• Home
  • »
  • News
  • »
  • state
  • »
  • Bengaluru: ಪ್ರಮುಖ ರಸ್ತೆಗಳ ಬದಿಯಲ್ಲಿ ಅಂಗಡಿ ಮಾಡಿಕೊಂಡವರಿಗೆ ಬಿಬಿಎಂಪಿ ಶಾಕ್

Bengaluru: ಪ್ರಮುಖ ರಸ್ತೆಗಳ ಬದಿಯಲ್ಲಿ ಅಂಗಡಿ ಮಾಡಿಕೊಂಡವರಿಗೆ ಬಿಬಿಎಂಪಿ ಶಾಕ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈಗ ನಗರದ 1,400 km ಉದ್ದದ ಮುಖ್ಯ ರಸ್ತೆ ಬದಿಯಲ್ಲಿ ಇರುವ ವ್ಯಾಪಾರಿಗಳ ತೆರವಿಗೆ ಬಿಬಿಎಂಪಿ ಯೋಚಿಸಿದೆ. ಪಾದಚಾರಿಗಳಿಗೆ ಇದರಿಂದ ಸಮಸ್ಯೆ ಆಗ್ತಿದೆ ಎಂಬ ನೆಪದಲ್ಲಿ ಬೀದಿಬದಿ ವ್ಯಾಪಾರಿಗಳ ತೆರವು ಮಾಡಲಾಗುತ್ತಿದೆ.

  • Share this:

ರಾಜಕಾಲುವೆ (Rajakaluve) ಒತ್ತುವರಿ ತೆರವು ಆಯ್ತು, ಈಗ ಬೀದಿಬದಿ ಒತ್ತುವರಿ (Street Vendors) ತೆರವಿಗೆ ಪಾಲಿಕೆ (BBMP) ನಿರ್ಧಾರ ಮಾಡಿದೆ. ಬೆಂಗಳೂರಿನ ಬೀದಿ ಉದ್ದಕ್ಕೂ ತಳ್ಳೋಗಾಡಿ, ಸಣ್ಣಪುಟ್ಟ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದವರಿಗೆ ಈ ಮೂಲಕ ಬಿಬಿಎಂಪಿ ಶಾಕ್ ನೀಡಿದೆ. ಬೀದಿ ಬದಿ ಜಾಗ ಒತ್ತುವರಿಯನ್ನು ತೆರವು ಮಾಡೊಕೆ ಪಾಲಿಕೆ ಮುಂದಾಗಿದೆ ರಸ್ತೆಯುದ್ದಕ್ಕೂ ತಳ್ಳುವ ಗಾಡಿ ಹಾಕಿ ಜಾಗ ಒತ್ತುವರಿ ಮಾಡಿಕೊಂಡ ಸ್ಥಳದ ತೆರವು ಮಾಡಲು ಬಿಬಿಎಂಪಿ ತೆರೆ ಮರೆಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಬಗ್ಗೆ ಹೊಸ ಸರ್ವೇ (Survey) ನಡೆಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಂದ ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಅಧಕಾರಿಗಳಿಗೆ ಸೂಚನೆ ನೀಡಿದ್ದಾರೆ. 2017ರಲ್ಲಿ ಬೀದಿಬದಿ ವ್ಯಾಪಾರಿಗಳ ಸರ್ವೇ ನಡೆಸಿದ ಬಿಬಿಎಂಪಿ ನಗರದಲ್ಲಿ ಎಷ್ಟು ಬೀದಿಬದಿ ವ್ಯಾಪಾರಿಗಳಿದ್ದಾರೆ ಅಂತ ಮಾಹಿತಿ ಕಲೆ ಹಾಕಿತ್ತು.


ಈ ಪ್ರಕಾರ ನಗರದಲ್ಲಿ ಒಂದು ಲಕ್ಷಕ್ಕೂ ಅಧಿಕ ಬೀದಿಬದಿ ವ್ಯಾಪಾರಿಗಳು ಇರೋದು ಗೊತ್ತಾಗಿದೆ. ಈ ಪೈಕಿ 25 ಸಾವಿರ ಬೀದಿಬದಿ ವ್ಯಾಪಾರಿಗಳಿಗೆ ಪಾಲಿಕೆಯಿಂದ ಅಧಿಕೃತ ಗುರುತಿನ ಚೀಟಿ ನೀಡಲಾಗಿದೆ.


1,400 km ಉದ್ದದ ಮುಖ್ಯ ರಸ್ತೆಯಲ್ಲಿ ವ್ಯಾಪಾರ


ಈಗ ನಗರದ 1,400 km ಉದ್ದದ ಮುಖ್ಯ ರಸ್ತೆ ಬದಿಯಲ್ಲಿ ಇರುವ ವ್ಯಾಪಾರಿಗಳ ತೆರವಿಗೆ ಬಿಬಿಎಂಪಿ ಯೋಚಿಸಿದೆ. ಪಾದಚಾರಿಗಳಿಗೆ ಇದರಿಂದ ಸಮಸ್ಯೆ ಆಗ್ತಿದೆ ಎಂಬ ನೆಪದಲ್ಲಿ ಬೀದಿಬದಿ ವ್ಯಾಪಾರಿಗಳ ತೆರವು ಮಾಡಲಾಗುತ್ತಿದೆ.


ಆದರೆ ಬೀದಿಬದಿ ವ್ಯಾಪಾರಿಗಳಿಗೆ ಸಬ್ ಆರ್ಟಿರಿಯಲ್ ರಸ್ತೆಯಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡುವ ಸಾಧ್ಯತೆ ಇದೆ. ಜೊತೆಗೆ ನಗರದ ಎಂಟೂ ವಲಯಗಳಲ್ಲಿ ಬೀದಿಬದಿ ವ್ಯಾಪಾರಿಗಳಿಗೆಂದೇ ಮಾರ್ಕೆಟ್ ನಿರ್ಮಾಣಕ್ಕೂ ಇದೇ ವೇಳೆ ಪಾಲಿಕೆ ಚಿಂತಿಸಿದೆ. ಈಗಾಗಲೇ ಎಲ್ಲಾ ವಲಯಗಳಲ್ಲಿನ RI ವಿಭಾಗದ ಇಂಜಿನಿಯರ್ ಗಳಿಗೆ ಮಾಹಿತಿ ಕಲೆಹಾಕುವಂತೆ ಸೂಚಿಸಲಾಗಿದೆ.


ಬೀದಿಬದಿ ವ್ಯಾಪಾರಿಗಳಿಂದ ತೀವ್ರ ಆಕ್ರೋಶ


ಬಿಬಿಎಂಪಿ ನಿರ್ಧಾರಕ್ಕೆ ಬೀದಿಬದಿ ವ್ಯಾಪಾರಿಗಳಿಂದ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ. ಬಿಬಿಎಂಪಿ ಬೀದಿಬದಿಯಲ್ಲಿ ವ್ಯಾಪಾರ ಮಾಡೋರ ಹೊಟ್ಟೆ ಮೇಲೆ ಪಾಲಿಕೆ ಹೊಡೆಯುತ್ತಿದೆ.


bbmp conduct survey about bengaluru street vendors amtv mrq
ಸಾಂದರ್ಭಿಕ ಚಿತ್ರ


ಸಪರೇಟ್ ಜಾಗ ಮಾಡಿಕೊಟ್ಟರೆ ನಮ್ಮನ್ನು ಹುಡುಕಿಕೊಂಡು ಗ್ರಾಹಕರು ಬರಲ್ಲ. 2014ರಲ್ಲಿ ಬಿಬಿಎಂಪಿಯೇ ಮಾಡಿರುವ ಬೀದಿಬದಿ ವ್ಯಾಪಾರದ ಕಾನೂನು ಅದನ್ನು ಪಾಲಿಕೆ ಪಾಲಿಸಬೇಕು ಅಂತ ಪಟ್ಟು ಹಿಡಿದಿದ್ದಾರೆ.


ಶೀಘ್ರವೇ ಅಧಿಕೃತ ಆದೇಶ ಸಾಧ್ಯತೆ


ಒಟ್ಟಾರೆ ರಾಜಕಾಲುವೆ ಒತ್ತುವರಿ ತೆರವು ಮಾಡಿ ಶ್ರೀಮಂತರಿಗೊಂದು ನ್ಯಾಯ, ಬಡವರಿಗೊಂದು ನ್ಯಾಯ ಎಂಬ ಕಳಂಕ ಹೊತ್ತುಕೊಂಡಿರುವ ಬಿಬಿಎಂಪಿ ಈಗ ಬಡವರು ಕೂಲಿಗೂ ಕೈಹಾಕೋಕೆ ಮುಂದಾಗಿದೆ.


ಸದ್ಯ ಪಾಲಿಕೆ ಬೀದಿಬದಿ ವ್ಯಾಪಾರಿಗಳ ಸರ್ವೇಗೆ ಮುಂದಾಗಿದ್ದು, ಶೀಘ್ರವೇ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಲಿದೆ.


ಇದನ್ನೂ ಓದಿ:  BBMP Election: ವರ್ಷದೊಳಗೆ ಬಿಬಿಎಂಪಿ ಚುನಾವಣೆ; ಹೈಕೋರ್ಟ್​


ಬೇಕಾಬಿಟ್ಟಿ ರಸ್ತೆ ಅಗೆದರೆ FIR ಹಾಕಿ


ಬೆಂಗಳೂರಿನಲ್ಲಿ ಬೇಕಾಬಿಟ್ಟಿ ರಸ್ತೆ ಅಗೆದವರ ವಿರುದ್ಧ ಎಫ್ಐಆರ್ ಹಾಕುವಂತೆ ನಗರ ಪೊಲೀಸ್ ಆಯುಕ್ತರಿಗೆ ಬಿಬಿಎಂಪಿ ಪತ್ರ ಬರೆದಿದೆ. ರಸ್ತೆ ಹಾಗೂ ಮೂಲಭೂತ ಸೌಕರ್ಯ ವಿಭಾಗ ಮುಖ್ಯ ಅಭಿಯಂತರರು ಈ ಪತ್ರವನ್ನು ಬರೆದಿದ್ದಾರೆ.


bbmp conduct survey about bengaluru street vendors amtv mrq
ಸಾಂದರ್ಭಿಕ ಚಿತ್ರ


ಬೆಂಗಳೂರಿನಲ್ಲಿ ಅನುಮತಿ ಇಲ್ಲದೇ ರಸ್ತೆ ಅಗೆದ್ರೆ ಇನ್ಮುಂದೆ ಎಫ್ಐಆರ್ ದಾಖಲಾಗುತ್ತದೆ. BESCOM, BWSSB ಅಥವಾ ಸಾರ್ವಜನಿಕರು ಯಾರೇ ರಸ್ತೆ ಅಗೆದರೂ ಕಡ್ಡಾಯವಾಗಿ ಅನುಮತಿ ತೆಗೆದುಕೊಳ್ಳಬೇಕು ಮತ್ತು ಕಾಮಗಾರಿ ಸ್ಥಳದಲ್ಲಿ ಕಡ್ಡಾಯವಾಗಿ ಬೋರ್ಡ್ ಹಾಕಬೇಕೆಂದು ಬಿಬಿಎಂಪಿ ಸೂಚಿಸಿದೆ.


ಇದನ್ನೂ ಓದಿ: BBMP: ವಿಪ್ರೋ ಮುಂದೆ ಮಂಡಿಯೂರಿದ್ರಾ ಬಿಬಿಎಂಪಿ, ಕಂದಾಯ ಇಲಾಖೆ ಅಧಿಕಾರಿಗಳು?


ರಸ್ತೆ ಅಗೆಯುವ ಕೆಲಸಕ್ಕೆ ಮುಂದಾದ ವ್ಯಕ್ತಿ ಅಥವಾ ಸಂಸ್ಥೆ ಕಾಮಗಾರಿಗೆ ಸಂಬಂಧಿಸಿದ ಮಾಹಿತಿಯುಳ್ಳ ಸ್ಪಷ್ಟವಾದ ಫಲಕ ಅಳವಡಿಸಬೇಕು.

Published by:Mahmadrafik K
First published: