ACB Raid: 20 ಲಕ್ಷ ರೂ ಲಂಚ ಪಡೆಯುವಾಗ ಸಿಕ್ಕಿಬಿದ್ದ ಬಿಬಿಎಂಪಿ ಯೋಜನಾಧಿಕಾರಿ

ದೇವೇಂದ್ರಪ್ಪ

ದೇವೇಂದ್ರಪ್ಪ

ಕಟ್ಟಡಕ್ಕೆ ಒಸಿ ಕೊಡಲು 40 ಲಕ್ಷ ಲಂಚದ ಬೇಡಿಕೆ ಇಟ್ಟಿದ್ದರು. ಇದರ ಮುಖಂಡವಾಗಿ ಇಂದು 20 ಲಕ್ಷ ಹಣವನ್ನು ಪಡೆಯಲು ಮುಂದಾಗಿದ್ದರು.

  • Share this:

ಬೆಂಗಳೂರು (ಫೆ. 5): ಬಿಬಿಎಂಪಿ ಯೋಜನಾಧಿಕಾರಿಯೊಬ್ಬರು  20 ಲಕ್ಷ ರೂ ಲಂಚ ಪಡೆಯುವಾಗ ರೆಡ್​ ಹ್ಯಾಂಡ್​ ಆಗಿ ಎಸಿಬಿ ಕೈಗೆ ಸಿಕ್ಕಿಬಿದ್ದಾರೆ. ಬಿಬಿಎಂಪಿ ಯೋಜನಾಧಿಕಾರಿಯಾಗಿರುವ ದೇವೇಂದ್ರಪ್ಪ ಸಿಕ್ಕಿಬಿದ್ದ ಅಧಿಕಾರಿ. ಬೊಮ್ಮನಹಳ್ಳಿಯ ಟೌನ್​ ಪ್ಲಾನಿಂಗ್​ ಅಧಿಕಾರಿಯಾಗಿರುವ ಇವರು ಕಟ್ಟಡಕ್ಕೆ ಒಸಿ ಕೊಡಲು 40 ಲಕ್ಷ ಲಂಚದ ಬೇಡಿಕೆ ಇಟ್ಟಿದ್ದರು. ಇದರ ಮುಖಂಡವಾಗಿ ಇಂದು 20 ಲಕ್ಷ ಹಣವನ್ನು ಪಡೆಯಲು ಮುಂದಾಗಿದ್ದರು. ಮೆಜೆಸ್ಟಿಕ್​ನ ಹೊಟೇಲ್​ನಲ್ಲಿ 20 ಲಕ್ಷ ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದು, ಈ ವೇಳೆ ಹಣದ ಸಮೇತ ಅಧಿಕಾರಿ ಸಿಕ್ಕಿ ಬಿದ್ದಿದ್ದಾರೆ. 


ಯೋಜನಾ ಅಧಿಕಾರಿಯಾಗಿರುವ ದೇವೇಂದ್ರಪ್ಪ ವಿಕಲಚೇತನಾರಾಗಿದ್ದಾರೆ. ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.  ಇಂದು ಬಿಬಿಎಂಪಿಯ ಮುಖ್ಯ ಕಚೇರಿಯಲ್ಲಿ ನಡೆದ ಸಭೆಗೂ ಹಾಜರಾಗಿದ್ದರು. ಬಳಿಕ ಹಣ ಪಡೆಲು ಮುಂದಾಗಿದ್ದರು. ಹಣದ ಬೇಡಿಕೆ ಇಟ್ಟಿದ್ದ ಕುರಿತು ರಾಜೇಶ್​ ಎಂಬುವವರು ಎಸಿಬಿಗೆ ದೂರು ಸಲ್ಲಿಸಿದ್ದರು.




ಸಿ ಲಕ್ಷೀ ನಾರಾಣಯಣ್​ ಎನ್ನುವವರ ಬೊಮ್ಮನಹಳ್ಳಿಯ ಹುಳಿಮಾವಿನ ಬಳಿ ಕಟ್ಟಡಕ್ಕೆ  ಒಸಿ ನೀಡಲು  ಇವರು ಹಣದ ಬೇಡಿಕೆ ಇಟ್ಟಿದ್ದರು. ಇದಕ್ಕಾಗಿ 40 ಲಕ್ಷ ಹಣವನ್ನು ಕೇಳಿದ್ದರು.


ಇದೇ ವೇಳೆ ಎಸಿಬಿ ಅಧಿಕಾರಿಗಳು ಅವರ ಕಾರನ್ನು  ಪರಿಶೀಲಿಸಿದಾಗ 7 ಲಕ್ಷದ 42 ಸಾವಿರ ಹಣ ಪತ್ತೆಯಾಗಿದೆ. ಈ ಹಣಕ್ಕೆ ಯಾವುದೇ ದಾಖಲೆ ಯನ್ನು ಅಧಿಕಾರಿ ನೀಡುವಲ್ಲಿ ವಿಫಲರಾಗಿದ್ದಾರೆ. ಈ ಕುರಿತು ಎಸಿಬಿ ಅಧಿಕಾರಿಗಳು ದೇವೇಂದ್ರಪ್ಪನನ್ನು ವಿಚಾರಣೆ ನಡೆಸಿದ್ದು, ಕಾರಿನಲ್ಲಿ ಸಿಕ್ಕ ಕೆಲ ದಾಖಲೆಗಳು ಮತ್ತು ಕಾರಿನಲ್ಲಿ ಸಿಕ್ಕ ಹಣ ವಶಕ್ಕೆ ಪಡೆದಿದ್ದಾರೆ.

Published by:Seema R
First published: