• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಕ್ಲೀನ್ ಶಿವಾಜಿನಗರಕ್ಕೆ ಬಿಬಿಎಂಪಿ ಪಣ: ಇನ್ನೆರಡು ತಿಂಗಳಲ್ಲಿ ಸ್ವಚ್ಛ ಶಿವಾಜಿನಗರ!

ಕ್ಲೀನ್ ಶಿವಾಜಿನಗರಕ್ಕೆ ಬಿಬಿಎಂಪಿ ಪಣ: ಇನ್ನೆರಡು ತಿಂಗಳಲ್ಲಿ ಸ್ವಚ್ಛ ಶಿವಾಜಿನಗರ!

ಶಿವಾಜಿನಗರ ಬಸ್​ ನಿಲ್ದಾಣ.

ಶಿವಾಜಿನಗರ ಬಸ್​ ನಿಲ್ದಾಣ.

ಬಿಬಿಎಂಪಿ ಮೊದಲಿಗೆ ಶಿವಾಜಿನಗರ ಎಲ್ಲಾ ಅಂಗಡಿ ಹೊಟೇಲ್ ಮಾಲಿಕರ ಅಸೋಸಿಯೇಷನ್ ಜತೆ ಕೂತು ಒಂದು ಸುತ್ತಿನ ಮಾತಕತೆ ನಡೆಸಿ ಕಸ ಮುಕ್ತ ಶಿವಾಜಿನಗರ ಮಾಡಲು ಎಲ್ಲರ ಸಹಕಾರ ಬೇಕು ಅನ್ನೋ ಅಂಶವನ್ನು ಮುಂದಿಟ್ಟಿದೆ.

  • Share this:

ಬೆಂಗಳೂರು: ರಸ್ತೆ ಮೇಲೆ‌ ಹರಿಯೋ ಚರಂಡಿ‌ನೀರು. ಎಲ್ಲೆಂದರಲ್ಲೇ ಬಿದ್ದಿರುವ ಕಸ. ಮಾಂಸದ ತುಣುಕು‌ ತಿನ್ನಲ್ಲು ಆಕಾಶದಲ್ಲಿ ಹಾರುವ ಹದ್ದುಗಳು, ಈ ದೃಶ್ಯ ಕಂಡು ಬರೋದು ಬೆಂಗಳೂರಿನ ಶಿವಾಜಿನಗರದಲ್ಲಿ. ಹೌದು, ಶಿವಾಜಿನಗರ ಅಂದ್ರೆ ಸ್ವಚ್ಚತೆ ಕಾರಣ ಕೊಟ್ಟು ಹಿಂದೇಟು ಹಾಕುವವರಿಗೇನು ಕಮ್ಮಿ ಇಲ್ಲ. ಒಂದ್ಕಡೆ ಡ್ರೈ‌ನೇಜ್ ಸಮಸ್ಯೆ. ಇನ್ನೊಂದು ಕಡೆ ಅಂಗಡಿ ಮುಂಗಟ್ಟುಗಳು. ಸದಾ ಜನಜಂಗುಳಿಯಿಂದಲೇ ಕೂಡಿರುವ ಶಿವಾಜಿನಗರ ಅಷ್ಟೊಂದೇನು ಕ್ಲೀನ್ ಇಲ್ಲ ಅನ್ನೋದೇನು ಗೌಪ್ಯ ವಿಚಾರವೇ ಅಲ್ಲ.‌ ಕಣ್ಣಿಗೆ ರಾಚುವಂತೆ ಕಸದ ರಾಶಿಗಳು ರಸ್ತೆಯ ಬದಿಯಲ್ಲೇ ಬಿದ್ದಿರುತ್ತವೆ. ಬೆಂಗಳೂರಿನ ಅತ್ಯಂತ ಹಳೇಯ ಮತ್ತು ಇತಿಹಾಸದ ಖ್ಯಾತಿ ಪಡೆದಿರುವ ಶಿವಾಜಿನಗರ ಕ್ಲೀನ್ ಮತ್ತು ಕಸದ ವಿಚಾರದಲ್ಲಿ ಕುಖ್ಯಾತಿಯನ್ನು ಗಳಿಸಿದೆ. ಬೆಂಗಳೂರಿಗೆ ಭೇಟಿ ನೀಡಿದ ಅದೆಷ್ಟೋ ಜನ ಶಿವಾಜಿನಗರದ ಬಿರಿಯಾನಿ, ಚಾಯ್ ಸೇವಿಸಲು ಒಂದಲ್ಲ ಒಂದ್ಸಲ ಭೇಟಿ ನೀಡಿಯೇ ಇರುತ್ತಾರೆ. ಅಂತಹವರಿಗೆ ಊಟದ ರುಚಿ ಜೊತೆಗೆ ಕೆಟ್ಟ ವಾಸನೆ ಮತ್ತು ಕಸದ ರಾಶಿಯ ದರ್ಶನವೂ ಆಗಿರುತ್ತದೆ.


ಈಗ ಈ ಅದನ್ನು ಬದಲಿಸಲು ಬಿಬಿಎಂಪಿ ಪಣ ತೊಟ್ಟಿದ್ದು ವಿಶೇಷ ಪ್ಲ್ಯಾನ್ ಒಂದು ರೆಡಿ ಮಾಡಿಕೊಂಡಿದೆ. ಶಿವಾಜಿನಗರದ ಶಾಸಕರ ಜತೆಗೂಡಿ "ಪ್ರಾಜೆಕ್ಟ್ ಶಿವಾಜಿನಗರ" ಲಾಂಚ್ ಮಾಡಿದ್ದು ಬರುವ ದಿನಗಳಲ್ಲಿ ಬಡಾವಣೆಯನ್ನು ಕ್ಲೀನ್ ಆಗಿ ಇಡಲು ಅನೇಕ ಯೋಜನೆಗಳನ್ನು ರೂಪಿಸಿದೆ.


ಬಿಬಿಎಂಪಿ ಮೊದಲಿಗೆ ಶಿವಾಜಿನಗರ ಎಲ್ಲಾ ಅಂಗಡಿ ಹೊಟೇಲ್ ಮಾಲಿಕರ ಅಸೋಸಿಯೇಷನ್ ಜತೆ ಕೂತು ಒಂದು ಸುತ್ತಿನ ಮಾತಕತೆ ನಡೆಸಿ ಕಸ ಮುಕ್ತ ಶಿವಾಜಿನಗರ ಮಾಡಲು ಎಲ್ಲರ ಸಹಕಾರ ಬೇಕು ಅನ್ನೋ ಅಂಶವನ್ನು ಮುಂದಿಟ್ಟಿದೆ. ಶಿವಾಜಿನಗರದ ವ್ಯಾಪಾರಸ್ಥರು ಹಾಗೂ ಇಲ್ಲಿ ನಿವಾಸಿಗಳು ಸಹಕಾರ ನಿಡಿದ್ದೇ ಆದಲ್ಲಿ ಬಹಳ ಬೇಗ ಶಿವಾಜಿನಗರ ಕ್ಲೀನ್ ಆಗಲಿದೆ ಅನ್ನೋದು ಬಿಬಿಎಂಪಿಯ ವಿಶೇಷ ಆಯುಕ್ತ ರಂದೀಪ್ ದೇವ್ ಮಾತು.


ಇನ್ನು ಈ ಬಗ್ಗೆ ಶಾಸಕ ರಿಜ್ವಾನ್ ಅರ್ಷದ್ ಕೂಡ ಬಿಬಿಎಂಪಿ ಬಳಿ ಸಹಕಾರ ಕೇಳಿದ್ದು, ಇಲ್ಲಿರುವ ಎಲ್ಲಾ ಮಾರುಕಟ್ಟೆಯ ತಾಜ್ಯ ಮತ್ತು ಕಸವನ್ನು ಸಮಸಯಕ್ಕೆ ಸರಿಯಾಗಿ ವಿಲೇವಾರಿ ಮಾಡಿದ್ರೆ ಆದಷ್ಟು ಮಟ್ಟಿಗೆ ಶುವಾಜಿನಗರ ಕ್ಲೀನ್ ಆಗಲಿದೆ ಅಂದಿದ್ದಾರೆ.


ಇದನ್ನೂ ಓದಿ: Farmers Protest: ರೈತ ಮಸೂದೆಯನ್ನು ವಿರೋಧಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಮತ್ತೋರ್ವ ನಾಯಕ


ಅನೇಕ ಜನ ವಾಲಿಯಂಟರ್ಸ್ ಗಳು ಕೂಡ ಶಿವಾಜಿನಗರ ಕ್ಲೀನ್ ಮಾಡೋದಕ್ಕೆ ಪಣ ತೊಟ್ಟಿದ್ದೆ. ಶಿವಾಜಿನಗರ ಬಸ್ ನಿಲ್ದಾಣದ ಮುಂಭಾಗದಲ್ಲೇ ಹೈಟೆಕ್ ಆಸ್ಪತ್ರೆ ಕೂಡ ನಿರ್ಮಾಣವಾಗಿದೆ. ಇದರ ಜೊತೆಯಲ್ಲಿ ಮೆಟ್ರೋ ಕೂಡ ಬರಲಿದೆ. ಈಗಾಗಲೇ ಮೆಟ್ರೋ ಕಾಮಗಾರಿ ಭರದಿಂದ ಸಾಗಿದ್ದು, ಅಂಡರ್ ಪಾಸ್ ಕೆಲಸ ಕಾರ್ಯಗಳು ನಡೆಯುತ್ತಿವೆ. ಶೀಘ್ರವೇ ಮೆಟ್ರೋ ಕಾಮಗಾರಿ ಮುಗಿದು ಸಂಚಾರ ಆರಂಭವಾಗಲಿದೆ. ಹೀಗಾಗಿ ಇಷ್ಟೆಲ್ಲಾ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿರುವಾಗಲೇ ನಗರವನ್ನು ಶುಚಿಗೊಳಿಸುವ ಅಗತ್ಯ ಇದೆ.


ಮುಂದಿನ ದಿನಗಳಲ್ಲಿ  ಹೀಗಾದರೆ ಮಾತ್ರ ಅಭಿವೃದ್ಧಿಗೆ ಒಂದರ್ಥ ಬರುವುದು. ಈ ನಿಟ್ಟಿನಲ್ಲಿ ಬಿಬಿಎಂಪಿ ಕೂಡ ಶಿವಾಜಿನಗರದ ಮೇಲೆ ವಿಶೇಷವಾಗಿ ಕಣ್ಣಿಡಲಿದೆ. ಎಲ್ಲವೂ ಅಂದುಕೊಂಡಂತೇ ಆದರೆ ಶಿವಾಜಿನಗರ ಬೆಂಗಳೂರಿಗೆ ಮತ್ತಷ್ಟು ಮೆರಗು ತಂದುಕೊಡಲಿದೆ.


(ವರದಿ - ಆಶಿಕ್ ಮುಲ್ಕಿ)

First published: