ಬಿಬಿಎಂಪಿ ಮೇಯರ್ ಚುನಾವಣೆ ಅ. 1ಕ್ಕೆ ಮುಂದೂಡಿಕೆ; ಅಧಿಕಾರ ಹಿಡಿಯುವ ಸಂಖ್ಯಾಬಲಕ್ಕೆ ಬಿಜೆಪಿ ಮಾಸ್ಟರ್​ಪ್ಲಾನ್

ಬಿಬಿಎಂಪಿಯಲ್ಲಿ ಮೇಯರ್ - ಉಪಮೇಯರ್ ಸ್ಥಾನ ಪಡೆಯಲು ನಂಬರ್ ಗೇಮ್ ಶುರುವಾಗಿದೆ. ಅ. 1ರಂದು ನಡೆಯಲಿರೋ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಹೊರಟಿರುವ ಬಿಜೆಪಿ ಈಗಾಗಲೇ 4 ಪಕ್ಷೇತರರನ್ನು ಆಪರೇಷನ್ ಕಮಲದ ಮೂಲಕ ಸೆಳೆದಿದೆ ಎನ್ನಲಾಗಿದೆ.

news18-kannada
Updated:September 23, 2019, 7:30 PM IST
ಬಿಬಿಎಂಪಿ ಮೇಯರ್ ಚುನಾವಣೆ ಅ. 1ಕ್ಕೆ ಮುಂದೂಡಿಕೆ; ಅಧಿಕಾರ ಹಿಡಿಯುವ ಸಂಖ್ಯಾಬಲಕ್ಕೆ ಬಿಜೆಪಿ ಮಾಸ್ಟರ್​ಪ್ಲಾನ್
ಬಿಬಿಎಂಪಿ ಕಚೇರಿ
  • Share this:
ಬೆಂಗಳೂರು(ಸೆ. 23): ಸೆಪ್ಟೆಂಬರ್ 27ರಂದು ನಡೆಯಲು ನಿಶ್ಚಯಿಸಿದ್ದ ಬಿಬಿಎಂಪಿ ಮೇಯರ್ ಮತ್ತು ಉಪಮೇಯರ್ ಚುನಾವಣೆಗಳನ್ನು ಅ. 1ಕ್ಕೆ ಮುಂದೂಡಲಾಗಿದೆ. 12 ಸ್ಥಾಯಿ ಸಮಿತಿಗಳಿಗೂ ಅಂದೇ ಚುನಾವಣೆ ನಡೆಸಲು ನಿರ್ಧರಿಸಲಾಗಿದೆ. ಇದೇ ವೇಳೆ, ರಾಜ್ಯದಲ್ಲಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿರುವ ಬಿಜೆಪಿ ಇದೀಗ ಬಿಬಿಎಂಪಿಯಲ್ಲೂ ಗದ್ದುಗೆ ಏರೋಕೆ ಸಿದ್ಧತೆ ಮುಂದುವರಿಸಿದೆ. ಇದಕ್ಕಾಗಿ ನಾಲ್ವರು ಪಕ್ಷೇತರ ಕಾರ್ಪೊರೇಟರ್​ಗಳನ್ನ ಆಪರೇಷನ್ ಮಾಡೋಕೆ ಕೈ ಹಾಕಿದೆ ಎನ್ನಲಾಗಿದೆ.

ದೊಮ್ಮಲೂರು ವಾರ್ಡ್​ನ ಸಿ.ಆರ್. ಲಕ್ಷ್ಮೀನಾರಾಯಣ, ಕೆಂಪಾಪುರ ಅಗ್ರಹಾರದ ಎಂ. ಗಾಯತ್ರಿ, ಮಾರತ್‌ಹಳ್ಳಿ ವಾರ್ಡ್​ನ ಎನ್. ರಮೇಶ್ ಹಾಗೂ ಕೋನೇನ ಅಗ್ರಹಾರ ವಾರ್ಡ್​ನ ಚಂದ್ರಪ್ಪ ರೆಡ್ಡಿ ಅವರಿಗೆ ಬಿಜೆಪಿ ಗಾಳ ಹಾಕಿದೆ ಎನ್ನಲಾಗಿದೆ. ಇವರಲ್ಲಿ ಚಂದ್ರಪ್ಪರೆಡ್ಡಿ ಹೊರತುಪಡಿಸಿ ಉಳಿದ ಮೂವರು ನಗರಪಾಲಿಕೆ ಸದಸ್ಯರು ಗೋವಾಕ್ಕೆ ಹೋಗಿದ್ದಾರಂತೆ. ಚಂದ್ರಪ್ಪರೆಡ್ಡಿ ಬೆಂಗಳೂರಲ್ಲೇ ಇದ್ದಾರೆ.

ಇದನ್ನೂ ಓದಿ: ಉಪಚುನಾವಣೆ, ಮೇಯರ್​ ಚುನಾವಣೆ ಗೆಲುವಿನ ರಣತಂತ್ರಕ್ಕೆ ಕಾಂಗ್ರೆಸ್​ ಮುಖಂಡರ ಸಭೆ

ಕಾಂಗ್ರೆಸ್-ಜೆಡಿಎಸ್​​ನ ಐವರು ಶಾಸಕರಾದ ಭೈರತಿ ಬಸವರಾಜು, ರೋಷನ್ ಬೇಗ್, ಮುನಿರತ್ನ, ಎಸ್.ಟಿ. ಸೋಮಶೇಖರ್ ಮತ್ತು ಗೋಪಾಲಯ್ಯ ಅನರ್ಹರಾದ ಕಾರಣ, ಮೇಯರ್ ಚುನಾವಣೆಯಲ್ಲಿ ಮತದಾರರ ಪ್ರಮಾಣ ಕುಸಿದಿದೆ. ಹೀಗಾಗಿ ಗದ್ದುಗೆ ಹಿಡಿಯಲು ಬೇಕಾಗಿರುವ ಮ್ಯಾಜಿಕ್ ನಂಬರ್ 129. ಈ ಹಿನ್ನೆಲೆಯಲ್ಲಿ, ಬಿಬಿಎಂಪಿಯ ಬಲಾಬಲ ಹೀಗಿದೆ:

ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಐವರು ಅನರ್ಹ ಶಾಸಕರುನ್ನು ಹೊರತುಪಡಿಸಿ ಮತದಾನ ಮಾಡಲು ಅರ್ಹರಾದವರ ಸದ್ಯದ ಬಲಾಬಲ:
ಒಟ್ಟು ಮತದಾರರು – 257
ಮ್ಯಾಜಿಕ್ ನಂಬರ್ – 129ಬಿಜೆಪಿ: 125
ಕಾಂಗ್ರೆಸ್: 104
ಜೆಡಿಎಸ್: 20
ಪಕ್ಷೇತರರು: 7

ಇದನ್ನೂ ಓದಿ: ಎಂಟಿಬಿ ವಿರುದ್ಧ ಗೆಲುವಿಗೆ ಕೈ ತಂತ್ರ; ಬಿಜೆಪಿಯ ಶರತ್ ಬಚ್ಚೇಗೌಡ ಸೆಳೆಯಲು ಮುಂದಾದ ಕಾಂಗ್ರೆಸ್ ?

ಬಿಬಿಎಂಪಿಯಲ್ಲಿ ಬಿಜೆಪಿಯಲ್ಲಿ 101 ನಗರಪಾಲಿಕೆ ಸದಸ್ಯರಿದ್ದಾರೆ. ಇದರ ಜೊತೆಗೆ ನಾಲ್ಕು ಲೋಕಸಭಾ ಸದಸ್ಯರು,ಇಬ್ಬರು ರಾಜ್ಯಸಭಾ ಸದಸ್ಯರು, 11 ವಿಧಾನಸಭಾ ಸದಸ್ಯರು, 7 ವಿಧಾನಪರಿಷತ್ ಸದಸ್ಯರು ಒಟ್ಟು ಸೇರಿಸಿದರೆ 125 ಆಗುತ್ತದೆ.

ಇನ್ನು, ಕಾಂಗ್ರೆಸ್ ಪಕ್ಷದಲ್ಲಿ 76 ಬಿಬಿಎಂಪಿ ಸದಸ್ಯರಿದ್ದಾರೆ. ಒಬ್ಬ ಲೋಕಸಭಾ ಸದಸ್ಯ, 6 ರಾಜ್ಯಸಭಾ ಸದಸ್ಯರು, 11 ವಿಧಾನಸಭಾ ಸದಸ್ಯರು, 10 ವಿಧಾನಪರಿಷತ್ ಸದಸ್ಯರು ಸೇರಿಸಿದರೆ ಕಾಂಗ್ರೆಸ್ ಪಾಳಯಕ್ಕೆ 104 ನಂಬರ್ ಸಿಗುತ್ತದೆ.

ಜೆಡಿಎಸ್ ಪಕ್ಷದಲ್ಲಿ 14 ಕಾರ್ಪೊರೇಟರ್ಸ್ ಇದ್ದಾರೆ. ಇವರ ಜೊತೆಗೆ ಒಬ್ಬ ರಾಜ್ಯಸಭಾ ಸದಸ್ಯ, ಒಬ್ಬ ವಿಧಾನಸಭಾ ಸದಸ್ಯ ಮತ್ತು ಐವರು ವಿಧಾನ ಪರಿಷತ್ ಸದಸ್ಯ ಸೇರಿ ಒಟ್ಟು 20 ಸಂಖ್ಯಾ ಬಲ ಇದೆ.

ಇದನ್ನೂ ಓದಿ: ಉಪಚುನಾವಣೆಯಲ್ಲಿ ಅನರ್ಹರಿಗೆ ಬಿಜೆಪಿ ಟಿಕೆಟ್​; ಕೋರ್ಟ್​ ಆದೇಶಕ್ಕೂ ಮುನ್ನ ನಾಮಪತ್ರ ಸಲ್ಲಿಕೆ?

ಮೇಯರ್ ಎಲೆಕ್ಷನ್ ನಡೆಯುವ ದಿನ ಆಯಾ ಪಕ್ಷದ ನಾಯಕರು ಸೂಚಿಸಿದವರಿಗೆ ಸದಸ್ಯರು ಮತ ಹಾಕ್ಬೇಕು. ಇಲ್ಲದಿದ್ರೆ ಶೋಕಾಸ್ ನೋಟಿಸ್ ನಿಶ್ಚಿತ. ಆದ್ರೆ ಚುನಾವಣೆಯಲ್ಲಿ ಗೈರಾಗುವ ಅವಕಾಶ ಇರುತ್ತದೆ. ಇದೇ ರಣತಂತ್ರ ಇಟ್ಕೊಂಡಿರುವ ಬಿಜೆಪಿಯು ಅನರ್ಹ ಶಾಸಕರ ಕಟ್ಟಾ ಬೆಂಬಲಿಗ ಸದಸ್ಯರು ಸೇರಿ 12 ಸದಸ್ಯರು ಚುನಾವಣೆಗೆ ಗೈರಾಗುವಂತೆ ನೋಡಿಕೊಳ್ಳುವ ಯೋಜನೆ ಹಾಕಿಕೊಂಡಿದೆ. ಬಿಜೆಪಿಯ ಈ ಪ್ರಯತ್ನ ಸಫಲರಾದರೆ ಮೇಯರ್ ಸ್ಥಾನ ದಕ್ಕುವುದು ನಿಶ್ಚಿತವಾಗಲಿದೆ.

(ವರದಿ: ಶ್ಯಾಮ್ ಎಸ್.)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: September 23, 2019, 7:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading