• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Tushar Girinath: ಬೊಮ್ಮನಹಳ್ಳಿ ವಲಯದಲ್ಲಿ ಸಮಸ್ಯೆಗಳೇನು? ಜನರ ಪ್ರಶ್ನೆ, ಮುಖ್ಯ ಆಯುಕ್ತರ ಉತ್ತರ

Tushar Girinath: ಬೊಮ್ಮನಹಳ್ಳಿ ವಲಯದಲ್ಲಿ ಸಮಸ್ಯೆಗಳೇನು? ಜನರ ಪ್ರಶ್ನೆ, ಮುಖ್ಯ ಆಯುಕ್ತರ ಉತ್ತರ

ತುಷಾರ್ ಗಿರಿನಾಥ್

ತುಷಾರ್ ಗಿರಿನಾಥ್

ಸಾರ್ವಜನಿಕರಿಂದ ಸ್ವೀಕರಿಸಿದ ಅಹವಾಲುಗಳು ಏನು ಮತ್ತು ಆಯುಕ್ತರು ನೀಡಿದ ಪರಿಹಾರ ಏನು ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ. ಕೆಲ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡುವ ಪ್ರಯತ್ನ ಸಹ ಮಾಡಲಾಯ್ತು.

  • Share this:

ಬೆಂಗಳೂರು - ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (Bruhat Bengaluru Mahanagara Palike) ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಅನುಕೂಲಕರವಾಗುವ ನಿಟ್ಟಿನಲ್ಲಿ ಮಾನ್ಯ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ (Tushar Girinath) ರವರು ಇಂದು ಬೊಮ್ಮನಹಳ್ಳಿ ವಲಯ (Bommanahalli) ವ್ಯಾಪ್ತಿಯಲ್ಲಿ ಸಾರ್ವಜನಿಕರ (Public) ಅಹವಾಲುಗಳನ್ನು ಸ್ವೀಕರಿಸಿದರು . ಸಾರ್ವಜನಿಕರಿಂದ ಸ್ವೀಕರಿಸಿದ ಅಹವಾಲುಗಳು ಏನು ಮತ್ತು ಆಯುಕ್ತರು ನೀಡಿದ ಪರಿಹಾರ ಏನು ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ. ಕೆಲ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡುವ ಪ್ರಯತ್ನ ಸಹ ಮಾಡಲಾಯ್ತು.


ಸಾರ್ವಜನಿಕರಿಂದ ಸ್ವೀಕರಿಸಿದ ಅಹವಾಲುಗಳು:
1.ಉತ್ತರಹಳ್ಳಿ‌ ವಾರ್ಡ್ ವ್ಯಾಪ್ತಿಯಲ್ಲಿ ಅಕ್ರಮ ಕಟ್ಟಡಗಳು ನಿರ್ಮಾಣ ಮಾಡಿದ್ದು, ಅದರ ಮೇಲೆ ಕ್ರಮ ಕೈಗೊಳ್ಳಲು ಸೂಚಿಸಿದರು.
ಮುಖ್ಯ ಅಯುಕ್ತರ ಪ್ರತಿಕ್ರಿಯೆ: ಪರಿಶೀಲಿಸಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ‌.


2.ಅಂಜನಾಪುರ ಹಾಗೂ ಜೆ.ಪಿ ನಗರ ಕೆಲ ಭಾಗವು ಬಿಡಿಎ ಸುಪರ್ದಿಯಲ್ಲಿದ್ದು, ಈ ಭಾಗದಲ್ಲಿ ಕಸದ ಸಮಸ್ಯೆ ಸಾಕಷ್ಟಿದ್ದು, ಅದನ್ನು ಬಗೆಹರಿಸಲು ಮನವಿ.
ಪ್ರತಿಕ್ರಿಯೆ: ಬಿಡಿಎ ಸುಪರ್ದಿಯಲ್ಲಿರುವ ಸ್ಥಳವನ್ನು ಅಭಿವೃದ್ಧಿಪಡಿಸಿ ಬಿಬಿಎಂಪಿಗೆ ಹಸ್ತಾಂತರಿಸಲಿದ್ದಾರೆ. ಈ ಪೈಕಿ ಬಿಡಿಎ ಅಧಿಕಾರಿಗಳ ಜೊತೆ ಮಾತನಾಡಿ ಕಸದ ಸಮಸ್ಯೆ ಬಗೆಹರಿಸಲು ಸೂಚಿಸಿದರು.


ಇದನ್ನೂ ಓದಿ:  Yadagiri: ಸುಳ್ಳು ಭರವಸೆ ನೀಡಿ ಕೈ ತೊಳೆದುಕೊಂಡ ಸರ್ಕಾರ; ಕೃಷ್ಣಾ ನದಿ ತೀರದ ಜನರ ಜೀವನ ನರಕ


3.ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿಕೊಂಡಿದ್ದು, ಇದರಿಂದ ನಾಗರಿಕರಿಗೆ ಸಮಸ್ಯೆ ಆಗುತ್ತಿದೆ.
ಪ್ರತಿಕ್ರಿಯೆ: ನಗರದ ಪ್ರಮುಖ ರಸ್ತೆಗಳಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಅವಕಾಶ ನೀಡಬಾರದು. ಪಾದಚಾರಿ ಮಾರ್ಗಗಳಲ್ಲಿ ಶಾಶ್ವತ ಮಳಿಗೆಗಳು ನಿರ್ಮಿಸಿದ್ದರೆ ಕೂಡಲೆ ಅದನ್ನು ತೆರವು ಮಾಡಬೇಕು. ಜೊತೆಗೆ ಕಡಿಮೆ ವಾಹನ ಸಾಂದ್ರತೆ ಹಾಗೂ ಕಡಿಮೆ ಜನ ಸಾಂದ್ರತೆಯಿರುವ ಕಡೆ ಬೀದಿ ಬದಿ ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸುವ ವ್ಯವಸ್ಥೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.


1.ಅಂಜನಾಪುರದಲ್ಲಿ ಬೀದಿ ನಾಯಿಗಳ ಆವಳಿ ಹೆಚ್ಚಿದ್ದು, ಹಿರಿಯ ನಾಗರಿಕರು ಹಾಗೂ ಮಕ್ಕಳಿಗೆ ಹರಚ್ಚು ಸಮಸ್ಯೆ ಆಗುತ್ತಿದೆ. ಅದನ್ನು ತಪ್ಪಿಸಲು ಮನವಿ.
ಪ್ರತಿಕ್ರಿಯೆ: ವಾರ್ಡ್ ವ್ಯಾಪ್ತಿಯಲ್ಲಿರುವ ಪಶುಪಾಲನಾ ವಿಭಾಗದ ಅಧಿಕಾರಿಗಳಿಗೆ ಸ್ಥಳ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು


2.ಉತ್ತರಹಳ್ಳಿ‌ ವಾರ್ಡ್ ನಲ್ಲಿ ಮನೆಗೆ ಖಾತಾ ಮಾಡಿಕೊಡಬೇಕಿದ್ದು, ತ್ವರಿತವಾಗಿ ಮಾಡಿಕೊಡಲು ಮನವಿ.
ಪ್ರತಿಕ್ರಿಯೆ: ಸಂಬಂಧಪಟ್ಟ ಕಂದಾಯ ಅಧಿಕಾರಿಗಳು ಪರಿಶೀಲಿಸಿ ಖಾತಾ ಮಾಡಿಕೊಡಲು ಸೂಚಿಸಿದರು


3.ಬೇಗೂರು ವಾರ್ಡ್ ನ ಮೈಕ್ ಲೇಔಟ್ ನಲ್ಲಿ ಸೀವೇಜ್ ಲೈನ್ ಬ್ಲಾಕ್ ಆಗಿ‌ ಸಾಕಷ್ಟು ಸಮಸ್ಯೆ ಆಗುತ್ತಿದೆ.
ಪ್ರಯಿಕ್ರಿಯೆ: ಮೈಕೋ‌ ಲೇಔಟ್ 110 ಹಳ್ಳಿ ವ್ಯಾಪ್ತಿಗೆ ಬರಲಿದ್ದು, ಹೊಸದಾಗಿ ಸೀವೇಜ್ ಲೈನ್ ಮಾಡಬೇಕಿದ್ದು, ಜಲಮಂಡಳಿ ವತಿಯಿಂದ ಜಟ್ಟಿಂಗ್ ಯಂತ್ರಗಳ ಮೂಲಕ ಇರುವ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸಲು ಜಲಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು.


4.ಕೋಣನಕುಂಟೆ ವಾರ್ಡ್ ಪೌರಕಾರ್ಮಿಕರು‌ ಕಡಿಮೆ ಇದ್ದು, ಅಗತ್ಯ ಪೌರಕಾರ್ಮಿಕರನ್ನು ನಿಯೋಜಿಸಲು ಮನವಿ.
ಪ್ರತಿಕ್ರಿಯೆ: ಪೌರಕಾರ್ಮಿಕರು ಕಡಿಮೆ ಇರುವ ಸ್ಥಳದಲ್ಲಿ ತಾತ್ಕಾಲಿಕವಾಗಿ ಕಸ ಗುಡಿಸುವ ಯಂತ್ರಗಳನ್ನು ನಿಯೋಜಿಸಲು ವಲಯ ಆಯುಕ್ತರಿಗೆ ಸೂಚಿಸಿದರು.


BBMP Commissioner Tushar girinath listen bommanahalli localities problems shtv mrq
ಸಮಸ್ಯೆ ಆಲಿಸುತ್ತಿರೋದು


5.ಖಾಲಿ‌ ಸ್ಥಳದಲ್ಲಿ ಕಸ ಹಾಕುತ್ತಾರೆ. ಇದರಿಂದ ಸಾಕಷ್ಟು ಸಮಸ್ಯೆಯಾಗಲಿದ್ದು, ಅದನ್ನು ತಪ್ಪಿಸಲು ಮನವಿ.
ಪ್ರತಿಕ್ರಿಯೆ: ಖಾಲಿ ನಿವೇಶನದ ಸ್ಥಳದಲ್ಲಿ ಕಸ ಹಾಕಿದರೆ ದಂಡ ವಿಧಿಸಲಾಗುತ್ತದೆ‌. ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.


6.ಉದುರುವ ಎಲೆಗಳನ್ನು ಕಾಂಪೋಸ್ಟ್ ಮಾಡಲು ಕಾಂಪೋಸ್ಟರ್ ಅಳವಡಿಸಲು ಮನವಿ.
ಪ್ರತಿಕ್ರಿಯೆ: ಉದ್ಯಾನವನಗಳಲ್ಲಿ ಕಾಂಪೋಸ್ಟರ್ ಅಳವಡಿಸಲು ಅಧಿಕಾರಿಗಳಿಗೆ ಸೂಚಿಸಿದರು.


7.110 ಹಳ್ಳಿ‌ ವ್ಯಾಪ್ತಿಯಲ್ಲಿ ಎಲ್.ಎನ್.ಟಿ ವತಿಯಿಂದ ವಾರಟ್ ಲೈನ್ ಮಾಡಲಾಗುತ್ತಿದ್ದು, ರಸ್ತೆಗಳು ಸಾಕಷ್ಟು ಹದಗೆಟ್ಟಿವೆ.
ಪ್ರತಿಕ್ರಿಯೆ: ವಾಟರ್ ಲೈನ್ ಹಾಗೂ ಸೀವೇಜ್ ಲೈನ್ ಕೆಲಸ  ಪೂರ್ಣಗೊಂಡಿರುವ ಪಟ್ಟಿಯನ್ನು ಪಾಲಿಕೆ ಕೊಟ್ಟ ನಂತರ ಪಾಲಿಕೆಯಿಂದ ತ್ವರಿತವಾಗಿ ರಸ್ತೆ ಪುನಶ್ಚೇತನ ಕೆಲಸ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.


8.ಕೋಣನಕುಂಟೆಯಲ್ಲಿ ರಸ್ತೆ ಬದಿ ಬೀದಿ ದೀಪಗಳ ಅಳವಡಿಸಲು ಮನವಿ.
ಪ್ರತಿಕ್ರಿಯೆ: ಮುಂದಿನ 7 ದಿನದಲ್ಲಿ ಬೀದಿ ದೀಪ ಅಳವಡಿಸಲು ಅಧಿಕಾರಿಗಳಿಗೆ ಸೂಚಿಸಿದರು.


9.ನಟರಾಜ ಲೇಔಟ್ ಎಲ್.ಎನ್.ಟಿ ಅತ್ರ ಹೆಚ್ಚು ಸಂಚಾರ ದಟ್ಟಣೆ ಆಗುತ್ತೆ. ಅದನ್ನು ತಪ್ಪಿಸಲು ಮನವಿ.
ಪ್ರತಿಕ್ರಿಯೆ: ಪ್ರಮುಖ ರಸ್ತೆಗಳಲ್ಲಿ ಪೋಲೀಸ್ ಸಹಯೋಗದೊಂದಿಗೆ ಸಂಚಾರದಟ್ಟಣೆ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದರು.


8.ನಟರಾಜ ಲೇಔಟ್ ನಲ್ಲಿ ಅಪಾರ್ಟ್‌ಮೆಂಟ್ ಕಾಮಗಾರಿ ಪ್ರಗತಿಯಲ್ಲಿದ್ದು, ಸೈಡ್ ಡ್ರೈನ್ ಮೇಲೆ ಮುಖ್ಯ ದ್ವಾರ ನಿರ್ಮಿಸುತ್ತಿದ್ದಾರೆ. ಅದನ್ನು ತೆರವುಗೊಳಿಸಲು ಮನವಿ‌.
ಪ್ರತಿಕ್ರಿಯೆ: ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೈಡ್ ಡ್ರೈನ್ ಮೇಲೆ ಮುಖ್ಯ ದ್ವಾರ ನಿರ್ಮಿಸುತ್ತಿದ್ದರೆ ಕೂಡಲೆ ನಿಲ್ಲಿಸಿ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.


ಇದನ್ನೂ ಓದಿ:  Thief: ಮಹಿಳೆಯರಂತೆ ಡ್ರೆಸ್ ತೊಟ್ಟು ದೇವಸ್ಥಾನಕ್ಕೆ ಬರ್ತಾನೆ, ಆಮೇಲೆ ಮಾಡೋದು ಖತರ್ನಾಕ್ ಕೆಲ್ಸ!


9.ಕೊತ್ತನೂರು ಮುಖ್ಯ ರಸ್ತೆಯಲ್ಲಿ ಹೆಚ್ಚು ಸಂಚಾರ ದಟ್ಟಣೆ ಆಗುತ್ತಿದ್ದು, ನಾಗರಿಕರಿಗೆ ಸಾಕಷ್ಟು ಸಮಸ್ಯೆ ಆಗುತ್ತಿದೆ.
ಪ್ರತಿಕ್ರಿಯೆ: ಕೊತ್ತನೂರು ಮುಖ್ಯ ರಸ್ತೆ ಅಗಲೀಕರಣ ಪ್ರಕ್ರಿಯೆ ನಡೆಯುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು.


10.ಗುಬ್ಬಲಾಳ ರಸ್ತೆ ಅಗಲೀಕರಣ ಆಗಬೇಕಿದ್ದು, ಕೂಡಲೆ ಕೆಲಸ ಪ್ರಾರಂಭಿಸಲು ಮನವಿ.
ಪ್ರತಿಕ್ರಿಯೆ: ಗುಬ್ಬಲಾಳ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಸ್ಥಳ‌ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲು ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಅಧಿಕಾರಿಗಳಿಗೆ ಸೂಚನೆ.


11.ಮನೆ ನಿರ್ಮಾಣ ಮಾಡುವವರು ಕಟ್ಟಡ ಸಾಮಗ್ರಿಗಳನ್ನು ಪಾದಚಾರಿ ಮಾರ್ಗದಲ್ಲಿ ಹಾಕಿದ್ದು, ಅದನ್ನು ತೆರವುಗೊಳಸಲು‌ ಮನವಿ.
ಪ್ರತಿಕ್ರಿಯೆ: ಪಾದಚಾರಿ ಮಾರ್ಗದಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಹಾಕಿದ್ದರೆ ಕೂಡಲೆ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.


BBMP Commissioner Tushar girinath listen bommanahalli localities problems shtv mrq
ಸಮಸ್ಯೆ ಆಲಿಸುತ್ತಿರೋದು


12.ಬೇಗೂರು ವಾರ್ಡ್ ಸೈಡ್ ಡ್ರೈನ್ ದುರಸ್ತಿಯಿರುವುದರಿಂದ ರಸ್ತೆಗಳ‌ ಮೇಲೆ ನೀರು ನಿಂತು ನಾಗರಿಕರಿಗೆ ಸಮಸ್ಯೆ ಆಗುತ್ತಿದೆ‌.
ಪ್ರತಿಕ್ರಿಯೆ: ಸೈಡ್ ಡ್ರೈನ್ ಗಳ‌ ದುರಸ್ತಿ ಕಾರ್ಯ ಕೂಡಲೆ ಕೈಗೆತ್ತಿಕೊಂಡು ರಸ್ತೆ ಮೇಲೆ‌‌ ಮಳೆ‌ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು‌‌.


13.ಪ್ರಾಣಿ ತ್ಯಾಜ್ಯವನ್ನು ರಸ್ತೆ ಬದಿ ಎಸೆಯುತ್ತಾರೆ‌. ಅದನ್ನು ತಡೆಯಲು ಮನವಿ.
ಪ್ರತಿಕ್ರಿಯೆ: ರಸ್ತೆ ಬದಿ, ರಾಜಕಾಲುವೆಗಳಿಗೆ ಪ್ರಾಣಿ ತ್ಯಾಜ್ಯವನ್ನು ಎಸೆಯದಂತೆ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.


14.ಕಾವೇರಿ ಕನೆಕ್ಷನ್ ದರ ಕಡಿಮೆ ಮಾಡಲು ಮನವಿ.
ಪ್ರತಿಕ್ರಿಯೆ: ಜಲಮಂಡಳಿ ಇಲಾಖೆ ಜೊತೆ ಮಾತನಾಡಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು.


15.ಒಂಟಿ ಮನೆ ಯೋಜನೆಗೆ ಅನುದಾನ ಬಿಡುಗಡೆಗೊಳಿಸಲು ಮನವಿ.
ಪ್ರತಿಕ್ರಿಯೆ: ಹೊಸ ಫಲಾನುಭವಿಗಳಿಗಾಗಿ 100 ಕೋಟಿ ರೂ. ಅನುದಾನವನ್ನು ವಿಧಾನಸಭಾ ಕ್ಷೇತ್ರವಾರು ಒಂಟಿ ಮನೆಗಳಿಗೆ ಹಂಚಿಕೆ ಮಾಡಲಾಗುವುದು.


16.ಹರಿನಗರ ಕ್ರಾಸ್ ಡೆಲ್ಲಿ ಪಬ್ಲಿಕ್ ಸ್ಕೂಲ್ ಬಳಿ ತುಂಬಾ ಸಂಚಾರ ದಟ್ಟಣೆ ಆಗುತ್ತೆ. ಅದನ್ನು ತಪ್ಪಿಸಲು ಮನವಿ.
ಪ್ರತಿಕ್ರಿಯೆ: ಹರಿನಗರ ಕ್ರಾಸ್ ವೃತ್ತದಲ್ಲಿ ಸಂಚಾರಿ ಪೊಲೀಸ್ ಜೊತೆ ಮಾತನಾಡಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಸಂಚಾರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಕ್ರಮ ಕೈಗೊಳ್ಳಲು ವಲಯ ಆಯುಕ್ತರಿಗೆ ಸೂಚಿಸಿದರು.


17.ಮುನೇಶ್ವರ ಬಡಾವಣೆ ಹರಿನಗರದಲ್ಲಿ ರಾಜಕಾಲುವೆಯ ಬ್ರಿಡ್ಜ್ ನಿರ್ಮಾಣ ಮಾಡಿದ್ದು, ಅದರ ಮೇಲೆ ಮಣ್ಣಿದ್ದು, ಅದನ್ನು ತೆರವುಗೊಳಿಸಲು ಮನವಿ.
ಪ್ರತಿಕ್ರಿಯೆ: ರಾಜಕಾಲುವೆಯ ಬ್ರಿಡ್ಜ್ ಮೇಲೆ ಇರುವ ಮಣ್ಣನ್ನು ಕೂಡಲೆ ತೆರವುಗೊಳಿಸಲು ರಾಜಕಾಲುವೆ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು.


18.ವಾರ್ಡ್ ಸಮಿತಿ ಸಭೆಗಳಿಗೆ ಎಲ್ಲಾ ಇಲಾಖೆಯ ಅಧಿಕಾರಿಗಳು‌ ಬರಲು ಅಗತ್ಯ ಕ್ರಮ ಕೈಗೊಳ್ಳಲು ಮನವಿ.
ಪ್ರತಿಕ್ರಿಯೆ: ವಾರ್ಡ್ ಸಮಿತಿ ಸಭೆಗೆ ಎಲ್ಲಾ ಇಲಾಖೆ ಅಧಿಕಾರಿಗಳು ಹಾಜರಾಗಲು ಅಗತ್ಯ ಕ್ರಮ ಕೈಗೊಳ್ಳಲು ವಲಯ ಜಂಟಿ ಆಯುಕ್ತರಿಗೆ ಸೂಚಿಸಿದರು.


19.ದೊಡ್ಡಕಲ್ಲಸಂದ್ರದಲ್ಲಿ ರಾಜಕಾಲುವೆ ಮೇಲೆ ಕಟ್ಟಡ ನಿರ್ಮಾಣ ಮಾಡಿದ್ದು, ತೆರವುಗೊಳಿಸಲು ಮನವಿ.
ಪ್ರತಿಕ್ರಿಯೆ: ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಅನಧಿಕೃತವಾಗಿ ಕಟ್ಟಡ ನಿರ್ಮಿಸಿದ್ದರೆ ಮಾಲೀಕರಿಗೆ ನೋಟಿಸ್ ನೀಡಿ ಕಟ್ಟಡ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.


20.ಬೇಗೂರು ವಾರ್ಡ್ ದೇವರಚಿಕ್ಕನಹಳ್ಳಿಯಲ್ಲಿ ರಸ್ತೆ, ಕಾಲುವೆ ಕಾಮಗಾರಿ ತೆಗೆದುಕೊಳ್ಳಲು ಮನವಿ.
ಪ್ರತಿಕ್ರಿಯೆ: ವಾರ್ಡ್ ಅಭಿವೃದ್ಧಿಯಲ್ಲಿ ಸೇರಿಸಿಕೊಂಡು ರಸ್ತೆ, ಕಾಲುವೆ ಕಾಮಗಾರಿ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.

Published by:Mahmadrafik K
First published: