ಬಿಬಿಎಂಪಿ ಹಾಟ್ ಮಿಕ್ಸಿಂಗ್ ಗೋಲ್ಮಾಲ್; ಶೇ. 49ರಷ್ಟು ಕಡಿಮೆ ಕೋಟ್ ಮಾಡಿದವರಿಗೆ ಟೆಂಡರ್

ಬಿಬಿಎಂಪಿಯು ಹಾಟ್ ಮಿಕ್ಸಿಂಗ್ ಪ್ಲಾಂಟ್ ನಿರ್ಮಾಣಕ್ಕೆ ಟೆಂಡರ್ ಕರೆದಿದ್ದು ಶೇ. 49 ಕಡಿಮೆ ಕೋಟ್ ಮಾಡಿದ ಸಂಸ್ಥೆಗೇ ಟೆಂಡರ್ ಅಲಾಟ್ ಮಾಡಿರೋದು ಪ್ಲಾಂಟ್ ಗುಣಮಟ್ಟದ ಬಗ್ಗೆಯೇ ಪ್ರಶ್ನೆ ಮೂಡಿದೆ.

Vijayasarthy SN | news18
Updated:January 11, 2019, 10:09 PM IST
ಬಿಬಿಎಂಪಿ ಹಾಟ್ ಮಿಕ್ಸಿಂಗ್ ಗೋಲ್ಮಾಲ್; ಶೇ. 49ರಷ್ಟು ಕಡಿಮೆ ಕೋಟ್ ಮಾಡಿದವರಿಗೆ ಟೆಂಡರ್
ರಸ್ತೆಗೆ ಟಾರ್ ಹಾಕುತ್ತಿರುವ ಒಂದು ಚಿತ್ರ
Vijayasarthy SN | news18
Updated: January 11, 2019, 10:09 PM IST
- ಶ್ಯಾಮ್ ಎಸ್.,

ಬೆಂಗಳೂರು(ಜ. 11): ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆಗುಂಡಿಯಿಂದ ಅನಾಹುತಗಳು ಆಗುತ್ತಲೇ ಇರುತ್ತೆ. ಇದನ್ನ ತಪ್ಪಿಸಲೆಂದು ಬಿಬಿಎಂಪಿ ಇದೀಗ 2002-03ರ ನಂತರ ಪುನಃ ನಗರದ ಬಿದರಹಳ್ಳಿ ಹೋಬಳಿ ಹಾಗೂ ಆನೇಕಲ್ ತಾಲ್ಲೂಕಿನ ಚಿಕ್ಕನಾಗಮಂಗಲದಲ್ಲಿ ಒಟ್ಟು 14.70 ಕೋಟಿ ರೂಪಾಯಿ ವೆಚ್ಚದಲ್ಲಿ ಎರಡು ಸ್ವಂತ ಹಾಟ್ ಮಿಕ್ಸಿಂಗ್ ಟಾರ್​ನ ಪ್ಲಾಂಟ್ ಸ್ಥಾಪಿಸೋಕೆ ಹೊರಟಿದೆ. ಇದಕ್ಕಾಗಿ ಪ್ರತ್ಯೇಕವಾಗಿ ಟೆಂಡರ್ ಕರೆದಿದ್ದು ನಾಲ್ವರ ಪೈಕಿ ತಾಂತ್ರಿಕವಾಗಿ ಎರಡು ಸಂಸ್ಥೆಗಳು ಅರ್ಹವಾಗಿದ್ದವು.

ಎಂ.ಎಸ್. ವೆಂಕಟೇಶ್ ಎಂಬುವರು ಪ್ರತಿ ಹಾಟ್ ಮಿಕ್ಸಿಂಗ್ ಪ್ಲಾಂಟ್ ಬಿಡಿಭಾಗಗಳ ಪೂರೈಕೆ ಹಾಗೂ ನಿರ್ಮಾಣಕ್ಕೆ ಕಾಂಟ್ರಾಕ್ಟ್ ಪಡ್ಕೊಂಡಿದ್ದು ಪಾಲಿಕೆ ಕೋಟ್ ಮಾಡಿದ 14.70 ಕೋಟಿ ದರಕ್ಕಿಂತ ಶೇಕಡ 48.39 ಕಡಿಮೆ ದರ ಕೋಟ್ ಮಾಡಿ ಕಾಂಟ್ರಾಕ್ಟ್ ಪಡ್ಕೊಂಡಿದ್ದಾರೆ. ಇವರ ಎದುರು ಎಂ. ವೆಂಕಟಾಚಲಪತಿ ಎಂಬುವರು ಶೇಕಡ 13.97 ರಷ್ಟು ಕಡಿಮೆ ದರ ಕೋಟ್ ಮಾಡಲಷ್ಟೇ ಸಾಧ್ಯವಾಗಿದೆ. ಇಷ್ಟು ಕಡಿಮೆ ದರ ಕೋಟ್ ಮಾಡಿರೋದ್ರಿಂದ ನಿರ್ಮಾಣವಾಗಲಿರುವ ಡಾಂಬರು ಘಟಕದ ಗುಣಮಟ್ಟದ ಮೇಲೆಯೇ ಸಂಶಯ ಏಳುವಂತಾಗಿದೆ ಎಂದು ಹೇಳ್ತಾರೆ ಬಿಜೆಪಿ ನಗರ ಘಟಕದ ವಕ್ತಾರ ಎನ್.ಆರ್.ರಮೇಶ್.

ಕೇವಲ ಹಾಟ್ ಮಿಕ್ಸಿಂಗ್ ಪ್ಲಾಂಟ್ ನಿರ್ಮಾಣ, ನಿರ್ವಹಣೆ ಅಷ್ಟೇ ಅಲ್ಲ 5 ವರ್ಷಗಳ ಕಾಲ ಆ ಎರಡು ಘಟಕಗಳಿಂದ ನಗರದಲ್ಲಿ ನಿರ್ವಹಣಾ ಅವಧಿ ಮುಗಿದ ರಸ್ತೆ ಗುಂಡಿಗಳನ್ನು, ರೋಡ್ ಕಟ್ಟಿಂಗ್​ಗಳನ್ನು ಡಾಂಬರ್​ನಿಂದ ಮುಚ್ಚುವ ಕಾಂಟ್ರಾಕ್ಟ್ ಕೂಡ ಇದೇ ಎಂ.ಎಸ್.ವೆಂಕಟೇಶ್ ಪಾಲಾಗಿದೆ. ಇಲ್ಲೂ ಶೇಕಡ 6ಕ್ಕಿಂತ ಕಡಿಮೆ ದರದಿಂದ ಹಿಡಿದು ಶೇಕಡ 26ರಷ್ಟು ಹೆಚ್ಚಿನ ದರದ ತನಕ ಕೋಟ್ ಮಾಡಿ ಕಾಂಟ್ರಾಕ್ಟ್ ಪಡೆದುಕೊಳ್ಳಲಾಗಿದೆ. ಈ ಬಗ್ಗೆ ಪಾಲಿಕೆ ಆಡಳಿತ ಗಮನಹರಿಸಬೇಕಾದ ಅಗತ್ಯವಿದೆ. ಏಕಂದ್ರೆ, ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿದರೂ ಗುತ್ತಿಗೆದಾರರಿಂದ ಮುಚ್ಚಿದ ರಸ್ತೆ ಗುಂಡಿಗಳ ಬಾಳಿಕೆ ಒಂದು ವಾರನೂ ಬರಲ್ಲ. ಇನ್ನು ಇಷ್ಟು ಕಡಿಮೆ ಕೋಟ್ ಮಾಡಿದ ಕಾಂಟ್ರಾಕ್ಟರ್ ಎಷ್ಟರ ಮಟ್ಟಿಗೆ ರಸ್ತೆ ಗುಂಡಿ ಮುಚ್ಚಲು ಗುಣಮಟ್ಟ ಕಾಪಾಡಿಕೊಳ್ತಾರೆ ಎಂಬ ಅನುಮಾನ ಮೂಡದೇ ಇರಲ್ಲ.

ಬಿಬಿಎಂಪಿಯ 800ಕ್ಕೂ ಹೆಚ್ಚು ಚದರ ಕಿಲೋ ಮೀಟರ್ ವಿಸ್ತೀರ್ಣದಲ್ಲಿ ಒಟ್ಟು 94 ಸಾವಿರ ರಸ್ತೆಗಳಿವೆ. ಈ ರಸ್ತೆಗಳ ಒಟ್ಟು ಉದ್ದ 13 ಸಾವಿರ ಕಿಲೋ ಮೀಟರ್. ಈ ರಸ್ತೆಗಳ ಅಭಿವೃದ್ಧಿಗೆ ಪಾಲಿಕೆ ಟೆಂಡರ್ ಕರೆದು ಕಾಂಟ್ರಾಕ್ಟರ್​ಗಳಿಂದ ಹೊಸದಾಗಿ ಡಾಂಬರ್ ಹಾಕಿಸುತ್ತಲೇ ಇರುತ್ತೆ. ಆದ್ರೆ ನಗರದ ಹೊರವಲಯಗಳಿಂದ ಟಾರಿನ ಉಷ್ಣಾಂಶವನ್ನು ಕಾಯ್ದುಕೊಳ್ಳದೆ, ಎಷ್ಟು ಪ್ರಮಾಣದಲ್ಲಿ ಬಿಟುಮಿನ್ ಅನ್ನು ಹಾಟ್ ಮಿಕ್ಸ್ ನಲ್ಲಿ ಹಾಕಬೇಕೋ ಅಷ್ಟು ಹಾಕುತ್ತಿಲ್ಲ. ಹೀಗಾಗಿ, ನಗರದಲ್ಲಿನ ರಸ್ತೆಗೆ ಪ್ರತಿವರ್ಷ 2,500 ರಿಂದ 3 ಸಾವಿರ ರೂಪಾಯಿ ಕೋಟಿ ಖರ್ಚು ಮಾಡಿದರೂ ರಸ್ತೆ ಗುಣಮಟ್ಟ ಮಾತ್ರ ಕಾಪಾಡೋಕೆ ಆಗ್ತಿಲ್ಲ.

ಆದ್ದರಿಂದ ಬಿಬಿಎಂಪಿ ಕೇವಲ ರಸ್ತೆಗುಂಡಿ ಮುಚ್ಚಲಷ್ಟೆ ಅಲ್ಲ, ರಸ್ತೆ ನಿರ್ಮಾಣಕ್ಕೂ ಹಾಟ್ ಮಿಕ್ಸ್ ಪ್ಲಾಂಟ್​ನಿಂದ ತಾನೇ ಹಾಟ್ ಮಿಕ್ಸನ್ನ ಪೂರೈಸಿ, ಕಾಂಟ್ರಾಕ್ಟರುಗಳಿಗೆ ರಸ್ತೆಗೆ ಟಾರ್ ಹಾಕುವ ಗುತ್ತಿಗೆಯನ್ನು ಮಾತ್ರ ಕೊಟ್ಟರೆ ರಸ್ತೆಯ ಗುಣಮಟ್ಟ ಕಾಪಾಡಬಹುದು ಎಂಬ ಅಭಿಪ್ರಾಯ ವ್ಯಕ್ತವಾಗ್ತಿದೆ.
First published:January 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...