Potholes: ಜನರ ಜೀವದ ಜೊತೆ ಅಧಿಕಾರಿಗಳ ಚೆಲ್ಲಾಟ; ತಾನೇ ರಚಿಸಿದ್ದ ನಿಯಮ ಬ್ರೇಕ್ ಮಾಡಿದ BBMP

ಈ ನಿಯಮ ಮಾಡಿರುವ ಬಿಬಿಎಂಪಿ, ಅದೇ ಡೆಬ್ರಿಸ್​​ನ್ನು ರಸ್ತೆ ಗುಂಡಿ ಮುಚ್ಚಲು ಬಳಕೆ ಮಾಡಿಕೊಂಡಿದೆ. ನಯಾಪೈಸೆ ಖರ್ಚು ಇಲ್ಲದೇ ಗುಂಡಿ ಮುಚ್ಚಿರುವ ಬಿಬಿಎಂಪಿ ನಗರದ ಜನರ ಜೀವಕ್ಕೆ ಸಂಚಕಾರ ತಂದಿದೆ.

ಬಿಬಿಎಂಪಿ

ಬಿಬಿಎಂಪಿ

  • Share this:
ಕಳೆದು ಮೂರು ತಿಂಗಳಿನಿಂದ ರಾಜಧಾನಿ ಬೆಂಗಳೂರಿನಲ್ಲಿ (Bengaluru Rains) ನಿರಂತರವಾಗಿ ಮಳೆಯಾಗುತ್ತಿರುವ ಪರಿಣಾಮ ನಗರದ ರಸ್ತೆಗಳಲ್ಲಿರುವ ಗುಂಡಿಗಳ (Bengaluru Potholes) ಸಂಖ್ಯೆ ಹೆಚ್ಚಾಗಿದೆ. ಒಂದು ಕಡೆ  ಮಳೆ, ಮತ್ತೊಂದು ಕಡೆ ಗುಂಡಿಗಳಿಂದ ವಾಹನ ಸವಾರರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಂಚರಿಸುತ್ತಿದ್ದಾರೆ. ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಮುಂದಾಗಿರುವ ಬಿಬಿಎಂಪಿ (BBMP) ತಾನು ರಚಿಸಿದ ನಿಯಮಗಳನ್ನೇ ಬ್ರೇಕ್ ಮಾಡಿದೆ. ತಾನು ಮಾಡಿದ ಎಡವಟ್ಟಿನಿಂದ ನಗರದಲ್ಲಿ ಮತ್ತೆ ಟ್ರಾಫಿಕ್ (Bengaluru Traffic) ಹೆಚ್ಚಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಗುಂಡಿ ಮುಚ್ಚುವ ಕಾರ್ಯದಲ್ಲಿ ಬಿಬಿಎಂಪಿ ಮಾಡಿರುವ ಕಳ್ಳಾಟಕ್ಕೆ ಸಾರ್ವಜನಿಕ ವಲಯದಲ್ಲಿ  ವ್ಯಾಪಕ ಆಕ್ರೋಶ ವ್ಯಕ್ತವಾಗಿವೆ. ಈಗ ಮತ್ತೆ ಮಳೆಯಾದ್ರೆ ಬಿಬಿಎಂಪಿ ಕಳ್ಳಾಟದ ಪರಿಣಾಮ ನಗರದ ರಸ್ತೆಗಳು ಕೆಸರುಮಯವಾಗಲಿವೆ.

ಹಾಗಾದ್ರೆ ಬಿಬಿಎಂಪಿ ಮಾಡಿದ ಎಡವಟ್ಟು ಏನು?

ಮಳೆಯಿಂದಾಗಿ ರಸ್ತೆಗಳಲ್ಲಿಯ ಗುಂಡಿಗಳ ಸಂಖ್ಯೆ ಹೆಚ್ಚಾಗಿದೆ. ರಸ್ತೆ ಗುಂಡಿಗಳನ್ನು ಹೇಗೆ ಮುಚ್ಚಬೇಕು ಎಂಬ ನಿಯಮವನ್ನು Indian road congress rules for land conversion ಹೇಳುತ್ತದೆ. ಆದ್ರೆ ಬಿಬಿಎಂಪಿ ಎಲ್ಲಾ ದಾಖಲೆಗಳನ್ನು ಗಾಳಿಗೆ ತೂರಿ ಜನರ ಜೀವದ ಜೊತೆ ಚೆಲ್ಲಾಟ ಆಡುತ್ತಿದೆ.

BBMP fills potholes unscientifically mrq
ಬಿಬಿಎಂಪಿ


ಇನ್ನೂ ಬೆಂಗಳೂರಿನಲ್ಲಿ ಡೆಬ್ರಿಸ್ (Debris) (ಕಟ್ಟಡಗಳ  ಅವಶೇಷ) ಸುರಿಯಬಾರದು ಎಂಬ  ನಿಯಮವನ್ನು ಬಿಬಿಎಂಪಿಯೇ ಮಾಡಿದೆ. ಯಾವುದೇ ಕಟ್ಟಡ ನೆಲಸಮಗೊಳಿಸಿದ್ರೆ, ಅದರ ಅವಶೇಷವನ್ನು ನಗರದ ಹೊರವಲಯಕ್ಕೆ ವಿಲೇವಾರಿ ಮಾಡಬೇಕು. ಈ ಡೆಬ್ರಿಸ್ ವಿಲೇವಾರಿಗಾಗಿ (Debris Disposal) ಬಿಬಿಎಂಪಿ ತನ್ನ ಬಜೆಟ್​​ನಲ್ಲಿ ಪ್ರತಿ ವರ್ಷ ಸುಮಾರು ಮುನ್ನೂರರಿಂದ ನಾಲ್ಕನೂರು ಕೋಟಿ ರೂಪಾಯಿ ಅನುದಾನವನ್ನ ಮೀಸಲಿರಿಸುತ್ತದೆ.

ಜನರ ಜೀವಕ್ಕೆ ಸಂಚಕಾರ

ಈ ನಿಯಮ ಮಾಡಿರುವ ಬಿಬಿಎಂಪಿ, ಅದೇ ಡೆಬ್ರಿಸ್​​ನ್ನು ರಸ್ತೆ ಗುಂಡಿ ಮುಚ್ಚಲು ಬಳಕೆ ಮಾಡಿಕೊಂಡಿದೆ. ನಯಾಪೈಸೆ ಖರ್ಚು ಇಲ್ಲದೇ ಗುಂಡಿ ಮುಚ್ಚಿರುವ ಬಿಬಿಎಂಪಿ ನಗರದ ಜನರ ಜೀವಕ್ಕೆ ಸಂಚಕಾರ ತಂದಿದೆ.

ಇದನ್ನೂ ಓದಿ: Crime News: ಚಾಕುವಿನಿಂದ ಕತ್ತು ಕೊಯ್ದ ಸ್ಥಿತಿಯಲ್ಲಿ ಪತ್ನಿ ಶವ, ಆತ್ಮಹತ್ಯೆಗೆ ಯತ್ನಿಸಿದ ಪತಿ

ಮಾರ್ಕೆಟ್‌-ಸಿರ್ಸಿ ಸರ್ಕಲ್‌ನ ಮೈಸೂರ್‌ ರೋಡ್‌ನಲ್ಲಿ ಡೆಬ್ರಿಸ್‌ ಪ್ಯಾಚ್ ವರ್ಕ್​ ಮಾಡಲಾಗಿದೆ.  ಗುಂಡಿಗಳಿಗೆ ಬಿಲ್ಡಿಂಗ್ ಅವಶೇಷ ಸುರಿದ ಪರಿಣಾಮ ರಸ್ತೆಗಳಲ್ಲಿ ಟ್ರಾಫಿಕ್‌ ಜಾಮ್ ಉಂಟಾಗಿದೆ. 1 ಕಿ.ಮೀ ವ್ಯಾಪ್ತಿಯಲ್ಲೇ 7 ಕಡೆ ಕಟ್ಟಡ ಅವಶೇಷ ಸುರಿದು ಗುಂಡಿ ಮುಚ್ಚಲಾಗಿದೆ. ನಗರದಲ್ಲಿ ಡೆಬ್ರಿಸ್ ಸುರಿಯಬಾರದು ಎಂಬ ನಿಯಮ ಮಾಡಿರುವ ದಪ್ಪ ಚರ್ಮದ ಬಿಬಿಎಂಪಿಯೇ ನಡು ರಸ್ತೆಯಲ್ಲಿ ಕಟ್ಟಡದ ಅವಶೇಷ ಸುರಿದಿದೆ.

BBMP fills potholes unscientifically mrq
ಕಟ್ಟಡದ ಅವಶೇಷ ಸುರಿದು ಗುಂಡಿ ಮುಚ್ಚಿರೋದು


ವೈಜ್ಞಾನಿಕವಾಗಿ ರಸ್ತೆ ಗುಂಡಿ ಮುಚ್ಚುವುದು ಹೇಗ?

ಮಹಾನಗರ ಪಾಲಿಕೆ ಅಥವಾ ಹೆದ್ದಾರಿಗಳ ಗುಂಡಿ ಹೇಗೆ ಮುಚ್ಚಬೇಕು ಎಂದು Indian road congress rules for land conversion ಹೇಳುತ್ತದೆ. ಈ ನಿಯಮಗಳ ಪ್ರಕಾರ ಗುಂಡಿಯನ್ನು ಕ್ರಮಬದ್ಧವಾಗಿ ಮುಚ್ಚಬೇಕು. ಆಗ ಮಾತ್ರ ಪದೇ ಪದೇ ಗುಂಡಿಗಳು ಬೀಳಲ್ಲ. ಆದ್ರೆ ಬಿಬಿಎಂಪಿ ಯಾವ ನಿಯಮಗಳನ್ನು ಪಾಲನೇ ಮಾಡದೇ ಹಣ ಉಳಿಸಿ ಬುದ್ಧಿವಂತಿಕೆ ಪ್ರದರ್ಶಿಸಿ ಕೈ ತೊಳೆದುಕೊಂಡಿದೆ.

ಇದನ್ನೂ ಓದಿ:  Jana Spandana: ಬಿಜೆಪಿಯ ಜನಸ್ಪಂದನ ಕಾರ್ಯಕ್ರಮಕ್ಕೆ ಆರು ಸಚಿವರ ಗೈರು; ಸ್ಮೃತಿ ಇರಾನಿ ಅವರಿಂದ ಚಾಲನೆ

ರಸ್ತೆ ಗುಂಡಿ ಮುಚ್ಚುವ ವಿಧಾನ

1.ಮೊದಲಿಗೆ ರಸ್ತೆ ಗುಂಡಿಯನ್ನು ಬಿಸಿಗಾಳಿಯಿಂದ ಸ್ವಚ್ಛಗೊಳಿಸಿ, ಅದರೊಳೊಗಿರುವ ಧೂಳನ್ನು ತೆಗೆಯಬೇಕು.

2.ತದನಂತರ ಒಂದು ಲೇಯರ್ ದ್ರವ ರೂಪದ ಡಾಂಬರ್ ಹಾಕಬೇಕು.

3.ಈ ಲೇಯರ್ ಸಂಪೂರ್ಣ ಒಣಗಿದ ನಂತರ ಮತ್ತೇ ಹೀಟ್​ ವೇವ್ ಮೂಲಕ ಬಿಸಿ ಮಾಡಬೇಕು.

4.ತದನಂತ ಜಲ್ಲಿ ಮತ್ತು ಸಿಮೆಂಟ್ ಮಿಶ್ರಣವನ್ನು ಗುಂಡಿಗೆ ತುಂಬಬೇಕು.

5.ಗುಂಡಿಯ ಆಳ ನೋಡಿಕೊಂಡು ಒಂದು ಅಥವಾ ಎರಡು ಲೇಯರ್ ಗಟ್ಟಿ ಡಾಂಬರ್​ ಹಾಕಬೇಕು.

6.ಗಟ್ಟಿ ಡಾಂಬಾರು ಒಣಗಿದ ನಂತರ ಅದರ ಮೇಲೆ ಜಲ್ಲಿ ಪೌಡರ್ ಹಾಕಬೇಕು.

7.ಗುಂಡಿ ಯಾವುದೇ ಆಕಾರದಲ್ಲಿದ್ದರೂ ಅದನ್ನು ಚೌಕಾಕಾರದಲ್ಲಿಯೇ ಮುಚ್ಚಬೇಕು.
Published by:Mahmadrafik K
First published: