ಸಾರ್ವಜನಿಕರ ವಿರೋಧದ ಬಳಿಕ ಕಸ ಹೆಚ್ಚುವರಿ ಶುಲ್ಕ ಯೋಜನೆ ಕೈಬಿಟ್ಟ ಬಿಬಿಎಂಪಿ

ದಿನಕ್ಕೆ 5 ಕೆಜಿ ಗಿಂತ ಕಡಿಮೆ ಕಸ ಉತ್ಪಾದಕರಿಗೆ 500 ರೂ, ದಿನಕ್ಕೆ 5 ರಿಂದ 10 ಕೆಜಿ ಕಸ ಉತ್ಪಾದಕರಿಗೆ 1400 ರೂ, ದಿನಕ್ಕೆ 11 ರಿಂದ 25 ಕೆಜಿ ಕಸ ಉತ್ಪಾದಕರಿಗೆ 3500 ರೂ, ದಿನಕ್ಕೆ 26 ರಿಂದ 50 ಕೆಜಿ ಕಸ ಉತ್ಪಾದಕರಿಗೆ 7000 ರೂ, ದಿನಕ್ಕೆ 100 ಹಾಗೂ ಅದಕ್ಕಿಂತ ಹೆಚ್ಚಿನ ಕೆಜಿ ಕಸ ಉತ್ಪಾದಕರಿಗೆ 14,000 ರೂ ವಿಧಿಸುವುದಾಗಿ ಹೇಳಿತ್ತು.

ಬಿಬಿಎಂಪಿ ಕಚೇರಿ

ಬಿಬಿಎಂಪಿ ಕಚೇರಿ

  • Share this:
ಬೆಂಗಳೂರು(ಡಿ.18): ರಾಜಧಾನಿ ಬೆಂಗಳೂರಿನಲ್ಲಿ ಕಸ ಶುಲ್ಕ‌ ಹೆಚ್ಚಳ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.‌ ಇದಕ್ಕೆ ಸಾರ್ವಜನಿಕರು, ವಾಣಿಜ್ಯ ಬಳಕೆದಾರರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಕುರಿತು ನ್ಯೂಸ್ 18 ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಇದರಿಂದ ಎಚ್ಚೆತ್ತ ಬಿಬಿಎಂಪಿ ಕಸ ಹೆಚ್ಚುವರಿ ಶುಲ್ಕ ಯೋಜನೆಯನ್ನು ಹಿಂಪಡೆದಿದೆ. ಕೊರೋನಾ‌ ಸಂಕಷ್ಟದಿಂದ ಜನರು ಇನ್ನೂ ಚೇತರಿಸಿಕೊಂಡಿಲ್ಲ. ಹೋಟೆಲ್, ಕಲ್ಯಾಣಮಂಟಪ ಸೇರಿದಂತೆ ಹಲವು ಉದ್ಯಮಗಳು ಇನ್ನೂ ಚೇತರಿಕೊಳ್ಳಬೇಕಿದೆ. ಇಂಥ ಸಂದರ್ಭದಲ್ಲಿ ಬಿಬಿಎಂಪಿ ಜನರಿಗೆ, ವಾಣಿಜ್ಯ ಬಳಕೆದಾರರಿಗೆ ಶಾಕ್‌ ಕೊಡಲು ಮುಂದಾಗಿತ್ತು. ಹೊಸ ವರುಷಕ್ಕೆ ಕಸ ಸಂಗ್ರಹಣೆಗೆ ಹೆಚ್ಚುವರಿ ಶುಲ್ಕ ವಿಧಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿತ್ತು‌. ಬಿಬಿಎಂಪಿ ತನ್ನ ಆದಾಯ ಹೆಚ್ಚಿಸಿಕೊಳ್ಳಲು 200 ರೂ. ರಿಂದ 14 ಸಾವಿರದವರೆಗೆ ಮಾಸಿಕ ಶುಲ್ಕ ನಿಗದಿ ಮಾಡಿತ್ತು.

ಮನೆ, ಕಟ್ಟಡ ತೆರಿಗೆ ಜೊತೆ ಕಸ ಶುಲ್ಕವನ್ನು ವಿಧಿಸುತ್ತಿದೆ. ಇದೀಗ ಕರೆಂಟ್ ಬಿಲ್‌ ಜೊತೆಗೆ ಹೆಚ್ಚುವರಿ ಶುಲ್ಕ‌ಕಟ್ಟಲು ಎಲ್ಲೆಡೆಯಿಂದ ವಿರೋಧ ವ್ಯಕ್ತವಾಗುತ್ತಿದೆ. ಅದರಲ್ಲೂ ಹೋಟೆಲ್ ಮಾಲಿಕರ ಸಂಘ ಭಾರೀ ವಿರೋಧ ವ್ಯಕ್ತಪಡಿಸುತ್ತಿದೆ.

ವಾಣಿಜ್ಯ ತ್ಯಾಜ್ಯ ಉತ್ಪಾದಕರು ಎಷ್ಟು ಕಟ್ಟಬೇಕು?

ದಿನಕ್ಕೆ 5 ಕೆಜಿ ಗಿಂತ ಕಡಿಮೆ ಕಸ ಉತ್ಪಾದಕರಿಗೆ 500 ರೂ, ದಿನಕ್ಕೆ 5 ರಿಂದ 10 ಕೆಜಿ ಕಸ ಉತ್ಪಾದಕರಿಗೆ 1400 ರೂ, ದಿನಕ್ಕೆ 11 ರಿಂದ 25 ಕೆಜಿ ಕಸ ಉತ್ಪಾದಕರಿಗೆ 3500 ರೂ, ದಿನಕ್ಕೆ 26 ರಿಂದ 50 ಕೆಜಿ ಕಸ ಉತ್ಪಾದಕರಿಗೆ 7000 ರೂ, ದಿನಕ್ಕೆ 100 ಹಾಗೂ ಅದಕ್ಕಿಂತ ಹೆಚ್ಚಿನ ಕೆಜಿ ಕಸ ಉತ್ಪಾದಕರಿಗೆ 14,000 ರೂ ವಿಧಿಸುವುದಾಗಿ ಹೇಳಿತ್ತು.

Farmers Protest: ದೆಹಲಿ ರೈತ ಹೋರಾಟವನ್ನು ಬೆಂಬಲಿಸಿ ತಮಿಳುನಾಡಿನಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಡಿಎಂಕೆ ಪಕ್ಷ

ಶುಲ್ಕ ಪಾವತಿಸದವರಿಗೆ ದಂಡಾಸ್ತ್ರ ಕಾಯ್ದೆಯನ್ನು ಜಾರಿ ಮಾಡಲು ಬಿಬಿಎಂಪಿ ಮುಂದಾಗಿತ್ತು.  ವಾರ್ಷಿಕವಾಗಿ 800 ಕೋಟಿ ವೆಚ್ಚ ಕಸ ನಿರ್ವಹಣೆ ಹೆಸರಿನಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ಜನರಿಗೆ ಬರೆ ಹಾಕಲು ಮುಂದಾಗಿತ್ತು.

ಕಸ ಸಂಗ್ರಹ ಶುಲ್ಕ ಹೆಚ್ಚಳದಿಂದ ಸಾರ್ವಜನಿಕರು ಜೊತೆಗೆ ಪ್ರಮುಖವಾಗಿ ಹೋಟೆಲ್‌ ಗಳುಗೆ ಹೊಡೆತ ಕೊಡುತ್ತದೆ. ಬೆಂಗಳೂರಿನಲ್ಲಿ 25 ಸಾವಿರಕ್ಕೂ ಹೆಚ್ಚು ಹೋಟೆಲ್ ಗಳಿವೆ. ಕೊರೋನಾದಿಂದ ಈಗಲೂ ನೂರಾರು ಹೋಟೆಲ್ ತೆರೆದಿಲ್ಲ. ಮಾಲ್, ಕಲ್ಯಾಣ ಮಂಟಪಗಳು ಕೆಲ ತಿಂಗಳ ಹಿಂದೆಯಷ್ಟೆ ತೆರೆದಿವೆ. ಇಂಥ ಸಂದರ್ಭದಲ್ಲಿ ಕಸ ಶುಲ್ಕ ಹೆಚ್ಚುವರಿವಾಗಿ ಕೊಡಲು ಎಲ್ಲರೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಹೋಟೆಲ್ ಮಾಲೀಕರ ಸಂಘ ಈ ಸಂಬಂಧ ಮುಖ್ಯಮಂತ್ರಿ ಭೇಟಿ ಮಾಡಿ ಮನವಿ ಮಾಡಲು ನಿರ್ಧರಿಸಿತ್ತು. ಹೋರಾಟದ ಹಾದಿ ತುಳಿಯಲು ಮುಂದಾಗಿತ್ತು‌. ಜನಾಭಿಪ್ರಾಯ ದನಿ ಕುರಿತು ನ್ಯೂಸ್ 18 ವರದಿ ಪ್ರಸಾರ ಮಾಡಿತ್ತು. ಇದಕ್ಕೆ ಬಿಬಿಎಂಪಿ ಕೊನೆಗೂ ಎಚ್ಚೆತ್ತುಕೊಂಡಿದೆ. ಕಸ ಶುಲ್ಕ ಹೆಚ್ಚಳ ಪ್ರಸ್ತಾಪಿತ ಯೋಜನೆ ಕೈಬಿಡಲಾಗಿದೆ ಎಂದು ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ ತಿಳಿಸಿದರು.

ಒಟ್ಟಿನಲ್ಲಿ ಬೆಂಗಳೂರು ಮಹಾನಗರದಲ್ಲಿ ಒಂದು ದಿನ ಕಸ ತೆಗೆಯದೇ‌ ಹೋದರೆ ದೊಡ್ಡ ಸಮಸ್ಯೆಯಾಗುತ್ತದೆ. ಆದರೆ ಇದನ್ನೇ ಅಸ್ತ್ರವಾಗಿಟ್ಟುಕೊಂಡು ಹೆಚ್ಚುವರಿ ಶುಲ್ಕ ವಿಧಿಸಲು ಹೋದ‌ ಬಿಬಿಎಂಪಿ ಸಾರ್ವಜನಿಕೆ ವಿರೋಧಕ್ಕೆ ಸದ್ಯಕ್ಕೆ ಮಣಿದಿದೆ.
Published by:Latha CG
First published: