ಬೆಂಗಳೂರು: ಮತದಾರರ (Voters) ಖಾಸಗಿ ಮಾಹಿತಿಯನ್ನು ಅಕ್ರಮವಾಗಿ ಸಂಗ್ರಹಿಸಿದ್ದ ಆರೋಪ ಹೊತ್ತಿರುವ ಬೆಂಗಳೂರಿನ ಚಿಲುಮೆ ಸಂಸ್ಥೆಗೆ (Chilume organization) ಇದೀಗ ಮತ್ತೊಂದು ಕಂಟಕ ಎದುರಾಗಿದೆ. ಈಗಾಗಲೇ ವೋಟರ್ ಐಡಿ ಹಗರಣದಲ್ಲಿ (Voter ID Scam) ತನಿಖೆ ಎದುರಿಸುತ್ತಿರುವ ಚಿಲುಮೆ ಸಂಸ್ಥೆಯನ್ನು ಕಪ್ಪು ಪಟ್ಟಿಗೆ (blacklist) ಸೇರಿಸಲಾಗಿದೆ. ಬಿಬಿಎಂಪಿ (BBMP) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (Chief Commissioner Tushar Girinath) ಚಿಲುಮೆ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಿ ಆದೇಶ ಹೊರಡಿಸಿದ್ದಾರೆ. ಚಿಲುಮೆ ಸಂಸ್ಥೆಗೆ ಈಗಾಗಲೇ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗಿದೆ. ಒಂದೆಡೆ ಚಿಲುಮೆ ಸಂಸ್ಥೆಯ ವಿರುದ್ದ ರಾಜ್ಯ ಚುನಾವಣಾ ಆಯೋಗ (State Election Commission) ತನಿಖೆ ನಡೆಸುತ್ತಿದ್ದರೆ, ಮತ್ತೊಂದೆಡೆ ಪೊಲೀಸ್ ಇಲಾಖೆಯಿಂದಲೂ (Police Department) ಚಿಲುಮೆ ಸಂಸ್ಥೆಯ ಅಕ್ರಮದ ಬಗ್ಗೆ ತನಿಖೆ ನಡೆಯುತ್ತಿದೆ. ಇದರ ಮಧ್ಯೆ ಇಡೀ ಚಿಲುಮೆ ಸಂಸ್ಥೆಯನ್ನೇ ಬಿಬಿಎಂಪಿ ಕಪ್ಪು ಪಟ್ಟಿಗೆ ಸೇರಿಸಿ ಆದೇಶಿಸಿರುವುದು ಚಿಲುಮೆಗೆ ಭಾರೀ ಹಿನ್ನೆಡೆಯಾಗಿದೆ.
ಚಿಲುಮೆ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಿ ಬಿಬಿಎಂಪಿ ಆದೇಶ
ಮತದಾರರ ದತ್ತಾಂಶ ಕಳವು ಪ್ರಕರಣದ ಹಿನ್ನೆಲೆಯಲ್ಲಿ ಬೆಂಗಳೂರಿನ ಚಿಲುಮೆ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ. ಮತದಾನದ ಬಗ್ಗೆ ಜಾಗೃತಿಗಾಗಿ ಬಿಬಿಎಂಪಿ ನೀಡಿದ್ದ ಒಪ್ಪಿಗೆ ದುರುಪಯೋಗ ಪಡಿಸಿಕೊಂಡ ಹಿನ್ನೆಲೆಯಲ್ಲಿ ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಮತದಾರರ ವೈಯಕ್ತಿಕ ಡಿಟೈಲ್ಸ್ ಸಂಗ್ರಹ ಹಾಗೂ ಮಾರಾಟದ ಆರೋಪ ಚಿಲುಮೆ ಸಂಸ್ಥೆ ಎದುರಿಸುತ್ತಿದೆ.
ಮುಂದಿನ ದಿನಗಳಲ್ಲಿ ಚಿಲುಮೆಗಿಲ್ಲ ಯಾವುದೇ ಟೆಂಡರ್
ಚಿಲುಮೆ ಸಂಸ್ಥೆ ಕಪ್ಪು ಪಟ್ಟಿಗೆ ಸೇರಿರುವುದರಿಂದ ಯಾವುದೇ ಯೋಜನೆಗಳು ಸಂಸ್ಥೆಗೆ ಸಿಗುವುದಿಲ್ಲ. ಬಿಬಿಎಂಪಿಯಲ್ಲಿ ಮುಂದಿನ ದಿನಗಳಲ್ಲಿ ಚಿಲುಮೆ ಸಂಸ್ಥೆಗೆ ಯಾವುದೇ ಕಾರ್ಯಕ್ರಮ ಹಾಗೂ ಟೆಂಡರ್ ಗಳನ್ನು ನೀಡದಂತೆ ಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಆದೇಶಿಸಿದ್ದಾರೆ.
ಇದನ್ನೂ ಓದಿ: Explained: ಚುನಾವಣಾ ಹೊಸ್ತಿಲಲ್ಲಿ ಭುಗಿಲೆದ್ದ ಮತದಾರರ ವೈಯಕ್ತಿಕ ಮಾಹಿತಿ ಕಳ್ಳತನದ ವಿವಾದ: ಏನಿದು 'ಚಿಲುಮೆ' ಅಕ್ರಮ?
ಚಿಲುಮೆಗೆ ಸಂಕಷ್ಟದ ಮೇಲೆ ಸಂಕಷ್ಟ
ಮತದಾನದ ಬಗ್ಗೆ ಜಾಗೃತಿಗಾಗಿ ಬಿಬಿಎಂಪಿ ನೀಡಿದ್ದ ಒಪ್ಪಿಗೆ ದುರುಪಯೋಗ ಪಡಿಸಿಕೊಂಡ ಗಂಭೀರ ಆರೋಪ ಚಿಲುಮೆ ಸಂಸ್ಥೆ ಮೇಲಿದೆ. ಒಂದೆಡೆ ರಾಜ್ಯ ಚುನಾವಣಾ ಆಯೋಗ ಚಿಲುಮೆ ಸಂಸ್ಥೆಯ ವಿರುದ್ದ ತನಿಖೆ ನಡೆಸುತ್ತಿದೆ. ಮತ್ತೊಂದೆಡೆ ಪೊಲೀಸ್ ಇಲಾಖೆಯೂ ಚಿಲುಮೆ ಸಂಸ್ಥೆ ವಿರುದ್ಧ ತನಿಖೆ ಕೈಗೊಂಡಿದೆ. ಈ ನಡುವೆಯೇ ಬಿಬಿಎಂಪಿಯಿಂದ ಕಪ್ಪು ಪಟ್ಟಿಗೆ ಸೇರಿಸಲ್ಪಟ್ಟಿದೆ. ಇದರಿಂದ ಚಿಲುಮೆ ಸಂಸ್ಥೆಗೆ ಭಾರೀ ಹಿನ್ನೆಡೆಯಾಗಿದೆ.
ಆರೋಪಿಗಳಿಗಿಲ್ಲ ಜಾಮೀನು ಭಾಗ್ಯ!
ಈಗಾಗಲೇ ಚಿಲುಮೆ ಸಂಸ್ಥೆ ಮುಖ್ಯಸ್ಥ ರವಿಕುಮಾರ್, ವೋಟರ್ ಐಡಿ ಹಗರಣದ ಕಿಂಗ್ ಪಿನ್ ಕೆಂಪೇಗೌಡ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ಚಿಲುಮೆ ಸಂಸ್ಥೆ ಇಬ್ಬರು, ಬಿಬಿಎಂಪಿ ನಾಲ್ವರು ಅಧಿಕಾರಿಗಳ ಅರ್ಜಿ ವಜಾ ಗೊಳಿಸಲಾಗಿದ್ದು, 3 ನೇ ಎಸಿಎಂಎಂ ಕೋರ್ಟ್ ಜಾಮೀನು ನಿರಾಕರಿಸಿದೆ. ಚಿಲುಮೆಯ ಬಿ ವಿ ಧರ್ಮೇಶ್ & ರೇಣುಕಪ್ರಸಾದ್ ಬಿಬಿಎಂಪಿ ಅಧಿಕಾರಿಗಳಾದ ಚಂದ್ರಶೇಖರ್, ಸುಹೇಲ್ ಅಹ್ಮದ್, ಬಿ ವಿ ಭೀಮಾಶಂಕರ್ ಹಾಗೂ ಎಸ್ ಮಹೇಶ್ ಜಾಮೀನು ಅರ್ಜಿ ಈಗಾಗಲೇ ವಜಾಗೊಂಡಿದೆ.
ಇದನ್ನೂ ಓದಿ: Voters Data Steal: ದುಡ್ಡು ಕೊಟ್ರೆ ಮತದಾರನ ಮಾಹಿತಿ, ರವಿಕುಮಾರ್ ಸೋದರನ ಬಂಧನವೇ ರೋಚಕ
ಎಲ್ಲೆಲ್ಲಿ ಮತದಾರರ ಮಾಹಿತಿಗೆ ಕನ್ನ?
ಬೆಂಗಳೂರಿನ ಸಿ.ವಿ ರಾಮನ್ ನಗರ, ಬ್ಯಾಟರಾಯನಪುರ, ಚಿಕ್ಕಪೇಟೆ, ಹೆಬ್ಬಾಳ ಸೇರಿದಂತೆ 8 ಕ್ಷೇತ್ರಗಳ ಮಾಹಿತಿ ಸಂಗ್ರಹಿಸಿ ಈ ಮಾಹಿತಿಯನ್ನು ರಾಜಕಾರಣಿಗಳ ಬಳಿ ಹಣ ಪಡೆದು ಮಾರಾಟ ಮಾಡಿರುವ ಅನುಮಾನಗಳು ವ್ಯಕ್ತವಾಗಿವೆ. ಈ ಅನುಮಾನದ ಹಿನ್ನೆಲೆ ಚಿಲುಮೆ ಸಂಸ್ಥೆಯ ಬ್ಯಾಂಕ್ ಖಾತೆಯನ್ನು ಪರಿಶೀಲನೆ ಮಾಡಲಾಗಿತ್ತು. ಇನ್ನೊಂದೆಡೆ ಚಿಲುಮೆ ಸಂಸ್ಥೆ ಈ ಸಮೀಕ್ಷೆ ನಡೆಸಲು ಕಾಲೇಜು ವಿದ್ಯಾರ್ಥಿಗಳನ್ನು ಬಳಸಿಕೊಂಡಿರುವ ಬಗ್ಗೆ ತಿಳಿದು ಬಂದಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ