ಬೆಂಗಳೂರು; ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆ ಪ್ರಕರಣ ಸಂಬಂಧ ಮಾಜಿ ಮೇಯರ್ ಸಂಪತ್ ರಾಜ್ ಸಿಕ್ಕಿದರೂ ಮಾಜಿ ಕಾರ್ಪೋರೇಟರ್ ಜಾಕೀರ್ ಮಾತ್ರ ಪತ್ತೆಯಾಗಿಲಿಲ್ಲ. ಸಿಸಿಬಿ ಪೊಲೀಸರು ಎಲ್ಲಾ ಆಯಾಮದಲ್ಲೂ ಶೋಧ ನಡೆಸಿದ್ದರೂ ಆತ ಪತ್ತೆಯೇ ಆಗಿರಲಿಲ್ಲ. ಶತಾಯಗತಾಯ ಬಂಧನ ಮಾಡಲೇಬೇಕೆಂದಿದ್ದ ಸಿಸಿಬಿ ಟೀಂ ಗೆ ಮೂರು ತಿಂಗಳ ಜಾಕೀರ್ ಸಿಕ್ಕಿದ್ದು ಈಗ ಪರಪ್ಪನ ಅಗ್ರಹಾರಕ್ಕೆ ಕಳುಹಿಸಿಕೊಟ್ಟಿದ್ದಾರೆ.
ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆ ಕೇಸ್ನಲ್ಲಿ ಜಾಸ್ತಿ ಕೇಳಿಬಂದ ಹೆಸರು ಅಂದರೆ ಅದು ಮಾಜಿ ಮೇಯರ್ ಸಂಪತ್ ರಾಜ್ ಹಾಗೂ ಮಾಜಿ ಕಾರ್ಪೋರೇಟರ್ ಜಾಕೀರ್ ದು. ಆ ಬಳಿಕ ಇಬ್ಬರಿಗೂ ನೊಟೀಸ್ ಕೊಟ್ಟು ಸಿಸಿಬಿ ಪೊಲೀಸರು ವಿಚಾರಣೆ ಸಹ ಮಾಡಿದರು. ಇದೇ ವೇಳೆ ಇಬ್ಬರ ಫೋನ್ ಸೀಜ್ ಮಾಡಿ ಅದು ರಿಟ್ರೈವ್ ಆದ ಬಳಿಕ ಮತ್ತೊಂದು ನೊಟೀಸ್ ನೀಡಿದರು. ಯಾವಾಗ ಮೊಬೈಲ್ ರಿಟ್ರೈವ್ ಆಗಿದೆ ಅಂತ ಗೊತ್ತಾಯ್ತೋ ಆಗ ಕಾಲ್ಕಿತ್ತಿದ್ದ ಜಾಕೀರ್ ಮೂರು ತಿಂಗಳ ಬಳಿಕ ಈಗ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಇದನ್ನು ಓದಿ: ಪುರಸಭೆ ಸದಸ್ಯೆಗೆ ಗರ್ಭಪಾತ ಪ್ರಕರಣ; ಶಾಸಕ ಸಿದ್ದು ಸವದಿ ರಾಜಿನಾಮೆಗೆ ಆಗ್ರಹಿಸಿ ಡಿ.5ರಂದು ಕಾಂಗ್ರೆಸ್ನಿಂದ ಬೃಹತ್ ಪ್ರತಿಭಟನೆ
ಇನ್ನು ಸೆಪ್ಟೆಂಬರ್ ತಿಂಗಳಲ್ಲಿ ನಾಪತ್ತೆಯಾಗಿದ್ದ ಜಾಕೀರ್ ಮೊದಲು ಮೈಸೂರು, ತಮಿಳುನಾಡು, ಕೇರಳ ಹಾಗೂ ಅಂಧ್ರ ಅಂತೆಲ್ಲಾ ಸುತ್ತಾಡಿದ್ದಾನೆ. ಪದೇ ಪದೇ ಮೊಬೈಲ್ ಬದಲಾಯಿಸ್ತಾ ಇದ್ದಿದ್ದರಿಂದ ಬಂಧನ ಮಾಡಲು ಕಷ್ಟ ಆಗಿತ್ತು. ಆದರೂ ಛಲ ಬಿಡದ ಸಿಸಿಬಿ ಪೊಲೀಸರು ಕಳೆದ ರಾತ್ರಿ ಜಾಕೀರ್ ಬಂಧಿಸಿದ್ದಾರೆ. ಆದರೆ ಎಲ್ಲಿ ಮತ್ತು ಹೇಗೆ ಬಂಧಿಸಿದರು ಎಂಬುದನ್ನು ಪೊಲೀಸರು ಬಹಿರಂಗ ಪಡಿಸಿಲ್ಲ.
ಒಂದು ಕಡೆ ಆತನೇ ಪೊಲೀಸರಿಗೆ ಶರಣಾದನೆ ಅನ್ನುವ ಅನುಮಾನ ಸಹ ಇದೆ. ತಡರಾತ್ರಿ ಜಾಕೀರ್ ನ ಬಂಧಿಸಿದ ಸಿಸಿಬಿ ಪೊಲೀಸರು ಇಂದು ರಜೆ ಇದ್ದ ಕಾರಣಕ್ಕೆ ಕೋರಮಂಗಲದ ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದರು. ಸದ್ಯ ಆರೋಪಿಯನ್ನು ಡಿ.16 ರವರೆಗೂ ನ್ಯಾಯಾಂಗ ಬಂಧನಕ್ಕೆ ನೀಡಿದ್ದು, ನಾಳೆ ಸಿಸಿಬಿ ಪೊಲೀಸರು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲು ಸಿದ್ದವಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ