news18-kannada Updated:November 11, 2020, 6:56 PM IST
ಬಾಪೂಜಿ ನಗರದ ಬೆಂಕಿ ಅವಘಡ.
ಬೆಂಗಳೂರು (ನವೆಂಬರ್ 11); ನಗರದ ಬಾಪೂಜಿ ನಗರದ ಬಳಿ ಇರುವ ಹೊಸಗುಡ್ಡದ ಹಳ್ಳಿಯ ರೇಖಾ ಕೆಮಿಕಲ್ ಫ್ಯಾಕ್ಟರಿಯಲ್ಲಿ ಮಂಗಳವಾರ ಮಧ್ಯಾಹ್ನ ಭಾರೀ ಬೆಂಕಿ ದುರಂತ ಸಂಭವಿಸಿತ್ತು. ಸ್ಥಳೀಯವಾಗಿ ಸ್ಯಾನಿಟೈಸರ್ ಮತ್ತು ಪೇಂಟ್ ರಿಮೂವ್ ಮಾಡುವ ಕೆಮಿಕಲ್ ತಯಾರಿಸುತ್ತಿದ್ದ ಫ್ಯಾಕ್ಟರಿಯಲ್ಲಿ ಸಿಲಿಂಡರ್ ಸಿಡಿದು ಕಾಣಿಸಿಕೊಂಡ ಬೆಂಕಿ ನೋಡನೋಡುತ್ತಿದ್ದಂತೆ ಇಡೀ ಏರಿಯಾವನ್ನು ವ್ಯಾಪಿಸಿತ್ತು. ಅಲ್ಲದೆ, ಅಕ್ಕಪಕ್ಕದ ಮನೆಗಳನ್ನು ವ್ಯಾಪಿಸಿತ್ತು. ಘಟನೆ ನಡೆದು 24 ಗಂಟೆಗಳಾದರೂ ಸಹ ಇನ್ನೂ ಬೆಂಕಿಯನ್ನು ಆರಿಸಲಾಗಿಲ್ಲ. ಅಗ್ನಿಶಾಮಕ ಸಿಬ್ಬಂದಿ ಎಷ್ಟೇ ಪ್ರಯತ್ನ ಪಟ್ಟರೂ ಬೆಂಕಿ ನಂದಿರಲಿಲ್ಲ. ಇವತ್ತೂ ಸಹ ಮಧ್ಯಾಹ್ನ ದವರೆಗೂ ಸ್ಥಳದಲ್ಲಿ ಬೆಂಕಿ ಅಲ್ಲಲ್ಲಿ ಕಾಣಿಸಿಕೊಳ್ತಲೇ ಇತ್ತು. ಈ ನಡುವೆ ಕೊನೆಗೂ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ರೂ ಸಹ, ಭಯದ ವಾತಾಚರಣವಿತ್ತು. ಹೀಗಾಗಿ ಯಾರನ್ನೂ ಸಹ ಘಟನಾ ಸ್ಥಳಕ್ಕೆ ಬಿಡದೆ ಎಚ್ಚರವಹಿಸಲಾಗಿದೆ.
ಇದೇ ಸಂದರ್ಭದಲ್ಲಿ ಶಾಸಕ ಕೃಷ್ಣಪ್ಪ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ನಡೆಯಬಾರದಿತ್ತು. ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ನಷ್ಟದ ಪರಿಹಾರವನ್ನು ಸಹ ಕೊಡಲು ತಿಳಿಸಲಾಗಿದೆ ಅಂತೇಳಿದರು. ಹೀಗೆ ಅಗ್ನಿಶಾಮಕ ಸಿಬ್ಬಂದಿ ಜೊತೆ ಘಟನೆ ಮಾತಾನಾಡಿ, ಗಾಯಗೊಂಡ ವ್ಯಕ್ತಿಗೆ ಧೈರ್ಯ ಹೇಳಿದ್ರು. ಯಾರೇ ಇರಲಿ ಕ್ರಮ ಕೈಗೊಳ್ಳೋದಾಗಿ ಭರವಸೆ ನೀಡಿದ್ದಾರೆ.
ಇನ್ನು ಪ್ಯಾಕ್ಟರಿಯ ಪಕ್ಕದ ಒಂದು ಭಾಗದಲ್ಲಿ ಖಾಲಿ ಜಾಗವಿದ್ರೆ, ಅದರ ಪಕ್ಕದಲ್ಲಿ ಪ್ಲಾಸ್ಟಿಕ್ ಫ್ಯಾಕ್ಟರಿಯಿತ್ತು. ಕೆಮಿಕಲ್ ಫ್ಯಾಕ್ಟರಿಯ ಹಿಂಬದಿಯಲ್ಲಿ ಮೂರು ಮನೆಯಿದ್ದು, ಅದು ಹಾನಿಯಾಗಿದೆ. ಅವೈಜ್ಞಾನಿಕವಾಗಿ ಕೆಮಿಕಲ್ ಅನ್ನ ಬ್ಯಾರಲ್ ನಿಂದ ಅನ್ ಲೋಡಿಂಗ್ ಮಾಡಿದ್ದೆ ಘಟನೆಗೆ ಕಾರಣ ಎನ್ನಲಾಗಿದೆ. ಪ್ಯಾಕ್ಟರಿ ನಷ್ಟದ ಮೌಲ್ಯ ಐದು ಕೋಟಿ ರೂ ಎಂದು ಅಂದಾಜಿಸಲಾಗಿದೆ. ಜೊತೆಗೆ ಪ್ಲಾಸ್ಟಿಕ್ ಪ್ಯಾಕ್ಟರಿಗೆ ಬೆಂಕಿ ತಗಲಿ ಆಗಿರೋ ನಷ್ಟ 45 ಲಕ್ಷ ಎನ್ನಲಾಗಿದೆ. ಇನ್ನು ಹಿಂಬದಿಯ ಮೂರು ಮನೆಗೆ ಹೆಚ್ಚಿನ ಹಾನಿಯಾಗಿದ್ದು ಅಂದಾಜು ಇಪ್ಪತ್ತು ಲಕ್ಷಕ್ಕೂ ಹೆಚ್ಚು ಎನ್ನಲಾಗಿದೆ.
ಮೊದಲೇ ಬಿಬಿಎಂಪಿ ಅಧಿಕಾರಿಗಳಿಗೆ ಗೊತ್ತಿದ್ರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ಆರೋಪವಿದೆ. ಫ್ಯಾಕ್ಟರಿ ಯಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿರಲಿಲ್ಲ. ಹಿಂಬದಿಯ ಎರಡು ಮನೆಗಳಲ್ಲಿ ಕಿಟಕಿ ಬಾಗಿಲು, ಗೃಹೋಪಯೋಗಿ ವಸ್ತುಗಳು ಭಸ್ಮವಾಗಿದೆ. ಇನ್ನು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸಿದ ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್, ಘಟನೆಗೆ ಸಂಬಂಧಿಸಿದಂತೆ ಬಿಬಿಎಂಪಿ ವೈಫಲ್ಯವೂ ಇದೆ ಎಂದು ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ : Bangalore Fire Accident: ಕಾರ್ಖಾನೆಯಲ್ಲಿ ಅಗ್ನಿ ಅವಘಡ ಪ್ರಕರಣ; ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಸೂಚಿಸಿದ ಬಸವರಾಜ ಬೊಮ್ಮಾಯಿ
ಬೆಸ್ಕಾಂ, ಮಾಲಿನ್ಯ ಮಂಡಳಿ, ಹೆಲ್ತ್ ಡಿಪಾರ್ಟ್ ಮೆಂಟ್ ಲೋಪವೂ ಇದೆ. ಎರಡು ದಿನಗಳಲ್ಲಿ ಜಂಟಿ ಸರ್ವೆ ಮಾಡಿ ಇಂತಹ ಕ್ರಮಕ್ಕೆ ಬ್ರೇಕ್ ಹಾಕಲಾಗತ್ತೆ. ರೆಸಿಡೆನ್ಶಿಯಲ್ ಏರಿಯಾದಲ್ಲಿ ಇಂತಹ ಫ್ಯಾಕ್ಟರಿ ಇದ್ದರೆ ಅದನ್ನ ತೆರವು ಮಾಡಿಸುತ್ತೇವೆ. ನಷ್ಟ ಅನುಭವಿಸಿರುವ ಮನೆಗಳಿಗೆ ಫ್ಯಾಕ್ಟರಿ ಮಾಲೀಕರಿಂದಲೇ ಪರಿಹಾರ ಕೊಡಿಸಲಾಗುತ್ತೆ. ಡಿಸಾಸ್ಟರ್ ಮ್ಯಾನೆಜ್ ನೆಂಟ್ ಆ್ಯಕ್ಟ್ ನಡಿಯಲ್ಲೂ ಪರಿಹಾರ ಒದಗಿಸಲಾಗತ್ತೆ. ಇಲ್ಲಿ ಪೆಟ್ರೋಲಿಯಂ ಪ್ರಾಡಕ್ಟ್ ಸ್ಟೋರೆಜ್ ಮಾಡಲು ಅನುಮತಿ ಇಲ್ಲ. ಸರ್ಕಾರದಿಂದ ಅನುಮತಿ ನೀಡಿರೋದು ಬೊಮ್ಮಸಂದ್ರದಲ್ಲಿನ ಫ್ಯಾಕ್ಟರಿಗೆ ಆದ್ರೆ ಇಲ್ಲಿ ಸ್ಟೋರೆಜ್ ಮಾಡಲು ಅನುಮತಿಯೇ ಇರಲಿಲ್ಲ ಎಂದಿದ್ದಾರೆ.
ಜೊತೆಗೆಯಾವುದೇ ಅನುಮತಿ ರೆಸಿಡೆನ್ಶಿಯಲ್ ಏರಿಯಾದಲ್ಲಿ ಕೊಡಲಾಗುವುದಿಲ್ಲ...ಇದು ಟೋಟಲಿ ಇಲ್ಲೀಗಲ್ ಆಗಿದೆ...ಇಂತಹ ಇಂಡಸ್ಟ್ರಿ ವಿರುದ್ಧ ಬೆಸ್ಕಾಂ ನಿಂದಲೂ ಕ್ರಮಕೈಗೊಳ್ಳಲಾಗತ್ತೆ. ರೆಸಿಡೆನ್ಶಿಯಲ್ ಏರಿಯಾದಲ್ಲಿ ಇಂತಹ ಫ್ಯಾಕ್ಟರಿಗೆ ಕಟ್ಟಡ ಬಾಡಿಗೆ ಕೊಡೋ ಮಾಲೀಕರ ಮೇಲೂ ಕ್ರಮ ಕೈಗೊಳ್ಳಲಾಗತ್ತೆ ಅಂತೇಳಿದ್ದಾರೆ. ಬೆಂಕಿ ನಂದಿಸುವ ಕಾರ್ಯವಷ್ಟೇ ಅಲ್ಲ,ಅಗ್ನಿಶಾಮಕ ಸಿಬ್ಬಂದಿಯಿಂದ ಮಾನವೀಯತೆಯ ಮೆರೆದಿದ್ದಾರೆ.
Published by:
MAshok Kumar
First published:
November 11, 2020, 6:55 PM IST