ಜಯನಗರ ಬಿಬಿಎಂಪಿ ಕಚೇರಿಗೆ ದಿಢೀರ್ ಭೇಟಿ ನೀಡಿದ ಮೇಯರ್; ಹಾಜರಾತಿಗೆ ಸಹಿ ಹಾಕದ ಅಧಿಕಾರಿಗಳ ಸಂಬಳ ಕಡಿತಕ್ಕೆ ಆದೇಶ

ಎಂಜಿನಿಯರ್ ಗಳು ಕೆಲಸದ ಮೇಲೆ ತೆರಳುವಾಗ ಮೂವ್ ಮೆಂಟ್ ರಿಜಿಸ್ಟರ್ ನಲ್ಲಿ ಮಾಹಿತಿ ದಾಖಲಿಸಿ ಸಹಿ ಹಾಕಿ ತೆರಳಬೇಕು ಎಂದು ಆದೇಶಿಸಿದರು. ಜೊತೆಗೆ ಕಚೇರಿ ಅವಧಿಯಲ್ಲಿ ಬಿಬಿಎಂಪಿ ಗುರುತಿನ ಚೀಟಿ ಹಾಕದ ಸಿಬ್ಬಂದಿಗೆ ಮೇಯರ್ ತರಾಟೆಗೆ ತೆಗೆದುಕೊಂಡರು.

Latha CG | news18-kannada
Updated:October 16, 2019, 1:02 PM IST
ಜಯನಗರ ಬಿಬಿಎಂಪಿ ಕಚೇರಿಗೆ ದಿಢೀರ್ ಭೇಟಿ ನೀಡಿದ ಮೇಯರ್; ಹಾಜರಾತಿಗೆ ಸಹಿ ಹಾಕದ ಅಧಿಕಾರಿಗಳ ಸಂಬಳ ಕಡಿತಕ್ಕೆ ಆದೇಶ
ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಜೈನ್
  • Share this:
ಬೆಂಗಳೂರು(ಅ.16): ಜಯನಗರದ ಬಿಬಿಎಂಪಿ ಬೃಹತ್ ನೀರುಗಾಲುವೆ ಕಚೇರಿಗೆ ಮೇಯರ್ ಗೌತಮ್ ಕುಮಾರ್​​ ಜೈನ್​​ ಇಂದು ದಿಢೀರ್ ಭೇಟಿ ನೀಡಿದ್ದಾರೆ. ಎಸ್​ಡಬ್ಲೂಡಿ ಚೀಫ್ ಎಂಜಿನಿಯರ್ ಪ್ರಹ್ಲಾದ್ ಅಕ್ಟೋಬರ್ ತಿಂಗಳಲ್ಲಿ ಒಂದು ದಿನವೂ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿಲ್ಲವೆಂದು ಸಂಬಳ ಕಡಿತಕ್ಕೆ ಆದೇಶ ನೀಡಿದ್ದಾರೆ.

ಈ ಬಗ್ಗೆ ಮೇಯರ್​  ಕಚೇರಿ ವ್ಯವಸ್ಥಾಪಕರನ್ನು ಪ್ರಶ್ನಿಸಿದ್ದಾರೆ. ಸಮಯ 11.45 ಆದರೂ ಕಚೇರಿಗೆ ಬಾರದ ಮುಖ್ಯ ಎಂಜಿನಿಯರ್ ಪ್ರಹ್ಲಾದ್​  ವಿರುದ್ಧ ಮೇಯರ್ ಕಿಡಿಕಾರಿದ್ದಾರೆ. ಜೊತೆಗೆ ಹಾಜರಾತಿಗೆ ಸಹಿ ಹಾಕದ ಸಿಇ ಪ್ರಹ್ಲಾದ್ ಹಾಗೂ ಮತ್ತಿತರಿಗೆ ಗೈರು ಹಾಕಿ ಸಂಬಳ ಕಡಿತಕ್ಕೆ  ಮ್ಯಾನೇಜರ್ ದೀಪಶ್ರೀಗೆ ಸೂಚನೆ ನೀಡಿದರು. ಎಂಜಿನಿಯರ್​​ಗಳು ಕೆಲಸದ ಬಗ್ಗೆ ಫೀಲ್ಡ್ ರಿಪೋರ್ಟ್ ನಿರ್ವಹಿಸದ ಬಗ್ಗೆ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.

ಮೂವ್ ಮೆಂಟ್ ರಿಜಿಸ್ಟರ್ ನಲ್ಲಿ ಸಹಿ ಹಾಕದ ಅಧಿಕಾರಿಗಳಿಗೆ ಒಂದು ವಾರ ಸಂಬಳ ಕಡಿತಕ್ಕೆ ಮೇಯರ್ ಗೌತಮ್​ ಕುಮಾರ್​ ಜೈನ್ ಆದೇಶ ನೀಡಿದರು. ಎಂಜಿನಿಯರ್ ಗಳು ಕೆಲಸದ ಮೇಲೆ ತೆರಳುವಾಗ ಮೂವ್ ಮೆಂಟ್ ರಿಜಿಸ್ಟರ್ ನಲ್ಲಿ ಮಾಹಿತಿ ದಾಖಲಿಸಿ ಸಹಿ ಹಾಕಿ ತೆರಳಬೇಕು ಎಂದು ಆದೇಶಿಸಿದರು. ಜೊತೆಗೆ ಕಚೇರಿ ಅವಧಿಯಲ್ಲಿ ಬಿಬಿಎಂಪಿ ಗುರುತಿನ ಚೀಟಿ ಹಾಕದ ಸಿಬ್ಬಂದಿಗೆ ಮೇಯರ್ ತರಾಟೆಗೆ ತೆಗೆದುಕೊಂಡರು.

ಶಿವಮೊಗ್ಗದಲ್ಲೂ ಶಂಕಿತ ಉಗ್ರರು ಜಾಡು, ಸ್ಯಾಟಲೈಟ್​ ಪೋನ್?; ಮಲೆನಾಡಿನಲ್ಲಿ ಮನೆಮಾಡಿದ ಆತಂಕ

ಇದೇ ವೇಳೆ ಮೇಯರ್ ಜಯನಗರ ಕಾಂಪ್ಲೆಕ್ಸ್​ಗೂ ಭೇಟಿ ನೀಡಿದರು. ಜಯನಗರ ಕಾಂಪ್ಲೆಕ್ಸ್​​​ನಲ್ಲಿ ಟಾಯ್ಲೆಟ್ ಸಮಸ್ಯೆ ಇದೆ. 3 ಲಿಫ್ಟ್ ಪೈಕಿ ಒಂದು ಲಿಫ್ಟ್ ಮಾತ್ರ ಚಾಲ್ತಿಯಲ್ಲಿದೆ ಎಂದು  ದಿನನಿತ್ಯದ ಪರದಾಟದ ಬಗ್ಗೆ ಬಾಡಿಗೆದಾರರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಜೊತೆಗೆ ಕಾಂಪ್ಲೆಕ್ಸ್ ನಲ್ಲಿ ಕುಡಿದ ಬಾಟಲಿ, ಸಿಗರೇಟ್​​ಗಳನ್ನು ಸೇವಿಸಿ ಎಲ್ಲೆಂದರಲ್ಲಿ ಬಿಸಾಡುತ್ತಾರೆ ಎಂದು ಆರೋಪಿಸಿದರು.

ವ್ಯಾಪಾರ ಪರವಾನಗಿ ಇಲ್ಲದ ಅಂಗಡಿಗಳನ್ನು ಬಂದ್ ಮಾಡುವಂತೆ ಮೇಯರ್ ಆದೇಶ ನೀಡಿದರು. ವ್ಯಾಪಾರಿಗಳಿಗೆ ಟ್ರೇಡ್ ಲೈಸೆನ್ಸ್ ತೋರಿಸುವಂತೆ ಮೇಯರ್ ಗೌತಮ್​ ತಿಳಿಸಿದರು.

ಬಿಬಿಎಂಪಿಗೆ ಸೇರಿದ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಪಾರ್ಕಿಂಗ್ ಜಾಗದಲ್ಲಿ ಬಿಡಿಎ ಅಂಗಡಿ ನಿರ್ಮಿಸಿದೆ. ಬಿಡಿಎ ಪಾರ್ಕಿಂಗ್ ತಾಣದಲ್ಲಿ 42ಕ್ಕೂ ಹೆಚ್ಚು ಅಂಗಡಿ ಕಟ್ಟಿ ಬಿಬಿಎಂಪಿಗೆ ಹಸ್ತಾಂತರ ಮಾಡಲಾಗಿದೆ. ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿಯೇ ವ್ಯಾಪಾರ ಪರವಾನಗಿ ನೀಡುವ ಕಚೇರಿಯಿದೆ. ಆದರೂ ಅಧಿಕಾರಿಗಳು ಇಲ್ಲಿನ ಅಂಗಡಿಗಳಿಗೆ ವ್ಯಾಪಾರ ಪರವಾನಗಿ ನೀಡಿಲ್ಲ.Ayodhya Case: ಅಯೋದ್ಯ ಇಂದಿಗೆ ಅಂತ್ಯವಾಗಲಿದೆ ಅಯೋಧ್ಯೆ ಸುಪ್ರೀಂ ವಿಚಾರಣೆ; ನವೆಂಬರ್ 17ಕ್ಕೆ ಐತಿಹಾಸಿಕ ತೀರ್ಪು; ಸಿಜೆಐ ರಂಜನ್​ ಗೊಗೋಯ್

First published:October 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading