HOME » NEWS » State » BBMP OPENS CORONA HELPLINE FOR BANGALOREANS AMTV SESR

ಬೆಂಗಳೂರಿಗರಿಗೆ ಮುಂದಿನ 10 ದಿನಗಳು ನಿರ್ಣಾಯಕ: ಸಿಲಿಕಾನ್ ಸಿಟಿ ಮಂದಿಗೆ ಕೊರೋನಾ ಹೆಲ್ಪ್​ಲೈನ್​​ ತೆರೆದ ಬಿಬಿಎಂಪಿ

1912 ಸಂಖ್ಯೆಗೆ ಬೆಂಗಳೂರು ಮಂದಿ ಕರೆ ಮಾಡುವ  ಮೂಲಕ ಸೋಂಕಿನ ಕುರಿತಾದ ಎಲ್ಲಾ ಸಂಶಯಗಳನ್ನು ನಿವಾರಿಸಿಕೊಳ್ಳಬಹುದು.

news18-kannada
Updated:April 9, 2021, 7:04 PM IST
ಬೆಂಗಳೂರಿಗರಿಗೆ ಮುಂದಿನ 10 ದಿನಗಳು ನಿರ್ಣಾಯಕ: ಸಿಲಿಕಾನ್ ಸಿಟಿ ಮಂದಿಗೆ ಕೊರೋನಾ ಹೆಲ್ಪ್​ಲೈನ್​​ ತೆರೆದ ಬಿಬಿಎಂಪಿ
ಬಿಬಿಎಂಪಿ
  • Share this:
ಬೆಂಗಳೂರು (ಏ. 9): ಕೊರೋನಾ ಹೆಚ್ಚಾದ ಹಿನ್ನೆಲೆ ನಾಳೆಯಿಂದ ನಗರದಲ್ಲಿ ಕೊರೋನಾ ಕರ್ಫ್ಯೂ ಜಾರಿಯಾಗುತ್ತಿದೆ. ಈಗಾಗಲೇ ಬಿಬಿಎಂಪಿ ಇದಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಇದರ ಜೊತೆಗೆ ಮುಂದಿನ 10 ದಿನಗಳ ಕಾಲ ಬಹಳ ಗಂಭೀರವಾಗಿರಲಿದೆ ಎಂದು ಸ್ವತಃ ಬಿಬಿಎಂಪಿ ಕಮಿಷನರೇ ಹೇಳಿದ್ದಾರೆ. ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣ ಹೆಚ್ಚಾಗುತ್ತಿದೆ. ಪ್ರತಿ ದಿನ ಭಯಾನಕ ಸಂಖ್ಯೆಯಲ್ಲಿ ಪ್ರಕರಣಗಳು ದಾಖಲಾಗುತ್ತಿದೆ. ಹೀಗಾಗಿ‌ ಕೇಂದ್ರ ಸರ್ಕಾರದ ಸೂಚನೆಯಂತೆ ನಾಳೆಯಿಂದ ನಗರದಲ್ಲಿ ನೈಟ್ ಕರ್ಫ್ಯೂ ಜಾರಿಯಾಗುತ್ತಿದೆ. ಈಗಾಗಲೇ ಕೊರೋನಾ ಎರಡನೇ ಅಲೆ ದೃಢ ಪಡಿಸಿರುವ ತಜ್ಞ ವೈದ್ಯರು ಬೆಂಗಳೂರು ಸ್ಥಿತಿಗತಿ ನೋಡಿ ಆತಂಕ ವ್ಯಕ್ತ ಪಡಿಸುತ್ತಿದ್ದಾರೆ.  ಜೊತೆಗೆ ಕೊರೋನಾ ಕೇಂದ್ರಗಳಾಗಿರುವ ಅಪಾರ್ಟ್ಮೆಂಟ್‌ಗಳನ್ನು ಹತೋಟಿಗೆ ತೆಗೆದುಕೊಳ್ಳಲು ಬಿಬಿಎಂಪಿ ನಿರ್ಧಾರ ಮಾಡಿದೆ. ಈ ಕುರಿತು ಇಂದು ಮಹತ್ವದ ಸಭೆ ನಡೆಸಿದ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ, ನೈಟ್ ಕರ್ಫ್ಯೂ ಅಳವಡಿಸಲು ರಾಜ್ಯ ಮಟ್ಟದಲ್ಲಿ ನಿರ್ಧಾರವಾಗಿದೆ. ನಾವು ಆರೋಗ್ಯ ಇಲಾಖೆಯ ಮಾರ್ಗ ಸೂಚಿಯಂತೆ ಕೆಲಸ ನಿರ್ವಹಿಸುತ್ತೆವೆ. ಸೆಂಟ್ರಲ್ ಹಾಸ್ಪಿಟಲ್ ಬೆಡ್ ಸಿಸ್ಟಮ್ ಅನ್ನುವ ವಿಚಾರವಾಗಿ ಚರ್ಚೆಯಾಗಿದೆ. ಜೊತೆಗೆ ಕೊರೋನಾ ಹಾಟ್ ಸ್ಪಾಟ್ ಗಳಾಗಿರುವ ಅಪಾರ್ಟ್ಮೆಂಟ್ ಗಳ ಮೇಲೆ ಕಣ್ಣಿಡಲು ವಿಶೇಷ ತಂತ್ರ ರೂಪಿಸಲಾಗಿದೆ ಎಂದರು.

ಬೆಂಗಳೂರಿಗರಿಗೆ ಕೊರೋನಾ ಹೆಲ್ಪ್ ಲೈನ್ ತೆರೆದ ಬಿಬಿಎಂಪಿ.!!

ಇನ್ನು ಮುಂದಿನ ಹತ್ತು ದಿನಗಳು ಬೆಂಗಳೂರು ಪಾಲಿಗೆ ಬಹಳ ನಿರ್ಣಾಯಕವಾಗಲಿದೆ. ಈಗಾಗಲೇ ಕೊರೋನಾ ಸ್ಫೋಟಗೊಂಡಿದ್ದು ಬರುವ 10 ದಿನಗಳಲ್ಲಿ ಎರಡನೇ ಅಲೆ ಮತ್ತಷ್ಟು ತೀವ್ರತೆ ಪಡೆದುಕೊಳ್ಳಲಿದೆ ಎಂದು ಬಿಬಿಎಂಪಿ ಆಯುಕ್ತರು ಮಂದಿಯನ್ನು ಎಚ್ಚರಿಸಿದ್ದಾರೆ. ಇದರ ಜೊತೆಗೆ ನಗರದಲ್ಲಿ ಕೊರೋನಾ ಹೆಚ್ಚಾಗ್ತಿರುವ ಹಿನ್ನೆಲೆ ಬಿಬಿಎಂಪಿ ಕೊರೋನಾ ಹೆಲ್ಪ್ ಲೈನ್ ತೆರೆದಿದೆ. 1912 ಸಂಖ್ಯೆಗೆ ಬೆಂಗಳೂರು ಮಂದಿ ಕರೆ ಮಾಡುವ  ಮೂಲಕ ಸೋಂಕಿನ ಕುರಿತಾದ ಎಲ್ಲಾ ಸಂಶಯಗಳನ್ನು ನಿವಾರಿಸಿಕೊಳ್ಳಬಹುದು. ಜೊತೆಗೆ ಕೊರೋನಾ ಸೋಂಕಿನ ಬಗ್ಗೆ ಏನೇ ಸಂಶಯಗಳಿದ್ದರೂ ಈ ಸಹಾಯವಾಣಿಗೆ ಹೇಳಿ ತಿಳಿಸಬಹುದು. ಇದರ ಜೊತೆಗೆ ಸಭೆಯಲ್ಲಿ ನಗರದಲ್ಲಿ ಒಂದು ಲಕ್ಷ ವ್ಯಾಕ್ಸಿನ್ ಹಂಚುವ ನಿಟ್ಟಿನಲ್ಲಿ ಹಲವು ರೀತಿಯಲ್ಲಿ ಚರ್ಚೆ ನಡೆಸಲಾಯಿತು. ಈಗಾಗಲೇ 32 ಸಾವಿರ ವ್ಯಾಕ್ಸಿನ್ ಕೊಡಮಾಡಲಾಗುತ್ತಿದ್ದು, ಸುಮಾರು 60 ಸಾವಿರ ಮಂದಿಗೆ ಕೊರೋನಾ ಪರೀಕ್ಷೆ ನಡೆಸಲಾಗ್ತಿದೆ. ಅಲ್ದೇ, ಅಪಾರ್ಟ್ಮೆಂಟ್ ಗಳಲ್ಲಿ ಹಾಗೂ‌ ಕಚೇರಿಗಳಲ್ಲಿ ಸಹ ವ್ಯಾಕ್ಸಿನೇಷನ್‌ ಕಾರ್ಯಗತಗೊಳಿಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಇದನ್ನು ಓದಿ: ಕೊರೋನಾ ಪರೀಕ್ಷೆ ಹೆಚ್ಚಳ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಶೇ. 50 ಹಾಸಿಗೆ ಮೀಸಲಿಡಲು ಆರೋಗ್ಯ ಸಚಿವರ ಸೂಚನೆ

ಇನ್ನು ನೈಟ್ ಕರ್ಫ್ಯೂ ಅನ್ನು ಪೊಲೀಸರು ಅನುಷ್ಠಾನ ಮಾಡುತ್ತಾರೆ. ಅದಕ್ಕೆ ಪೂರಕವಾಗಿ ಬಿಬಿಎಂಪಿ ಕೆಲಸ ಮಾಡಲಿದೆ. ಹಾಸ್ಪಿಟಲ್ ನಲ್ಲಿ ಹೆಚ್ಚಿನ ಬೆಡ್ ಒದಗಿಸಲು ಐಎಎಸ್ ಮತ್ತು ಐಪಿಎಸ್ ತಂಡ ರಚನೆಯಾಗಿದೆ. ಸದ್ಯಕ್ಕೆ ನಾವು 6 ಸಾವಿರ ಬೆಡ್ ಗಳ ಸಿದ್ಧತೆ ಮಾಡಲು ಬಿಬಿಎಂಪಿ ಯೋಚಿಸಿದೆ. ಅಲ್ದೇ‌ ಕೊರೋನಾ ಸೋಂಕು ದೃಢವಾಗೋ ಏರಿಯಾಗಳನ್ನು ಗುರುತಿಸಿ ಕಂಟೈನ್ಮೆಂಟ್ ಝೋನ್‌ಗಳನ್ನಾಗಿಸುವ ಕೆಲಸ ನಡೀತಿದೆ. ಒಂದು ಮನೆಯಲ್ಲಿ ಪಾಸಿಟಿವ್ ಬಂದ್ರೆ ಅಕ್ಕಪಕ್ಕದ ಮನೆಯನ್ನು ಸೇರಿಸಿ ಕಂಟೋನ್ಮೆಂಟ್ ಝೋನ್ ಎಂದು ಪರಿಗಣಿಸಲು ಬಿಬಿಎಂಪಿ ನಿರ್ಧರಿಸಿದೆ.

ನಗರದಲ್ಲಿ ಹೊಸ 3 ಕೋವಿಡ್ ಕೇರ್ ಸೆಂಟರ್‌ ತೆರಯಲಿರುವ ಪಾಲಿಕೆ.!!

ಮೊದಲನೇ ಅಲೆ ಸಂದರ್ಭದಲ್ಲಿ ಸೋಂಕು ದೃಢವಾದರೆ ಮನೆಯಲ್ಲಿ ಉಳಿದುಕೊಳ್ಳುವ ಅವಕಾಶ ಇರಲಿಲ್ಲ. ಅದರೀಗ ಸೋಂಕು ದೃಢವಾದರೆ ಕೋವಿಡ್ ಕೇರ್ ಸೆಂಟರ್ ಗೆ ದಾಖಲಾಗುವ ಅನಿವಾರ್ಯತೆ ಇಲ್ಲ ಎಂದು ಬಿಬಿಎಂಪಿ ಕಮಿಷನರ್ ಹೇಳಿದ್ದಾರೆ. ಅಂಥಾ ಸಮಸ್ಯೆಗಳು ಗೋಚರವಾದರೆ ಮಾತ್ರ ಆಸ್ಪತ್ರೆ ಅಥವಾ ಕೇರ್ ಸೆಂಟರ್ ಗೆ ದಾಖಲಾಗಿ ಎಂದಿದ್ದಾರೆ. ಈಗಾಗಲೇ ಪಾಲಿಕೆ 3 ಕೋವಿಡ್ ಕೇರ್ ಸೆಂಟರ್ ಗಳನ್ನು ಸಿದ್ಧಮಾಡಿಕೊಂಡಿದೆ. ಇದರ ಹೊರತಾಗಿ ಇನ್ನೂ 3 ಕೋವಿಡ್ ಕೇರ್ ಸೆಂಟರ್ ಗಳನ್ನು ತೆರೆಯಲು ಚಿಂತನೆ ನಡೆಸಿದೆ. ಈ ಬಗ್ಗೆ ಜಾಗ ಗೊತ್ತು ಮಾಡಲಾಗುತ್ತಿದ್ದು, ಶೀಘ್ರವೇ ಹೊಸ 3 ಕೋವಿಡ್ ಕೇರ್ ಸೆಂಟರ್‌ಗಳೂ ತೆರೆಯಲಿದೆ.(ವರದಿ- ಆಶಿಕ್ ಮುಲ್ಕಿ)
Published by: Seema R
First published: April 9, 2021, 7:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories