ಬೆಂಗಳೂರು (ಮಾ.30): ಕೊರೋನಾ ವೈರಸ್ ಬಗ್ಗೆ ವ್ಯಾಟ್ಸ್ ಆ್ಯಪ್ನಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ ಆರೋಪದ ಮೇಲೆ ಬಿಬಿಎಂಪಿ ಸದಸ್ಯೆಯ ಗಂಡನನ್ನುಪೊಲೀಸರು ಬಂಧಿಸಿದ್ದಾರೆ. ಚೌಡೇಶ್ವರಿ ವಾರ್ಡ್ ನಂ 2 ರ ಕಾರ್ಪೋರೇಟರ್ ಪದ್ಮಾವತಿ ಗಂಡ ಅಮರನಾಥ್ ಬಂಧಿತ ಆರೋಪಿ.
ಯಲಹಂಕದ ಕೊಂಡಪ್ಪ ಲೇಔಟ್ ನಲ್ಲಿ ಕಾರ್ಮಿಕ ವರ್ಗದವರು ಹೆಚ್ಚು ವಾಸವಾಗಿದ್ದಾರೆ. ಇಲ್ಲಿ ಕೊರೋನಾ ವೈರಸ್ ಸೋಂಕಿತರು ಇದ್ದಾರೆ ಎಂದು ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಸುಳ್ಳು ಸುದ್ದಿ ಹರಿಬಿಟ್ಟು ಅಮರನಾಥ್ ಆತಂಕ ಸೃಷ್ಟಿಸಿದ್ದರು.
ಈ ಸುದ್ದಿ ನಂಬಿ ಜನರು ತಂಡೋಪ ತಂಡವಾಗಿ ತಮ್ಮ ತಮ್ಮ ಊರಿಗೆ ತೆರಳಲು ಸಿದ್ದರಾಗಿದ್ದರು. ಈ ವೇಳೆ ಜನರನ್ನು ಪೊಲೀಸರು ತಡೆದು ಕಾರಣ ಕೇಳಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ :
ಲಾಕ್ಡೌನ್ ಉಲ್ಲಂಘಿಸಿದರಿಗೆ ವಿಜಯಪುರ ಪೊಲೀಸರಿಂದ ಲಾಠಿ ಪ್ರಹಾರ ಬದಲು ವಿನೂತನ ಶಿಕ್ಷೆ
ಅಮರಾಥ್ ನನ್ನು ಯಲಹಂಕ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಘಟನೆ ಬಗ್ಗೆ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ವಿರುದ್ದ ಐಪಿಸಿ ಸೆಕ್ಷನ್ 153, 188, 504 ಅಡಿ ಎಫ್ ಐಆರ್ ದಾಖಲು ಮಾಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ