ಬೆಂಗಳೂರು: ಭಾರತೀಯ ವಾಯುಸೇನೆ (ಐಎಎಫ್) ಐದು ದಿನಗಳ ಕಾಲ ವೈಮಾನಿಕ ಪ್ರದರ್ಶನ (Yelahanka Air Force Station) ನಡೆಸಲಿದೆ. ಕೇಂದ್ರ ರಕ್ಷಣಾ ಇಲಾಖೆಯೂ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಸುವ ಅತಿದೊಡ್ಡ ಪ್ರದರ್ಶನ ಇದಾಗಿದೆ. ಏರ್ ಶೋ ಪ್ರದರ್ಶನ (Aero India 2023) ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಹೆಗ್ಗಳಿಕೆಲ್ಲೊಂದಾಗಿದೆ. ಇದೇ ವೇಳೆ ಏರೋಸ್ಪೇಸ್ ಮತ್ತು ರಕ್ಷಣಾ ವಲಯಗಳ ಮಹತ್ವದ ವ್ಯಾಪಾರ ಒಪ್ಪಂದಗಳು ನಡೆಯಲಿದೆ. ಇದರಲ್ಲಿ ಭಾರತೀಯ ಏರೋಸ್ಪೇಸ್ ಉದ್ಯಮದ ಹಲವಾರು ತಯಾರಕರು ಮತ್ತು ಸೇವಾ ಪೂರೈಕೆದಾರರು ಭವಿಷ್ಯದ ಗ್ರಾಹಕರನ್ನು ಭೇಟಿ ಮಾಡುತ್ತಾರೆ. ಪ್ರತಿಷ್ಠಿತ ಕಾರ್ಯಕ್ರಮಕ್ಕೆ ಬಿಬಿಎಂಪಿ ಸಿದ್ಧತೆ ಆರಂಭ ಮಾಡಿದ್ದು, ಯಲಹಂಕ (Yelahanka) ವ್ಯಾಪ್ತಿಯ ಕೆರೆಗಳಲ್ಲಿ ಮೀನುಗಾರಿಕೆ ಚಟುವಟಿಕೆ, ಮಾಂಸ ಮಾರಾಡ ನಿಷೇಧ ಸೇರಿದಂತೆ ರಸ್ತೆ ಅಗೆತ ಬಂದ್ ಮಾಡಿ ಆದೇಶ ನೀಡಲಾಗಿದೆ.
ಜನವರಿ 30 ರಿಂದ ಫೆಬ್ರವರಿ 20 ರವರೆಗೆ ಅಂದರೆ 20 ದಿನಗಳ ಕಾಲ ಯಲಹಂಕ ಝೋನ್‌ನಲ್ಲಿ ಮಾಂಸ ಮಾರಾಟ ನಿಷೇಧಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ. ಫೆಬ್ರವರಿ 13 ರಿಂದ 17 ರವರೆಗೆ ಯಲಹಂಕ ವಾಯುನೆಲೆಯಲ್ಲಿ ಏರ್ ಶೋ ಹಿನ್ನೆಲೆ ಜನವರಿ 30 ರಿಂದ ಫೆಬ್ರವರಿ 20 ರವರೆಗೆ ಮಾಂಸ ಮಾರಾಟ ನಿಷೇಧಿಸಲಾಗಿದೆ. ಯಲಹಂಕ ವಲಯ ಜಂಟಿ ಆಯುಕ್ತರಾದ ಶ್ರೀಮತಿ ಪೂರ್ಣಿಮಾ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: Bengaluru: ಏರೋ ಇಂಡಿಯಾ ಶೋ ನೋಡಲು ನೋಂದಣಿ ಮಾಡೋದು ಹೇಗೆ? ಇ-ಟಿಕೆಟ್‌ಗಳು ಎಲ್ಲಿ ಸಿಗುತ್ತೆ?
ಆದೇಶ ಪತ್ರಿಯಲ್ಲಿ ಏನಿದೆ?
20 ದಿನಗಳ ಕಾಲ ಬಿಬಿಎಂಪಿ ಯಲಹಂಕ ಝೋನ್ ನಲ್ಲಿ ಮಾಂಸ ಮಾರಾಟ ಬ್ಯಾನ್ ಮಾಡಿ ಆದೇಶ ಹೊರಡಿಸಲಾಗಿದೆ. ಜನವರಿ 30 ರಿಂದ ಫೆಬ್ರವರಿ 20 ರವರೆಗೆ ಎಲ್ಲಾ ತರಹದ ಮಾಂಸ ಮಾರಾಟ ಮತ್ತು ಹೋಟೆಲ್ ಹಾಗೂ ಡಾಬಾಗಳಲ್ಲಿ ಮಾಂಸಾಹಾರ ತಯಾರಿಕೆ ಮತ್ತು ಮಾರಾಟವನ್ನು ನಿಷೇಧಿಸಿದೆ. ಉಲ್ಲಂಘನೆಯಾದರೆ ಬಿಬಿಎಂಪಿ ಕಾಯ್ದೆ 2020 ಮತ್ತು ಭಾರತೀಯ ಏರ್‌ಕ್ರಾಪ್ಟ್ ರೂಲ್ಸ್ 1937ರ ರೂಲ್ 91 ಅಡಿಯಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಫೆಬ್ರವರಿ 13 ರಿಂದ 17 ರವರೆಗೂ ಏರ್ ಶೋ
ಏರೋ ಇಂಡಿಯಾ ನೀಡಿರುವ ಮಾಹಿತಿಯ ಅನ್ವಯ ಫೆ.13 ರಿಂದ 17ರ ವರೆಗೂ ಐದು ದಿನಗಳ ನಡೆಯುವ ಈವೆಂಟ್‌ನಲ್ಲಿ ಭಾಗವಹಿಸಲು ಒಟ್ಟು 737 ಪ್ರದರ್ಶಕರು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ ಭಾರತ 643 ಸಂಸ್ಥೆಗಳಿದ್ದರೆ, ಉಳಿದ 93 ಸಂಸ್ಥೆಗಳು 30 ವಿವಿಧ ದೇಶಗಳಿಗೆ ಸೇರಿದೆ. 2021ರಲ್ಲಿ ನಡೆದಿದ್ದ ಏರ್ಶೋನಲ್ಲಿ 55ಕ್ಕೂ ಹೆಚ್ಚು ರಾಷ್ಟ್ರಗಳ ಪ್ರತಿನಿಧಿಗಳು ಮತ್ತು ಪ್ರದರ್ಶಕರು ಭಾಗಿಯಾಗಿದ್ದರು.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸುದ್ದಿಗೋಷ್ಠಿ
ಏರೋ ಇಂಡಿಯಾ ಪ್ರದರ್ಶನದ ಸಿದ್ಧತೆಗಳ ಕುರಿತು ಇತ್ತೀಚೆಗೆ ಮಾಹಿತಿ ನೀಡಿದ್ದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು, ಏರ್ ಶೋ ವೇಳೆ ಸ್ವಚ್ಛತೆ, ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ಶೌಚಾಲಯ ಸೇರಿದಂತೆ ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಬಿಬಿಎಂಪಿ ವತಿಯಿಂದ ಕಲ್ಪಿಸಲಾಗುತ್ತಿದೆ. ಇದಕ್ಕೆ ಅಗತ್ಯವಿರುವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಯಲಹಂಕ ವ್ಯಾಪ್ತಿಯಲ್ಲಿ ಬರುವ ಕೆರೆಗಳಲ್ಲಿ ಮೀನುಗಾರಿಕೆ, ಮಾಂಸ ಮಾರಾಟ ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದ್ದರು.
ಅಲ್ಲದೆ, ಏರ್ಶೋಗೆ ಸುಮಾರು 1.40 ಕೋಟಿ ರೂಪಾಯಿ ವೆಚ್ಚದಲ್ಲಿ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಸಿಸಲು ಟೆಂಡರ್ ಪ್ರಕಟಿಸಲಾಗಿದೆ. ಇದರಲ್ಲಿ ನೀರನ ಟ್ಯಾಂಕ್, ತಾತ್ಕಾಲಿಕ ಶೌಚಾಲಯ, ಕಸದ ತೊಟ್ಟಿಗಳು, ಸೈನ್ ಬೋರ್ಡ್ ಸೇರಿದಂತೆ ಟಿಪ್ಪರ್ ಕಾಂಪ್ಯಾಕ್ಟರ್ಗಾಗಿ ಟೆಂಡರ್ ಪ್ರಕಟಿಸಲಾಗಿದೆ. ಜನವರಿ 31 ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನವಾಗಿದೆ ಎಂದು ತಿಳಿಸಿದ್ದಾರೆ.
ಏರ್ಶೋ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಫೆಬ್ರವರಿ 13ರಿಂದ 17ರವರೆಗೆ ಪ್ರತಿಷ್ಠಿತ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಏರ್ಶೋವನ್ನು ಉದ್ಘಾಟಿಸಲಿದ್ದಾರೆ. ಏರ್ ಶೋ ಅಂತರರಾಷ್ಟ್ರೀಯ ಮಟ್ಟದ ಕಾರ್ಯಕ್ರಮವಾಗಿದ್ದು, ರಾಜ್ಯದಲ್ಲಿರುವ ಏರೋಸ್ಪೇಸ್ ಸಂಶೋಧನಾ ಕೇಂದ್ರದ ಬಗ್ಗೆ, ವಿಮಾನಯಾನ, ವಿಮಾನ ಉತ್ಪಾದನಾ ರಂಗಗಳಲ್ಲಿನ ಅವಕಾಶಗಳು ಹಾಗೂ ಸಾಧ್ಯತೆಗಳ ಬಗ್ಗೆ ಏರ್ಶೋ ಸಾಕಷ್ಟು ಬೆಳಕು ಚೆಲ್ಲುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ