• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • BBMP ಅಧಿಕಾರಿಗಳಿಂದ ನಕಲಿ ದಾಖಲೆ ಸೃಷ್ಟಿಸಿ ವಂಚನೆ- ಮೂವರ ವಿರುದ್ಧ ಪ್ರಕರಣ ದಾಖಲು

BBMP ಅಧಿಕಾರಿಗಳಿಂದ ನಕಲಿ ದಾಖಲೆ ಸೃಷ್ಟಿಸಿ ವಂಚನೆ- ಮೂವರ ವಿರುದ್ಧ ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Fake Certificates: ಈ ಬಗ್ಗೆ ದಾಖಲೆಗಳ ಸಮೇತ ಎಂ.ಎಂ.ಲಾಜಿಸ್ಟಿಕ್ಸ್ ಟೂರ್ಸ್ & ಟ್ರಾವೆಲ್ಸ್ ವ್ಯವಸ್ಥಾಪಕ ವಿನಯ್ ಬಾಬು ದೂರು ನೀಡಿದ್ದು , ಈ   ದೂರು ಆಧರಿಸಿ ಎಫ್‌ಐಆರ್ ದಾಖಲು ಮಾಡಲಾಗಿದೆ.

 • Share this:

ಕೆಲಸ ಗಿಟ್ಟಿಸಿಕೊಳ್ಳುವ ಕಾರಣ ನಕಲಿ ದಾಖಲೆ (Fake Certificate) ಸೃಷ್ಟಿಸಿರುವ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿವೆ, ಅಷ್ಟೇ ಅಲ್ಲದೇ ದುಡ್ಡು (Money) ಮಾಡಲು ಇಂತಹ ಹಲವಾರು ಯೋಜನೆಗಳನ್ನು ಮಾಡುತ್ತಾರೆ. ಹಾಗೆಯೇ ಅಧಿಕಾರದ ದುರ್ಬಳಕೆ ಮಾಡಿಕೊಂಡು ಬಿಬಿಎಂಪಿಯ (BBMP)  ಅಧಿಕಾರಿಗಳೇ (Officers) ಬಿಬಿಎಂಪಿಗೆ ಮೋಸ (Fraud)  ಮಾಡಿರುವ ಘಟನೆ ವರದಿಯಾಗಿದೆ.   


ಬಿಬಿಎಂಪಿ ಅಧಿಕಾರಿಗಳಾದ ಸಾರಿಗೆ ವಿಭಾಗದ ಕಾರ್ಯಪಾಲಕ ಅಭಿಯಂತರ ಮಹದೇವ್, ಗುಮಾಸ್ತ ರಮೇಶ್, ಕಂಪ್ಯೂಟರ್ ಆಪರೇಟರ್ ಸತೀಶ್, ಪಂಚಮುಖಿ ಟೂರ್ಸ್ & ಟ್ರಾವೆಲ್ಸ್ ಮಾಲೀಕ ಶಿವಾನಂದ ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಾಗಿದೆ.


ಅಸಲಿ ಟ್ರಾವೆಲ್ಸ್​​  ಮಾಲೀಕನಿಂದ ದೂರು ದಾಖಲು


ನಕಲಿ ದಾಖಲೆ ಸೃಷ್ಟಿಸಿ ಪಾಲಿಕೆಗೆ ವಂಚನೆ ಮಾಡಿರುವ ಸಂಬಂಧ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಈ ಮೂವರು ಅಧಿಕಾರಿಗಳ ವಿರುದ್ಧ ಎಂ.ಎಂ.ಲಾಜಿಸ್ಟಿಕ್ಸ್ ಟೂರ್ಸ್ & ಟ್ರಾವೆಲ್ಸ್ ವ್ಯವಸ್ಥಾಪಕ ವಿನಯ್ ಬಾಬು ದೂರು ನೀಡಿದ್ದಾರೆ.


ಇದನ್ನೂ ಓದಿ: ರೈಲಿನಲ್ಲಿ 1.48 ಕೋಟಿ ನಗದು, 800 ಗ್ರಾಂ ಚಿನ್ನಾಭರಣ ವಶಕ್ಕೆ ಪೊಲೀಸರು


ಈ ಹಿಂದೆ ಪಾಲಿಕೆ ಅಧಿಕಾರಿಗಳಿಗಾಗಿ ಗುತ್ತಿಗೆಯ ಆಧಾರದ ಮೇಲೆ ಹಲವಾರು ಟ್ರಾವೆಲ್ಸ್​ ಸಂಸ್ಥೆಯಿಂದ ವಾಹನಗಳನ್ನು ಬಳಸಲಾಗುತಿತ್ತು. ಆ ಟ್ರಾವೆಲ್ಸ್​ಗಳಲ್ಲಿ ಒಂದಾದ ಎಂ.ಎಂ.ಲಾಜಿಸ್ಟಿಕ್ಸ್ ಟೂರ್ಸ್ & ಟ್ರಾವೆಲ್ಸ್ ಸಂಸ್ಥೆ ತನ್ನ ಸಿಬ್ಬಂದಿಗೆ ಪಾವತಿಸುತ್ತಿದ್ದ PF, ESI ದಾಖಲೆ ನಕಲು ಮಾಡಿರುವ ಆರೋಪದಡಿ ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿದೆ.


ಬಿಬಿಎಂಪಿಗೆ ಲಕ್ಷಾಂತರ ರೂ ವಂಚನೆ


ಈ ಮೂವರು ಅಧಿಕಾರಿ ಎಂ.ಎಂ.ಲಾಜಿಸ್ಟಿಕ್ಸ್ ಟೂರ್ಸ್ & ಟ್ರಾವೆಲ್ಸ್ ಸಂಸ್ಥೆ ತನ್ನ ಸಿಬ್ಬಂದಿಗೆ ನೀಡುತ್ತಿದ್ದ PF, ESI ದಾಖಲೆಗಳನ್ನು ಬಿಬಿಎಂಪಿಯ ಕಡತಗಳಿಂದ ತೆಗೆದು, ಅಧಿಕಾರಿಗಳು ಅದನ್ನ ನಕಲು ಮಾಡಿ ಪಂಚಮುಖಿ ಟೂರ್ಸ್ & ಟ್ರಾವೆಲ್ಸ್ ಎಂಬ ಹೆಸರಿನಲ್ಲಿ ಕಡತಗಳನ್ನು ತಯಾರು ಮಾಡಿ ಪಾಲಿಕೆಗೆ ತಿಂಗಳಿಗೆ ಸುಮಾರು  ಹತ್ತಾರು ಲಕ್ಷಗಳಷ್ಟು ವಂಚನೆ ಮಾಡುತ್ತಿದ್ದರು ಎನ್ನಲಾಗಿದೆ.


ಇದನ್ನೂ ಓದಿ: 70ಕ್ಕೆ 73 ಅಂಕ ನೀಡಿದ ವಿಶ್ವವಿದ್ಯಾಲಯಗಳು: ವಿದ್ಯಾರ್ಥಿಗಳು ತಬ್ಬಿಬ್ಬು

top videos


  ಈ ಬಗ್ಗೆ ದಾಖಲೆಗಳ ಸಮೇತ ಎಂ.ಎಂ.ಲಾಜಿಸ್ಟಿಕ್ಸ್ ಟೂರ್ಸ್ & ಟ್ರಾವೆಲ್ಸ್ ವ್ಯವಸ್ಥಾಪಕ ವಿನಯ್ ಬಾಬು ದೂರು ನೀಡಿದ್ದು , ಈ  ದೂರು ಆಧರಿಸಿ ಎಫ್‌ಐಆರ್ ದಾಖಲು ಮಾಡಲಾಗಿದೆ. IPC 1860 ( U/S 34, 120 B, 420, 465, 468, 471) ಅಡಿಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದ್ದು, ತನಿಖೆ ಆರಂಭಿಸಲಾಗಿದೆ.

  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು