ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರ ಎರಡು ದಿನದ ರಾಜ್ಯ ಪ್ರವಾಸ ಮುಕ್ತಾಯಗೊಂಡಿದೆ. ನಿನ್ನೆ ರಾಜಧಾನಿ ಬೆಂಗಳೂರಿಗೆ (Bengaluru) ಆಗಮಿಸಿದ್ದ ಪ್ರಧಾನಿಗಳಿಗಾಗಿ ವಿಶೇಷವಾಗಿ ಭದ್ರತೆ (Special Security) ನಿಯೋಜನೆ ಮಾಡಲಾಗಿತ್ತು. ಮೋದಿ ಅವರ ಪ್ರಯಾಣದ ಮಾರ್ಗದಲ್ಲಿಯ ಹೆಚ್ಚುವರಿ ಪೊಲೀಸರನ್ನು (Police) ನಿಯೋಜನೆ ಮಾಡಲಾಗಿತ್ತು. ಮೋದಿ ಅವರ ಒಂದು ದಿನದ ಪ್ರವಾಸಕ್ಕಾಗಿ ಬಿಬಿಎಂಪಿ (BBMP- Bruhat Bengaluru Mahanagara Palike) ಎಷ್ಟು ಹಣ ಖರ್ಚು ಮಾಡಿದೆ ಎಂಬುದರ ಮಾಹಿತಿ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದೆ. ಮೋದಿ ಅವರ ಅಗಮನದ ಹಿನ್ನೆಲೆ ಬಿಬಿಎಂಪಿ 14 ಕೋಟಿ ರೂಪಾಯಿ ಹಣ ವ್ಯಯಿಸಿದೆದೆ.
ಬೆಳಗ್ಗೆ ಸುಮಾರು 11.30ಕ್ಕೆ ಬೆಂಗಳೂರಿನ ಯಲಹಂಕ ಏರ್ ಬೇಸ್ ಗೆ (Yelahanka Airbase) ಬಂದಿಳಿದ ಪ್ರಧಾನಿಗಳು ಬೆಂಗಳೂರಿನಲ್ಲಿ 4 ಗಂಟೆ 30 ನಿಮಿಷ ಇದ್ರು. ಸಂಜೆ ವೇಳೆಗೆ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣ ಬೆಳೆಸಿದ್ದರು. ಈ ನಾಲ್ಕು ಗಂಟೆ ಮೂವತ್ತು ನಿಮಿಷಕ್ಕಾಗಿ ಬಿಬಿಎಂಪಿ ಒಟ್ಟು 14 ಕೋಟಿ ರೂಪಾಯಿ ಖರ್ಚು ಮಾಡಿದೆ.
ಇದನ್ನೂ ಓದಿ: SSLC ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟ; ಜೂನ್ 27 ರಿಂದ ಜುಲೈ 4ರವರೆಗೆ ಎಕ್ಸಾಂ
ರಸ್ತೆ, ಮೂಲಭೂತ ಸೌಕರ್ಯ, ಇತರೆ ಸೌಕರ್ಯಗಳಿಗಾಗಿ ಈ ಹಣ ಖರ್ಚು ಮಾಡಲಾಗಿದೆ. ಪ್ರತಿ ನಿಮಿಷಕ್ಕೆ 5 ಲಕ್ಷದ 18 ಸಾವಿರದ 518 ರೂಪಾಯಿ ಪಾಲಿಕೆಯಿಂದ ಖರ್ಚು ಮಾಡಲಾಗಿದೆ. 3 ಕೋಟಿ 11 ಲಕ್ಷದ 11 ಸಾವಿರ ರೂಪಾಯಿ ಪ್ರತಿ ಗಂಟೆಗೆ ಖರ್ಚು ಆಗಿದೆ. ಮುಖ್ಯ ಆಯುಕ್ತರ ನಿಧಿ, ಆಡಳಿತಗಾರರ ನಿಧಿ ಹಾಗೂ ಇತರೆ ನಿಧಿಯಿಂದ ಪಾಲಿಕೆಯಿಂದ ಹಣ ಖರ್ಚು ಮಾಡಲಾಗಿದೆ.
15 ಸಾವಿರ ಯೋಗಪಟುಗಳ ಜೊತೆ ಅಭ್ಯಾಸ
ಇಂದು ಅಂತರಾಷ್ಟ್ರೀಯ ಯೋಗ ದಿನದ ಹಿನ್ನೆಲೆ ಮೈಸೂರು ಅರಮನೆ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 15 ಸಾವಿರ ಯೋಗಪಟುಗಳೊಂದಿಗೆ ಅಭ್ಯಾಸ ಮಾಡಿದರು. ಈ ವೇಳೆ ರಾಜಮಾತೆ ಪ್ರಮೋದಾ ದೇವಿ ಒಡೆಯರ್, ಯುವರಾಜ ಯದುವೀರ್ ಒಡೆಯರ್, ಸಿಎಂ ಬಸವರಾಜ್ ಬೊಮ್ಮಾಯಿ, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಯೋಗಾಭ್ಯಾಸದ ಬಳಿಕ ಪ್ರಧಾನಿಗಳು ನೇರವಾಗಿ ಅರಮನೆ ಮೈದಾನದಲ್ಲಿರುವ ಮ್ಯೂಸಿಯಂಗೆ ತೆರಳಿ, ಡಿಜಿಟಲ್ ಯೋಗ ಪ್ರದರ್ಶನ ವೀಕ್ಷಿಸಿದರು. ನಂತರ ಒಡೆಯರ್ ಕುಟುಂಬದ ಜೊತೆ ಉಪಹಾರ ಸೇವನೆ ಮಾಡಿದರು. ಈ ಮೊದಲೇ ಪ್ರಧಾನಿಗಳಿಗೆ ಅರಮನೆ ಭೇಟಿ ನೀಡುವಂತೆ ಪ್ರಮೋದಾ ದೇವಿಯವರು ಪತ್ರ ಬರೆದಿದ್ದರು.
ಇದನ್ನೂ ಓದಿ: Yoga Day: ಸಾಂಸ್ಕೃತಿಕ ನಗರಿಯಲ್ಲಿ ಪ್ರಧಾನಿ ಮೋದಿ ಯೋಗಾಭ್ಯಾಸ; 15 ಸಾವಿರ ಜನರ ಜೊತೆ ಯೋಗ ಪ್ರದರ್ಶನ
ಮೋದಿ ಉಪಹಾರಕ್ಕೆ ವೆರೈಟಿ ಟಿಫನ್
ಇಡ್ಲಿ, ವಡೆ, ದೋಸೆ, ಕೇಸರಿ ಬಾತ್, ಸೇರಿದಂತೆ ಉತ್ತರ ಭಾರತದ ಶೈಲಿಯ ಆಹಾರ ದಾಲ್ ಕಿಚಡಿ, ಪಾಲಕ್ ರೈಸ್ ಸೇರಿದಂತೆ ಹತ್ತು ಹಲವು ತಿನಿಸುಗಳನ್ನ ಸಿದ್ಧಪಡಿಸಲಾಗಿತ್ತು.
ಯೋಗ ದಿನದ ಕುರಿತು ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ ಅವರು ನಾಡಿನ ಜನತೆಯ ಪರವಾಗಿ ಪ್ರಧಾನಿಗಳಿಗೆ ಧನ್ಯವಾದಗಳನ್ನು ಸಲ್ಲಿಸಿದರು. ಯೋಗ ದೇಹ ಮತ್ತು ಮನಸ್ಸು ಒಂದು ಮಾಡುತ್ತವೆ. ಪ್ರಧಾನಿಗಳು ಯೋಗದಿಂದ ಜಗತ್ತನ್ನು ಒಂದು ಮಾಡಿದ್ದಾರೆ. ಇಂದು ಮೈಸೂರನ್ನು ಇಡೀ ಜಗತ್ತಿನಲ್ಲಿ ಗುರುತಿಸುವಂತೆ ಪ್ರಧಾನಿಗಳು ಮಾಡಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ