• Home
  • »
  • News
  • »
  • state
  • »
  • Street Light: ಮಹದೇವಪುರದಲ್ಲಿ ಬೀದಿದೀಪಗಳ ಅಳವಡಿಕೆ ಶೇ 60 ಪೂರ್ಣ; ಕಗ್ಗತ್ತಲಿನಲ್ಲಿ ವೈಟ್​ಫೀಲ್ಡ್​ ಪ್ರದೇಶಗಳು

Street Light: ಮಹದೇವಪುರದಲ್ಲಿ ಬೀದಿದೀಪಗಳ ಅಳವಡಿಕೆ ಶೇ 60 ಪೂರ್ಣ; ಕಗ್ಗತ್ತಲಿನಲ್ಲಿ ವೈಟ್​ಫೀಲ್ಡ್​ ಪ್ರದೇಶಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಸ್ಕಾಂ ತ್ರಿ ಫೇಸ್ ಮೀಟರ್‌ಗಳ ಕೊರತೆಯನ್ನು ಎದುರಿಸಿತ್ತು. ಈ ಮೀಟರ್‌ಗಳನ್ನು ಹೆಚ್ಚುವರಿ ವಿದ್ಯುತ್ ಸರಬರಾಜಿಗೆ ಬಳಸಲಾಗುತ್ತದೆ. ಮೀಟರ್‌ಗಳು ಲಭ್ಯವಾಗುವವರೆಗೆ ಕೆಲವು ವಾರಗಳ ಕಾಲ ಕೆಲಸವು ವಿಳಂಬಗೊಂಡಿತು.

  • Share this:

ಮಹಾದೇವಪುರ (Mahadevapura, Bengaluru) ಕ್ಷೇತ್ರದಲ್ಲಿ ಬಿಬಿಎಂಪಿಯು 9,827 ಹೊಸ ಬೀದಿದೀಪಗಳನ್ನು ಅಳವಡಿಸುವ ಯೋಜನೆಯಲ್ಲಿ ಈಗಾಗಲೇ 60% ದಷ್ಟು ಕೆಲಸವನ್ನು ಪೂರ್ಣಗೊಳಿಸಿದೆ. 5,000 ಕ್ಕಿಂತಲೂ ಹೆಚ್ಚಿನ ಎಲ್‌ಇಡಿ ಬೀದಿ ದೀಪಗಳನ್ನು ಈ ಪ್ರದೇಶದಲ್ಲಿ ಈಗಾಗಲೇ ಅಳವಡಿಸಲಾಗಿದೆ.  ಮಹಾದೇವಪುರ ವಲಯದಲ್ಲಿ ಬೀದಿದೀಪಗಳು ಇಲ್ಲದೇ ರಸ್ತೆಯಲ್ಲಿ ಗಾಡಾಂಧಕಾರ ಕವಿದಿದ್ದು ಸಂಚರಿಸಲು ಕಷ್ಟವಾಗುತ್ತಿದೆ ಎಂದು ನಿವಾಸಿಗಳು ಹಲವು ಬಾರಿ ಅಧಿಕಾರಿಗಳಿಗೆ ದೂರು ನೀಡಿದ್ದರು. ಇದೀಗ ಹೆಚ್ಚಿನ ಪ್ರದೇಶಗಳು ಬೆಳಕಿನಿಂದ ಝಗಮಗಿಸುತ್ತಿವೆ. ಇನ್ನೆರಡು ತಿಂಗಳುಗಳಲ್ಲಿ ಉಳಿದ 40% ಕೆಲಸವನ್ನು ಮುಗಿಸುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಬೀದಿದೀಪಗಳ ಅಳವಡಿಕೆಯಲ್ಲಿ ವಿಳಂಬವುಂಟಾಗಲು ಕಾರಣವೇನು?


ಆರಂಭದಲ್ಲಿ ಸರಕಾರಿ ಅಧಿಕಾರಿಗಳು ಬೀದಿದೀಪಗಳನ್ನು ಅಳವಡಿಸುವ ಯೋಜನೆಯನ್ನು ಅಕ್ಟೋಬರ್‌ನೊಳಗೆ ಮುಗಿಸುವ ಗುರಿಯನ್ನು ಹೊಂದಿದ್ದರು ಅದಾಗ್ಯೂ ಮಳೆ ಹಾಗೂ ಬೇರೆ ಬೇರೆ ವಿಭಾಗಗಳಿಂದ ಅನುಮತಿ ಪಡೆಯುವ ಪ್ರಕ್ರಿಯೆ ಮೊದಲಾದ ಕಾರಣಗಳಿಂದ ಯೋಜನೆಯಲ್ಲಿ ವಿಳಂಬವುಂಟಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.


ಯೋಜನೆಯನ್ನು ಎರಡು ಹಂತಗಳಲ್ಲಿ ಅಂದರೆ ರೂ 15 ಕೋಟಿ ಹಾಗೂ ರೂ 10 ಕೋಟಿ ಒಪ್ಪಂದಗಳಲ್ಲಿ ಆರಂಭಿಸಲಾಗಿದೆ. ರೂ 15 ಕೋಟಿಯ ಮೊದಲ ಹಂತವು ಎಲ್‌ಇಡಿ ಲೈಟ್‌ಗಳ ಅಳವಡಿಕೆಯನ್ನು ಒಳಗೊಂಡಿದೆ.


ಮೊದಲ ಹಂತದಲ್ಲಿ ಪ್ರಸ್ತುತ ಪೋಲ್‌ಗಳಲ್ಲಿ ಎಲ್‌ಇಡಿ ಲೈಟ್‌ಗಳನ್ನು ಬದಲಿಸಲಾಗಿದ್ದು 5,000 ಕ್ಕಿಂತಲೂ ಹೆಚ್ಚಿನ ಲೈಟ್‌ಗಳನ್ನು ಅಳವಡಿಸಲಾಗಿದೆ. ಇನ್ನು ಯೋಜನೆಯ ಎರಡನೆಯ ಹಂತವೆಂದರೆ ಹೊಸ ಇಲೆಕ್ಟ್ರಿಕ್ ಕಂಬಗಳು ಹಾಗೂ ಲೈಟ್‌ಗಳನ್ನು ಅಳವಡಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ ಎಂದು ಮಹಾದೇವಪುರ ಟಾಸ್ಕ್ ಫೋರ್ಸ್ ಕಾರ್ಯದರ್ಶಿ ಜಯಕುಮಾರ್ ತಿಳಿಸಿದ್ದಾರೆ.


ಹೈಮಾಸ್ಟ್ ಲೈಟ್‌ಗಳ ಅಳವಡಿಕೆ


ದೊಡ್ಡನಕುಂದಿ ಜಂಕ್ಶನ್, ಗ್ರಾಫೈಟ್ ಇಂಡಿಯಾ ಜಂಕ್ಶನ್, ಹಗದೂರ್ ಜಂಕ್ಶನ್, ಸಿಎಮ್‌ಆರ್‌ಐಟಿ ಜಂಕ್ಶನ್, ಎಇಟಿ ಕಾಲೇಜು ರಸ್ತೆ, ಕಾಡುಗೋಡಿ ಟ್ರಾಫಿಕ್ ಪೊಲೀಸ್ ಸ್ಟೇಶನ್, ಇಬ್ಲುರ್ ಜಂಕ್ಶನ್, ವೈ ಜಂಕ್ಶನ್, ಕಾಡುಗೋಡಿ ಹಾಗೂ ಇತರ ಸ್ಥಳಗಳು ಸೇರಿದಂತೆ 23 ಸ್ಥಳಗಳಲ್ಲಿ ಹೈ ಮಾಸ್ಟ್ ಲೈಟ್‌ಗಳನ್ನು ಅಳವಡಿಸಲಾಗಿದೆ.


ಒಂದಕ್ಕಿಂತ ಹೆಚ್ಚಿನ ಲೈಟಿಂಗ್‌ಗಳನ್ನೊಳಗೊಂಡ ಲ್ಯುಮಿನರಿ ರಿಂಗ್ ಅನ್ನು ಸುತ್ತಲೂ ಜೋಡಣೆ ಮಾಡುವ ಮೂಲಕ ಉದ್ದನೆಯ ಕಂಬಗಳಿಗೆ ಈ ಲೈಟ್‌ಗಳನ್ನು ಅಳವಡಿಸಲಾಗುವುದರಿಂದ ಅವು ಹೆಚ್ಚಿನ ಪ್ರದೇಶವನ್ನು ಬೆಳಗಿಸುತ್ತವೆ.


ಯೋಜನೆಯ 60% ಕೆಲಸ ಪೂರ್ಣಗೊಂಡಿದೆ


ಯೋಜನೆಯನ್ನು ಪೂರ್ಣಗೊಳಿಸುವಲ್ಲಿ ಏಕೆ ವಿಳಂಬವಾಯಿತು ಎಂದು ತಿಳಿಸಿದ ಜಯಕುಮಾರ್ ಬಿಬಿಎಂಪಿ ಹಾಗೂ ಬೆಸ್ಕಾಂ ಮಧ್ಯೆ ಆಂತರಿಕ ಸಹಯೋಗದ ಸಮಸ್ಯೆಗಳುಂಟಾಗಿದ್ದವು ಎಂದು ಹೇಳಿದ್ದಾರೆ.


ಬೆಸ್ಕಾಂ ಮೀಟರ್ ಹಾಗೂ ಕನೆಕ್ಶನ್ ಅನ್ನು ಒದಗಿಸಬೇಕಿತ್ತು. ಇದಲ್ಲದೆ ಬಿಬಿಎಂಪಿ ಇಲೆಕ್ಟ್ರಿಕಲ್ ವಿಭಾಗವು ಕೆಲಸವನ್ನು ಆರಂಭಿಸುವ ಮುನ್ನ ಬಿಬಿಎಂಪಿ ಸಿವಿಲ್ ಇಂಜಿನಿಯರಿಂಗ್ ವಿಭಾಗ ಹಾಗೂ ಬೆಂಗಳೂರು ಟ್ರಾಫಿಕ್ ಪೊಲೀಸರ ಅನುಮತಿಯನ್ನು ಪಡೆಯಬೇಕಾಗಿತ್ತು.


ಇದನ್ನೂ ಓದಿ:  Hire Benakal: ಯುನೆಸ್ಕೋದ ನಾಮನಿರ್ದೇಶಿತ ಪಟ್ಟಿಯಲ್ಲಿ ಸ್ಥಾನ ಪಡೆದ ಹಿರೇ ಬೆಣಕಲ್ ಬಗ್ಗೆ ನಿಮಗೆಷ್ಟು ಗೊತ್ತು?


ಕೆಲವೊಂದು ಸಂದರ್ಭಗಳಲ್ಲಿ ಭೂಗತ ಪೈಪ್‌ಗಳು ಹಾನಿಗೊಳ್ಳುವ ಸಂಭವ ಕೂಡ ಇರುತ್ತಿತ್ತು, ಹೀಗೆ ಹಲವಾರು ಅಡ್ಡಿ ಆತಂಕಗಳನ್ನು ನಿವಾರಿಸಿಕೊಂಡೇ ಬಿಬಿಎಂಪಿ 60% ದಷ್ಟು ಕೆಲಸವನ್ನು ಪೂರ್ಣಗೊಳಿಸಿದೆ ಎಂದು ತಿಳಿಸಿದ್ದಾರೆ.


ಕತ್ತಲೆಯಲ್ಲಿರುವ ವೈಟ್‌ಫೀಲ್ಡ್, ಬೀದಿದೀಪಗಳ ಕೊರತೆ


ಬೆಸ್ಕಾಂ ತ್ರಿ ಫೇಸ್ ಮೀಟರ್‌ಗಳ ಕೊರತೆಯನ್ನು ಎದುರಿಸಿತ್ತು. ಈ ಮೀಟರ್‌ಗಳನ್ನು ಹೆಚ್ಚುವರಿ ವಿದ್ಯುತ್ ಸರಬರಾಜಿಗೆ ಬಳಸಲಾಗುತ್ತದೆ. ಮೀಟರ್‌ಗಳು ಲಭ್ಯವಾಗುವವರೆಗೆ ಕೆಲವು ವಾರಗಳ ಕಾಲ ಕೆಲಸವು ವಿಳಂಬಗೊಂಡಿತು.


ಮಳೆಯಿಂದ ಕೂಡ ಕೆಲಸವು ವಿಳಂಬಗೊಂಡಿತು, ಏಕೆಂದರೆ ಮಳೆಯಿಂದಾಗಿ ಇಲೆಕ್ಟ್ರಿಕ್ ಕೆಲಸವನ್ನು ಮಾಡಲಾಗಲಿಲ್ಲ ಎಂದು ಜಯಕುಮಾರ್ ತಿಳಿಸಿದ್ದಾರೆ.


ಇದನ್ನೂ ಓದಿ:  JDS Leader Death: ಚನ್ನಪಟ್ಟಣದ ಹಿರಿಯ ಜೆಡಿಎಸ್​ ಮುಖಂಡ ಸಿಂ ಲಿಂ ನಾಗರಾಜು ವಿಧಿವಶ


ಸ್ಥಳೀಯರ ಪ್ರತಿಕ್ರಿಯೆ


ಸರ್ಜಾಪುರ, ಕಾರ್ಮೆಲರಾಮ್, ವೈದೇಹಿ ಆಸ್ಪತ್ರೆ ಜಂಕ್ಶನ್, ಬೆಳಗೆರೆ, ವರ್ತೂರು ಗಂಜೂರು ಮೊದಲಾದ ಪ್ರದೇಶಗಳಲ್ಲಿ ಬೀದಿದೀಪಗಳ ಅಳವಡಿಕೆ ಇನ್ನೂ ನಡೆಯಬೇಕಾಗಿದೆ ಎಂದು ನಿವಾಸಿಗಳು ಅಭಿಪ್ರಾಯಪಟ್ಟಿದ್ದಾರೆ.


ಈ ಪ್ರದೇಶಗಳಲ್ಲಿ ಹಲವಾರು ಸಮಯಗಳಿಂದ ಬೀದಿದೀಪಗಳೇ ಇಲ್ಲ ಎಂದು ನಿವಾಸಿಗಳು ತಿಳಿಸಿದ್ದಾರೆ.

Published by:Mahmadrafik K
First published: