HOME » NEWS » State » BBMP HAVE DONE MASTER PLAN FOR DISTRIBUTE CORONA VACCINE RHHSN

ಕೊರೋನಾ ಲಸಿಕೆ ಮಹಾ ಅಭಿಯಾನ: ಗುರಿ ತಲುಪಲು ಹೊಸ ತಂತ್ರದ ಮೊರೆ ಹೋದ ಬಿಬಿಎಂಪಿ!

ಲಸಿಕೆ ಮಹಾ ಅಭಿಯಾನಕ್ಕೆ ಹಿನ್ನಡೆ ಆಗುತ್ತಿರುವ ಹಿನ್ನೆಲೆ ಬಿಬಿಎಂಪಿ ಲಸಿಕೆ ಹಂಚಿಕೆ ಪ್ರಮಾಣ ಹೆಚ್ವಿಸಲು ಮುಂದಾಗಿದೆ. ಲಸಿಕೆ ಪಡೆಯಲು ನಿಗದಿಯಾದವರು ಬಾರದಿದ್ದಾಗ ಪೋರ್ಟಲ್ ನಲ್ಲಿ ನೋಂದಣಿ‌ ಮಾಡಿದ ಬೇರೆ ಸಿಬ್ಬಂದಿ ಲಸಿಕೆ ಪಡೆಯಬಹುದು ಅಂತ ಬಿಬಿಎಂಪಿ ನಿರ್ಧಾರ ಮಾಡಿಕೊಂಡಿದೆ.

news18-kannada
Updated:January 26, 2021, 7:48 PM IST
ಕೊರೋನಾ ಲಸಿಕೆ ಮಹಾ ಅಭಿಯಾನ: ಗುರಿ ತಲುಪಲು ಹೊಸ ತಂತ್ರದ ಮೊರೆ ಹೋದ ಬಿಬಿಎಂಪಿ!
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು; ಮೊದಲ ಹಂತದ ಕೊರೋನಾ ಲಸಿಕೆ‌ ಮಹಾ ಅಭಿಯಾ‌ನಕ್ಕೆ ತೀವ್ರ ಹಿನ್ನಡೆ ಆಗಿದೆ. ಲಸಿಕೆ‌ ಹಂಚಿಕೆಗೂ‌ ಮೊದಲಿದ್ದ ಲೆಕ್ಕಾಚಾರಗಳೆಲ್ಲವೂ ಈಗ ಬುಡಮೇಲಾಗಿದೆ. ನಿರೀಕ್ಷಿತ ಮಟ್ಟದಲ್ಲಿ‌ ಲಸಿಕೆ ಹಂಚಿಕೆ ಆಗಿಲ್ಲ. ಹೀಗಾಗಿ ಲಸಿಕೆ ಮಹಾ ಅಭಿಯಾನವನ್ನು ಯಶಸ್ವಿ ಮಾಡಲು ಬಿಬಿಎಂಪಿ ಮಾಸ್ಟರ್ ಪ್ಲ್ಯಾನ್ ಒಂದನ್ನು ಮಾಡಿಕೊಂಡಿದೆ. ಲಸಿಕೆ ಮಹಾ ಅಭಿಯಾನ ಶುರುವಾಗಿ ಹತ್ತಕ್ಕೂ ಅಧಿಕ ದಿನಗಳಾಯ್ತು. ಆದರೂ ನಿರೀಕ್ಷಿತ ಮಟ್ಟದಲ್ಲಿ ಲಸಿಕೆ ಹಂಚಲು ಸಾಧ್ಯ ಆಗಲಿಲ್ಲ. ಲಸಿಕೆ ಹಂಚಿಕೆ ಅಭಿಯಾನದಲ್ಲಿ ದೇಶದ ನಂಬರ್ 1 ರಾಜ್ಯ ಎನಿಸಿಕೊಂಡಿರುವ ಕರ್ನಾಟಕದಲ್ಲೂ ಲಸಿಕೆ ಮಹಾ ಅಭಿಯಾನ ನಿರೀಕ್ಷಿತ ಮಟ್ಟದ ಯಶಸ್ಸು ಕಾಣಲಿಲ್ಲ. ಅದರಲ್ಲೂ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದ ಬೆಂಗಳೂರಲ್ಲೂ ಟಾರ್ಗೆಟ್ ರೀಚ್ ಆಗಲು ಸಾಧ್ಯವಾಗದೆ, ಲಸಿಕೆ ಮಹಾ ಅಭಿಯಾನಕ್ಕೆ ತೀವ್ರ ಹಿನ್ನಡೆ ಆಗಿದೆ. ಈ ಹಿನ್ನೆಲೆ ನಗರದಲ್ಲಿ ಲಸಿಕೆ ಅಭಿಯಾನವನ್ನು ಯಶಸ್ವಿಯಾಗಿಸಲು ಮಾಸ್ಟರ್ ಪ್ಲ್ಯಾನ್ ಒಂದನ್ನು ಮಾಡಲಾಗಿದೆ.

ಹಲವು ಕಾರಣಗಳನ್ನು ಕೊಟ್ಟು ಲಸಿಕೆ ಹಾಕಿಸಿಕೊಳ್ಳೋಕೆ ಹಿಂದೇಟು ಹಾಕುತ್ತಿದ್ದಾರೆ ಆರೋಗ್ಯ ಸಿಬ್ಬಂದಿಗಳು. ಹೀಗಾಗಿ ನಿರೀಕ್ಷಿತ ಮಟ್ಟದಲ್ಲಿ‌ ಲಸಿಕೆ ಹಂಚಿಕೆಯಾಗದೆ ಅಭಿಯಾನಕ್ಕೆ ಹಿನ್ನಡೆಯಾಗಿದೆ. ಈ ಹಿನ್ನೆಲೆ ಟಾರ್ಗೆಟ್ ರೀಚ್ ಆಗದೆ ಪಾಲಿಕೆ ಮುಖಭಂಗ ಅನುವಿಸಿದೆ. ಇದನ್ನು ಸರಿಪಡಿಸಲು ಇದೀಗ ಪಾಲಿಕೆ ಮುಂದಾಗಿದೆ. ಈವರೆಗೆ ಪ್ರತಿ ಕೇಂದ್ರಗಳಲ್ಲಿ 100 ಮಂದಿಗೆ ಲಸಿಕೆ ಹಂಚಿಕೆಯಾಗುತ್ತಿತ್ತು. ಈ 100 ಮಂದಿಯ ಲಿಸ್ಟ್ ಮೊದಲೇ ಬಿಬಿಎಂಪಿ ಸಿದ್ಧಪಡಿಸಿಕೊಳ್ಳುತ್ತಿತ್ತು. ಈ ಪ್ರಕಾರ ಅವರ ಮೊಬೈಲ್ ಗೆ ಸಂಪರ್ಕಿಸಿ ಅವರನ್ನು ಟ್ರ್ಯಾಕ್ ಮಾಡಲಾಗ್ತಿತ್ತು. ಆದರೆ ಸೈಡ್ ಎಫೆಕ್ಟ್ ಭಯದಿಂದ ದೊಡ್ಡ ಸಂಖ್ಯೆಯ ಸಿಬ್ಬಂದಿಗಳು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಇನ್ಮುಂದೆ ನಿಗದಿಯಾದ ಸಿಬ್ಬಂದಿ ಲಸಿಕೆ ಹಾಕಿಸಿಕೊಳ್ಳಲು ಗೈರಾದರೆ ಇತರೆ ಸಿಬ್ಬಂದಿಗಳಿಗೆ ಲಸಿಕೆ ಹಾಕೋಕೆ ನಿರ್ಧಾರ ಮಾಡಿದೆ ಪಾಲಿಕೆ.

ಇದನ್ನು ಓದಿ: ಮೃತದೇಹದ ಸೀರೆ ಗಂಟಿನಲ್ಲಿ ಸಿಕ್ಕ ಚೀಟಿಯಿಂದ 16 ಮಹಿಳೆಯರನ್ನು ಕೊಂದ ಸೈಕೋ ಕಿಲ್ಲರ್ ಬಂಧನ

ಹೌದು, ನಿಗದಿಯಾದವರು ಬಾರದಿದ್ದಾಗ ಬೇರೆಯವರಿಗೆ ಲಸಿಕೆ ಪಡೆಯಲು ಅವಕಾಶ ಮಾಡಿಕೊಟ್ಟಿದೆ ಬಿಬಿಎಂಪಿ. ಪೋರ್ಟಲ್ ನಲ್ಲಿ ನೋಂದಣಿ ಮಾಡಿದ ಸಿಬ್ಬಂದಿಗಳು ಯಾರಿದ್ದರೂ ಲಸಿಕೆ ಹಾಕಿಸಿಕೊಂಡರೆ ಸಮಸ್ಯೆ ಇಲ್ಲ ಅಂತ ಹೇಳಿದ್ದಾರೆ ಪಾಲಿಕೆ ಆಯುಕ್ತರು ಮಂಜುನಾಥ್ ಪ್ರಸಾದ್. ಆದರೆ ಕೋವಿಡ್ ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಳ್ಳುವುದು ಮಾತ್ರ ಕಡ್ಡಾಯ. ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲಾ ನೋಡಲ್ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಅಂತ ಆಯುಕ್ತ ಮಂಜುನಾಥ್ ಪ್ರಸಾದ್ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
Youtube Video

ಒಟ್ಟಾರೆಯಾಗಿ ಲಸಿಕೆ ಮಹಾ ಅಭಿಯಾನಕ್ಕೆ ಹಿನ್ನಡೆ ಆಗುತ್ತಿರುವ ಹಿನ್ನೆಲೆ ಬಿಬಿಎಂಪಿ ಲಸಿಕೆ ಹಂಚಿಕೆ ಪ್ರಮಾಣ ಹೆಚ್ವಿಸಲು ಮುಂದಾಗಿದೆ. ಲಸಿಕೆ ಪಡೆಯಲು ನಿಗದಿಯಾದವರು ಬಾರದಿದ್ದಾಗ ಪೋರ್ಟಲ್ ನಲ್ಲಿ ನೋಂದಣಿ‌ ಮಾಡಿದ ಬೇರೆ ಸಿಬ್ಬಂದಿ ಲಸಿಕೆ ಪಡೆಯಬಹುದು ಅಂತ ಬಿಬಿಎಂಪಿ ನಿರ್ಧಾರ ಮಾಡಿಕೊಂಡಿದೆ.
  • ವರದಿ- ಆಶಿಕ್ ಮುಲ್ಕಿ

Published by: HR Ramesh
First published: January 26, 2021, 7:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories