯಾಲಿ ಪ್ರಾಜೆಕ್ಟ್ ರೀತಿ ಮತ್ತೆ ಬೇರೆ ಕಡೆ ಎಲ್ಲಿ ಮಾಡಬಹುದು ಎಂಬುದನ್ನು ಸರ್ಕಾರ ನಿರ್ಧರಿಸುತ್ತದೆ. ವಿಶ್ವಬ್ಯಾಂಕ್​ನಿಂದ ಎಷ್ಟುಅನುದಾನ ಕೇಳಬೇಕು ಎಂಬುದರ ಬಗ್ಗೆ ತೀರ್ಮಾನ ಆಗಿಲ್ಲ. ಈ ಸಂಬಂಧ ಸಮಾಲೋಚನೆ ನಡೆಯುತ್ತಿದೆ. ನಮ್ಮ ಯೋಜನೆಗಳ ಬಗ್ಗೆ ಸವಿವರವಾದ ಮಾಹಿತಿಯನ್ನು ನೀಡಿ ಕೇಂದ್ರ ಸರ್ಕಾರದ ಮೂಲಕವೇ ಪ್ರಸ್ತಾವನೆಯನ್ನು ಸಲ್ಲಿಸಲಾಗುತ್ತದೆ ಎಂದು ತುಷಾರ್​ ಗಿರಿ ನಾಥ್ ಹೇಳಿದರು.

Published by:Mahmadrafik K
First published: