ಬೆಂಗಳೂರು: ಬೆಂಗಳೂರು ನಗರದಲ್ಲಿ (Bengaluru City) ಯಾವುದೇ ಚುನಾವಣೆಯಲ್ಲಾದರೂ (Election) ಮತದಾರರರು ಮತದಾನದ ಬಗ್ಗೆ ನಿರಾಸಕ್ತಿಗೆ ತೋರುತ್ತಾರೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ (Assembly Election 2023) ಮತದಾನದ ಪ್ರಮಾಣವನ್ನು ಹೆಚ್ಚಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ನಗರದಲ್ಲಿ 264 ಥೀಮ್ ಆಧಾರಿತ ಮತಗಟ್ಟೆಗಳನ್ನು ಸ್ಥಾಪಿಸಿದೆ. ಈ ಮೂಲಕ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಇರಾದೆ ಹೊಂದಿದೆ.
ವಿಭಿನ್ನ ಮತಗಟ್ಟೆಗಳು
ಆರೋಗ್ಯ, ಯುವಜನತೆಗೆ ವಿಭಿನ್ನ ಮತಕಟ್ಟೆ, ಸಂಸ್ಕೃತಿ ಬಿಂಬಿಸುವ ಮತಗಟ್ಟೆ, ಪಿಂಕ್ ಮತಗಟ್ಟೆ, ತೃತೀಯಲಿಂಗಿ ಮತಗಟ್ಟೆ, ಸಿರಿಧಾನ್ಯ ಮತಗಟ್ಟೆ, ಗೋ ಗ್ರೀನ್ ಮತಗಟ್ಟೆ, ವಿಕಲ ಚೇತನರಿಗೆ ಪ್ರತ್ಯೇಖ ಮತಗಟ್ಟೆ, ಪರಿಸರ, ವಿಜ್ಞಾನ ಮತ್ತು ತಂತ್ರಜ್ಞಾನ, ಮಾಜಿ ಸೈನಿಕರ ಮತಗಟ್ಟೆ ಮತ್ತು ಕ್ರೀಡಾ ಮತಗಟ್ಟೆ ಸೇರಿ 264 ವಿಭಿನ್ನ ಮತಗಟ್ಟೆಗಳನ್ನು ತೆರೆಯಲಾಗಿದೆ.
ಈ ವಿಶಿಷ್ಟ ಮತಗಟ್ಟೆಗಳು ಜಾಗೃತಿ ಮೂಡಿಸುವುದರೊಂದಿಗೆ ಸ್ಥಳೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಎತ್ತಿ ತೋರಿಸುತ್ತವೆ. ಮತಗಟ್ಟೆಗಳ ಗೋಡೆಗಳ ಮೇಲೆ ಮತದಾರರಿಗೆ ಎದ್ದು ಕಾಣುವಂತೆ ಈ ಥೀಮ್ಗಳನ್ನು ಪ್ರದರ್ಶಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಿಳೆಯರು, ವಿಶೇಷ ಚೇತನರು, ಹಿರಿಯ ನಾಗರಿಕರು, ಕ್ರಿಡಾಪಟುಗಳು ಸೇರಿದಂತೆ ವಿವಿಧ ವರ್ಗದ ಮತದಾರರನ್ನು ಸೆಳೆಯಲು ಹಾಗೂ ಮತದಾನ ಜಾಗೃತಿ ಮೂಡಿಸುವ ಸಲುವಾಗಿ ಹೀಗೆ ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇವಲ್ಲವು ಮಹಿಳಾ ಸ್ನೇಹಿ, ಅಂಗವಿಕಲ ಸ್ನೇಹಿ ಸೇರಿದಂತೆ ಒಟ್ಟಾರೆ ಮತದಾರ ಸ್ನೇಹಿ ಮತಗಟ್ಟೆಗಳಾಗಿವೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಹೇಳಿಕೆ ಬಿಡುಗಡೆ ಮಾಡಿದೆ.
ಬೆಂಗಳೂರಿನ ವಿಭಾಗವಾರು ಮತಗಟ್ಟೆಗಳ ವಿವರ ನೋಡುವುದಾದರೆ, ಬೆಂಗಳೂರು ಕೇಂದ್ರ ವ್ಯಾಪ್ತಿಯಲ್ಲಿ 68, ಬೆಂಗಳೂರು ಉತ್ತರದಲ್ಲಿ 62, ಬೆಂಗಳೂರು ದಕ್ಷಿಣ 64, ಬೆಂಗಳೂರು ನಗರ 70 ವಿಶೇಷ ಮತಗಟ್ಟೆಗಳನ್ನ ತೆರೆಯಲಾಗಿದೆ.
ಕಳೆದ 2 ಚುನಾವಣೆಗಳಲ್ಲಿ ಮತದಾನ ಪ್ರಮಾಣ
ಬೆಂಗಳೂರಿನಲ್ಲಿ ಮತದಾನದ ಪ್ರಮಾಣವನ್ನು ನೋಡುವುದಾದರೆ, 2013 ಮತ್ತು 2018ರಲ್ಲಿ ಬೆಂಗಳೂರು ದಕ್ಷಿಣದಲ್ಲಿ 55.04% ಮತ್ತು ಶೇ. 51.98% ಮತದಾನವಾಗಿದೆ. ಹಾಗೆಯೇ ಬೆಂಗಳೂರು ಉತ್ತರ 56.58% ಮತ್ತು 53.47% , ಬೆಂಗಳೂರು ಕೇಂದ್ರದಲ್ಲಿ 57.71%ಮತ್ತು 55.18 ಹಾಗೂ ಬೆಂಗಳೂರು ನಗರದಲ್ಲಿ 62.03% ಮತ್ತು 57% ಮತದಾನವಾಗಿದೆ. ಒಟ್ಟಾರೆ ಬೆಂಗಳೂರಿನಲ್ಲಿ ಚುನಾವಣೆಗಳಲ್ಲಿ ಕಳಪೆ ಮತದಾನ ದಾಖಲಾಗಿದೆ. 2018 ರಲ್ಲಿ ರಾಜ್ಯವು 72.44% ರಷ್ಟು ಮತದಾನವನ್ನು ದಾಖಲಿಸಿದ್ದರೆ, ಬೆಂಗಳೂರಿನಲ್ಲಿ ಕೇವಲ 55% ಮತದಾನವಾಗಿದೆ.
ಚುನಾವಣಾ ಆಯೋಗವು ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಇದೇ ರೀತಿಯ ಥೀಮ್ ಆಧಾರಿತ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ