• Home
  • »
  • News
  • »
  • state
  • »
  • BBMP: ಮತದಾರರ ಮಾಹಿತಿ ಕಳವು ಮಾಡಿದ್ದ 'ಚಿಲುಮೆ' ಬಗ್ಗೆ ಮತ್ತೊಂದು ಶಾಕಿಂಗ್ ವಿಚಾರ ಬಯಲು!

BBMP: ಮತದಾರರ ಮಾಹಿತಿ ಕಳವು ಮಾಡಿದ್ದ 'ಚಿಲುಮೆ' ಬಗ್ಗೆ ಮತ್ತೊಂದು ಶಾಕಿಂಗ್ ವಿಚಾರ ಬಯಲು!

ಚಿಲುಮೆಯಿಂದ ಅಕ್ರಮ

ಚಿಲುಮೆಯಿಂದ ಅಕ್ರಮ

ಅಕ್ರಮ ನಡೆಸುತ್ತಿದ್ದ ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್​ಗೆ ಬಿಬಿಎಂಪಿಯೇ ದುಡ್ಡಿನ ಖಜಾನೆಯಾಗಿದ್ದು, ಆತ ಬಿಬಿಎಂಪಿಯಿಂದ ಲಕ್ಷಾಂತರ ಹಣ ಪಡೆದಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ.

  • News18 Kannada
  • Last Updated :
  • Bangalore [Bangalore], India
  • Share this:

ಬೆಂಗಳೂರು(ನ.25): ಒಂದು ವಾರದಿಂದ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ್ದ ಚಿಲುಮೆ ಸಂಸ್ಥೆಯಿಂದ (Chilume) ಮತದಾರರ ಮಾಹಿತಿ ಕಳವು ಪ್ರಕರಣ (Voter ID Scam) ಸಂಬಂಧ ದಿನಕ್ಕೊಂದು ವಿಚಾರ ಬಯಲಾಗುತ್ತಿದೆ. ಸದ್ಯ ಈ ಅಕ್ರಮಕ್ಕೆ ಸಂಬಂಧಿಸಿದಂತೆ ಮತ್ತೊಂದು ಶಾಕಿಂಗ್ ವಿಚಾರ ಬಯಲಾಗಿದೆ. ಹೌದು ಅಕ್ರಮ ನಡೆಸುತ್ತಿದ್ದ ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್​ಗೆ (ravikumar)  ಬಿಬಿಎಂಪಿಯೇ ದುಡ್ಡಿನ ಖಜಾನೆಯಾಗಿದ್ದು, ಆತ ಬಿಬಿಎಂಪಿಯಿಂದ ಲಕ್ಷಾಂತರ ಹಣ ಪಡೆದಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ. 2022ರಲ್ಲೇ ರವಿಕುಮಾರ್​ ಖಾತೆಗೆ ಬರೋಬ್ಬರಿ 98 ಲಕ್ಷ ಮತ್ತು 85 ಲಕ್ಷ ಹಣ ಕ್ರೆಡಿಟ್ ಆಗಿದೆ. ಈ ಮೂಲಕ ಒಂದೇ ವರ್ಷದಲ್ಲಿ ಕೋಟಿಗೂ ಹೆಚ್ಚು ಹಣವನ್ನು ಆತ ಪಡೆದುಕೊಂಡಿದ್ದಾನೆ.


ಬಿಬಿಎಂಪಿಯ ಹಲವು ಸರ್ವೇಗಳನ್ನು ಮಾಡಿದ್ದ ರವಿಕುಮಾರ್, ಚಿಲುಮೆ ಸಂಸ್ಥೆ ಅಡಿಯಲ್ಲಿ ಶೈಕ್ಷಣಿಕ, ಸಾಮಾಜಿಕ ಮತ್ತು ಸ್ಕಾಲರ್ ಶಿಪ್ ಸರ್ವೇ ನಡೆಸಿದ್ದ. ಇದೇ ಕಾರಣದಿಂದ ಬಿಬಿಪಿಎಂ ಚಿಲುಮೆ ಸಂಸ್ಥೆಯ ಖಾತೆಗೆ ಕೋಟಿಗಟ್ಟಲೆ ಹಣ ವರ್ಗಾಯಿಸಿದ್ದಾರೆ. ಸದ್ಯ ಮತದಾರರ ಮಾಹಿತಿ ಕಳವು ಪ್ರಕರಣದ ಸಂಬಂಧ ನಡೆಯುತ್ತಿರುವ ತನಿಖೆ ವೇಳೆ ಈ ಎಲ್ಲಾ ವಿಚಾರಗಳು ಬಯಲಾಗುತ್ತಿವೆ.


ಇದನ್ನೂ ಓದಿ:  Voters Data Steal: ದುಡ್ಡು ಕೊಟ್ರೆ ಮತದಾರನ ಮಾಹಿತಿ, ರವಿಕುಮಾರ್ ಸೋದರನ ಬಂಧನವೇ ರೋಚಕ


2013 ರಿಂದಲೇ ಸರ್ವೇ ಮಾಡಿಕೊಡುತ್ತಿದ್ದ ಚಿಲುಮೆ ಸಂಸ್ಥೆಗೆ ಬಿಬಿಎಂಪಿ ಕಡೆಯಿಂದಲೇ ಚಿಲುಮೆಗೆ ಸಾಕಷ್ಟು ಹಣ ಪಾವತಿಯಾಗಿದೆ. ಬೀದಿ ಬದಿ ವ್ಯಾಪಾರಿಗಳು, ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಬಿಬಿಎಂಪಿ ಸರ್ವೇಗಳನ್ನು ನಡೆಸಿತ್ತು. ಚಿಲುಮೆ ಸಂಸ್ಥೆ ಅಧಿಕೃತವಾಗಿ ಬಿಬಿಎಂಪಿಯ ಹಲವು ಸರ್ವೇಗಳನ್ನ ಮಾಡಿತ್ತು/ ಪೊಲೀಸರ ತನಿಖೆ ವೇಳೆ ಚಿಲುಮೆ ಸಂಸ್ಥೆ ಸರ್ವೇ ಹಾಗೂ ಪಡೆದ ಹಣದ ವಿವರ ಒಂದೊಂದಾಗಿ ಬೆಳಕಿಗೆ ಬರಲಾರಂಭಿಸಿದೆ. ಇನ್ನು ಸರ್ವೇ ಹಣದಲ್ಲಿ ಬಹುತೇಕ ಹಣವನ್ನು ರವಿಕುಮಾರ್ ಡ್ರಾ ಮಾಡಿದ್ದಾರೆ.


ರವಿಕುಮಾರ್ ಬಂಧನ ಬಳಿಕ ಇನ್ನೂ ಮೂವರು ಅರೆಸ್ಟ್


ಬೆಂಗಳೂರಿನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿದೆ ಎಂಬುದು ಬಹಿರಂಗವಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಆರೋಪಿಗಳಲ್ಲಿ ಚಿಲುಮೆ ಸಂಸ್ಥೆಯ ಆಡಳಿತಾಧಿಕಾರಿಯೂ ಒಬ್ಬರಾಗಿದ್ದರು. ಬಂಧನಕ್ಕಾಗಿ ಪೊಲೀಸರ ವಿಶೇಷ ತಂಡ ರಚಿಸಲಾಗಿತ್ತು. ರವಿಕುಮಾರ್ ಬಂಧನ ಬಳಿಕ 3 ಆರ್‌ಓ ಅಮಾನತು; ವಿಶೇಷ ಪೊಲೀಸರ ತಂಡಗಳು ಪ್ರಕರಣದ ಪ್ರಮುಖ ಆರೋಪಿಗಳಾದ ಚಿಲುಮೆ ಮುಖ್ಯಸ್ಥ ರವಿಕುಮಾರ್ ಹಾಗೂ ಅದರ ಆಡಳಿತಾಧಿಕಾರಿ ಲೋಕೇಶ್ ​ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.


ಇಆರ್‌ಓ, ಎಇಆರ್‌ಓಗಳ ವಿಚಾರಣೆ


ಚಿಲುಮೆ ಸಂಸ್ಥೆಯ ಸಿಬ್ಬಂದಿ ನಕಲಿ ಗುರುತಿನ ಚೀಟಿ ಬಳಸಿಕೊಂಡು ಮತದಾರರ ವೈಯಕ್ತಿಕ ಮಾಹಿತಿ ಸಂಗ್ರಹಿಸಿರುವ ಆರೋಪ ಕೇಳಿ ಬಂದಿದೆ. ಹೀಗಾಗಿ ಪೊಲೀಸರು ನಗರದ ಮತಕ್ಷೇತ್ರಗಳ ಮತದಾರರ ನೋಂದಣಿ ಅಧಿಕಾರಿ(ಇಆರ್‌ಓ) ಮತ್ತು ಸಹಾಯಕ ಮತದಾರರ ನೋಂದಣಿ ಅಧಿಕಾರಿ(ಎಇಆರ್‌ಓ)ಗಳಿಗೆ ನೋಟಿಸ್‌ ನೀಡಿ ವಿಚಾರಣೆ ಮಾಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಈವರೆಗೆ ಸುಮಾರು 45 ಇಆರ್‌ಓ ಹಾಗೂ ಎಇಆರ್‌ಓಗಳ ವಿಚಾರಣೆ ಮಾಡಿದ್ದಾರೆ.


ಇದನ್ನೂ ಓದಿ:  Sidddaramaiah: ಮದುವೆ ಮಂಟಪದಲ್ಲಿ ಆಪ್ತರ ಪರ ಮತ ಕೇಳಿ ಡಿಕೆಶಿಗೆ ಟಾಂಗ್ ಕೊಟ್ರಾ ಸಿದ್ದರಾಮಯ್ಯ?


ಪಿಜಿಯಲ್ಲಿದ್ದುಕೊಂಡು ಸರ್ವೇ


ಚಿಲುಮೆ ಸಂಸ್ಥೆಯ ಸುಮಾರು 200ಕ್ಕೂ ಹೆಚ್ಚು ಕೆಲಸಗಾರರು, ನಗರದ ವಿವಿಧ ಪಿಜಿಗಳಲ್ಲಿ ಇದ್ದುಕೊಂಡೇ ಸರ್ವೇ ಕೆಲಸ ಮಾಡ್ತಿದ್ರು. ಈಶಾ ಪಿಜಿ, ಶ್ರೀನಿವಾಸ ಸೇರಿದಂತೆ ಅನೇಕ ಪಿಜಿಗಳಲ್ಲಿ ಎರಡು ತಿಂಗಳ ಕಾಲ ಕೆಲಸಗಾರರನ್ನು ಇರಿಸಿದ್ರು. ದಾವಣಗೆರೆ, ಹಾಸನ, ಬೆಳಗಾವಿ, ರಾಯಚೂರು ಸೇರಿದಂತೆ ಹಲವು ಕಡೆಗಳಿಂದ ಜನರು ಬಂದಿದ್ರು. ಪಿಜಿಯಿಂದ್ಲೇ ಸರ್ವೇಗೆ ಹೋಗಲು ಚಿಲುಮೆ ಸಂಸ್ಥೆ ವ್ಯವಸ್ಥೆ ಮಾಡಿತ್ತು.

Published by:Precilla Olivia Dias
First published: