ಬೆಂಗಳೂರಿಗರೆ, ಪಾರ್ಕಿಂಗ್ ಜಾಗ ದುರ್ಬಳಕೆಯಾಗುತ್ತಿದ್ದರೆ ಜೋಕೆ..! ಬಿಬಿಎಂಪಿಯಿಂದ ನಡೆಯುತ್ತಿದೆ ಮಾಸ್ ಡ್ರೈವ್

ಬ್ಯುಲ್ಡಿಂಗ್ ಪ್ಲಾನ್​ನಲ್ಲಿ ಬೇಸ್ಮೆಂಟ್ ಪಾರ್ಕಿಂಗ್ ಸ್ಥಳ ತೋರಿಸಿ, ನಂತರ ಅದನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವುದು ಬೆಂಗಳೂರಲ್ಲಿ ಸಾಮಾನ್ಯವಾಗಿಬಿಟ್ಟಿದೆ.

Vijayasarthy SN | news18
Updated:January 10, 2019, 5:13 PM IST
ಬೆಂಗಳೂರಿಗರೆ, ಪಾರ್ಕಿಂಗ್ ಜಾಗ ದುರ್ಬಳಕೆಯಾಗುತ್ತಿದ್ದರೆ ಜೋಕೆ..! ಬಿಬಿಎಂಪಿಯಿಂದ ನಡೆಯುತ್ತಿದೆ ಮಾಸ್ ಡ್ರೈವ್
ಕಟ್ಟಡವೊಂದರ ಪಾರ್ಕಿಂಗ್ ಸ್ಥಳ
Vijayasarthy SN | news18
Updated: January 10, 2019, 5:13 PM IST
- ಶ್ಯಾಮ್ ಎಸ್.,

ಬೆಂಗಳೂರು(ಜ. 10): ನಗರದಲ್ಲಿ ಎಲ್ಲಿ ನೋಡಿದ್ರಲ್ಲಿ ವಾಹನಗಳನ್ನ ಬೇಕಾಬಿಟ್ಟಿ ಪಾರ್ಕಿಂಗ್ ಮಾಡುತ್ತಿರುತ್ತಾರೆ. ಪಾದಚಾರಿಗಳು ನಡೆಯೋದಕ್ಕಿಂತ ವಾಹನಗಳ ಓಡಾಟ ಮತ್ತು ಪಾರ್ಕಿಂಗ್​ಗೆಂದೇ ಫುಟ್​ಪಾತ್​ಗಳು ಇರೋ ತರಹ ಆಗೋಗಿದೆ. ಇದ್ರಿಂದಾಗಿ ಯಾವ ರಸ್ತೆ ನೋಡಿದರೂ ಟ್ರಾಫಿಕ್ ಜಾಮ್, ಆಮೆಗತಿಯ ವಾಹನ ಸಂಚಾರಕ್ಕೆ ಕಾರಣವಾಗಿದೆ. ಬಿಬಿಎಂಪಿ ಬಳಿ ಕಟ್ಟಡ ಕಟ್ಟುವಾಗ ಪ್ಲಾನ್​ನಲ್ಲಿ ಬೇಸ್​ಮೆಂಟ್ ಪಾರ್ಕಿಂಗ್ ಅಂತ ತೋರಿಸ್ತಾ ಅಲ್ಲಿ ವಾಹನಗಳ ನಿಲ್ದಾಣಕ್ಕೆ ಅವಕಾಶ ಕೊಡದೆ ವಾಣಿಜ್ಯ ಚಟುವಟಿಕೆ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಬಿಬಿಎಂಪಿ ನಿರ್ಧರಿಸಿದೆ. ಇದಕ್ಕಾಗಿ ಈ ತಿಂಗಳ ಆರಂಭದಲ್ಲೇ ನಿರಂತರ ಕಾರ್ಯಾಚರಣೆ ನಡೆಸಲಿದೆ.

ಇದನ್ನೂ ಓದಿ: ನಗ್ನ ವಿಡಿಯೋ ಕಳುಹಿಸಿದ ಕಾಮುಕ ಶಿಕ್ಷಕನ ವಿರುದ್ಧ ದೂರು ನೀಡಿದ ವಿದ್ಯಾರ್ಥಿನಿ

ನಗರದಲ್ಲಿ ಒಟ್ಟು 19 ಲಕ್ಷ ಆಸ್ತಿಗಳಿವೆ. ಅದರ ಪೈಕಿ 14 ರಿಂದ 15 ಲಕ್ಷ ಮನೆಗಳಿವೆ. ಉಳಿದಂತೆ ವಾಣಿಜ್ಯ ಕಟ್ಟಡಗಳಿವೆ ಎಂದು ಪಾಲಿಕೆ ತಿಳಿಸಿದೆ. ಈ ಎರಡೂ ಆಸ್ತಿಗಳಲ್ಲೂ ತಳಮಹಡಿಯನ್ನು ಪಾರ್ಕಿಂಗ್​ಗೆಂದು ನಕ್ಷೆ ಮಂಜೂರಾತಿ ಪಡೆಯುವವರು ಅನ್ಯ ಚಟುವಟಿಕೆಗಳಿಗೆ ಬಳಸ್ತಿದ್ದಾರೆ. ಇಂತಹ ಕಟ್ಟಡಗಳಿಗೆ ನೀಡಿದ ನಕ್ಷೆ ಮಂಜೂರಾತಿ ಕ್ಯಾನ್ಸಲ್ ಮಾಡಲು, ಅಲ್ಲಿ ನೀಡಿರುವ ಟ್ರೇಡ್ ಲೈಸೆನ್ಸ್ ರದ್ದು ಮಾಡಲು, ಅಂತಹವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಕಾನೂನಿನಲ್ಲಿ ಅವಕಾಶವಿದೆ. ಈ ಕ್ರಮಕ್ಕೂ ಮುಂದಾಗ್ತೀವಿ ಅಂತಿದೆ ಬಿಬಿಎಂಪಿ. ಆದ್ರೆ ಈ ಕಾರ್ಯ ಕೈಗೊಳ್ಳೋಕೆ ಪಾಲಿಕೆಯಿಂದ ಸಾಧ್ಯವಿಲ್ಲ ಅಂತ ಪಾಲಿಕೆ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಸವಾಲು ಹಾಕಿದ್ದಾರೆ.

ಇದನ್ನೂ ಓದಿ: 'ಬೆಲ್​ ಬಾಟಂ' ಟ್ರೈಲರ್​ನಲ್ಲಿ 80ರ ದಶಕದ ಕಂಪು ​; ಹೊಸ ಅವತಾರದಲ್ಲಿ ರಿಷಬ್​ ಶೆಟ್ಟಿ

ಒಂದೆಡೆ ಬಿಲ್ಡಿಂಗ್​ಗಳ ಸೆಲ್ಲರ್​ನಲ್ಲಿ ಅಂಗಡಿ ಮಾಡ್ಕೊಂಡ್ರೆ ಇದೇ ಬಿಬಿಎಂಪಿ ಟ್ರೇಡ್ ಲೈಸೆನ್ಸ್ ನೀಡುತ್ತೆ. ಇನ್ನೊಂದ್ಕಡೆ ಅದೇ ಕಟ್ಟಡದ ಜಾಗಕ್ಕೆ ಪ್ರಾಪರ್ಟಿ ಟ್ಯಾಕ್ಸ್ ನಿಗದಿ ಮಾಡಿ ಕಲೆಕ್ಟ್ ಮಾಡುತ್ತೆ. ಸೆಲ್ಲರ್​ನಲ್ಲಿ ಕಮರ್ಷಿಯಲ್ ಚಟುವಟಿಕೆ ನಡೆಸೋದು ತಪ್ಪು ಅಂತಿದ್ರೂ ಪಾಲಿಕೆ ಅಧಿಕಾರಿಗಳು ಯಾಕೆ ಟ್ರೇಡ್ ಲೈಸೆನ್ಸ್ ನೀಡಿ, ಪ್ರಾಪರ್ಟಿ ಟ್ಯಾಕ್ಸ್ ಕಲೆಕ್ಟ್ ಮಾಡ್ತಿರೋದು? ಅಂತ ಪಾಲಿಕೆ ವಿಪಕ್ಷ ಪ್ರಶ್ನೆ ಮಾಡ್ತಿದೆ.
First published:January 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ