ಆದಾಯ ಮೂಲ ಬಳಸಿಕೊಳ್ಳದ ಬಿಬಿಎಂಪಿಯಿಂದ ನಷ್ಟದ ವ್ಯರ್ಥಾಲಾಪ

ಬಿಬಿಎಂಪಿಯಲ್ಲಿ ಆದಾಯ ಇಲ್ಲ ಎಂದು ಬೊಬ್ಬೆ ಹೊಡೀತಾರೆ. ಆದ್ರೆ ಕೋಟಿ ಕೋಟಿ ರೂಪಾಯಿ ಆದಾಯ ಬರೋ ಮೂಲವಿದ್ರೂ ಪಾಲಿಕೆ ಕೈ ಕಟ್ಟಿ ಕುಳಿತಿದೆ.


Updated:August 28, 2018, 7:23 PM IST
ಆದಾಯ ಮೂಲ ಬಳಸಿಕೊಳ್ಳದ ಬಿಬಿಎಂಪಿಯಿಂದ ನಷ್ಟದ ವ್ಯರ್ಥಾಲಾಪ
ಬಿಬಿಎಂಪಿಯಲ್ಲಿ ಆದಾಯ ಇಲ್ಲ ಎಂದು ಬೊಬ್ಬೆ ಹೊಡೀತಾರೆ. ಆದ್ರೆ ಕೋಟಿ ಕೋಟಿ ರೂಪಾಯಿ ಆದಾಯ ಬರೋ ಮೂಲವಿದ್ರೂ ಪಾಲಿಕೆ ಕೈ ಕಟ್ಟಿ ಕುಳಿತಿದೆ.

Updated: August 28, 2018, 7:23 PM IST
- ಶ್ಯಾಮ್ ಎಸ್., ನ್ಯೂಸ್18 ಕನ್ನಡ

ಬೆಂಗಳೂರು: ಬಿಬಿಎಂಪಿಗೆ ತನ್ನ ಬೊಕ್ಕಸ ತುಂಬಿಸಿಕೊಳ್ಳಲು ಆದಾಯ ಮೂಲ ಗೊತ್ತಿದ್ದರೂ ಸುಮ್ಮನೆ ನಷ್ಟ ಎಂದು ಹೇಳಿಕೊಳ್ಳುತ್ತಿದೆ. 2017-18ನೇ ಸಾಲಿನಲ್ಲಿ 160 ದೊಡ್ಡ ದೊಡ್ಡ ಅಪಾರ್ಟ್ಮೆಂಟ್​ಗಳಿಗೆ ಆಕ್ಯುಪೆನ್ಸಿ ಸರ್ಟಿಫಿಕೇಟ್, ಅಂದ್ರೆ ಸ್ವಾಧೀನ ಪ್ರಮಾಣ ಪತ್ರವನ್ನು ನೀಡಿದೆ.  ಆದ್ರೆ ಅಪಾರ್ಟ್‌ಮೆಂಟ್‌ಗಳಿಗೆ ತೆರಿಗೆ ನಿಗದಿ ಮಾಡಿಲ್ಲ. ಇದ್ರಿಂದಾಗಿ ಕಳೆದ ಅವಧಿಯಲ್ಲಿ ಬರುತ್ತಿದ್ದ ಸುಮಾರು 200 ಕೋಟಿ ರೂ ಆದಾಯಕ್ಕೆ ಈಗ ಇಲ್ಲ ಎಂದು ವಿರೋಧ ಪಕ್ಷ ಆರೋಪಿಸಿದೆ.

ಇತ್ತೀಚೆಗೆ ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಶಿವರಾಜ್ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಕಮಿಷನರ್ ಮಂಜುನಾಥ್ ಪ್ರಸಾದ್ ಅವರಿಗೆ ಪತ್ರ ಬರೆದಿದ್ರು. ಈ ಬಳಿಕ 160 ಅಪಾರ್ಟ್ಮೆಂಟ್​ಗಳ ಪೈಕಿ 7 ಆಪಾರ್ಟ್ಮೆಂಟ್​ಗಳಲ್ಲಿನ 1,018 ಫ್ಲಾಟ್​ಗಳಿಗೆ ಪಾಲಿಕೆ ಅಧಿಕಾರಿಗಳು ಆಸ್ತಿ ತೆರಿಗೆ ಫಿಕ್ಸ್ ಮಾಡಿದ್ದಾರೆ.  ಉಳಿದವಕ್ಕೆ ಇನ್ನೂ ಫಿಕ್ಸ್ ಮಾಡಿಲ್ಲ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಒಟ್ಟು 3,100 ಕೋಟಿ ರೂಪಾಯಿ ಆಸ್ತಿ ತೆರಿಗೆ ಗುರಿಯನ್ನು ಪಾಲಿಕೆ ಹಾಕ್ಕೊಂಡಿದೆ.  ಆದ್ರೆ ಇದುವರೆಗೂ 1,771 ಕೋಟಿ ರೂಪಾಯಿ ಆಸ್ತಿ ತೆರಿಗೆ ಸಂಗ್ರಹವಾಗಿದೆ. ಪಾಲಿಕೆ ಅಧಿಕಾರಿಗಳು ಶೀಘ್ರವೇ ಟ್ಯಾಕ್ಸ್‌ ಫಿಕ್ಸ್‌ ಮಾಡಿ ಆದಾಯ ಹೆಚ್ಚಿಸಕೊಳ್ಳಬೇಕಿದೆ. ಆದ್ರೆ ಪಾಲಿಕೆ ಅಧಿಕಾರಿಗಳು ಯಾಕೆ ಟ್ಯಾಕ್ಸ್ ಸಂಗ್ರಹಕ್ಕೆ ಒತ್ತು ಕೊಡ್ತಿಲ್ಲ ಅನ್ನೋದು ಮಾತ್ರ ಯಕ್ಷ ಪ್ರಶ್ನೆಯಾಗಿದೆ.

ಈ ವರ್ಷದ ಫೆಬ್ರವರಿಯಲ್ಲಿ ಮಹಾಲೇಖಪಾಲರ ವರದಿಯಲ್ಲೂ ಬಿಬಿಎಂಪಿಯ ತೆರಿಗೆ ವಸೂಲಾತಿ ದೋಷವನ್ನು ಎತ್ತಿ ಹಿಡಿಯಲಾಗಿತ್ತು. ನಗರ ಸಾರಿಗೆ ಉಪಕರವನ್ನು ವಸೂಲಿ ಮಾಡುವ ಅವಕಾಶ ಇದ್ದರೂ ಬಿಬಿಎಂಪಿ ಯಾವ ಕ್ರಮವನ್ನೂ ಕೈಗೊಂಡಿಲ್ಲ. ರಾಜ್ಯ ಸರಕಾರ ಈ ಕುರಿತು ನೀಡಿದ ನಿರ್ದೇಶನವನ್ನೂ ಬಿಬಿಎಂಪಿ ಪಾಲಿಸಿಲ್ಲ. 2013-2016ರವರೆಗೆ ನಗರ ಸಾರಿಗೆ ಉಪಕರ ವಿಧಿಸದೇ ಇದ್ದರಿಂದ ಬಿಬಿಎಂಪಿಗೆ ಹೆಚ್ಚೂಕಡಿಮೆ 100 ಕೋಟಿ ರೂ ನಷ್ಟವಾಗಿದೆ ಎಂದು ಸಿಎಜಿ ವರದಿಯಲ್ಲಿ ಪ್ರಸ್ತಾಪಿಸಲಾಗಿತ್ತು.
First published:August 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ