Bengaluru: ಮಹದೇವಪುರ ವಲಯದಲ್ಲಿ ಸಮಸ್ಯೆಗಳೇನು? ಅದಕ್ಕೆ BBMP ಕಮಿಷಿನರ್ ಉತ್ತರವೇನು?

ಎಲ್ಲೆಲ್ಲಿ ರಸ್ತೆ ಮಳೆ ನೀರು ನಿಲ್ಲುತ್ತದೆ ಎಂಬುದನ್ನು ಗುರುತಿಸಿ ಮತ್ತೆ ಆ ಸ್ಥಳಗಳಲ್ಲಿ ಮಳೆ ನೀರು ನಿಲ್ಲದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ತುಷಾರ್ ಗಿರಿನಾಥ್​, ಮುಖ್ಯ ಆಯುಕ್ತರು

ತುಷಾರ್ ಗಿರಿನಾಥ್​, ಮುಖ್ಯ ಆಯುಕ್ತರು

  • Share this:
ಬೆಂಗಳೂರು - ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP_=) ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಅನುಕೂಲಕರವಾಗುವ ನಿಟ್ಟಿನಲ್ಲಿ ಮಾನ್ಯ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ (Tushar Girinath) ಮಹದೇವಪುರ (Mahdevapura) ವಲಯ ವ್ಯಾಪ್ತಿಯಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು. ಸಾರ್ವಜನಿಕರಿಂದ ಸ್ವೀಕರಿಸಿದ ಅಹವಾಲುಗಳು:1. ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಟಿಡಿಆರ್ ಸಮಸ್ಯೆಯಿಂದ ಹಲವಾರು ರಸ್ತೆಗಳು ಅಭಿವೃದ್ಧಿಯಾಗದೆ ಹಾಗೆಯೇ ಉಳಿದಿದ್ದು, ಅದನ್ನು ಸರಿಪಡಿಸಲು ಮನವಿ.ಮುಖ್ಯ ಆಯುಕ್ತರು, ಟಿಡಿಆರ್ ಸಂಬಂಧ ಯಾವ್ಯಾವ ಕಾಮಗಾರಿಗಳು ಹಾಗೆಯೇ ಉಳಿದಿವೆಯೋ ಅವುಗಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಮಸ್ಯೆ ಇತ್ಯರ್ಥಪಡಿಸಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ವಲಯ ಜಂಟಿ ಆಯುಕ್ತರಿಗೆ ಸೂಚನೆ ನೀಡಿದರು.

1.ಪಣತ್ತೂರು ಬಳಿ ರೈಲ್ವೆ ಕೆಳಸೇತುವೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಮನವಿ.
ಪ್ರತಿಕ್ರಿಯೆ: ರೈಲ್ವೆ ಇಲಾಖೆ ವತಿಯಿಂದ ಕೆಳಸೇತುವೆ ಕಾಮಗಾರಿ ಪ್ರಗತಿಯಲ್ಲಿದ್ದು, ರೈಲ್ವೆ ಅಧಿಕಾರಿಗಳ ಜೊತೆ ಮಾತನಾಡಿ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಳಿಗೆ ಸೂಚಿಸಿದರು.

2.ಪುಣತ್ತೂರು ಮುಖ್ಯ ರಸ್ತೆಯನ್ನು 18 ಮೀಟರ್ ರಸ್ತೆ ಅಗಲಕ್ಕೆ ಭೂಸ್ವಾಧೀನ ಪಡಿಸಿಕೊಂಡು ಸಮಸ್ಯೆ ಬಗೆಹರಿಸಲು ಮನವಿ.
ಪ್ರತಿಕ್ರಿಯೆ: ರಸ್ತೆ ಅಗಲೀಕರಣಕ್ಕಾಗಿ ಭೂ ಸ್ವಾಧೀನ ಪಡಿಸುಕೊಳ್ಳುವ ಸಂಬಂಧ ತ್ವರಿತವಾಗಿ ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಂಡು ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ರಸ್ತೆ ಅಗಲೀಕರಣ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.

ಕಾಮಗಾರಿ ಪೂರ್ಣಗೊಳಿಸಲು ಮನವಿ

3.ಮಾರತಹಳ್ಳಿ ಬಳಿ ರೈಲ್ವೆ ಮೇಲು ಸೇತುವೆಯ ಕೆಳಗೆ ಹೆಚ್.ಎ.ಎಲ್ ಕಡೆಯಿಂದ ಬರುವವರು ರಿಂಗ್ ರಸ್ತೆಗೆ ಯು-ಟರ್ನ್ ತೆಗೆದುಕೊಳ್ಳುವ ಸಲುವಾಗಿ 6 ಕೋಟಿ ರೂ. ವೆಚ್ಚದಲ್ಲಿ ಕೆಳ ಸೇತುವೆ ಕಾಮಗಾರಿ ಪ್ರಗತಿಯಲ್ಲಿದ್ದು, ಈಗಾಗಲೇ ಅರ್ಧಭಾಗ ಫ್ರೀ ಕಾಸ್ಟ್ ಎಲಿಮೆಂಟ್ ಬಾಕ್ಸ್ ಅಳವಡಿಕೆಯಾಗಿದೆ. ಇನ್ನುಳಿದರ್ಧ ಭಾಗದಲ್ಲಿ ಚರ್ಚ್ ಆಸ್ತಿಯನ್ನು ಪಡೆಯುವ ಸಲುವಾಗಿ ವಿಳಂಭವಾಗುತ್ತಿದ್ದು, ಕಾಮಗಾರಿಯನ್ನು ಪೂರ್ಣಗೊಳಿಸಿಲು ಮನವಿ.
ಪ್ರತಿಕ್ರಿಯೆ: ಕೆಳಸೇತುವೆ ಕಾಮಗಾರಿಯಿಂದ ಈ ಭಾಗದ ಬಹುತೇಕ ಸಂಚಾರ ದಟ್ಟಣೆ ಕಡಿಮೆಯಾಗಲಿದ್ದು, ಚರ್ಚ್ ಮಾಲೀಕರ ಬಳಿ ಮಾತನಾಡಿ ಜಾಗವನ್ನು ಪಾಲಿಕೆ ವಶಕ್ಕೆ ಪಡೆದು ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ.

ಇದನ್ನೂ ಓದಿ:  Karnataka Government: ಸರ್ಕಾರಿ ಕಚೇರಿಗಳಲ್ಲಿ ಫೋಟೋ, ವಿಡಿಯೋ ನಿಷೇಧ ಆದೇಶ ಹಿಂಪಡೆದ ಬೊಮ್ಮಾಯಿ ಸರ್ಕಾರ

4.ಮಹದೇವಪುರ ವಲಯ ವ್ಯಾಪ್ತಿಯಲ್ಲಿ ರಸ್ತೆ ಮೇಲೆ ಮಳೆ ನೀರು ನಿಲ್ಲುವ ಸ್ಥಳಗಳನ್ನು ಸರಿಪಡಿಸಲು ಮನವಿ.
ಪ್ರತಿಕ್ರಿಯೆ: ಎಲ್ಲೆಲ್ಲಿ ರಸ್ತೆ ಮಳೆ ನೀರು ನಿಲ್ಲುತ್ತದೆ ಎಂಬುದನ್ನು ಗುರುತಿಸಿ ಮತ್ತೆ ಆ ಸ್ಥಳಗಳಲ್ಲಿ ಮಳೆ ನೀರು ನಿಲ್ಲದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೆರೆಯ ನೀರಿನ ಗುಣಮಟ್ಟ

5.ಕೆರೆಗಳಿಗೆ ಸೀವೇಜ್ ನೀರು ಸೇರುತ್ತಿದ್ದು, ಕೆರೆಯ ನೀರಿನ ಗುಣಮಟ್ಟ ಹಾಳಾಗುತ್ತಿದ್ದು, ಅದನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲು ಮನವಿ.
ಪ್ರತಿಕ್ರಿಯೆ: ಕೆರೆಗಳಿಗೆ ಸೀವೇಜ್ ನೀರು ಸೇರುತ್ತಿರುವ ಬಗ್ಗೆ ನೀರಿನ ಗುಣಮಟ್ಟವನ್ನು ಪರಿಶೀಲಿಸಬೇಕು. ಒಂದು ವೇಳೆ ಸೀವೇಜ್ ನೀರು ಸೇರುತ್ತಿದ್ದರೆ ಕೂಡಲೆ ಜಲಮಂಡಳಿ ಅಧಿಕಾರಿಗಳನ್ನು ಸಂಪರ್ಕಿಸಿ ಸೀವೇಜ್ ನೀರು ಕೆರೆಗೆ ಸೇರದಂತೆ ಪ್ರತ್ಯೇಕ ಲೈನ್ ನಿರ್ಮಾಣ ಮಾಡಲು ಕೆರೆಗಳ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು.

6.ಬೆಸ್ಕಾಂ ಇಲಾಖೆಯಿಂದ ರಸ್ತೆ ಹಗೆದು ಕೇಬಲ್ ಅಳವಡಿಸುತ್ತಿದ್ದು, ಅದನ್ನು ದುರಸ್ತಿಪಡಿಸದೇ ಇರುವ ಕಾರಣ ವಾಹನ ಸವಾರರಿಗೆ ಸಾಕಷ್ಟು ಸಮಸ್ಯೆ ಆಗುತ್ತಿದೆ. ಇದನ್ನು ಸರಿಪಡಿಸಲು ಮನವಿ.
ಪ್ರತಿಕ್ರಿಯೆ: ಮನೆ ಸಂಪರ್ಕಕ್ಕಾಗಿ ಎಲ್ಲೂ ರಸ್ತೆ ಕತ್ತರಿಸುವಂತಿಲ್ಲ. Horizontal Directional Digging ಗೆ ಮಾತ್ರ ಅನುಮತಿ ನೀಡಲಾಗುತ್ತಿದ್ದು, ಎಲ್ಲೆಂದಲ್ಲಿ ಹಗೆದರೆ ಶಿಸ್ತು ಕ್ರಮ ಜರುಗಿಸಲಾಗುವುದು. ಅನಧಿಕೃತವಾಗಿ ರಸ್ತೆ ಹಗೆಯುವ ಬಗ್ಗೆ ಮಾರ್ಷಲ್ ಗಳ ಮೂಲಕ ಮೇಲ್ವಿಚರಣೆ ಮಾಡಿಸಿ, ಎಲ್ಲಾದರು ಅನಧಿಕೃತವಾಗಿ ಹೆಗೆಯುವುದು ಕಂಡುಬಂದರೆ ಕೂಡಲೆ ಕೇಬಲ್‌ಗಳನ್ನು ಜಪ್ತಿ ಮಾಡಿ ದಂಡ ವಿಧಿಸುವ ಜೊತೆಗೆ ಶಿಸ್ತು ಕ್ರಮಕೈಗೊಳ್ಳಲು ಸೂಚಿಸಿದರು.

ಅಪಾಯ ಸ್ಥಿತಿಯಲ್ಲಿರುವ ಮರ ಕತ್ತರಿಸುವಿಕೆಗೆ ಅನುಮತಿ

7.ಮರ ಕತ್ತರಿಸುವಿಕೆಗೆ ಅನುಮತಿ ನೀಡಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದ್ದು, ಆ ಸಮಸ್ಯೆಯನ್ನು ಬಗೆಹರಿಸಲು ಮನವಿ.
ಪ್ರತಿಕ್ರಿಯೆ: ಅಪಾಯ ಸ್ಥಿತಿಯಲ್ಲಿರುವ ಮರಗಳನ್ನು ತ್ವರಿತವಾಗಿ ತೆರವುಗೊಳಲು ಕ್ರಮ ಕೈಗೊಳ್ಳಲು ಸೂಚಿಸಿದರು.

BBMP Commissioner tushar girinath listen mahadevapura people grievance
ಸಭೆ


8.ಸೀತಾರಾಮ ಪಾಳ್ಯ ಕೆರೆಗೆ ನೀರು ಬರುವ ಸಂಪರ್ಕವನ್ನು ಎತ್ತರಿಸಿರುವ ಕಾರಣ ಕೆರೆಗೆ ಸರಾಗವಾಗಿ ನೀರು ಸೇರುತ್ತಿಲ್ಲ. ಅದನ್ನು ಸರಿಪಡಿಸಲು ಮನವಿ.
ಪ್ರತಿಕ್ರಿಯೆ: ಕೆರೆಗೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಿ ಕೆರೆಯನ್ನು ಸಮರ್ಪಕವಾಗಿ ಅಭಿವೃದ್ಧಿ ಪಡಿಸಲು ಕೆರೆಯ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು.

9.ಗರುಡಾಚಾರ್ ಪಾಳ್ಯ ವಾರ್ಡ್ ಗೋಪಾಲನ್ ಶಾಲೆಯ ಬಳಿ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿದ್ದು, ಅದನ್ನು ತೆರವುಗೊಳಿಸಲು ಮನವಿ.
ಪ್ರತಿಕ್ರಿಯೆ: ಭೂಮಾಪಕರನ್ನು ಸ್ಥಳಕ್ಕೆ ಕರೆಸಿಕೊಂಡು ಸಮೀಕ್ಷೆ ನಡೆಸಿ ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವುದನ್ನು ಖಾತರಿಪಡಿಸಿಕೊಂಡು ಕೂಡಲೆ ತೆರವು ಕಾರ್ಯಾಚರಣೆ ಪ್ರಾರಂಭಿಸಲು ರಾಜಕಾಲುವೆ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು.

ಅನಧಿಕೃತ ಶೆಡ್ ತೆರವು

10.ಕೆರೆ ಬಫರ್ ವಲಯದಲ್ಲಿ ಅನಧಿಕೃತವಾಗಿ ಶೆಡ್ ನಿರ್ಮಾಣ ಮಾಡಿಕೊಂಡಿದ್ದು, ಸಂಬಂಧಪಟ್ಟರ ಮೇಲೆ ಅಗತ್ಯ ಕ್ರಮ ಕೈಗೊಳ್ಳಲು ಮನವಿ.
ಪ್ರತಿಕ್ರಿಯೆ: ರಾಜಕಾಲುವೆ ಹಾಗೂ ಕೆರೆಗಳ ಬಫರ್ ವಲಯಗಳಲ್ಲಿ ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವ ಸ್ಥಳಗಳ ಪಟ್ಟಿ ಮಾಡಿಕೊಂಡು ಪ್ರತಿ ಶನಿವಾರವೂ ಡ್ರೈವ್ ಮೂಲಕ ತೆರವು ಕಾರ್ಯಾಚರಣೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿದರು.

11.ಕೆ.ಆರ್.ಪುರ ವೆಂಗಯ್ಯನ ಕೆರೆಯಿಂದ ತುಂಬಾ ವಾಸನೆ ಬರುತ್ತಿದ್ದು, ಆ ಸಮಸ್ಯೆಯನ್ನು ಬಗೆಹರಿಸಲು ಮನವಿ.
ಪ್ರತಿಕ್ರಿಯೆ: ಕೆರೆಯಲ್ಲಿ ವಾಸನೆ ಬರುವುದನ್ನು ನಿಲ್ಲಿಸಲು ಪೈಪ್ ಲೈನ್ ಕಾಮಗಾರಿ ಪ್ರಗತಿಯಲ್ಲಿದ್ದು, ಫೆನ್ಸಿಂಗ್ ಮಾಡುವ ಸಲುವಾಗಿ ಸಮೀಕ್ಷೆ ನಡೆಯುತ್ತಿದೆ. ಕೆರೆಗೆ ಸೀವೇಜ್ ನೀರು ಸೇರುವಂತಿಲ್ಲ.

ಇದನ್ನೂ ಓದಿ: Ramanagara: ವಿದ್ಯಾರ್ಥಿ ಮೇಲೆ ಸಬ್ ಇನ್ಸ್‌ಪೆಕ್ಟರ್‌ ಹಲ್ಲೆ; ಠಾಣೆಗೆ ಮುತ್ತಿಗೆಹಾಕಿ‌ ಪ್ರತಿಭಟನೆ, SP ಸ್ಪಷ್ಟನೆ

12.ರಾಮಮೂರ್ತಿನಗರ ಮುಖ್ಯ ರಸ್ತೆ ಬದಿ ಕಸವನ್ನು ಬಿಸಾಡುತ್ತಾರೆ. ಅದನ್ನು ತಡೆದು ಸಮಸ್ಯೆ ಬಗೆಹರಿಸಲು ಮನವಿ.
ಪ್ರತಿಕ್ರಿಯೆ: ರಸ್ತೆ ಬದಿ ಕಸ ಬಿಸಾಡುವುದನ್ನು ತಡೆಯುವ ಸಲುವಾಗಿ ಅಗತ್ಯ ಕ್ರಮ ಕೈಗೊಳ್ಳಿ. ರಸ್ತೆ ಬದಿ ಸ್ಥಳಾವಕಶವಿರುವ ಕಡೆ ಹೊಸದಾಗಿ 77 ಕಸದ ಕಿಯೋಸ್ಕ್ ಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಶೀಘ್ರ ಅಳವಡಿಸಲು ಅಧಿಕಾರಿಗಳಿಗೆ ಸೂಚಿಸಿದರು.

BBMP Commissioner tushar girinath listen mahadevapura people grievance
ಸಭೆ


13.ವಾರ್ಡ್ ವ್ಯಾಪ್ತಿಯಲ್ಲಿ ಆಟೋ ಟಿಪ್ಪರ್ ಹೋಗುವ ಬಗ್ಗೆ ಮಾಹಿತಿ ಕೊಡಲು ಮನವಿ.
ಪ್ರತಿಕ್ರಿಯೆ: ನಗರದ ಆಯಾ ವಾರ್ಡ್ ವ್ಯಾಪ್ತಿಯಲ್ಲಿ ಆಟೋ ಟಿಪ್ಪರ್ ಗಳು ಯಾವ ಸಮಯಕ್ಕೆ ಹೋಗಿ ಕಸ ಸಂಗ್ರಹಿಸಲಿದೆ ಎಂಬುದರ ಬಗ್ಗೆ ಮೈಕ್ರೊ ಪ್ಲಾನ್ ಮಾಡಿ ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಲು ಘನತ್ಯಾಜ್ಯ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು.
Published by:Mahmadrafik K
First published: