ಬೆಂಗಳೂರು: ಬಿಬಿಎಂಪಿ ಚುನಾವಣೆ (BBMP Election) ಹಿನ್ನೆಲೆ ಮೀಸಲಾತಿ ಪ್ರಕಟಿಸಲು ಸುಪ್ರೀಂಕೋರ್ಟ್ (Supreme Court) ಗಡುವು ನೀಡಿತ್ತು. ಇದೀಗ ರಾಜ್ಯ ಸರ್ಕಾರ ಬಿಬಿಎಂಪಿಯ 243 ವಾರ್ಡ್ ಗಳಿಗೆ ಮೀಸಲಾತಿ (Reservation) ಪ್ರಕಟಿಸಿದೆ. ಮೀಸಲಾತಿ ಆಕ್ಷೇಪಣೆಗೆ 7 ದಿನ ಕಾಲಾವಕಾಶ ನೀಡಲಾಗಿದೆ. 7 ದಿನದ ನಂತರ ಬರುವ ಆಕ್ಷೇಪಣೆಗೆ ಸ್ವೀಕರಿಸಲಾಗುವುದಿಲ್ಲ ಎಂದು ನಗರಾಭಿವೃದ್ದಿ ಇಲಾಖೆ ಕಾರ್ಯದರ್ಶಿ ಮಂಜುನಾಥ್ (Manjunath) ಆದೇಶ ಹೊರಡಸಿದ್ದಾರೆ.
ಮೀಸಲಾತಿ ಪ್ರಕಟಿಸಲು ಸುಪ್ರಿಂ ಸೂಚನೆ
ಮೀಸಲಾತಿ ಪ್ರಕಟಿಸುವಂತೆ ಸುಪ್ರಿಂಕೋರ್ಟ್ ಸೂಚನೆ ನೀಡಿತ್ತು. ಅದರಂತೆ ಇದೀಗ ರಾಜ್ಯ ಸರ್ಕಾರ ಮೀಸಲಾತಿ ಪ್ರಕಟ ಮಾಡಿದೆ. ಮೀಸಲಾತಿ ಆಕ್ಷೇಪಣೆ ನಂತರ ಚುನಾವಣಾ ಪ್ರಕ್ರಿಯೆ ಮುಂದುವರೆಸಲಿದೆ.
ಮೀಸಲಾತಿ ಬಗ್ಗೆ ಕಾಂಗ್ರೆಸ್ ಆಕ್ಷೇಪ
ವಾರ್ಡ್ ಮೀಸಲಾತಿ ಬಗ್ಗೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ, ಬಿಜೆಪಿ ನಾಯಕರ ಮನೆಯಲ್ಲಿ ಮೀಸಲಾತಿ ಕಾರ್ಯ ನಡೆಯುತ್ತದೆ. ತಮಗೆ ಬೇಕಾದ ವಾರ್ಡ್ ಗೆ ಬೇಕಾದ ಮೀಸಲಾತಿ ಮಾಡಿಕೊಳ್ಳುತ್ತಾರೆ. ವಾರ್ಡ್ ವಿಂಗಡಣೆಯನ್ನೂ ಸಹ ಇದೇ ರೀತಿ ಮಾಡಿದ್ದರು ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
ಇದನ್ನೂ ಓದಿ: Single Use Plastic Ban: ಬೆಂಗಳೂರಿಗರೇ ಅಲರ್ಟ್, ಪ್ಲಾಸ್ಟಿಕ್ ಕವರ್ ನಿಮ್ಮ ಕೈಯಲ್ಲಿದ್ದರೆ ಹಾಕ್ತಾರೆ ದಂಡ!
243 ವಾರ್ಡ್ಗಳಾಗಿ 24 ಹೊಸ ವಾರ್ಡ್
ಬೆಂಗಳೂರಿನ ವಾರ್ಡ್ಗಳ ಸಂಖ್ಯೆ 243ಕ್ಕೆ ಏರಿಕೆ ಆಗಿದೆ. ಕೆಲವು ವಾರ್ಡ್ಗಳ ಹೆಸರು ಬದಲಾವಣೆ ಮಾಡಲಾಗಿದೆ. ಇನ್ನು ಕೆಲವು ವಾರ್ಡ್ಗಳಿಗೆ ಹಳೇ ಹೆಸರನ್ನೇ ಮರುನಾಮಕರಣ ಮಾಡಲಾಗಿದೆ. ಜನರ ಆಕ್ಷೇಪಕ್ಕೆ ಮಣಿದ ಸರ್ಕಾರದಿಂದ ಡಿ ಲಿಮಿಟೇಷನ್ ನಲ್ಲಿ ಕೆಂಗೇರಿ ವಾರ್ಡ್ ನಲ್ಲೂ ಬದಲಾವಣೆ ಮಾಡಿದೆ. ಕೆಂಗೇರಿ ವಾರ್ಡ್ ಬದಲು ಕೆಂಗೇರಿ ಉಪನಗರ ವಾರ್ಡ್ ಎಂದು ಕರಡು ಪ್ರತಿಯಲ್ಲಿತ್ತು. ಇದೀಗ ಮತ್ತೆ ವಾಪಸ್ ಕೆಂಗೇರಿ ವಾರ್ಡ್ ಅಂತಾನೇ ಉಲ್ಲೇಖ ಮಾಡಲಾಗಿದೆ. ಈ ಹಿಂದೆ ಕೆಂಗೇರಿ ವಾರ್ಡ್ ಹೆಸರು ತೆಗೆದಿದ್ದಕ್ಕೆ ಭಾರೀ ವಿರೋಧ ಕೇಳಿ ಬಂದಿತ್ತು. ಸಾಕಷ್ಟು ಪ್ರತಿಭಟನೆಗಳೂ ನಡೆದಿದ್ವು. ಇದೀಗ ಕೆಂಗೇರಿ ಉಪನಗರ ವಾರ್ಡ್ ತೆಗೆದು ಹಳೆ ಹೆಸರು ಕೆಂಗೇರಿ ವಾರ್ಡ್ ಎಂದು ಅಂತಿಮಗೊಳಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ