BBMP: ಯಲಹಂಕ ವಲಯದಲ್ಲಿ ಜನರ ಪ್ರಮುಖ ಸಮಸ್ಯೆ; ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಉತ್ತರ

ಘನತ್ಯಾಜ್ಯ ವಿಭಾಗದ ಅಧಿಕಾರಿಯು ಇರುವ ಸಮಸ್ಯೆಯನ್ನು ಬಗೆಹರಿಸಿ ಆಟೊ ಟಿಪ್ಪರ್ ಚಾಲಕ ಹಾಗೂ ಸಹಾಯಕರಿಗೆ ಗುತ್ತಿಗೆದಾರರಿಂದ ತ್ವರಿತವಾಗಿ ವೇತನ ಕೊಡಿಸಲು ಸೂಚಿಸಿದರು.

ಸ್ಥಳೀಯರ ಜೊತೆ ತುಷಾರ್ ಗಿರಿನಾಥ್  ಸಭೆ

ಸ್ಥಳೀಯರ ಜೊತೆ ತುಷಾರ್ ಗಿರಿನಾಥ್ ಸಭೆ

  • Share this:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ (BBMP) ಸಾರ್ವಜನಿಕರಿಗೆ ಅನುಕೂಲಕರವಾಗುವ ನಿಟ್ಟಿನಲ್ಲಿ ಮಾನ್ಯ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ (Bruhat Bengaluru Mahanagara Palike Chief Commissioner Tushar Giri Nath) ಇಂದು ಯಲಹಂಕ (Yelahanka) ವಲಯ ವ್ಯಾಪ್ತಿಯಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು.  ಇದೇ ವೇಳೆ ಕೆಲ ಸಮಸ್ಯೆಗಳಿಗೆ  ಪರಿಹಾರ ಸಹ ನೀಡಿದರು. ಇನ್ನೂ ಕೂಡಲೇ ನಿಗಿಧಿತ ಸಮಯದಲ್ಲಿ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಾರ್ವಜನಿಕರಿಂದ ಸ್ವೀಕರಿಸಿದ ಅಹವಾಲುಗಳು:

1.ಕಾಫಿ ಬೋರ್ಡ್ ಲೇಔಟ್ ನಲ್ಲಿ ಬೀದಿ ವ್ಯಾಪಾರಿಗಳು ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ಪಾದಚಾರಿಗಳ ಓಡಾಟಕ್ಕೆ ಸಮಸ್ಯೆ ಆಗಲಿದೆ.
ಮುಖ್ಯ ಆಯುಕ್ತರ ಪ್ರತಿಕ್ರಿಯೆ: ಇಂದು ರಾತ್ರಿಯೇ ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಬೇಕು ಇಲ್ಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಯ ಮೇಲೆ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಹೆಚ್ಚು ಸಾಂದ್ರತೆ ಇಲ್ಲದ ಕಡೆ ಮಾರಾಟ ಮಾಡಲು ಅವಕಾಶ ಕಲ್ಪಿಸಲು ಅಧಿಕಾರಿಗೆ ಸೂಚನೆ ನೀಡಿದರು.

2.ಕಾಫಿ ಬೋರ್ಡ್ ಲೇಔಟ್ ನಲ್ಲಿ ಮಳೆ ನೀರುಗಾಲುವೆಗಳ ಕ್ಲೀನಿಂಗ್ ಸರಿಯಾಗಿ ಆಗುತ್ತಿಲ್ಲ, ಅದನ್ನು ಸರಿಯಾಗಿ ಮಾಡಲು ಮನವಿ.
ಪ್ರತಿಕ್ರಿಯೆ: ಮಳೆ ನೀರುಗಾಲುವೆಗಳಲ್ಲಿ ನಿರಂತರವಾಗಿ ಹೂಳನ್ನು ತೆರವುಗೊಳಿಸಬೇಕು. ಮಳೆ ನೀರು ನಿಲ್ಲದೆ ನೀರು ಸರಾಗವಾಗಿ ಹರಿದು ಹೋಗುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗೆ ಸೂಚಿಸಿದರು.

3. ಕಾಫಿ ಬೋರ್ಡ್ ಲೇಔಟ್ ನಲ್ಲಿರುವ ಉದ್ಯಾನವನದಲ್ಲಿ ಹಾಸನಗಳು ಆಳಾಗಿವೆ. ಉದ್ಯಾನವನ್ನು ಸರಿಯಾಗಿ ನಿರ್ವಹಣೆ ಮಾಡಲು ಮನವಿ.
ಪ್ರತಿಕ್ರಿಯೆ: ಉದ್ಯಾನವನಗಳನ್ನು ನಿರ್ವಹಣೆ ಮಾಡುವ ಸಂಬಂಧ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಉದ್ಯಾನದಲ್ಲಿ ದುರಸ್ತಿಯಾಗಿರುವ ಹಾಸನಗಳನ್ನು ಕೂಡಲೆ ಸರಿಪಡಿಸಲು ಅಧಿಕಾರಿಗೆ ಸೂಚಿಸಿದರು.

4.ಕಾಫಿ ಬೋರ್ಡ್ ಲೇಔಟ್ ನಲ್ಲಿರುವ 60 ಅಡಿ ರಸ್ತೆಯಲ್ಲಿ ವಾಹನಗಳು ಹೆಚ್ಚು ವೇಗವಾಗಿ ಹೋಗುತ್ತಿದ್ದು, ವೈಜ್ಞಾನಿಕ ಹಂಪ್ ಗಳನ್ನು ಮಾಡಲು ಮನವಿ.
ಪ್ರತಿಕ್ರಿಯೆ: 60 ಅಡಿ ರಸ್ತೆಯಲ್ಲಿ ಪೊಲೀಸ್ ಸಹಯೋಗದೊಂದಿಗೆ ಸ್ಥಳ ಪರಿಶೀಲಿಸಿ ಟ್ರಾಫಿಕ್ ಇಂಜಿನಿಯರಿಂಗ್ ಸೆಲ್ ಮೂಲಕ ಒಂದು ವಾರದಲ್ಲಿ 2 ಹಂಪ್ ಗಳನ್ನು ಹಾಕಲು ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಕಾರ್ಯಪಾಲಕ ಅಭಿಯಂತರರಿಗೆ ಸೂಚಿಸಿದರು.

5.ಕಾಫಿ ಬೋರ್ಡ್ ಲೇಔಟ್ ನಲ್ಲಿ ಬೀದಿ ನಾಯಿಗಳ ಆವಳಿ ಹೆಚ್ಚಾಗಿದ್ದು, ನಿಯಂತ್ರಿಸಲು ಮನವಿ.
ಪ್ರತಿಕ್ರಿಯೆ: ಪಶುಫಾಲನಾ ವಿಭಾಗ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಚ್ಚುವ ನಾಯಿಗಳನ್ನಿಡಿದು ರೇಬಿಸ್ ನೀಡಲು ಸೂಚನೆ ನೀಡಿದರು.

6.ಕೆಂಪೇಗೌಡ ವಾರ್ಡ್ ನಲ್ಲಿ ಹಳೆಯ ಮಣ್ಣಿನ ಗೋಡೆಯಲ್ಲಿರುವ ಮನೆ ಮಳೆಯಾದ ವೇಳೆ ಬಿದ್ದಿದ್ದು, ಪರಿಹಾರ ಕೊಡಲು ಮನವಿ.
ಪ್ರತಿಕ್ರಿಯೆ: ಇರುವ ಹಳೆಯ ಮನೆಯನ್ನು ತೆರವುಗೊಳಿಸಿ, ಒಂಟಿ ಮನೆ ಯೋಜನೆಯಡಿ ಕೂಡಲೆ ಅನುದಾನ ಬಿಡುಗಡೆಗೊಳಿಸಿ ಮನೆ ನಿರ್ಮಾಣ ಮಾಡಿಕೊಡಲು ವಲಯ ಜಂಟಿ ಆಯುಕ್ತರಿಗೆ ಸೂಚನೆ ನೀಡಿದರು.

7.ಮ್ಯಾನುಯಲ್ ಸ್ಕ್ಯಾವೆಂಜರ್ಸ್ ಗಳಿಗೆ ಸರಿಯಾದ ಸೌಲಭ್ಯಗಳನ್ನು ಒದಗಿಸಲು ಮನವಿ.
ಪ್ರತಿಕ್ರಿಯೆ: ನಗರದಲ್ಲಿನ ಎಲ್ಲಾ ವಲಯಗಳಲ್ಲಿ ಬರುವ ಮ್ಯಾನುಯಲ್ ಸ್ಕ್ಯಾವೆಂಜರ್ಸ್ ಗಳನ್ನು ಗುರುತಿಸಿ ಎಲ್ಲರಿಗೂ ಗುರುತಿನ ಚೀಟಿ ನೀಡಲಾಗುತ್ತಿದೆ. ಅಲ್ಲದೆ ಅವರ ಜೀವನೋಪಾಯಕ್ಕಾಗಿ 40 ಸಾವಿರ ಸಾಲ ನೀಡಲಾಗುತ್ತದೆ. ಅದನ್ನು ಸರಿಯಾಗಿ ಜಾರಿಗೊಳಿಸಲು ಕಲ್ಯಾಣ ವಿಭಾಗದ ವಿಶೇಷ ಆಯುಕ್ತರಿಗೆ ಈಗಾಗಲೇ ಸೂಚನೆ ನೀಡಲಾಗಿದ್ದು, ಎಲ್ಲರಿಗೂ ಸರಿಯಾದ ಸೌಲಭ್ಯಗಳನ್ನು ಕಲ್ಪಿಸಲು ಕಲ್ಯಾಣ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದರು.

8.ಸಂಪಿಗೆ ಹಳ್ಳಿಯಲ್ಲಿ ಬೀದಿ ದೀಪಗಳನ್ನು ಸರಿಯಾಗಿ ಅಳವಡಿಸಲು ಮನವಿ.
ಪ್ರತಿಕ್ರಿಯೆ: ಎಲ್ಲೆಲ್ಲಿ ಬೀದಿ ದೀಪಗಳು ದುರಸ್ತಿಯಾಗಿವೆ ಎಂಬುದನ್ನು ಗುರುತಿಸಿ ಕೂಡಲೆ ಬೀದಿ ದೀಪಗಳನ್ನು ಅಳವಡಿಸಲು ವಿದ್ಯುತ್ ವಿಭಾಗದ ಅಧಿಕಾರಿಗೆ ಸೂಚಿಸಿದರು.

bbmp-commissioner-tushar-girinath-listen-yelahanka-people-grievance
ಸ್ಥಳೀಯರ ಜೊತೆ ತುಷಾರ್ ಗಿರಿನಾಥ್ ಸಭೆ


9.ಜಕ್ಕೂರು ಮೇಲುಸೇತುವೆ ಕಾಮಗಾರಿ ಹಾಗೂ ರೈಲ್ವೆ ಹಳಿ ಕೆಳಗೆ ನಿರ್ಮಿಸಿರುವ ಸಬ್ ವೇ ಅನ್ನು ಬಳಕೆಗೆ ವ್ಯವಸ್ಥೆ ಕಲ್ಪಿಸಲು ಮನವಿ.
ಪ್ರತಿಕ್ರಿಯೆ: ಮೇಲುಸೇತುವೆ ನಿರ್ಮಾಣದ ಸ್ಥಳದಲ್ಲಿ ಭೂಸ್ವಾಧಿನ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರ ಸಮಸ್ಯೆ ಬಗೆಹರಿಸಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ರೈಲ್ವೆ ಹಳಿ ಕೆಳಗೆ ನಿರ್ಮಿಸಿರುವ ಸಬ್ ವೇ ಅನ್ನು ಬಳಕೆ ಮಾಡಲು ವ್ಯವಸ್ಥೆ ಮಾಡಿದ ನಂತರ ಸ್ಥಳದಲ್ಲಿ ಮಳೆ ನೀರು ನಿಲ್ಲದಂತೆ ತಾತ್ಕಾಲಿಕವಾಗಿ ಪಂಪ್ ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು.

10.ಜಕ್ಕೂರು ಭಾಗದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಮನವಿ.
ಪ್ರತಿಕ್ರಿಯೆ: ಒಂದು ವಾರದಲ್ಲಿ ರಸ್ತೆ ಗುಂಡಿಗಳನ್ನು ಮಚ್ಚಲು ಅಧಿಕಾರಿಗಳಿಗೆ ಸೂಚನೆ

11.ಅಟ್ಟೂರು ವಾರ್ಡ್ ದೊಡ್ಡ ಬೆಟ್ಟಹಳ್ಳಿಯಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ‍್ರ ತೆಗೆಯಲು ಮನವಿ.
ಪ್ರತಿಕ್ರಿಯೆ: ದೊಡ್ಡ ಬೆಟ್ಟಹಳ್ಳಿಯಲ್ಲಿ ಕೂಡಲೆ ‘ನಮ್ಮ ಕ್ಲೀನಿಕ್’ ಪ್ರಾರಂಭಿಸಲು ಆರೋಗ್ಯಾಧಿಕಾರಿಗೆ ಸೂಚನೆ ನೀಡಿದರು.

12.ಖಾತಾ ಮಾಡಿಕೊಡಲು ತುಂಬಾ ದಿನಗಳ ಕಾಲೆ ಅಲೆದಾಡುವ ಪರಿಸ್ಥಿತಿ ಇದ್ದು, ಕೂಡಲೆ ಖಾತೆ ಮಾಡಿಸಿಕೊಡಲು ಮನವಿ.
ಪ್ರತಿಕ್ರಿಯೆ: ಸಮೀಕ್ಷೆ ನಡೆಸಿ ಖಾತಾ ಆಂದೋಲನ ನಡೆಸಿ

13.ಬ್ಯಾಟರಾಯನಪುರ ವಾರ್ಡ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಟೊ ಟಿಪ್ಪರ್ ಚಾಲಕ ಹಾಗೂ ಸಹಾಯಕರಿಗೆ ಕೆಲವು ತಿಂಗಳಿಂದ ವೇತನ ನೀಡಿರುವುದಿಲ್ಲ. ಕೂಡಲೆ ವೇತನ ನೀಡಲು ಮನವಿ.
ಪ್ರತಿಕ್ರಿಯೆ: ಘನತ್ಯಾಜ್ಯ ವಿಭಾಗದ ಅಧಿಕಾರಿಯು ಇರುವ ಸಮಸ್ಯೆಯನ್ನು ಬಗೆಹರಿಸಿ ಆಟೊ ಟಿಪ್ಪರ್ ಚಾಲಕ ಹಾಗೂ ಸಹಾಯಕರಿಗೆ ಗುತ್ತಿಗೆದಾರರಿಂದ ತ್ವರಿತವಾಗಿ ವೇತನ ಕೊಡಿಸಲು ಸೂಚಿಸಿದರು.

bbmp-commissioner-tushar-girinath-listen-yelahanka-people-grievance
ಸ್ಥಳೀಯರ ಜೊತೆ ತುಷಾರ್ ಗಿರಿನಾಥ್ ಸಭೆ


14.ಅಳ್ಳಾಸಂದ್ರ ಕೆರೆಯಲ್ಲಿರುವ ಶೌಚಾಲಯವು ಆಳಾಗಿದ್ದು, ಅದನ್ನು ಸರಿಯಾಗಿ ನಿರ್ವಹಣೆ ಮಾಡಲು ಮನವಿ.
ಪ್ರತಿಕ್ರಿಯೆ: ಅಳ್ಳಾಳಸಂದ್ರ ಕೆರೆಯಲ್ಲಿರುವ ಶೌಚಾಲಯವನ್ನು ಸರಿಯಾಗಿ ನಿರ್ವಹಣೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.

ಇದನ್ನೂ ಓದಿ:  Karnataka Weather Report: ಇಂದು ತುಂತುರು ಮಳೆ ಸಾಧ್ಯತೆ; ಜಲಾಶಯಗಳು ಭಾಗಶಃ ಭರ್ತಿ

15.ಅಟ್ಟೂರು ವಾರ್ಡ್ ವಡೆರಹಳ್ಳಿ ರಸ್ತೆಯಲ್ಲಿ ಜಲಮಂಡಳಿಯಿಂದ 110 ಹಳ್ಳಿಗಳ್ಳಿಗಳಿಗೆ ಕಾವೇರಿ ನೀರು ಹಾಗೂ ಡ್ರೈನೇಜ್ ಲೈನ್ ಮಾಡುತ್ತಿದ್ದು, ಇನ್ನೂ ಕಾಮಗಾರಿ ಮುಗಿಯದ ಕಾರಣ ನಾಗರಿಕರಿಗೆ ಸಾಕಷ್ಟು ಸಮಸ್ಯೆ ಆಗುತ್ತಿದೆ.
ಪ್ರತಿಕ್ರಿಯೆ: ಇನ್ನೂ 150 ಮೀಟರ್ ಕಾಮಗಾರಿ ಬಾಕಿಯಿದ್ದು, ಒಂದು ತಿಂಗಳಲ್ಲಿ ಕೆಲಸ ಪೂರ್ಣಗೊಳಿಸಲು ಜಲಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

16.ವಿದ್ಯಾರಣ್ಯಪುರ ಮುಖ್ಯ ರಸ್ತೆಯಲ್ಲಿ ಕಲ್ವರ್ಟ್ ಬ್ಲಾಕ್ ಆಗಿದ್ದು, ಅದರಲ್ಲಿ ತುಂಬಿರುವ ಶಿಲ್ಟ್ ತೆರವುಗೊಳಿಸಲು ಮನವಿ.
ಪ್ರತಿಕ್ರಿಯೆ: ದೊಡ್ಡಬೊಮ್ಮಸಂದ್ರ ಕೆರೆ ಬಸವ ಸಮಿತಿ ಲೇಔಟ್ ಬಳಿ ಕಲ್ವರ್ಟ್ ನಿರ್ಮಾಣ, ಕಚ್ಚಾ ಡ್ರೈನ್ ಗೆ ಆರ್.ಸಿ.ಸಿ ಗೋಡೆ ನಿರ್ಮಾಣ ಮಾಡಲು ಕೂಡಲೆ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

17.ವಿದ್ಯಾರಣ್ಯಪುರ ವ್ಯಾಪ್ತಿಯ ರಸ್ತೆಗಳ ಬದಿಯಿರುವ ಸೈಡ್ ಡ್ರೈನ್ ಗಳನ್ನು ಸರಿಪಡಿಸಲು ಮನವಿ.
ಪ್ರತಿಕ್ರಿಯೆ: ವಾರ್ಡ್ ಅಭಿವೃದ್ಧಿಯಲ್ಲಿ ರಸ್ತೆ ಬದಿಯಿರುವ ಸೈಡ್ ಡ್ರೈನ್ ಗಳ ಅಭಿವೃದ್ಧಿ ಪಡಿಸಲು ಅಧಿಕಾರಿಗಳಿಗೆ ಸೂಚಿಸಿದರು.

bbmp-commissioner-tushar-girinath-listen-yelahanka-people-grievance
ಸ್ಥಳೀಯರ ಜೊತೆ ತುಷಾರ್ ಗಿರಿನಾಥ್ ಸಭೆ


18.ರಸ್ತೆ ಬದಿಯಿರುವ ಮರಗಳ ಕೊಂಬೆಗಳನ್ನು ಕತ್ತರಿಸಲು ಮನವಿ.
ಪ್ರತಿಕ್ರಿಯೆ: ಯಲಹಂಕ ವಲಯ ವ್ಯಾಪ್ತಿಯಲ್ಲಿ ಆದ್ಯತೆ ಮೇರೆಗೆ ಪ್ರಮುಖ ರಸ್ತೆಗಳಲ್ಲಿ ಮರಗಳ ಕೊಂಬೆಗಳನ್ನು ಕತ್ತರಿಸಬೇಕು. ಆ ಬಳಿಕ ವಾರ್ಡ್ ರಸ್ತೆಗಳಲ್ಲಿ ಮರದ ಕೊಂಬೆಗಳನ್ನು ತರವುಗೊಳಿಸಲಿ ಅರಣ್ಯ ವಿಭಾಗದ ಅಧಿಕಾರಿಗೆ ಸೂಚಿಸಿದರು.

19.ಬ್ಯಾಟರಾಯನಪುರ ದಿಂದ ಹೆಬ್ಬಾಳ ಕಡೆ ಹೋಗುವ ಸರ್ವೀವ್ ರಸ್ತೆಯಲ್ಲಿ ಸೀವೇಜ್ ನೀರು ಬರುತ್ತಿದ್ದು, ಅದನ್ನು ಸರಿಪಡಿಸಲು ಮನವಿ.
ಪ್ರತಿಕ್ರಿಯೆ: ಜಲಮಂಡಳಿ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಸೀವೇಜ್ ನೀರು ರಸ್ತೆ ಮೇಲೆ ಬರುವುದನ್ನು ಕೂಡಲೆ ತಪ್ಪಿಸಲು ಸೂಚಿಸಿದರು.

ಇದನ್ನೂ ಓದಿ:  Murder: ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್​ ಬರ್ಬರ ಹತ್ಯೆ; ಪುತ್ತೂರಿನಾದ್ಯಂತ 144 ಸೆಕ್ಷನ್ ಜಾರಿ

ಈ ವೇಳೆ ವಲಯ ಆಯುಕ್ತರಾದ ರಂಗಪ್ಪ, ವಲಯ ಜಂಟಿ ಆಯುಕ್ತರಾದ ಪೂರ್ಣೀಮಾ, ವಲಯ ಮುಖ್ಯ ಅಭಿಯಂತರರಾದ ರಂಗನಾಥ್, ಕಾರ್ಯಪಾಲಕ ಅಭಿಯಂತರರು, ಆರೋಗ್ಯಾಧಿಕಾರಿ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
Published by:Mahmadrafik K
First published: