ರಸ್ತೆಯಲ್ಲೇ ಬೋರ್​ವೆಲ್​ ಕೊರೆಸಿದ ಬಿಬಿಎಂಪಿ ಕಾರ್ಪೊರೇಟರ್; ಸಾರ್ವಜನಿಕರ ಆಕ್ರೋಶ

ಕಾರ್ಪೋರೇಟರ್ ಉಮಾದೇವಿ ಹೆಸರಿನಲ್ಲಿ ಗಂಡ ನಾಗರಾಜ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ಬೋರ್‌ವೆಲ್ ಕೊರೆಯುವ ಜಾಗದಲ್ಲೇ ನಾಗರಾಜು ಮೊಕ್ಕಂ ಹೂಡಿದ್ದರು. ಬೋರ್‌ವೆಲ್ ಕೊರೆಯಲು ಬೆಂಗಳೂರು ಜಲಮಂಡಳಿ, ಬಿಬಿಎಂಪಿ ಕಚೇರಿಯಿಂದ ಸ್ಥಳ ಗುರುತಿಸಿರುವ ಪತ್ರ ಹಾಗೂ ಬೋರ್‌ವೆಲ್ ಕೊರೆಯಲು ಸಂಬಂಧಿಸಿದ ದಾಖಲೆಗಳನ್ನ ಕೇಳಿದರೆ, ಮೆಲ್ಲಗೆ ಜಾರಿಕೊಳ್ಳುವ ಕೆಲಸ ಮಾಡಿದ್ದಾರೆ ಕಾರ್ಪೋರೇಟರ್ ಗಂಡ ನಾಗರಾಜ್.

news18-kannada
Updated:February 23, 2020, 8:19 AM IST
ರಸ್ತೆಯಲ್ಲೇ ಬೋರ್​ವೆಲ್​ ಕೊರೆಸಿದ ಬಿಬಿಎಂಪಿ ಕಾರ್ಪೊರೇಟರ್; ಸಾರ್ವಜನಿಕರ ಆಕ್ರೋಶ
ಬೋರ್ ವೆಲ್​ ಕೊರೆಸುತ್ತಿರುವ ದೃಶ್ಯ
  • Share this:
ಸಾರ್ವಜನಿಕರಿಗೆ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಾದದ್ದು ಜನಪ್ರತಿನಿಧಿಗಳು ಹಾಗೂ ಸರ್ಕಾರದ ಆದ್ಯ ಕರ್ತವ್ಯ. ಹಾಗಂತ ಮೂಲ‌ಭೂತ ಸೌಕರ್ಯ ಸೃಷ್ಟಿಸುವ ನೆಪದಲ್ಲಿ ಮತ್ತೊಂದು ಮೂಲಭೂತ ಸೌಕರ್ಯಕ್ಕೆ ಕೊಡಲಿ ಹಾಕುವುದು ಎಷ್ಟು ಸರಿ ಹೇಳಿ. ನೀವು ಮಾಡುತ್ತಿರುವುದು ಸರೀನಾ? ಅಂತಾ ಕೇಳಿದರೆ, ಬಿಬಿಎಂಪಿ ಮಹಿಳಾ ಕಾರ್ಪೋರೇಟರ್ ಹೆಸರಲ್ಲಿ ದರ್ಬಾರ್ ಮಾಡುತ್ತಿದ್ದ ಗಂಡ ಮರು ಉತ್ತರಿಸದೆ ಪರಾರಿಯಾಗಿದ್ದಾರೆ‌.

ಒಂದೆಡೆ ರಸ್ತೆಯಲ್ಲಿ ಬೋರ್‌ ಕೊರೆಯುತ್ತಿರುವ ಲಾರಿ, ಮತ್ತೊಂದೆಡೆ ವೀಕೆಂಡ್‌ನಲ್ಲಿ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್‌ನಲ್ಲಿ ಸಿಲುಕಿರುವ ವಾಹನ ಸವಾರರ ಹಿಡಿಶಾಪ. ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಬೆಂಗಳೂರು ಮಹಾನಗರ ಪಾಲಿಕೆಯ 15ನೇ ವಾರ್ಡ್‌ ಟಿ.ದಾಸರಹಳ್ಳಿ. ಕುಡಿಯುವ ನೀರಿನ ನೆಪವೊಡ್ಡಿ ಬಿಜೆಪಿ ಕಾರ್ಪೋರೇಟರ್ ಹಾಗೂ ತೋಟಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಉಮಾದೇವಿ ನಾಗರಾಜ್, ರಾತ್ರೋ ರಾತ್ರಿ ರಸ್ತೆಯಲ್ಲೆ ಬೋರ್‌ ಕೊರೆಯುವ ಕೆಲಸ ಶುರು ಮಾಡಿಸಿದ್ದಾರೆ. ಜಾಲಹಳ್ಳಿ ಮುಖ್ಯರಸ್ತೆಯಿಂದ ದಾಸರಹಳ್ಳಿ ಮಲ್ಲಸಂದ್ರ ಸೇರಿದಂತೆ ಹೆಸರಘಟ್ಟ ರಸ್ತೆಗೆ ಈ ರಸ್ತೆ ಸಂಪರ್ಕ ಕಲ್ಪಿಸಲಿದ್ದು, ಅಧಿಕ ಸಂಚಾರ ದಟ್ಟಣೆ ಇರುತ್ತದೆ. ಇಂತಹ ಕಿರಿದಾದ ರಸ್ತೆಯಲ್ಲಿ ಬೋರ್‌ವೆಲ್​​​ ಕೊರೆದು ವಾಹನ ಸವಾರರಿಗೆ ಮತ್ತಷ್ಟು ಕಿರಿಕಿರಿ ಅನುಭವಿಸುವಂತಾಗಿದೆ.

ಬಿಬಿಎಂಪಿ ಕಾರ್ಪೋರೇಟರ್​ ಉಮಾದೇವಿ-ಗಂಡ ನಾಗರಾಜ್


ಪಾಕ್ ಘೋಷಣೆ ಕೂಗಿದ ಅಮೂಲ್ಯ ಲಿಯೋನಾಳನ್ನು ಕೊಂದರೆ 10 ಲಕ್ಷ; ಶ್ರೀರಾಮ ಸೇನೆ ಕಾರ್ಯಕರ್ತ ಘೋಷಣೆ!

ಕಾರ್ಪೋರೇಟರ್ ಉಮಾದೇವಿ ಹೆಸರಿನಲ್ಲಿ ಗಂಡ ನಾಗರಾಜ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ಬೋರ್‌ವೆಲ್ ಕೊರೆಯುವ ಜಾಗದಲ್ಲೇ ನಾಗರಾಜು ಮೊಕ್ಕಂ ಹೂಡಿದ್ದರು. ಬೋರ್‌ವೆಲ್ ಕೊರೆಯಲು ಬೆಂಗಳೂರು ಜಲಮಂಡಳಿ, ಬಿಬಿಎಂಪಿ ಕಚೇರಿಯಿಂದ ಸ್ಥಳ ಗುರುತಿಸಿರುವ ಪತ್ರ ಹಾಗೂ ಬೋರ್‌ವೆಲ್ ಕೊರೆಯಲು ಸಂಬಂಧಿಸಿದ ದಾಖಲೆಗಳನ್ನ ಕೇಳಿದರೆ, ಮೆಲ್ಲಗೆ ಜಾರಿಕೊಳ್ಳುವ ಕೆಲಸ ಮಾಡಿದ್ದಾರೆ ಕಾರ್ಪೋರೇಟರ್ ಗಂಡ ನಾಗರಾಜ್. ರಸ್ತೆಯಲ್ಲಿ ಬೋರ್‌ವೆಲ್ ಕೊರೆದು ಉದ್ದುದ್ದ ಗಂಟೆಗಟ್ಟಲೆ ಟ್ರಾಫಿಕ್‌ ಜಾಂ ಆದರೂ, ಇದ್ಯಾವುದು ನಮಗೆ ಗೊತ್ತೆ ಇಲ್ಲದಂತೆ ಇರುವ ಪೊಲೀಸರ ವರ್ತನೆ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

ಒಟ್ಟಾರೆ ನೀರು ಸರಬರಾಜು ಮಾಡುವ ನೆಪದಲ್ಲಿ ರಸ್ತೆ ಕಿರಿದು ಮಾಡುತ್ತಿದ್ದು, ಹೆಂಡತಿಯ ಹೆಸರಿನಲ್ಲಿ ಗಂಡನ  ದರ್ಬಾರ್ ಸಹ ಜೋರಾಗಿಯೇ ನಡೆಯುತ್ತಿದೆ. ಇನ್ನಾದರೂ ಜನಪ್ರತಿನಿಧಿಗಳು ತಾವು ಮಾಡುವ ಕೆಲಸಗಳಿಂದ ಬೇರೆ ಯಾವ ಸಮಸ್ಯೆ ಉದ್ಭವಿಸಬಹುದು ಎಂದು ಒಂದು ಕ್ಷಣ ಯೋಚಿಸಬೇಕಿದೆ.

ಕೆಲಸ ಸಿಕ್ಕಿದ ಬಳಿಕ ಕಷ್ಟಪಟ್ಟು ಓದಿಸಿದ್ದ ಪೋಷಕರನ್ನೇ ಮರೆತ ಮಗ; ನ್ಯಾಯಮಂಡಳಿ ಮೆಟ್ಟಿಲೇರಿ ಗೆದ್ದ ತಂದೆ..! 

 
First published: February 23, 2020, 8:17 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading