• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Bengaluru: ರಸ್ತೆ ಅಗೆಯಲು ಅನುಮತಿ ಕೊಡಂಗಿಲ್ಲ; ಅನುಮತಿ ಕೊಟ್ರೆ ಎಂಜಿನಿಯರ್​ಗಳ ಸ್ಯಾಲರಿ ಕಡಿತ!

Bengaluru: ರಸ್ತೆ ಅಗೆಯಲು ಅನುಮತಿ ಕೊಡಂಗಿಲ್ಲ; ಅನುಮತಿ ಕೊಟ್ರೆ ಎಂಜಿನಿಯರ್​ಗಳ ಸ್ಯಾಲರಿ ಕಡಿತ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಎಲ್ಲಾದರೂ ರಸ್ತೆ ಕುಸಿದು ಗುಂಡಿ ಬಿದ್ದರೆ ಅದಕ್ಕೆ ನೇರವಾಗಿ ಪಾಲಿಕೆ ಎಂಜಿನಿಯರ್​ಗಳೇ ಹೊಣೆ ಅಂತ ಬಿಬಿಎಂಪಿ ಸುತ್ತೋಲೆ ಹೊರಡಿಸಿದೆ.

  • News18 Kannada
  • 5-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023) ಹೊಸ್ತಿಲಲ್ಲಿ ಬಿಬಿಎಂಪಿ ಇಂಜಿನಿಯರ್ (BBMP Engineers)ಗಳಿಗೆ ಮೂಗುದಾರ ಹಾಕಲು ಪಾಲಿಕೆ ಮುಂದಾಗಿದೆ. ಇನ್ಮುಂದೆ ತಳಮಟ್ಟದಲ್ಲಿರುವ ಇಂಜಿನಿಯರ್​ಗಳು ರಸ್ತೆ ಅಗೆಯೋದಕ್ಕೆ ಇತರೆ ಸರ್ಕಾರಿ ಸಂಸ್ಥೆಗಳಿಗೆ (Government Agency) ಅನುಮತಿ ನೀಡಿದರೆ ಹುಷಾರ್​ ಎಂದಿದೆ ಪಾಲಿಕೆ (BBMP). ಇತ್ತೀಚಿಗೆ ಬೆಂಗಳೂರಿನ ಮೂರ್ನಾಲ್ಕು ಕಡೆ ರಸ್ತೆಗಳು ಏಕಾಏಕಿ ಕುಸಿದು (Sink Hole) ಅವಾಂತರ ಸೃಷ್ಟಿಯಾಗಿತ್ತು. ಇದರ ಬೆನ್ನಲ್ಲೇ ಈಗ ಬಿಬಿಎಂಪಿ ಹಿರಿಯ ಅಧಿಕಾರಿಗಳು ಹೊಸ ಆದೇಶ ಮಾಡಿದ್ದಾರೆ. ಇನ್ಮುಂದೆ ಸ್ಥಳೀಯ ಎಂಜಿನಿಯರ್​ಗಳು ರಸ್ತೆ ಅಗೆಯೋದಕ್ಕೆ ಇತರೆ ಸರ್ಕಾರಿ ಸಂಸ್ಥೆಗಳಿಗೆ ಅನುಮತಿ ನೀಡುವಂತಿಲ್ಲ. ಒಂದು ವೇಳೆ ಅನುಮತಿ ಕೊಟ್ಟು ಅವಾಂತರ ಸೃಷ್ಟಿಯಾದರೆ ಪಾಲಿಕೆ ಎಂಜಿನಿಯರ್​ಗಳೇ ನೇರ ಹೊಣೆ. ಈ ಬಗ್ಗೆ ಯೋಜನಾ ವಿಭಾಗದ ವಿಶೇಷ ಆಯುಕ್ತರು ಆದೇಶ ಹೊರಡಿಸಿದ್ದಾರೆ.


ರಸ್ತೆಯನ್ನು ಅಗೆಯಲು ಪರ್ಮಿಷನ್​ ಕೊಡ್ಬೇಡಿ; ಸ್ಥಳೀಯ ಎಂಜಿನಿಯರ್ಸ್​ಗೆ ಕಟ್ಟು ನಿಟ್ಟಿನ ಆದೇಶ!


ಎಲ್ಲಾದರೂ ರಸ್ತೆ ಕುಸಿದು ಗುಂಡಿ ಬಿದ್ದರೆ ಅದಕ್ಕೆ ನೇರವಾಗಿ ಪಾಲಿಕೆ ಎಂಜಿನಿಯರ್​ಗಳೇ ಹೊಣೆ.‌ ಅಲ್ಲದೆ ಅದರ ದುರಸ್ತಿಗೆ ತಗುಲುವ ಸಂಪೂರ್ಣ ವೆಚ್ಚ ಎಂಜಿನಿಯರ್​ಗಳ ಸಂಬಳದಿಂದಲೇ ವಸೂಲಿ ಮಾಡಲಾಗುತ್ತೆ ಅಂತ ಬಿಬಿಎಂಪಿ ಸುತ್ತೋಲೆ ಹೊರಡಿಸಿದೆ. ಇದು ಎಂಜಿನಿಯರ್​ಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.




ಇದನ್ನೂ ಓದಿ: Aero India 2023: ಏಷ್ಯಾದ ಅತಿದೊಡ್ಡ ಏರ್‌ ಶೋ; ಏರೋ ಇಂಡಿಯಾಗೆ 1.40 ಕೋಟಿ ರೂಪಾಯಿ ವೆಚ್ಚದಲ್ಲಿ ಬಿಬಿಎಂಪಿ ಸಿದ್ಧತೆ


ಬಿಡಬ್ಲ್ಯೂಎಸ್​ಎಸ್​ಬಿ, ಬೆಸ್ಕಾಂ, ಕೆಪಿಟಿಸಿಎಲ್​ ಏನಾದರೂ ಇದ್ರೆ, ರಸ್ತೆಯನ್ನು ಕಟ್​ ಮಾಡಿ ಪೂರ್ಣ ರಸ್ತೆಯನ್ನು ಅವರೇ ಸರಿ ಮಾಡಬೇಕು. ಹೀಗಾದರೆ ಮಾತ್ರ ಅನುಮತಿ ಕೊಡುತ್ತೇವೆ ಎಂದು ಬಿಬಿಎಂಪಿ ಚೀಫ್ ಕಮಿಷನರ್ ತುಷಾರ್ ಗಿರಿನಾಥ್ ಮಾಹಿತಿ ನೀಡಿದ್ದಾರೆ.


ಎಂಜಿನಿಯರ್​ಗಳಿಗೆ ಕಸಿವಿಸಿ ಉಂಟು ಮಾಡಿದ ಪಾಲಿಕೆ ಆದೇಶ


ರಸ್ತೆ ಡಾಂಬರೀಕರಣ ಕುಸಿತ ಕಂಡರೂ ಎಇಇ, ಎಇ, ಸಿಇ ಗಳೇ ಹೊಣೆ ಎಂದು ಚುನಾವಣೆ ಹೊಸ್ತಿಲಲ್ಲೇ ಆದೇಶ ಆಗಿರುವುದು ತಳಮಟ್ಟದ ಎಂಜಿನಿಯರ್​ಗಳಿಗೆ ಕಸಿವಿಸಿ ಉಂಟು ಮಾಡಿದೆ. ಮುಂದಿನ ಆದೇಶದ ತನಕ ಬಿಡಬ್ಲ್ಯೂಎಸ್​ಎಸ್​ಬಿ, ಬೆಸ್ಕಾಂ ಸೇರಿದಂತೆ ಯಾರಿಗೂ ಅನುಮತಿ ಕೊಡದಂತೆ ತಾಕೀತು ಮಾಡಲಾಗಿದೆ.


ಸಾಂದರ್ಭಿಕ ಚಿತ್ರ


ಇದನ್ನೂ ಓದಿ: VV Puram Food Street: ಬೆಂಗಳೂರಿನ ವಿ ವಿ ಪುರಂ ಫುಡ್ ಸ್ಟ್ರೀಟ್​ಗೆ​ ಹೊಸ ಲುಕ್! ಹೈಟೆಕ್ ಟಚ್ ಕೊಡಲು ಬಿಬಿಎಂಪಿ ಪ್ಲಾನ್


ರಸ್ತೆ ಅಗೆಯಲು ಅನುಮತಿ ಕೊಟ್ಟಿಲ್ಲ ಎಂದರೆ ಮತ್ತೊಂದು ರೀತಿ ಸಮಸ್ಯೆ


ಚುನಾವಣೆ ಸಮಸ್ಯೆಯದಲ್ಲಿ ರಸ್ತೆ ಗುಂಡಿ ಅವಾಂತರ ಹಿನ್ನಡೆ ಉಂಟು ಮಾಡುತ್ತೆ ಅನ್ನುವ ಕಾರಣಕ್ಕೆ ಈ ಆದೇಶ ಮಾಡಲಾಗಿದೆ. ಆದರೆ ಬಿಡಬ್ಲ್ಯೂಎಸ್​ಎಸ್​ಬಿ, ಬೆಸ್ಕಾಂ ಸಮಸ್ಯೆ ಆದಾಗ ಎಂಜಿನಿಯರ್​ಗಳು ರಸ್ತೆ ಅಗೆಯಲು ಅನುಮತಿ ಕೊಟ್ಟಿಲ್ಲ ಅಂದರೂ ಮತ್ತೊಂದು ರೀತಿಯ ಸಮಸ್ಯೆ ಆಗುತ್ತೆ. ಹೀಗಾಗಿ ಅನುಮತಿ ಕೊಟ್ಟ ಬಳಿಕ ಸ್ಪಾಟ್​ನಲ್ಲೇ ಇದ್ದು ಕಾಮಗಾರಿ ಪೂರ್ಣ ಮಾಡುವ ಜವಾಬ್ದಾರಿ ಕೊಟ್ಟಿದ್ದರೆ ಸರಿಯಾಗಿರುತ್ತಿತ್ತು. ಈ ಬಗ್ಗೆ ಅಧಿಕಾರಿಗಳು ಚಿಂತಿಸಬೇಕಿದೆ.


ಮೊಘಲ್ ಉದ್ಯಾನಕ್ಕೆ ಅಮೃತ್ ಉದ್ಯಾನ ಹೆಸರು


ರಾಷ್ಟ್ರಪತಿ ಭವನದ (Rashtrapati Bhavan) ಎದುರಿನ ಮೊಘಲ್ ಉದ್ಯಾನವನ್ನ (Mughal Gardens) ಅಮೃತ್ ಉದ್ಯಾನ್ (Amrit Udyan) ಅಂತ ಮರು ನಾಮಕರಣ ಮಾಡಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉದ್ಯಾನವನ ಉದ್ಘಾಟಿಸಲಿದ್ದಾರೆ. ಜನವರಿ 31 ರಿಂದ ಮಾರ್ಚ್ 26 ರವರೆಗೆ ಎರಡು ತಿಂಗಳ ಕಾಲ ಸಾರ್ವಜನಿಕರಿಗೆ ತೆರೆದಿರಲಿದೆ.

Published by:Sumanth SN
First published: