HOME » NEWS » State » BBMP MARSHALS COLLECT MORE THAN CRORES RS FINE WHO NOT WARE MASK RHHSN

ಕೊರೋನಾದಿಂದ ಬಿಬಿಎಂಪಿಗೆ ಕೋಟಿ ಕೋಟಿ ರೂ. ಲಾಭ: ಈವರೆಗೆ ಮಾರ್ಷಲ್ಸ್ ವಸೂಲಿ ಮಾಡಿದ ದಂಡ ಎಷ್ಟು ಗೊತ್ತಾ?

ರಸ್ತೆ ಮೇಲೆ ನಿಂತು ಮಾಸ್ಕ್ ಹಾಕಿಲ್ಲ ಸಾಮಾಜಿಕ ಅಂತರ ಇಲ್ಲ ಅಂತ ಸಾರ್ವಜನಿಕರಿಗೆ ಬುದ್ದಿ ಹೇಳೋ ಮಾರ್ಷಲ್ಸ್ ಈಗ ಬಿಬಿಎಂಪಿ ಜೇಬಿಗೆ ಕೋಟಿ ಕೋಟಿ ತಂದು ತುಂಬಿದ್ದಾರೆ. ಇನ್ನೂ ಮಾರ್ಷಲ್ ಗಳು ದಂಡ ಹಾಕುತ್ತಿದ್ದು ಕೆಲವೇ ಕೆಲವು ದಿನಗಳಲ್ಲಿ ದಂಡದ ಮೊತ್ತದ ಸಂಖ್ಯೆ 10 ಕೋಟಿ ದಾಟುವ ನಿರೀಕ್ಷೆ ಇದೆ.

news18-kannada
Updated:January 28, 2021, 7:13 PM IST
ಕೊರೋನಾದಿಂದ ಬಿಬಿಎಂಪಿಗೆ ಕೋಟಿ ಕೋಟಿ ರೂ. ಲಾಭ: ಈವರೆಗೆ ಮಾರ್ಷಲ್ಸ್ ವಸೂಲಿ ಮಾಡಿದ ದಂಡ ಎಷ್ಟು ಗೊತ್ತಾ?
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು; ಆಡಳಿತ ನಡೆಸೋಕೆ ದುಡ್ಡಿ ದುಡ್ಡಿಲ್ಲ ಅಂತಿರುವ ಬಿಬಿಎಂಪಿ ಖಜಾನೆಗೆ ಮಾರ್ಷಲ್ಸ್ ಕೋಟಿ ಕೋಟಿ ತುಂಬಿದ್ದಾರೆ. ಹೌದು, ಮಾರ್ಷಲ್ಸ್ ಗಳಿಂದ ಬಿಬಿಎಂಪಿಗೆ ಈಗ ಬಂಪರ್ ಲಾಟರಿ ಹೊಡೆದಿರೋ ಹಾಗಿದೆ. ಲಾಕ್ ಡೌನ್ ನಿಂದಾಗಿ ಜನರು ಪರದಾಡಿ ಹೋಗಿದ್ದರು. ಲಾಕ್ ಡೌನ್ ಎಲ್ಲಾ ತೆರವಾದ ಮೇಲಾದರೂ ಎಲ್ಲಾ ಅರಿ ಹೋಯ್ತು ಅಂತ ನಿಟ್ಟುಸಿರು ಬಿಟ್ಟ ಮಂದಿಗೆ ಶಾಕ್ ಕೊಟ್ಟಿದ್ದು ಮಾರ್ಷಲ್ ಗಳು.‌ ಮಾಸ್ಕ್ ಹಾಕಿಲ್ಲ ಸಾಮಾಜಿಕ ಅಂತರ ಇಲ್ಲ ಅಂತ ಮಾರ್ಷಲ್ ಗಳು ಬೆಂಗಳೂರು ಮಂದಿಯ ಬೆನ್ನು ಬಿದ್ದು ಬಿಟ್ಟಿದ್ದರು. ಅಲ್ದೇ ಫೈನ್ ಮೇಲೆ ಫೈನ್ ಹಾಕಿ ಜನರ ಜೀಬಿಗೆ ಕತ್ತರಿ ಹಾಕಿದ್ದರು. ಇದು ಈಗ ಬಿಬಿಎಂಪಿ ಪಾಲಿಗೆ ವರವಾಗಿದೆ. ಹೀಗೆ ಮಾಸ್ಕ್ ಹಾಕಿಲ್ಲ, ಸಾಮಾಜಿಕ ಅಂತರ ಇಲ್ಲ ಅಂತ ಜನರ ಬಳಿಯಿಂದ ಮಾರ್ಷಲ್ ಗಳು 7 ಕೋಟಿಗೂ ಅಧಿಕ ಮೊತ್ತ ವಸೂಲು ಮಾಡಿದ್ದಾರೆ.

ಬಿಬಿಎಂಪಿಯ 8 ವ್ಯಾಪ್ತಿಯಲ್ಲಿ 7 ಕೋಟಿಗೂ ಅಧಿಕ ದಂಡ ವಸೂಲಿ ಮಾಡಿ ಪಾಲಿಕೆಗೆ ಕೊಡಮಾಡಿದ್ದಾರೆ ಮಾರ್ಷಲ್ಸ್. 2020 ಜೂನ್​ನಿಂದ 2021 ಜನವರಿವರೆಗೆ ಒಟ್ಟಾರೆ 3 ಲಕ್ಷಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. 2 ಲಕ್ಷದ 84 ಸಾವಿರ ಮಾಸ್ಕ್ ಹಾಕದ ಪ್ರಕರಣ ಹಾಗೂ 86 ಸಾವಿರ ಸಾಮಾಜಿಕ ಅಂತರ ಪ್ರಕರಣಗಳನ್ನು ಮಾರ್ಷಲ್ಸ್ ಹಾಕಿದ್ದಾರೆ.

ವಲಯವಾರು ದಾಖಲಾದ ಪ್ರಕರಣ ಮತ್ತು ವಸೂಲಾದ ದಂಡ ಎಷ್ಟು.!?

• ಪೂರ್ವ ವಲಯ

ಮಾಸ್ಕ್ ಪ್ರಕರಣ : 65,777
ಸಾ. ಅಂತರ ಪ್ರಕರಣ : 3,582
ದಾಖಲಾದ ಒಟ್ಟು ಪ್ರಕರಣ : 69,360ವಸೂಲಾದ ದಂಡ : ₹ 1,59,97,906

• ಪಶ್ಚಿಮ ವಲಯ

ಮಾಸ್ಕ್ ಪ್ರಕರಣ : 64,481
ಸಾ. ಅಂತರ ಪ್ರಕರಣ : 3,221
ದಾಖಲಾದ ಒಟ್ಟು ಪ್ರಕರಣ : 67,360
ವಸೂಲಾದ ದಂಡ : ₹ 1,57,08,171

• ದಕ್ಷಿಣ ವಲಯ

ಮಾಸ್ಕ್ ಪ್ರಕರಣ : 69,666
ಸಾ. ಅಂತರ ಪ್ರಕರಣ : 11,473
ದಾಖಲಾದ ಒಟ್ಟು ಪ್ರಕರಣ : 81,139
ವಸೂಲಾದ ದಂಡ : ₹ 1,87,72,209

• ಮಹಾದೇವಪುರ ವಲಯ

ಮಾಸ್ಕ್ ಪ್ರಕರಣ :  24,049
ಸಾ. ಅಂತರ ಪ್ರಕರಣ : 1,208
ದಾಖಲಾದ ಒಟ್ಟು ಪ್ರಕರಣ : 25,257
ವಸೂಲಾದ ದಂಡ : ₹ 59,81,885

• ಯಲಹಂಕ ವಲಯ

ಮಾಸ್ಕ್ ಪ್ರಕರಣ : 14,429
ಸಾ. ಅಂತರ ಪ್ರಕರಣ : 655
ದಾಖಲಾದ ಒಟ್ಟು ಪ್ರಕರಣ : 15,084
ವಸೂಲಾದ ದಂಡ : ₹ 35,12,226

• ದಾಸರಹಳ್ಳಿ ವಲಯ

ಮಾಸ್ಕ್ ಪ್ರಕರಣ : 11,344
ಸಾ. ಅಂತರ ಪ್ರಕರಣ : 37
ದಾಖಲಾದ ಒಟ್ಟು ಪ್ರಕರಣ : 11,381
ವಸೂಲಾದ ದಂಡ : ₹ 27,14,834

• ಆರ್ ಆರ್ ನಗರ ವಲಯ

ಮಾಸ್ಕ್ ಪ್ರಕರಣ :  15,754
ಸಾ. ಅಂತರ ಪ್ರಕರಣ : 645
ದಾಖಲಾದ ಒಟ್ಟು ಪ್ರಕರಣ : 16,399
ವಸೂಲಾದ ದಂಡ : 37,31,615

• ಬೊಮ್ಮನಹಳ್ಳಿ ವಲಯ

ಮಾಸ್ಕ್ ಪ್ರಕರಣ : 20,606
ಸಾ. ಅಂತರ ಪ್ರಕರಣ : 3,884
ದಾಖಲಾದ ಒಟ್ಟು ಪ್ರಕರಣ : 24,491
ವಸೂಲಾದ ದಂಡ : ₹ 54,75,240

• ಒಟ್ಟು

ಮಾಸ್ಕ್ ಪ್ರಕರಣ : 2,86,105
ಸಾ. ಅಂತರ ಪ್ರಕರಣ : 24,707
ದಾಖಲಾದ ಒಟ್ಟು ಪ್ರಕರಣ : 3,10,812
ವಸೂಲಾದ ದಂಡ : ₹ 7,18,94,091

ಇದನ್ನು ಓದಿ: ರೈತ ಹೋರಾಟದ ಮೇಲೆ ಅನಿಶ್ಚಿತತೆ ಉಂಟುಮಾಡಿದ ದೆಹಲಿ ಘರ್ಷಣೆ

2020 ಜೂನ್ ನಿಂದ ಈ ಜನವರಿ 18 ರವರೆಗೆ ಒಟ್ಟು 3 ಲಕ್ಷದ 10 ಸಾವಿರ ಪ್ರಕರಣ ದಾಖಲಿಸಿರುವ ಬಿಬಿಎಂಪಿ, 2 ಲಕ್ಷದ 86 ಸಾವಿರ ಮಾಸ್ಕ್ ಪ್ರಕರಣಗಳಿಂದ 6,63,90,898 ರೂಪಾಯಿ ದಂಡ ವಸೂಲಿ ಮಾಡಿದೆ.‌ ಇದರ ಜೊತೆಯಲ್ಲೇ 24 ಸಾವಿರ ಸೋಶಿಯಲ್ ಡಿಸ್ಟೆಂಸಿಂಗ್ ಪ್ರಕರಣಗಳಿಂದ 55,03,192 ರೂಪಾಯಿ ಫೈನ್ ಕಲೆಕ್ಟ್ ಮಾಡಿದೆ. ಇನ್ನು ದಂಡ ವಸೂಲಿ ಮಾಡುವ ಸಂದರ್ಭದಲ್ಲಿ ದಕ್ಷಿಣ ವಲಯದ ಎರಡು ಕಡೆ ಮಾರ್ಷಲ್ ಗಳ‌ ಮೇಲೆ ಹಲ್ಲೆಯೂ ಆಗಿದೆ.

ಈ ಹಿನ್ನೆಲೆ ಎಪಿಡಮಿಕ್ ಕಾಯ್ದೆ ಅಡಿಯಲ್ಲಿ ಅವರ ವಿರುದ್ಧ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ರಸ್ತೆ ಮೇಲೆ ನಿಂತು ಮಾಸ್ಕ್ ಹಾಕಿಲ್ಲ ಸಾಮಾಜಿಕ ಅಂತರ ಇಲ್ಲ ಅಂತ ಸಾರ್ವಜನಿಕರಿಗೆ ಬುದ್ದಿ ಹೇಳೋ ಮಾರ್ಷಲ್ಸ್ ಈಗ ಬಿಬಿಎಂಪಿ ಜೇಬಿಗೆ ಕೋಟಿ ಕೋಟಿ ತಂದು ತುಂಬಿದ್ದಾರೆ. ಇನ್ನೂ ಮಾರ್ಷಲ್ ಗಳು ದಂಡ ಹಾಕುತ್ತಿದ್ದು ಕೆಲವೇ ಕೆಲವು ದಿನಗಳಲ್ಲಿ ದಂಡದ ಮೊತ್ತದ ಸಂಖ್ಯೆ 10 ಕೋಟಿ ದಾಟುವ ನಿರೀಕ್ಷೆ ಇದೆ.

ವರದಿ; ಆಶಿಕ್ ಮುಲ್ಕಿ
Published by: HR Ramesh
First published: January 28, 2021, 7:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories