ರಾಜಧಾನಿ ಬೆಂಗಳೂರಿಗೆ (Bengaluru Mall) ಬಂದವರು ಮಾಲ್ಗಳಿಗೆ ಭೇಟಿ ನೀಡೋದನ್ನ ಮಿಸ್ ಮಾಡಲ್ಲ. ಕಮರ್ಷಿಯಲ್ ಕೇಂದ್ರಗಳಾಗಿರುವ (Commercial Centres) ಮಾಲ್ಗಳು ಸರಿಯಾದ ಸಮಯಕ್ಕೆ ಬಿಬಿಎಂಪಿಗೆ (BBMP) ತೆರಿಗೆ (Tax) ಪಾವತಿಸದೇ ಬಾಕಿ ಉಳಿಸಿಕೊಂಡಿವೆ. ಈ ಹಿಂದೆ ಬೆಂಗಳೂರಿನ ಪ್ರತಿಷ್ಠಿಯ ಮಂತ್ರಿ ಸ್ಕ್ವೇಯರ್ ಮಾಲ್ಗೆ (Mantri Square Mall) ಬಿಬಿಎಂಪಿ ಬೀಗ ಜಡಿದಿತ್ತು. ಈ ವೇಳೆ ಮಾಲ್ ಆಡಳಿತ ಮಂಡಳಿ ಸ್ಥಳದಲ್ಲಿಯೇ ಲಕ್ಷ ಲಕ್ಷ ತೆರಿಗೆ ಪಾವತಿಸಿತ್ತು. ಆ ಬಳಿಕವೇ ಮಾಲ್ ಬಾಗಿಲು ತೆರೆಯಲಾಗಿತ್ತು. ಈ ರೀತಿ ಬೀಗ ಹಾಕುವ ಭಯ ಮೂಡಿಸಿದ್ರೂ ಬೆಂಗಳೂರಿನ ಕೆಲ ಮಾಲ್ಗಳು ತೆರಿಗೆ ಬಾಕಿ ಉಳಿಸಿಕೊಂಡಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 43 ಮಾಲ್ಗಳಿದ್ದು, ನಗರದ 9 ಮಾಲ್ಗಳು 50 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿವೆ.
ಇದೀಗ ತೆರಿಗೆ ಬಾಕಿ ಉಳಿಸಿಕೊಂಡಿರುವ ಮಾಲ್ಗಳಿಗೆ ಶಾಕ್ ಕೊಡಲು ಬಿಬಿಎಂಪಿ ಸಿದ್ಧವಾಗಿದೆ. ಈ ಬಾರಿ ಬಾಗಿಲು ಹಾಕುವ ಬದಲು ಹೊಸ ಅಸ್ತ್ರ ಪ್ರಯೋಗಕ್ಕೆ ಬಿಬಿಎಂಪಿ ಮುಂದಾಗಿದೆ.
ಮಾಲ್ಗಳಿಗೆ ಬೀಗ ಹಾಕಿದ್ರೆ ಸಾರ್ವಜನಿಕರಿಗೆ ತೊಂದರೆ ಆಗಲಿದೆ. ಈ ಹಿನ್ನೆಲೆ ಮಾಲ್ಗಳು ನೀಡಿರುವ ಬ್ಯಾಂಕ್ ಅಟ್ಯಾಚ್ಮೆಂಟ್ ರಿಕವರಿ (Bank Attachment Recovery) ಮಾಡಲು ಬಿಬಿಎಂಪಿ ಮುಂದಾಗಿದೆ. ಅತಿ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡ ಮಾಲ್ನಿಂದಲೇ ಮೊದಲ ರಿಕವರಿ ಆಗಲಿದೆ.
ನೋಟಿಸ್ ನೀಡುವ ಪ್ರಕ್ರಿಯೆ ಆರಂಭ
ಈಗಾಗಲೇ ಪ್ರಾಥಮಿಕ ನೋಟಿಸ್ ನೀಡುವ ಪ್ರಕ್ರಿಯೆಯೂ ಆರಂಭವಾಗಿದೆ. ಬ್ಯಾಂಕ್ ಮ್ಯಾನೇಜರ್ಗೆ ರಿಕವರಿಗಾಗಿ ಪತ್ರ ಬರೆಯಲು ಮುಖ್ಯ ಆಯುಕ್ತರ ಅನುಮತಿಗಾಗಿ ಫೈಲ್ ರವಾನೆ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ನ್ಯೂಸ್ 18ಗೆ ಮಾಹಿತಿ ನೀಡಿದ್ದಾರೆ.
ನಗರದ ಯಾವ ಯಾವ ಮಾಲ್ಗಳು ಎಷ್ಟು ತೆರಿಗೆ ಬಾಕಿ ಉಳಿಸಿಕೊಂಡಿವೆ?
ಮಂತ್ರಿ ಮಾಲ್ 2017-18 ರಿಂದ 27 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿದೆ. 2019-20ರಿಂದ ಜಿಟಿ ವರ್ಲ್ಡ್ ಮಾಲ್ 5 ಕೋಟಿ 39 ಲಕ್ಷ ರೂ. ತೆರಿಗೆ ಪಾವತಿಸಬೇಕಿದೆ.
ಫೀನಿಕ್ಸ್ ಮಾಲ್ 2 ಕೋಟಿ 76 ಲಕ್ಷ, ವಿ.ಆರ್ ಮಾಲ್ 7 ಕೋಟಿ 32 ಲಕ್ಷ ರೂಪಾಯಿ, ವೆಗಾ ಸಿಟಿ ಮಾಲ್ 2 ಕೋಟಿ 54 ಲಕ್ಷ ರೂಪಾಯಿ, ರಾಯಲ್ ಮೀನಾಕ್ಷಿ ಮಾಲ್ 2 ಕೋಟಿ 54 ಲಕ್ಷ ರೂಪಾಯಿ, ಸೆಂಟ್ರಲ್ ಮಾಲ್ 2 ಕೋಟಿ 46 ಲಕ್ಷ ರೂ ತೆರಿಗೆ ಬಾಕಿ ಉಳಿಸಿಕೊಂಡಿದೆ.
ಇದನ್ನೂ ಓದಿ: Mandya: ಮಂಡ್ಯ ನಗರ ಬಂದ್; ಮತ್ತೊಂದು ಸುತ್ತಿನ ಹೋರಾಟಕ್ಕೆ ರೈತರ ಕರೆ
ವರ್ಜಿನಿಯಾ ಮಾಲ್ 1 ಕೋಟಿ 21 ಲಕ್ಷ ರೂಪಾಯಿ, ಸೋಲ್ ಸ್ಪೇಸ್ ಅರೆನಾ ಮಾಲ್ 1 ಕೋಟಿ 1 ಲಕ್ಷ ರೂಪಾಯಿ, ಒರಾಯನ್ ಮಾಲ್ 75 ಲಕ್ಷ, ಜುಪಿಟರ್ ಮಾಲ್ 39 ಲಕ್ಷ ಬಾಕಿ ಹೊಂದಿದೆ.
2020-21 ಸ್ವಾಗತ್ ಗರುಡಾ ಮಾಲ್ 96 ಲಕ್ಷ ರೂ. ಬಾಕಿ ಉಳಿಸಿಕೊಂಡಿದೆ. ಫೋರಂ ಮಾಲ್ 72 ಲಕ್ಷ, ಮೋರ್ 4 ಲಕ್ಷ ಹಾಗೂ ಹೈಪರ್ ಸಿಟಿ ಮಾಲ್ 48 ಲಕ್ಷ ರೂ. ತೆರಿಗೆ ಪಾವತಿಸಬೇಕಿದೆ.
2021 ಡಿಸೆಂಬರ್ ನಲ್ಲಿ ಮಂತ್ರಿ ಮಾಲ್ ಗೆ ಬೀಗ ಹಾಕಿತ್ತು BBMP?
ಕಳೆದ ಕೆಲ ವರ್ಷಗಳಿಂದ ಮಂತ್ರಿಮಾಲ್ ಆಸ್ತಿ ತೆರಿಗೆ ಪಾವತಿಯನ್ನು ಬಾಕಿ ಉಳಿಸಿಕೊಳ್ಳುತ್ತಾ ಬಂದಿದೆ. ಕಳೆದ ವರ್ಷ ಅಕ್ಟೋಬರ್ 2021ರಲ್ಲಿ ಬೀಗ ಹಾಕಿದಾಗ ತಾತ್ಕಾಲಿಕ 5 ಕೋಟಿ ಕಟ್ಟಿ ಮಂತ್ರಿ ಮಾಲ್ ತಪ್ಪಿಸಿಕೊಂಡಿತ್ತು.
ಇದನ್ನೂ ಓದಿ: Bengaluru: 16ರ ಬಾಲೆಗೆ ನಶೆ ಏರಿಸಿ ವೃದ್ಧನಿಂದ ಅತ್ಯಾಚಾರ, ವಿಷಯ ಗೊತ್ತಾಗಿ ಮನೆಗೇ ನುಗ್ಗಿ ಕೊಂದ ಪೋಷಕರು!
ಉಳಿದ ಬಾಕಿ 27 ಕೋಟಿಯನ್ನ ಅಕ್ಟೋಬರ್ ಅಂತ್ಯಕ್ಕೆ ಪಾವತಿ ಮಾಡೋಕೆ ಡೆಡ್ ಲೈನ್ ಕೊಡಲಾಗಿತ್ತು. ಅಕ್ಟೋಬರ್ 31 ರ ಬಳಿಕ ಹಲವು ಬಾರಿ ಕೇಳಿದ್ರು ಬಾಕಿ ಪಾವತಿ ಮಾಡಿರಲಿಲ್ಲ. ಅಕ್ಟೋಬರ್ ಮುಗಿದ್ರೂ ತೆರಿಗೆ ಕಟ್ಟದೆ ಇದ್ದಿದ್ದಕ್ಕೆ ನವೆಂಬರ್ 15 ರಂದು ಮತ್ತೆ ಬೀಗ ಹಾಕೋಕೆ ಪಾಲಿಕೆ ಮುಂದಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ