HOME » NEWS » State » BBMP CHIEF COMMISSIONER GAURAV GUPTA INSTRUCTS AUTHORITIES TO DOUBLE THE NUMBER OF VACCINATIONS SHTV SESR

Corona vaccine: ವ್ಯಾಕ್ಸಿನೇಷನ್ ಸಂಖ್ಯೆ ದ್ವಿಗುಣಗೊಳಿಸಲು ಆರೋಗ್ಯಾಧಿಕಾರಿಗಳಿಗೆ ಸೂಚನೆ: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ

ನಗರದಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸದೆ ಹೆಚ್ಚು ಜನಸಂದಣಿಯಾಗುತ್ತದೆ ಎಂಬುದನ್ನು ಪರಿಶೀಲಿಸಿ ಸೀಲ್ ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ

news18-kannada
Updated:April 6, 2021, 8:29 PM IST
Corona vaccine: ವ್ಯಾಕ್ಸಿನೇಷನ್ ಸಂಖ್ಯೆ ದ್ವಿಗುಣಗೊಳಿಸಲು ಆರೋಗ್ಯಾಧಿಕಾರಿಗಳಿಗೆ ಸೂಚನೆ: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ
  • Share this:
ಬೆಂಗಳೂರು (ಏ. 6): ನಗರದಲ್ಲಿ ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆ ಪಾಲಿಕೆ ವತಿಯಿಂದ ಹಲವು  ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಸಂಬಂಧ ನಗರದಲ್ಲಿ ಪ್ರತಿನಿತ್ಯ ಸುಮಾರು 35 ಸಾವಿರ ಮಂದಿ ಲಸಿಕೆ ಪಡೆಯುತ್ತಿದ್ದು, ಅದನ್ನು ದ್ವಿಗುಣಗೊಳಿಸಲು ಎಲ್ಲಾ ವಲಯ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯ ಆಯುಕ್ತರು ಗೌರವ್ ಗುಪ್ತಾ ರವರು ತಿಳಿಸಿದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ನಿಯಮಗಳ ಪಾಲನೆ, ವ್ಯಾಕ್ಸಿನೇಷನ್ ಹಾಗೂ ಟೆಸ್ಟಿಂಗ್ ಮಾಡುವ ಸಂಬಂಧ ಮಾನ್ಯ ಆಯುಕ್ತರು ಇಂದು ಎಲ್ಲಾ ವಲಯ ಆಯುಕ್ತರುಗಳು, ಜಂಟಿ ಆಯುಕ್ತರುಗಳು ಹಾಗೂ ಆರೋಗ್ಯಾಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ನಗರದಲ್ಲಿ ವ್ಯಾಕ್ಸಿನೇಷನ್ ಪಡೆಯುವ ಸಂಖ್ಯೆಯನ್ನು ಹೆಚ್ಚಳ ಮಾಡಬೇಕು. ಈ ನಿಟ್ಟಿನಲ್ಲಿ ಆಶಾಕಾರ್ಯಕರ್ತೆಯರು ಲಸಿಕೆ ಪಡೆಯಲು ಅರ್ಹರಿರುವವರಿಗೆ ಅರಿವು ಮೂಡಿಸಿ ಲಸಿಕೆ ಪಡೆಯುವಂತೆ ಮಾಡಬೇಕು. ಜೊತೆಗೆ ವ್ಯಾಕ್ಸಿನೇಷನ್ ಸೈಟ್‌ಗಳಲ್ಲಿ ಲಸಿಕೆ ಪಡೆಯುವ ಸಂಖ್ಯೆಯನ್ನು ದ್ವಿಗುಣಗೊಳಿಸಲು ಕ್ರಮವಹಿಸಲು ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಅವಶ್ಯಕ ಲಸಿಕೆ ಲಭ್ಯವಿದ್ದು, ನಾಳೆ 2 ಲಕ್ಷ ಲಸಿಕೆ ಬರಲಿದೆ.  ನಗರದಲ್ಲಿ ಈಗಾಗಲೇ ಹಜ್ ಭವನ್ ಹಾಗೂ ಹೆಚ್.ಎ.ಎಲ್‌ನಲ್ಲಿ ಕೋವಿಡ್ ಆರೈಕೆ ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು, ರೋಗಲಕ್ಷಣಗಳು ಇಲ್ಲದಿರುವ ಕೋವಿಡ್ ಸೋಂಕಿತರನ್ನು ಐಸೋಲೇಟ್ ಮಾಡುವ ಸಲುವಾಗಿ ಎಲ್ಲಾ ವಲಯಗಳಲ್ಲಿ 2/3 ಕಡೆ  50 ಹಾಸಿಗೆ ಸಾಮರ್ಥ್ಯವಿರುವ ಹೋಟೆಲ್ ಅಥವಾ ಬಳಕೆಯಾಗದ ಕಟ್ಟಗಳನ್ನು ಗುರುತಿಸಿ ಕೋವಿಡ್ ಆರೈಕೆ ಕೇಂದ್ರಗಳನ್ನಾಗಿ ಪರಿವರ್ತಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ.  ಜೊತೆಗೆ ನಗರದಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸದೆ ಹೆಚ್ಚು ಜನಸಂದಣಿಯಾಗುತ್ತದೆ ಎಂಬುದನ್ನು ಪರಿಶೀಲಿಸಿ ಸೀಲ್ ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

ಪಾಲಿಕೆ ವ್ಯಾಪ್ತಿಯಲ್ಲಿ ಯಾವ ಪ್ರದೇಶದಲ್ಲಿ ಹೆಚ್ಚು ಕೋವಿಡ್ ಪ್ರಕರಣಗಳು ಕಂಡುಬರುತ್ತಿವೆಯೋ ಅಲ್ಲಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಹೆಚ್ಚು ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ಮಾಡಬೇಕು. ವಾರ್ಡ್ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರದ ಮಟ್ಟದಲ್ಲಿ ಪರೀಕ್ಷೆ ಮಾಡುವ ಜೊತೆಗೆ ಅಪಾರ್ಟ್ ಮೆಂಟ್ಸ್ ಮಟ್ಟದಲ್ಲಿ  ಮೈಕ್ರೋ ಲೆವೆಲ್ ನಲ್ಲಿ ಪರೀಕ್ಷೆ ಮಾಡಿ ಪಾಸಿಟಿವಿಟಿ ರೇಟ್ ಗಮನಿಸಿ ಅಗತ್ಯ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಇದನ್ನು ಓದಿ: ಕುಡಿದ ಮತ್ತಿನಲ್ಲಿ ಮನೆಗೆ ಬೆಂಕಿ ಇಟ್ಟು ಏಳು ಜನರ ಜೀವಂತ ದಹನ ಮಾಡಿದ ಆರೋಪಿ ಆತ್ಮಹತ್ಯೆ

ಹೊರರಾಜ್ಯಗಳಾದ ಮಹಾರಾಷ್ಟ್ರ, ಪಂಜಾಬ್ ಹಾಗೂ ಕೇರಳದಲ್ಲಿ ಹೆಚ್ಚು ಕೋವಿಡ್ ಪ್ರಕರಣಗಳು ಕಂಡುಬರುತ್ತಿದ್ದು, ಹೊರರಾಜ್ಯಗಳಿಂದ ವಿಮಾನ ಮೂಲಕ, ಬಸ್ ಹಾಗೂ ರೈಲಿನ ಮೂಲಕ ಬರುವವರ ಮೇಲೆ ನಿಗಾವಹಿಸಿ ಟೆಸ್ಟಿಂಗ್ ಅನ್ನು ಹೆಚ್ಚಳ ಮಾಡಲಾಗುವುದು. ಅಲ್ಲದೆ ಹೊರರಾಜ್ಯಗಳಿಂದ ಬರುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಯರ‍್ಯಾರು ಹೊರಗಡೆಯಿಂದ ಬರುತ್ತಾರೆ ಅಂತವರನ್ನು ಸ್ವಯಂ ಐಸೋಲೇಟ್ ಮಾಡಿ ನಂತರ ಕೋವಿಡ್ ಪರೀಕ್ಷೆ ಮಾಡುವ ಬಗ್ಗೆ ಸಲಹೆ ಬಂದಿದ್ದು, ಆ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಖಾಸಗಿ ಆಸ್ಪತ್ರೆಗಳಲ್ಲಿ ಶೇ. 20 ಹಾಸಿಗೆ ಮೀಸಲಿಡಲು ಸೂಚನೆಬಿಬಿಎಂಪಿ ವ್ಯಾಪ್ತಿಯಲ್ಲಿ ಈ ಹಿಂದೆ ಕೋವಿಡ್ ಸೋಂಕಿತರಿಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಶೇ. 50 ರಷ್ಟು ಹಾಸಿಗೆ ಮೀಸಲಿಡಲಾಗಿತ್ತು. ಇದೀಗ ನಗರದಲ್ಲಿ ಕ್ರಮೇಣ ಕೋವಿಡ್ ಸೋಂಕು ಹೆಚ್ಚಳವಾಗುತ್ತಿದ್ದು, ಅವಶ್ಯಕತೆಗೆ ಅನುಗುಣವಾಗಿ ಹಾಸಿಗೆಗಳನ್ನು ಮೀಸಲಿಡಬೇಕಿದೆ. ಈ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಶೇ. 20 ರಷ್ಟು ಹಾಸಿಗೆಗಳನ್ನು ಕೂಡಲೆ ಮೀಸಲಿಡಬೇಕು ಎಂದು ಮುಖ್ಯ ಆಯುಕ್ತರು ಗೌರವ್ ಗುಪ್ತಾ ರವರು ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಿದರು.
Published by: Seema R
First published: April 6, 2021, 8:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories