ಕೊರೋನಾ ಮೂರನೇ ಅಲೆ : 12 ಜನ ಮಕ್ಕಳ ತಜ್ಞ ವೈದ್ಯರ ವಿಶೇಷ ಸಮಿತಿ ರಚಿಸಿದ ಬಿಬಿಎಂಪಿ

ಮಹಾದೇವಪುರ ವಲಯದ ಕಾಡುಗೋಡಿ, ಹಗದೂರು, ವರ್ತೂರು, ಬೆಳ್ಳೂಂದೂರು ನಗರದ ಗಡಿ ವಾರ್ಡ್ಗಳು ಬೆಂಗಳೂರಿನ ಕೊರೋನಾ ಹಾಟ್ ಸ್ಪಾಟ್ ಆಗ್ತಿದೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಬೆಂಗಳೂರು (ಜು. 8): ಬೆಂಗಳೂರು ಸಿಟಿ ಸೇಫ್ ಆಗಿದೆ. ಆದರೆ ಬೆಂಗಳೂರು ಹೊರವಲಯದಲ್ಲಿ ಇರುವ ಪ್ರದೇಶಗಳಲ್ಲಿ ಕೊರೋನಾ ಸೋಂಕು ಹೆಚ್ಚಾಗ್ಗಿದೆ. ಬೆಂಗಳೂರು ಹೊರವಲಯದ ಝೋನ್ ಗಳಲ್ಲಿ ಹೆಚ್ಚಾಗಿರುವ ಕಂಟೋನ್ಮೆಂಟ್ ಝೋನ್ ಗಳೇ ಇದಕ್ಕಿರುವ ಸಾಕ್ಷಿ. ಇದೀಗ ಮೂರನೇ ಅಲೆ ಭೀತಿಯೂ ಎದುರಾಗಿದ್ದು, ಬಿಬಿಎಂಪಿ ಮಕ್ಕಳ ತಜ್ಞರ ವಿಶೇಷ ಸಮಿತಿ ರಚಿಸಿದೆ. 

ಕೊರೋನಾ ಮೂರನೇ ಅಲೆ... ಬೆಂಗಳೂರು ಹೊರವಲಯಕ್ಕೆ ಹೆಚ್ಚಿದ ಆತಂಕ

ಬೆಂಗಳೂರಿನ ಮಧ್ಯಭಾಗದ ಪ್ರದೇಶಗಳು ಕೊರೋನಾ ಮುಕ್ತವಾಗುತ್ತ ಸಾಗುತ್ತಿದ್ದರೆ ಅತ್ತ ಬೆಂಗಳೂರಿನ ಹೊರವಲಯಗಳಲ್ಲಿ ಕೊರೋನಾ ಸೋಂಕು ಹೆಚ್ಚಳವಾಗ್ತಿದೆ. ಒಟ್ಟಾರೆ ಸೋಂಕಿನ ಪ್ರಮಾಣ ನೋಡಿದರೆ ಕಡಿಮೆಯಿದೆ. ಆದರೂ ಹೊರವಲಯಗಳಲ್ಲಿ ಹೆಚ್ಚೆಚ್ಚು ಸೋಂಕು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆ ಮೈಕ್ರೋ ಕಂಟೋನ್ಮೆಂಟ್ ಝೋನ್ ಗಳನ್ನು ಮಾಡುತ್ತಿದೆ ಪಾಲಿಕೆ. ಹೌದು, ಬೆಂಗಳೂರು ಗಡಿಗಳಲ್ಲಿನ ವಾರ್ಡ್ ಗಳಲ್ಲೇ ಹೆಚ್ಚು ಸೋಂಕು ಕಾಣಿಸಿಕೊಳ್ತಿದೆ. ಬೆಂಗಳೂರು ನಗರಕ್ಕೆ ಹೋಲಿಸಿಕೊಂಡರೆ ಬೆಂಗಳೂರು ಗಡಿ ವಾರ್ಡ್ ಗಳಲ್ಲೇ ಕೊರೋನಾ ಹೆಚ್ಚು ದೃಢವಾಗುತ್ತಿದೆ.

ಮಹಾದೇವಪುರದ ಭಾಗದಲ್ಲಿ ಅತೀ ಹೆಚ್ಚು ವಾರ್ಡ್ ಗಳಲ್ಲಿ ಕೊರೋನಾ ಸೋಂಕಿತಿರಿದ್ದಾರೆ

ಹೊರವಲಯದ ಮಹಾದೇವಪುರ ಝೋನ್‌ನಲ್ಲಿ ಹೆಚ್ಚು ಕಂಟೋನ್ಮೆಂಟ್ ಝೋನ್ ಗಳಿದೆ. ಬಿಬಿಎಂಪಿ ಇಲ್ಲೆಲ್ಲಾ ಮೈಕ್ರೋ ಕಂಟೋನ್ಮೆಂಟ್ ಝೋನ್ ಮಾಡಿದೆ. ಈ ಒಂದು ಝೋನ್ ನಲ್ಲಿ ಮಾತ್ರ ಸುಮಾರು 20 ಮೈಕ್ರೋ ಕಂಟೋನ್ಮೆಂಟ್ ಝೋನ್ ಗಳಿದ್ದಾವೆ. ಬೆಂಗಳೂರು ಹೊರವಲಯದಲ್ಲಿ ಇರುವ 49 ವಾರ್ಡ್ ಗಳಲ್ಲಿ ಹೆಚ್ಚಿದೆ ಕೊರೋನಾ ಸೋಂಕು. ಯಲಹಂಕದ ವಾರ್ಡ್ ನಂ. 1 ಕೆಂಪೇಗೌಡ ನಗರದಲ್ಲಿ ಪ್ರತಿ ದಿನ 80ಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗ್ತಿದ್ದಾರೆ. ಮಹಾದೇವಪುರ ವಲಯದ ಕಾಡುಗೋಡಿ, ಹಗದೂರು, ವರ್ತೂರು, ಬೆಳ್ಳೂಂದೂರು ನಗರದ ಗಡಿ ವಾರ್ಡ್ಗಳು ಬೆಂಗಳೂರಿನ ಕೊರೋನಾ ಹಾಟ್ ಸ್ಪಾಟ್ ಆಗ್ತಿದೆ. ಇದೇ ಕಾರಣದಿಂದ ಬೆಂಗಳೂರು ಗಡಿ ವಾರ್ಡ್ ಗಳಿಂದ ಬೆಂಗಳೂರು ಗ್ರಾಮಾಂತರ ಹಳ್ಳಿಗಳಿಗೆ ಕಂಟಕ ಎದುರಾಗಿದೆ.

ಮೂರನೇ ಅಲೆ ತಡೆಗೆ 12 ಮಕ್ಕಳ ತಜ್ಞರ ಸಮಿತಿ ರಚನೆ ಮಾಡಿದ ಪಾಲಿಕೆ

ಇನ್ನು ಮೂರನೇ ಅಲೆ ಆತಂಕ ಎದುರಾಗಿರುವ ಹಿನ್ನೆಲೆ ಬಿಬಿಎಂಪಿ ಮಕ್ಕಳ ತಜ್ಞ ವೈದ್ಯರ ಸಮಿತಿಯನ್ನು ರಚನೆ ಮಾಡಿದೆ. ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚಾಗಿ ಸೋಂಕು ಭಾದಿಸಲಿದೆ ಎಂಬ ಹಿನ್ನೆಲೆಯಲ್ಲಿ ಈ ಸಮಿತಿ ರಚನೆ ಮಾಡಿದೆ. ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಿ ರಂದೀಪ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು ನಗರದ ಪ್ರಮುಖ ಮಕ್ಕಳ ತಜ್ಞ ವೈದ್ಯರು ಸಮಿತಿಯಲ್ಲಿದ್ದಾರೆ.

ಬಿಬಿಎಂಪಿ ಪಿಡಿಯಾಟ್ರಿಕ್ ಸಲಹಾ ಸಮಿತಿಯಲ್ಲಿ ಯಾರ್ಯಾರು ಇದ್ದಾರೆ

1. ಡಾ. ಸಂಜಯ್​, ನಿರ್ದೆಶಕರು, ಇಂದಿರಾ ಗಾಂಧಿಮಕ್ಕಳ ಆರೋಗ್ಯ ಸಂಸ್ಥೆ
2. ಡಾ. ಮಲ್ಲಿಕಾರ್ಜುನ್​, ಅಧ್ಯಕ್ಷರು, ಇಂಡಿಯನ್​ ಅಕಾಡೆಮಿ ಆಫ್ ಪಿಡಿಯಾಟ್ರಿಕ್ಸ್
3. ಡಾ. ರಕ್ಷಯ್​ ಶೆಟ್ಟಿ, ಲೀಡ್​ ಪೀಡಿಯಾಟ್ರಿಕ್ಸ್​ ಇಂಟೆನ್ಸಿವಿಸ್ಟ್​, ರೈನ್​ಬೊ ಮಕ್ಕಳ ಆಸ್ಪತ್ರೆ
4. ಡಾ. ನರೇಶ್.ಪಿ, ಮಕ್ಕಳ ತಜ್ಞರ ಸಲಹೆಗಾರರು, ಮಣಿಪಾಲ್ 5. ಡಾ. ವಿಶ್ವನಾಥ್ ಕಾಮೋಜಿ, ಶಿಶು ತಜ್ಞರು, ಕೊಲಂಬಿಯಾ ಆಸ್ಪತ್ರೆ
6. ಡಾ. ಬಿ.ಕೆ. ವಿಜೇಂದ್ರ, ಮುಖ್ಯ ಆರೋಗ್ಯಾಧಿಕಾರಿ, ಬಿಬಿಎಂಪಿ
7. ಡಾ. ನಿರ್ಮಲಾ ಬುಗ್ಗಿ, ಮುಖ್ಯ ಆರೋಗ್ಯಾಧಿಕಾರಿ ( ಕ್ಲಿನಿಕಲ್) ಬಿಬಿಎಂಪಿ
8. ಡಾ. ಆನಂದ್​, ಮಕ್ಕಳ ತಜ್ಙರು, ನೋಡಲ್​ ಅಧಿಕಾರಿಗಳು, ಮಕ್ಕಳ ಆರೋಗ್ಯ, ಬಿಬಿಎಂಪಿ
9. ಡಾ. ಸರಸ್ವತಿ, ಮಕ್ಕಳ ತಜ್ಞರು ಹಾಗೂ ಆರೋಗ್ಯಾಧಿಕಾರಿ, ಬಿಬಿಎಂಪಿ
10. ಡಾ. ಲಲಿತಾ, ಮಕ್ಕಳ ತಜ್ಞರು ಹಾಗೂ ವಲಯ ಆರೋಗ್ಯಾಧಿಕಾರಿ
11. ಡಾ. ಭಾರತಿ, ಮಕ್ಕಳ ತಜ್ಞರು, ಶ್ರೀರಾಂಪುರ ರೆಫರಲ್​​ ಆಸ್ಪತ್ರೆ
12. ಡಾ. ರಮೇಶ್, ಮಕ್ಕಳ ತಜ್ಞರು, ಹಲಸೂರು ರೆಫರಲ್​ ಆಸ್ಪತ್ರೆ

ಇಂದು ಈ ಸಮಿತಿಯ ಜೊತೆ ಬಿಬಿಎಂಪಿ ಕಮೀಷನರ್ ಸಭೆ ನಡೆಸಿದ್ದರು‌. ಮಲ್ಲೇಶ್ವರಂ ಬಿಬಿಎಂಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಹತ್ವದ ನಿರ್ಧಾರಗಳು ತೆಗೆದುಕೊಳ್ಳಲಾಗಿದೆ. ಒಟ್ಟಾರೆ ಮೂರನೇ ಅಲೆ ಆತಂಕ ತಲೆದೂರಿರುವಾಗಲೇ ನಗರದ ಹೊರವಲಯದಲ್ಲಿ ಹೆಚ್ಚೆಚ್ಚು ಕೇಸ್ ಗಳು ಪತ್ತೆಯಾಗುತ್ತಿದೆ. ಇದನ್ನು ನಿಯಂತ್ರಣ ಮಾಡುವ ಜೊತೆಗೆ ಬಿಬಿಎಂಪಿ ಮಕ್ಕಳ ತಜ್ಞ ವೈದ್ಯರ ಸಮಿತಿ ರಚಿಸಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಯೋಚಿಸುತ್ತಿದೆ.

(ವರದಿ- ಆಶಿಕ್ ಮುಲ್ಕಿ)
Published by:Seema R
First published: