ಕೈಯಲ್ಲೊಂದು ಕಪ್ ಕಾಫಿ (Coffee) ಅಥವಾ ಟೀ (Tea) ಹಿಡ್ಕೊಂಡು, ಹೋಟೆಲ್ (Hotel) ಹೊರಗೆ ಪಬ್ಲಿಕ್ ಪ್ಲೇಸ್ನಲ್ಲಿ ಸಿಗರೇಟ್ (Cigarette) ಸೇದಿ ಹೊಗೆ ಬಿಡೋರನ್ನು ತುಂಬಾ ಕಡೆ ನೋಡಿರುತ್ತೇವೆ. ಆದರೆ ಇನ್ಮುಂದೆ ಬಿಬಿಎಂಪಿ (BBMP) ಕಟ್ಟುನಿಟ್ಟಿನ ಆದೇಶ ಜಾರಿಗೆ ಮುಂದಾಗಿದೆ. ಈ ನಿಯಮ ಹೋಟೆಲ್ ಮಾಲೀಕರಿಗೇ (Hotel Owners) ಸಂಕಷ್ಟ ತಂದಿದೆ. ಹೋಟೆಲ್ಗಳ ಅಕ್ಕಪಕ್ಕ, ಫುಟ್ಪಾತ್ನಲ್ಲಿ ಕಾಫೀ, ಟೀ ಕುಡಿಯುತ್ತಾ ಧಮ್ (Smoking) ಎಳೆಯುವುದು ಸಾಮಾನ್ಯ. ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ನಿಷೇಧ ಇದ್ದರೂ ಪೊಲೀಸ್ರು (Police) ಬರುವುದನ್ನು ನೋಡಿಕೊಂಡು ಧಮ್ ಎಳೆಯುತ್ತಾರೆ ಧೂಮಪಾನಿಗಳು. ಇದೀಗ ಬಿಬಿಎಂಪಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. 30ಕ್ಕಿಂತ ಹೆಚ್ಚಿನ ಸೀಟ್ ಹೊಂದಿರುವ ಹೋಟೆಲ್ನಲ್ಲಿ ಸ್ಮೋಕಿಂಗ್ ಝೋನ್ (Smoking Zone) ಕಡ್ಡಾಯಗೊಳಿಲು ಬಿಬಿಎಂಪಿ ಸೂಚಿಸಿದೆ.
ಹೊಟೇಲ್ಗಳಲ್ಲಿ ಧೂಮಪಾನ ಮಾಡುವ ಜನರನ್ನು ತಡೆಯಲು ಆಗುತ್ತಿಲ್ಲ ಅನ್ನೋ ಕಾರಣಕ್ಕೆ ಬಿಬಿಎಂಪಿ ಹೊಸ ಆದೇಶ ಮಾಡಿದೆ. ಹೋಟೆಲ್ನಲ್ಲೇ ಸ್ಮೋಕಿಂಗ್ ಜೋನ್ ಇದ್ದಾಗ ಸಾರ್ವಜನಿಕರ ಸ್ಥಳದಲ್ಲಿ ಧೂಮಪಾನ ತಡೆಯಬಹುದು ಅನ್ನೋದು ಹೊಸ ಆದೇಶದ ಗುಟ್ಟು.
ಬಿಬಿಎಂಪಿ ಆದೇಶದಲ್ಲಿ ಏನಿದೆ?
*30ಕ್ಕಿಂತ ಹೆಚ್ಚು ಆಸನದ ಹೋಟೆಲ್ನಲ್ಲಿ ಸ್ಮೋಕಿಂಗ್ ಝೋನ್ ಕಡ್ಡಾಯ.
*COTPA 2003ರ ಅಡಿಯಲ್ಲಿ ಪ್ರತ್ಯೇಕ ಸ್ಮೋಕಿಂಗ್ ಝೋನ್ ಕಡ್ಡಾಯ.
*ಬಾರ್, ರೆಸ್ಟೋರೆಂಟ್, ಕಾಫೀ ಡೇಗಳಲ್ಲಿ ಕೂಡ ಸ್ಮೋಕಿಂಗ್ ಝೋನ್.
*ಧೂಮಪಾನ ಪ್ರದೇಶ ಮೀಸಲಿಡುವುದು ಕಾನೂನಿನಲ್ಲಿ ಕಡ್ಡಾಯವಾಗಿದೆ
*ಸ್ಮೋಕಿಂಗ್ ಝೋನ್ ಇಲ್ಲದ ಉದ್ಯಮ ಕಾನೂನಿನ ಉಲ್ಲಂಘನೆ ಆಗುತ್ತದೆ.
*ಶೀಘ್ರದಲ್ಲಿ ಸ್ಮೋಕಿಂಗ್ ಜೋನ್ ಮಾಡಬೇಕು ತಪ್ಪಿದ್ರೆ ಲೈಸೆನ್ಸ್ ರದ್ದು
*ಹೋಟೆಲ್ಗಳಿಗೂ ಈ ನಿಯಮ ಅನ್ವಯ, ಬಿಬಿಎಂಪಿ ನೋಟಿಸ್
ಹೋಟೆಲ್ ಮಾಲೀಕರ ಆಕ್ರೋಶ
ಬಿಬಿಎಂಪಿ ಆದೇಶಕ್ಕೆ ಹೋಟೆಲ್ ಮಾಲೀಕರು ಕಿಡಿಕಾರಿದ್ದಾರೆ. 30ಕ್ಕಿಂತ ಹೆಚ್ಚು ಆಸನಗಳಿರೋ ಹೋಟೆಲ್ಗಳಲ್ಲಿ ಧೂಮಪಾನ ವಲಯ ಮಾಡಬೇಕು ಅಂತ ಬಿಬಿಎಂಪಿ ಸೂಚನೆ ಕೊಟ್ಟಿದೆ. ಆದರೆ ಹೊಟೇಲ್ಗಳಲ್ಲಿ ಸ್ಮೋಕಿಂಗ್ ಝೋನ್ಗೆ ಜಾಗವಿಲ್ಲ. ಜಾರಿಗೆ ತಂದರೆ ಮಹಿಳೆಯರು, ಮಕ್ಕಳು ಹೊಟೇಲ್ಗೆ ಬರೋದು ಕಡಿಮೆಯಾಗುತ್ತde. ಇನ್ನು ಬಿಬಿಎಂಪಿ ನೋಟಿಸ್ ಅವೈಜ್ಞಾನಿಕ. ಸಿಗರೇಟ್ ಸೇದೋದೇ ತಪ್ಪು, ಹೀಗಿರುವಾಗ ಸ್ಮೋಕಿಂಗ್ ಜೋನ್ ಮಾಡಿದ್ರೆ ಉತ್ತೇಜಿಸಿದಂತಾಗುತ್ತೆ ಎಂದು ಹೊಟೇಲ್ ಅಸೋಸಿಯೇಶನ್ ಸದಸ್ಯರಾದ ಕೃಷ್ಣರಾಜ್ ಹೇಳುತ್ತಾರೆ.
ನಿಯಮ ವಾಪಸ್ ಪಡೆಯುವಂತೆ ಮನವಿ
ಬಿಬಿಎಂಪಿ ತನ್ನ ನಿರ್ಧಾರವನ್ನು ವಾಪಸ್ ತೆಗೆದುಕೊಳ್ಳಬೇಕು ಅಂತ ಹೊಟೇಲ್ ಅಸೋಸಿಯೇಶನ್ ಮನವಿ ಮಾಡಿದೆ. ನಗರದಲ್ಲಿ ಸಾವಿರಾರು ಹಳೆಯ ಕಾಲದ ಹೊಟೇಲ್ಗಳಲ್ಲಿ 30ಕ್ಕೂ ಹೆಚ್ಚು ಟೇಬಲ್ಗಳಿವೆ. ಆದ್ರೆ ಇಲ್ಲಿ ಮೊದಲಿನಿಂದಲೂ ಯಾರೂ ಧೂಮಪಾನ ಮಾಡ್ತಿಲ್ಲ.
ಹೀಗಿರುವಾಗ ಹೊಸದಾಗಿ ಸ್ಮೋಕಿಂಗ್ ಝೋನ್ಮಾ ಮಾಡೋದು ಸೂಕ್ತವಲ್ಲ. ಬೇಕಿದ್ರೆ ಬಿಬಿಎಂಪಿ ಈ ನಿಯಮವನ್ನು ಕೆಫೆಗಳಿಗೆ, ಕಾಫಿ ಶಾಪ್ಗಳಿಗೆ ಸೇರಿದಂತೆ ಇತರೆ ಜಾಗಗಳಿಗೆ ವಿಸ್ತರಿಸಲಿ ಎಂದಿದ್ದಾರೆ.
ಹೊಸ ವರ್ಷದ ಪಾರ್ಟಿಗಳಿಗೆ 1 ಗಂಟೆವರೆಗೆ ಡೆಡ್ಲೈನ್
ಬೆಂಗಳೂರು: ಕೊರೊನಾ ಭೀತಿ ಮಧ್ಯೆ ಹೊಸ ವರ್ಷಾಚರಣೆಗೆ ಮಾರ್ಗಸೂಚಿ ರಚಿಸಲು ಇಂದು ಕಂದಾಯ ಸಚಿವ ಆರ್.ಅಶೋಕ್ (Minister R Ashok) ಮತ್ತು (MInister Dr. K Sduhakar) ಆರೋಗ್ಯ ಸಚಿವ ಡಾ.ಕೆ ಸುಧಾಕರ್ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವ ಸಭೆ ನಡೆಸಲಾಗಿದೆ.
ಇದನ್ನೂ ಓದಿ: Bengaluru Rains: ಬೆಳಗ್ಗೆಯಿಂದಲೇ ಬೆಂಗಳೂರಿನಲ್ಲಿ ಮಳೆ ಶುರು; ಆಫಿಸ್ಗೆ ಹೊರಟವರಿಗೆ ವರುಣನ ಅಡ್ಡಿ
ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ (COVID-19 Technical Advisory Committee) ನೀಡಿರುವ ಕೆಲವು ಕ್ರಮಗಳನ್ನು ಜಾರಿ ಮಾಡುತ್ತಿದ್ದೇವೆ. ಅದರಲ್ಲಿ ಪ್ರಮುಖವಾಗಿ ಹೊಸ ವರ್ಷಾಚರಣೆ (New Year Celebrations) ಮಧ್ಯ ರಾತ್ರಿ 1 ಗಂಟೆ ವರೆಗೂ ಮಾತ್ರ ಅವಕಾಶ ನೀಡಲಾಗುತ್ತಿದೆ.
ಉಳಿದಂತೆ ವಿದೇಶಿ ಪ್ರಯಾಣಿಕರ ಮೇಲೆ ನಿಗಾ ವಹಿಸಿ ಕೊರೊನಾ ಟೆಸ್ಟ್ಗೆ ಒಳಪಡಿಸುವ ಕಾರ್ಯ ಮಾಡುತ್ತೇವೆ ಎಂದು ಸಚಿವರು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ