ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ (Doddaballapur, Bengaluru Rural) ಬಿಬಿಎಂಪಿ ಕಸದ ಲಾರಿಗೆ (BBMP Garbage Lorry) ಇಬ್ಬರು ಬಲಿಯಾಗಿದ್ದಾರೆ. ಬೈಕ್ಗೆ ಕಸದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ. ಮಹೇಶ್ (27) ಹಾಗೂ ಮಾರುತಿ (24) ಮೃತ ದುರ್ದೈವಿಗಳು. ಮಧುರೈ ದೇವಾಲಯಕ್ಕೆ (Madhurai Temple) ಬಂದು ದೇವರ ದರ್ಶನ ಮುಗಿಸಿಕೊಂಡು ಹಿಂದಿರುಗುವಾಗ ಹುಲಿಕುಂಟೆ ಗ್ರಾಮದ ಬಳಿ ಘಟನೆ ನಡೆದಿದ್ದು, ಅಪಘಾತದ ನಂತರ ಲಾರಿ ಸಮೇತ ಎಸ್ಕೇಪ್ ಆಗಲು ಚಾಲಕನ (Lorry Driver) ಯತ್ನಿಸಿದ್ದಾನೆ. ಆದ್ರೆ ಈ ವೇಳೆ ಸ್ಥಳಿಯರು ಲಾರಿ ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಸದ ಲಾರಿಗಳ ವಿರುದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಘಟನಾ ಸ್ಥಳಕ್ಕೆ ಶಾಸಕ ವೆಂಕಟರಮಣಯ್ಯ (MLA Venkataramanaiah) ಭೇಟಿ ನೀಡಿದರು. ರಸ್ತೆಯಲ್ಲೇ ಮೃತ ಶವಗಳನ್ನುವಿಟ್ಟು ಪ್ರತಿಭಟನೆ ಮಾಡಿದ್ರು, ಸೂಕ್ತ ಪರಿಹಾರ ನೀಡುವಂತೆ ನೀಡುವಂತೆ ಒತ್ತಾಯ ಮಾಡಿದ್ರು.
ಸ್ಥಳಕ್ಕೆ ಭೇಟಿ ನೀಡಿದ ಎಸ್ಪಿ ಮಲ್ಲಿಕಾರ್ಜನ್ ಬಾಲದಂಡಿ ಪರಿಸ್ಥಿತಿಯನ್ನ ತಿಳಿಗೊಳಿಸಿದ್ರು. ಇನ್ನು ಸ್ಥಳಕ್ಕೆ ಬಂದ ಬಿಬಿಎಂಪಿ ಅಧಿಕಾರಿಗಳು ಮೃತ ಕುಟುಂಬಕ್ಕೆ 25 ಲಕ್ಷ ಪರಿಹಾರ ಘೋಷಣೆ ಮಾಡಿದರು. ಪರಿಹಾರ ಘೋಷಣೆ ಹಿನ್ನೆಲೆ ಪ್ರತಿಭಟನೆ ಕೈಬಿಡಲಾಗಿದೆ.
ಪಾನಮತ್ತನಾಗಿದ್ದನಾ ಚಾಲಕ?
ದೊಡ್ಡಬಳ್ಳಾಪುರದ ಬಳಿಯ ಎಂಎಸ್ ಜಿಪಿ ಘಟಕಕ್ಕೆ ಕಸ ಸುರಿದು ಬೆಂಗಳೂರಿಗೆ ಹಿಂದಿರುಗುವ ವೇಳೆ ಅಪಘಾತ ಸಂಭವಿಸಿದೆ. ಚಾಲನೆ ವೇಳೆ ಚಾಲಕ ಪಾನಮತ್ತನಾಗಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸದ್ಯ ಪೊಲೀಸರ ವಶದಲ್ಲಿರುವ ಚಾಲಕನನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಇದನ್ನೂ ಓದಿ: ಕಸ ಗುಡಿಸಿ ಎಂದು ದೂರು ಕೊಟ್ಟರೆ ಮನೆ ಮುಂದೆ ಕಸದ ಲಾರಿ ಸಮೇತ ಬಂದು ಬೆದರಿಕೆ
ಮಾರ್ಚ್, ಮೇನಲ್ಲಿ ನಾಲ್ವರನ್ನು ಬಲಿ ಪಡೆದುಕೊಂಡಿದ್ದ ಲಾರಿಗಳು
ಇದೇ ವರ್ಷ ಮಾರ್ಚ್ ಮತ್ತು ಮೇನಲ್ಲಿ ಬಿಬಿಎಂಪಿ ಕಸದ ಲಾರಿಗಳು ನಾಲ್ವರನ್ನು ಬಲಿ ಪಡೆದುಕೊಂಡಿದ್ದವು. ಇದೀಗ ಈ ಪ್ರಕರಣ ಸೇರಿದಂತೆ ಬಿಬಿಎಂಪಿ ಕಸದ ಲಾರಿಗೆ ಆರು ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಡೆಲಿವರಿ ಬಾಯ್ ಮೇಲೆ ಹರಿದ ಲಾರಿ
ಮೇ 14, 2022ರಂದು ಥಣಿಸಂದ್ರ (Thanisandra) ರೈಲ್ವೇ ಮೇಲ್ಸೇತುವೆ ಬಿಬಿಎಂಪಿ ಕಸದ ಲಾರಿಗೆ ಡೆಲಿವರಿ ಬಾಯ್ ಪ್ರಾಣ ಕಳೆದುಕೊಂಡಿದ್ದರು. ಯಾದಗಿರಿ ಜಿಲ್ಲೆಯ ಸುರಪುರ ಮೂಲದ 25 ವರ್ಷದ ದೇವಣ್ಣ ಮೃತ ದುರ್ದೈವಿ. ದೇವಣ್ಣ, ನಾಗವಾರದಿಂದ ಹೆಗ್ಗಡೆ ನಗರದ ಕಡೆಗೆ ಬರುತ್ತಿದ್ದರು.
ದೇವಣ್ಣ (Devanna) ಅವರ ಬೈಕ್ಗೆ ಹಿಂಬದಿಯಿಂದ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದಿತ್ತು. ಈ ಸಂಬಂಧ ಆರೋಪಿ ಚಾಲಕ ದಿನೇಶ್ ನಾಯ್ಕ್ (40) ಎಂಬಾತನನ್ನು ಬಂಧಿಸಲಾಗಿತ್ತು. ಈ ಸಂಬಂಧ ಚಿಕ್ಕಜಾಲ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: Bengaluru: ಬಿಬಿಎಂಪಿ ಕಸದ ಲಾರಿಗೆ ಮತ್ತೊಂದು ಮಹಿಳೆ ಬಲಿ; ತಂದೆ, ತಾಯಿ ಇಬ್ಬರೂ ಇಲ್ಲದೇ ಅನಾಥವಾಯ್ತು ಮಗು
12 ವರ್ಷದ ಬಾಲಕಿ ಸಾವು
ಮಾರ್ಚ್ 21 ರಂದು ಹೆಬ್ಬಾಳದ ಬಳಿ ಅಕ್ಷಯ ಎಂಬ ವಿದ್ಯಾರ್ಥಿನಿ ಸಾವನ್ನಪ್ಪಿದ್ದಳು. ಅಂಡರ್ ಪಾಸ್ ನಲ್ಲಿ ನೀರು ನಿಂತಿದೆ ಅಂತ ರಸ್ತೆ ದಾಟುತ್ತಿದ್ದ ವಿದ್ಯಾರ್ಥಿನಿ ಮೇಲೆ BBMP ಕಸದ ಲಾರಿ ಹರಿದಿತ್ತು. ಈ ವೇಳೆ ಕಸದ ಲಾರಿ ಹರಿದು ವಿದ್ಯಾರ್ಥಿನಿ ಅಕ್ಷಯ ಮೃತಪಟ್ಟಿದ್ದಳು. ಈ ಸಂಬಂಧ ಆರ್ ಟಿ ನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಲಾರಿ ಡಿಕ್ಕಿಗೆ ಹಾರಿತ್ತು ವೃದ್ಧನ ಪ್ರಾಣಪಕ್ಷಿ
ಮಾರ್ಚ್ 31 ರಂದು ಬಾಗಲೂರು ಥಣಿಸಂದ್ರ ಮುಖ್ಯ ರಸ್ತೆಯಲ್ಲಿ ಕಸದ ಲಾರಿ ಮತ್ತೊಂದು ಬಲಿ ಪಡೆದಿತ್ತು. ರಾಮಯ್ಯ ಎಂಬವರ ಮೇಲೆ ಕಸದ ಲಾರಿ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ಸಂಬಂಧ ಚಿಕ್ಕಜಾಲ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
SBI ಬ್ಯಾಂಕ್ ಉದ್ಯೋಗಿ ಬಲಿ
ಏಪ್ರಿಲ್ 18 ರಂದು ಪದ್ಮಿನಿ ಎಂಬ SBI ಬ್ಯಾಂಕ್ ಉದ್ಯೋಗಿ ಗಾಡಿಗೆ ಡಿಕ್ಕಿ ಹೊಡೆದ ಪರಿಣಾಮ ಆಕೆ ಕೂಡ ಸಾವನ್ನಪ್ಪಿದ್ರು. ನಾಯಂಡಹಳ್ಳಿ ಜಂಕ್ಷನ್ ಬಳಿ ಪದ್ಮಿನಿ ಮೇಲೆ ಹರಿದಿರುವ ಕಸದ ಲಾರಿ ಈ ಸಂಬಂಧ ಬ್ಯಾಟರಾಯನಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ