ಬೆಂಗಳೂರು: ಆಸ್ತಿ ತೆರಿಗೆಯಲ್ಲಿ (Property Tax) ವಿನಾಯ್ತಿ ಪಡೆಯುತ್ತಿದ್ದ ಮಾಲೀಕರಿಗೆ ಶಾಕ್ ನೀಡಲು ಬಿಬಿಎಂಪಿ (BBMP) ಸಜ್ಜಾಗಿದೆ. ಇಷ್ಟು ದಿನ ಪಾಲಿಕೆಯಿಂದ ತೆರಿಗೆ ವಿನಾಯಿತಿ (Tax Relaxation) ಪಡೆಯುತ್ತಿದ್ದ ಕಟ್ಟಡ ಮಾಲೀಕರಿಗೆ ತೆರಿಗೆ ಶಾಕ್ ನೀಡಲು ಪಾಲಿಕೆ ನಿರ್ಧರಿಸಿದೆ. ವಿನಾಯಿತಿ ಪಡೆಯುತ್ತಿದ್ದ ಕಟ್ಟಡಗಳಿಗೆ ತೆರಿಗೆ ಹೆಚ್ಚಳಕ್ಕೆ ಪಾಲಿಕೆ ಮುಂದಾಗಿದೆ. ಬಿಬಿಎಂಪಿ ವ್ಯಾಪ್ತಿ ಯಲ್ಲಿ ಸರ್ಕಾರದ ಕಟ್ಟಡಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು, ಸಾಮಾಜಿಕ ಸೇವೆ ನೀಡುತ್ತಿರುವ ಸಂಸ್ಥೆಗಳ ಆಸ್ತಿಗಳಿಗೆ ಆಸ್ತಿ ತೆರಿಗೆಯಲ್ಲಿ ಶೇ.75ರಷ್ಟು ವಿನಾಯ್ತಿ ಪಡೆದುಕೊಳ್ಳುತ್ತಿದ್ದವು. ಈ ಸಂಸ್ಥೆಗಳಿಂದ ಆಸ್ತಿ ತೆರಿಗೆಯನ್ನು ಶೇ.100ರಷ್ಟು ವಸೂಲಿ ಮಾಡುತ್ತಿರಲಿಲ್ಲ. ತೆರಿಗೆಯ ಶೇ. 25 ಮೊತ್ತವನ್ನು ಸೇವಾ ಶುಲ್ಕ ಪಡೆಯಲಾಗುತ್ತಿತ್ತು.
ತೆರಿಗೆ ಮೊತ್ತದ ಶೇ. 75 ಹಣವನ್ನು ರಿಯಾಯಿತಿ ನೀಡಲಾಗುತ್ತಿತ್ತು. ಇದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಕಾಯ್ದೆಯಲ್ಲೂ ಅವಕಾಶ ಕಲ್ಪಿಸಲಾಗಿತ್ತು. ಆದ್ರೀಗ ಈ ಸೇವಾ ತೆರಿಗೆಯನ್ನು ಶೇ.50ಕ್ಕೆ ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. 50 ಸಾವಿರಕ್ಕೂ ಅಧಿಕ ಕಟ್ಟಡಗಳು ತೆರಿಗೆ ವಿನಾಯ್ತಿ ಪಡೆದುಕೊಂಡಿವೆ.
ಪ್ರತಿ ವರ್ಷ ಸರಾಸರಿ 3 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹವಾಗುತ್ತದೆ. ಈಗಾಗಲೆ ಲೆಕ್ಕ ಹಾಕಿರುವ ಆಸ್ತಿಗಳ ಪೈಕಿ 50 ಸಾವಿರಕ್ಕೂ ಹೆಚ್ಚಿನ ಆಸ್ತಿಗಳಿಗೆ ತೆರಿಗೆಯಲ್ಲಿ ವಿನಾಯಿತಿ ಇದೆ.
ಶೇ.50ಕ್ಕೆ ಹೆಚ್ಚಿಸುವ ಪ್ರಸ್ತಾವನೆ
ಪ್ರಮುಖವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಆಸ್ತಿಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು ತೆರಿಗೆ ವಿನಾಯಿತಿ ಪಡೆದುಕೊಂಡಿವೆ. 50 ಸಾವಿರ ಆಸ್ತಿಗಳ ಪೈಕಿ ಖಾಸಗಿ ಶಿಕ್ಷಣ ಸಂಸ್ಥೆಗಳೇ ಹೆಚ್ಚು. ಶೇ.25 ಇರುವ ಸೇವಾ ಶುಲ್ಕವನ್ನು ಶೇ. 50ಕ್ಕೆ ಹೆಚ್ಚಿಸುವ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಬಿಬಿಎಂಪಿ ವಿಶೇಷ ಅಯುಕ್ತ ದೀಪಕ್ ಹೇಳಿದ್ದಾರೆ.
ಪ್ರತಿ ಸಿಗ್ನಲ್ನಲ್ಲಿಯೂ ಬೀಳುತ್ತೆ ಬ್ರೇಕ್
ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಈಗಾಗಲೇ ಐಟಿಎಂಎಸ್ ತಂತ್ರಜ್ಞಾನ ಆಧಾರಿತ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ತಂತ್ರಜ್ಞಾನದ ಸಹಾಯದಿಂದ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ಜನರಿಗೆ ದಂಡ ವಿಧಿಸಲು ಪೊಲೀಸರು ಸಜ್ಜಾಗಿದ್ದಾರೆ.
ಹೌದು, ನೀವು ರೂಲ್ಸ್ ಬ್ರೇಕ್ ಮಾಡಿದ 5 ಸೆಕೆಂಡ್ಗಳಲ್ಲಿ ನಿಮ್ಮ ಮೊಬೈಲ್ಗೆ ದಂಡದ ಮೆಸೇಜ್ ಬರಲಿದೆ. ಈಗ ಪ್ರತಿ ಸಿಗ್ನಲ್ಗೂ ಪ್ರತ್ಯೇಕವಾಗಿ ದಂಡ ವಿಧಿಸಲು ಪೊಲೀಸರು ಸಜ್ಜಾಗಿದ್ದಾರೆ.
ಸಾರ್ವಜನಿಕರಿಂದ ಆಕ್ರೋಶ
ಹೆಲ್ಮೆಟ್ ಧರಿಸದೇ ಸಂಚರಿಸುವ ಸವಾರರು ಒಂದು ಬಾರಿ ದಂಡ ಪಾವತಿಸಿದ್ದರೆ, ಇಡೀ ದಿನ ಅದೇ ರಶೀದಿ ತೋರಿಸಿ ತಿರುಗಾಡುತ್ತಿದ್ದರು. ಆದರೆ ಈಗ ಪ್ರತ್ಯೇಕ ಉಲ್ಲಂಘನೆಗೆ ಪ್ರತಿ ಸಿಗ್ನಲ್ನಲ್ಲಿ ದಂಡ ವಿಧಿಸಲಾಗುತ್ತದೆ.
ಇದೀಗ ಪ್ರತಿ ಸಿಗ್ನಲ್ನಲ್ಲಿ 500 ರೂಪಾಯಿ ದಂಡ ವಿಧಿಸಲು ಪೊಲೀಸರು ತೀರ್ಮಾನಿಸಿದ್ದಾರೆ. ಆದರೆ ಪೊಲೀಸರ ಈ ನಿರ್ಧಾರಕ್ಕೆ ಸಾರ್ವಜನಿಕರಿಂದ ವ್ಯಾಪಾಕ ಆಕ್ರೋಶ ವ್ಯಕ್ತವಾಗಿದೆ.
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ಟೋಲ್ ಸಂಗ್ರಹ
ಅತ್ಯಂತ ನಿರೀಕ್ಷೆ ಹುಟ್ಟಿಸಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ (Bengaluru Mysuru Expressway) ಕುರಿತು ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಈ ಮಾರ್ಗದ ಪ್ರಯಾಣಿಕರಂತೂ ಈ ಸುದ್ದಿಯನ್ನು ಮಿಸ್ ಮಾಡ್ಲೇಬಾರದು!
118 ಕಿಲೋ ಮೀಟರ್ನ 10 ಪಥಗಳ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಟೋಲ್ ಸಂಗ್ರಹದ (Bengaluru Mysuru Expressway Toll) ಮೊದಲ ಹಂತವು ಫೆಬ್ರವರಿ 15 ರೊಳಗೆ ಆರಂಭವಾಗಲಿದೆ. ಈ ಟೋಲ್ ಬೆಂಗಳೂರು-ನಿಡಘಟ್ಟ ಮಾರ್ಗದಲ್ಲಿ ಪ್ರಾರಂಭವಾಗಲಿದೆ.
ಇದನ್ನೂ ಓದಿ: Mandya: ಒಂದು ಕೇಸ್ನಲ್ಲಿ ಅರೆಸ್ಟ್, ಬಾಯಿ ಬಿಟ್ಟಿದ್ದು 9 ಮನೆಗಳ್ಳತನ; ಕಳ್ಳತನಕ್ಕೆ ವಿಮಾನದಲ್ಲಿ ಬರ್ತಿದ್ದ!
ಈ ಎಕ್ಸ್‌ಪ್ರೆಸ್‌ವೇ ಕಾಮಗಾರಿಯು ಎರಡು ಹಂತಗಳಲ್ಲಿ ನಡೆದಿತ್ತು. ಬೆಂಗಳೂರಿನಿಂದ ಮದ್ದೂರು ತಾಲೂಕಿನ ನಿಡಘಟ್ಟಕ್ಕೆ ಸುಮಾರು 56 ಕಿ.ಮೀ ಕಾಮಗಾರಿ ಮೊದಲ ಹಂತದಲ್ಲಿ ನಡೆದರೆ, 61 ಕಿ. ಮೀ ಉದ್ದದ ಎರಡನೇ ಪ್ಯಾಕೇಜ್, ನಿಡಘಟ್ಟದಿಂದ ಮೈಸೂರಿಗೆ ಸಂಪರ್ಕಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ