ನಾಯಿಗಳನ್ನು ಶೋಕಿಗೆ ಸಾಕುವಂತಿಲ್ಲ; ಹಿಂಸೆ ನೀಡುವಂತಿಲ್ಲ: ಬಿಬಿಎಂಪಿಯಿಂದ ನೂತನ ಸಾಕುನಾಯಿ ಸಂಹಿತೆ

ಸಾಕು ನಾಯಿಗಳನ್ನು ಸಲಹಿ, ಪೋಷಿಸುವ ಬಗ್ಗೆ ಲೈಸೆನ್ಸ್ ತೆಗೆದುಕೊಳ್ಳುವುದು ಕಡ್ಡಾಯವಾಗಿದೆ. ಈ ಲೈಸೆನ್ಸ್ ಆನ್‌ಲೈನ್​ನಲ್ಲೂ ಲಭ್ಯವಿರಲಿದೆ. ಇನ್ನು ಸಾಕು ನಾಯಿಗಳಿಗೆ ಸಾಂಕ್ರಾಮಿಕ ರೋಗ ಬಂದ್ರೆ ಅವುಗಳಿಗೆ ದಯಾಮರಣ ನೀಡುವ ಅವಕಾಶವನ್ನು ಕಲ್ಪಿಸಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • News18
  • Last Updated :
  • Share this:
ಬೆಂಗಳೂರು(ಫೆ. 28): ಇನ್ಮುಂದೆ ಶೋಕಿಗಾಗಿ ನಾಯಿ ಸಾಕುವಂತಿಲ್ಲ. ನಿಮಗೆ ತೋಚಿದಷ್ಟು ಸಂಖ್ಯೆಯ ನಾಯಿಗಳನ್ನು ತಂದಿಟ್ಟುಕೊಳ್ಳುವಂತಿಲ್ಲ.ನಾಯಿಗಳ ಸ್ವಾತಂತ್ರ್ಯ ಹಾಗೂ ಬದುಕಿಗೆ ಕಿಂಚಿತ್ತೂ ತೊಂದರೆ ನೀಡುವಂತಿಲ್ಲ. ಹಾಗೇನಾದ್ರೂ ಮಾಡಿದ್ರೆ ದಂಡ ಪಾವತಿಸಬೇಕಾಗುತ್ತದೆ. ಫ್ಲಾಟ್​ಗೊಂದೇ ನಾಯಿ ಸಾಕೋಕೆ ಅವಕಾಶ ಕಲ್ಪಿಸುವುದು ಸೇರಿದಂತೆ ಅನೇಕ ಅಂಶಗಳನ್ನೊಳಗೊಂಡ ಪರಿಷ್ಕ್ರತ ‘ಸಾಕು ನಾಯಿ ಪರವಾನಗಿ ಉಪನಿಯಮ-2018’ ಈಗಾಗಲೇ ಸಿದ್ಧವಾಗಿದ್ದು ನಾಳೆ ನಡೆಯುವ ಕೌನ್ಸಿಲ್ ಸಭೆಯಲ್ಲಿ ಇದಕ್ಕೆ ಅನುಮೋದನೆ ಪಡೆದು ಅಂಗೀಕಾರ ಪಡೆಯಲು ಸರ್ಕಾರಕ್ಕೆ ರವಾನಿಸಲಾಗುತ್ತಿದೆ.

ಸಾಕು ನಾಯಿಗಳನ್ನು ಸಾಕುವುದು ಸೇರಿದಂತೆ ಅವುಗಳ ಸಂಖ್ಯೆ-ರಕ್ಷಣೆ-ಸ್ವಾತಂತ್ರ್ಯದ ಕುರಿತಾಗಿ ನಿಯಾಮವಳಿಗಳನ್ನು ರೂಪಿಸುವ ಬಗ್ಗೆ ನಡೆಯುತ್ತಿದ್ದ ಜಿಜ್ಞಾಸೆಗೆ ಬಿಬಿಎಂಪಿಯಿಂದ ಸಂಹಿತೆಯ ಸ್ವರೂಪ ದೊರೆತಿದೆ. ಹಿಂದಿದ್ದ ನಿಯಾಮವಳಿಗಳ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಪ್ರಾಣಿಪ್ರಿಯರು, ಪ್ರಾಣಿ ದಯಾ ಸಂಘ ಹಾಗೂ ನಾಯಿ ಮಾಲೀಕರ ನಡುವೆ ವಾಗ್ಯುದ್ಧವೇ ನಡೆದು ಹೋಗಿತ್ತು. ಈ ಹಿನ್ನೆಲೆಯಲ್ಲಿ ಹತ್ತಾರು ಸುತ್ತಿನ ಸಮಾಲೋಚನೆ ನಡೆಸಿ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಅಂತಿಮವಾಗಿ ಸಾಕು ನಾಯಿ ಪರವಾನಗಿ ಉಪನಿಯಮವನ್ನು ರೂಪಿಸಲಾಗಿದೆ. ಈ ಉಪನಿಯಮದಲ್ಲಿರುವ ನಿಯಾಮವಳಿಗಳ ಬಗ್ಗೆಯೂ ಸಾಕಷ್ಟು ಚರ್ಚೆ ಶುರುವಾಗಿದೆ.

ಇದನ್ನೂ ಓದಿ: ‘ಜೈ ಮಹಾರಾಷ್ಟ್ರ‘ ಅಂದ್ರೆ ತಪ್ಪೇನು? ಪಾಕಿಸ್ತಾನ್​​ ಜಿಂದಾಬಾದ್​​​ ಅಂದಾಗ ಕನ್ನಡ ಹೋರಾಟಗಾರರು ಎಲ್ಲಿದ್ದರು?; ಯತ್ನಾಳ್​

ಪರಿಷ್ಕೃತ “ಸಾಕು ನಾಯಿ ಪರವಾನಗಿ ಉಪ ನಿಯಮ – 2018” ರ ಕರಡಿನಲ್ಲಿ ಉಲ್ಲೇಖವಾಗಿರುವ ಸಂಗತಿಗಳು ಈ ರೀತಿ ಇವೆ:

* ನಾಯಿ ಸಾಕುವುದಕ್ಕೆ ಪರವಾನಗಿ ಕಡ್ಡಾಯ
* ಪ್ರತಿ ವರ್ಷ ಪರವಾನಗಿ ನವೀಕರಣವೂ ಕಡ್ಡಾಯ
* ಬಿಬಿಎಂಪಿ ದೃಢಿಕರಿಸಿದ ಮೈಕ್ರೋ ಚಿಪ್ ಅಳವಡಿಕೆ
* ನಾಯಿಗೆ ಆ್ಯಂಟಿ ರೇಬಿಸ್ ಲಿಸಿಕೆ ಹಾಕಿಸಿರಲೇಬೇಕು
* ಸಂತಾನಶಕ್ತಿ ಹರಣ ಚಿಕಿತ್ಸೆ ಬಗ್ಗೆ ಪ್ರಮಾಣಪತ್ರ ಸಲ್ಲಿಕೆ ಕಡ್ಡಾಯ
* ಇದೆಲ್ಲಾ ದೃಢಪಟ್ಟ ಮೇಲೆಯೇ  ಪರವಾನಗಿ
* ನಾಯಿಗೆ ಹಿಂಸೆ ನೀಡುವುದು ಅಕ್ಷಮ್ಯ
* ಮಾಲೀಕರು ನಾಯಿ ವಾಸಕ್ಕೆ ಸೂಕ್ತ ವ್ಯವಸ್ಥೆ ಮಾಡಿರಲೇಬೇಕು
* ಹಿಂಸೆ ನೀಡುವುದಾಗಲೀ ಪ್ರಾಣಕ್ಕೆ ಧಕ್ಕೆ ತರುವುದಾಗಲೀ ಮಾಡುವಂತಿಲ್ಲ
* ನಾಯಿಗಳ  ಸ್ವಾತಂತ್ರಕ್ಕೆ ಧಕ್ಕೆ ಉಂಟು ಮಾಡುವಂತಿಲ್ಲ
* ನಾಯಿಯಿಂದ  ಪ್ರಾಣಿ-ಮನುಷ್ಯರ ಮೇಲೆ ದಾಳಿಯಾದರೆ ಮಾಲಿಕರೇ ಹೊಣೆ
* ಮೈದಾನ, ಪಾರ್ಕ್​ಗೆ ನಾಯಿ ಕರೆದುಕೊಂಡು ಹೋಗುವಾಗ ಸರಪಳಿ  ಹಾಕಬೇಕು.

ಸಾಕಷ್ಟು ವಿರೋಧಗಳಿಗೆ ಕಾರಣವಾಗಿದ್ದ ಹಿಂದಿನ ಸಾಕು ನಾಯಿ ನಿಯಮಾವಳಿಗಳ ಬೈಲಾದಲ್ಲಿದ್ದ ಪ್ರಮುಖಾಂಶಗಳು:

* ಫ್ಲ್ಯಾಟ್‌ಗಳಲ್ಲಿ ಒಂದು ನಾಯಿ ಸಾಕಲು ಅವಕಾಶ
* ಸ್ವತಂತ್ರ ಮನೆಯಲ್ಲಿ ಗರಿಷ್ಠ ಮೂರು ನಾಯಿ ಸಾಕಬಹುದು
* ಹೆಚ್ಚಿನ ನಾಯಿ ಸಾಕಿದ್ರೆ ದಂಡ ಪಾವತಿ ಕಡ್ಡಾಯ
* ಅಷ್ಟು ನಾಯಿ ಸಾಕಲು ಪರವಾನಗಿ ಕಡ್ಡಾಯ
* ಮೈಕ್ರೋ ಚಿಪ್ ಅಳವಡಿಕೆ ಕಡ್ಡಾಯ

ಈ ಅಂಶಗಳನ್ನು ಒಳಗೊಂಡ ಬೈಲಾದ ಬಗ್ಗೆ ಪ್ರಾಣಿ ದಯಾ ಸಂಘಟನೆ ಹಾಗೂ ಶ್ವಾನ ಪ್ರಿಯರು  ಆಕ್ರೋಶ ವ್ಯಕ್ತಪಡಿಸಿದ್ದರಿಂದ ಆದೇಶ ವಾಪಸ್ ಪಡೆಯಲಾಗಿತ್ತು. ಪ್ರಾಣಿ ದಯಾಸಂಘಟನೆಗಳು ಮತ್ತು ಶ್ವಾನಪ್ರಿಯರೊಂದಿಗೆ ಚರ್ಚೆ ನಡೆಸಿ ನೂತನ ‘ಪರಿಷ್ಕೃತ ಸಾಕು ನಾಯಿ ಉಪ ನಿಯಮ -2018’ ಸಿದ್ಧಪಡಿಸಲಾಗಿದೆ. ಇದನ್ನು ನಾಳೆಯ ಕೌನ್ಸಿಲ್ ಸಭೆಯಲ್ಲಿ ಅನುಮೋದನೆಗೆ ಕರಡು ಪ್ರತಿ ಸಲ್ಲಿಕೆ ಮಾಡಲಾಗಿದೆ. ಒಪ್ಪಿಗೆ ನಂತರ ಸರ್ಕಾರದ ಅನುಮೋದನೆಗೆ ರವಾನೆ ಮಾಡಲಾಗ್ತದೆ. ಹೊಸ ನಿಯಾಮವಳಿಗಳಲ್ಲಿ ಸಾಕು ನಾಯಿಗಳ ರಕ್ಷಣೆ-ಸ್ವಾತಂತ್ರ್ಯದ ಬಗ್ಗೆಯೂ ಉಲ್ಲೇಖವಿದೆ.

ಇದನ್ನೂ ಓದಿ: ಅವಕಾಶವಾದಿ ರಾಜಕಾರಣ ಮಾಡುವ ಕಾಂಗ್ರೆಸ್​ನವರಿಗೆ ಮಾನ-ಮಾರ್ಯಾದೆ ಇದೆಯಾ?; ಬಿಸಿ ಪಾಟೀಲ್ ಕಿಡಿ

ಹೊಸ ನಿಯಮ ಉಲ್ಲಂಘಿಸಿದರೆ ಏನು ಕ್ರಮ?

* ಷರತ್ತು ಉಲ್ಲಂಘನೆಗೆ ದಂಡ ನಿಗದಿ
* ಮೊದಲ ಉಲ್ಲಂಘನೆಗೆ 500 ರೂ
* ಎರಡನೇ ಬಾರಿ ಉಲ್ಲಂಘಿಸಿದ್ರೆ ದುಪ್ಪಟ್ಟು ದಂಡ
* ದಂಡ ವಿಧಿಸುವ ಅಧಿಕಾರ ಬಿಬಿಎಂಪಿಗೆ
* ನಿಯಮ ಪದೇ ಪದೇ ಮೀರಿದ್ರೆ 1 ಸಾವಿರ ರೂ ದಂಡ
* ದಿನನಿತ್ಯ 300 ರೂ ರಂತೆ ದಂಡ ನಿಗದಿ
* ಮಿತಿ ಮೀರಿದರೆ ನಾಯಿ ಪರವಾನಗಿ ರದ್ದು
* ಮಾಲೀಕರಿಂದ ನಾಯಿ ವಾಪಸ್ ಪಡೆಯಲಾಗುವುದು
* ಮಾಲೀಕರಿಲ್ಲದೇ ನಾಯಿ ಹರಾಜಿಗೆ ನಿರ್ಧಾರ
* ನಾಯಿ ವಾಪಾಸ್ ಬಿಡಿಸಿಕೊಳ್ಳಲು  ಸೂಕ್ತ ಸಲ್ಲಿಕೆ ಕಡ್ಡಾಯ
* ಮಾಲಿಕರು ಆಗಮಿಸದಿದ್ದರೆ ನಾಯಿ ಹರಾಜು
* ದತ್ತು ನೀಡುವ ನಿಟ್ಟಿನಲ್ಲೂ ಚಿಂತನೆ ನಡೆಸಲಾಗಿದೆ.

ಸಾಕು ನಾಯಿಗಳನ್ನು ಸಲಹಿ, ಪೋಷಿಸುವ ಬಗ್ಗೆ ಲೈಸೆನ್ಸ್ ತೆಗೆದುಕೊಳ್ಳುವುದು ಕಡ್ಡಾಯವಾಗಿದೆ. ಈ ಲೈಸೆನ್ಸ್ ಆನ್‌ಲೈನ್​ನಲ್ಲೂ ಲಭ್ಯವಿರಲಿದೆ. ಇನ್ನು ಸಾಕು ನಾಯಿಗಳಿಗೆ ಸಾಂಕ್ರಾಮಿಕ ರೋಗ ಬಂದ್ರೆ ಅವುಗಳಿಗೆ ದಯಾಮರಣ ನೀಡುವ ಅವಕಾಶವನ್ನು ಕಲ್ಪಿಸಲಾಗಿದೆ. ಇದೆಲ್ಲವೂ ಬಿಬಿಎಂಪಿ ಪಶುಪಾಲನಾ ಇಲಾಖೆ ಅಧಿಕಾರಿಗಳ ವ್ಯಾಪ್ತಿಯಲ್ಲೇ ನಡೆಯಲಿದೆ. ಒಟ್ಟಿನಲ್ಲಿ ತೀವ್ರ ಸರ್ಕಸ್ ಹಾಗೂ ಕಸರತ್ತಿನ ನಡುವೆಯೇ ಪರಿಷ್ಕ್ರತ ನಿಯಾಮವಳಿ ರೂಪಿಸಲಾಗಿದೆ. ಎಲ್ಲವನ್ನೂ ತೂಗಿ ಅಳೆದು ನಿಯಾಮವಳಿ ರೂಪಿಸಿರುವುದರಿಂದ ಸಾರ್ವಜನಿಕವಾಗಿ ಒಪ್ಪಿಗೆ ಸಿಗುವ ವಿಶ್ವಾಸದಲ್ಲಿದೆ ಬಿಬಿಎಂಪಿ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: