Bengaluru Rains: ಟಿಪ್ಪು ಬಚ್ಚಿಟ್ಟ ನಿಧಿಗಾಗಿ BESCOM, BWSSB, BBMP ಹುಡುಕಾಟ: ಕಿರಣ್ ಮಜುಂದಾರ್ ಷಾ ವ್ಯಂಗ್ಯ

ಟಿಪ್ಪು ಸುಲ್ತಾನ್ 1799ರಲ್ಲಿ ಸೋತ ಬಳಿಕ ತನ್ನ ಎಲ್ಲ ನಿಧಿಯನ್ನು ಬೆಂಗಳೂರಿನಲ್ಲಿ ಬಚ್ಚಿಟ್ಟಿದ್ದನು. ಹಾಗಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB), ಬೆಸ್ಕಾಂ (BESCOM) ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ( BBMP) ಇಂದೂ ಸಹ ಹುಡುಕಾಟ ನಡೆಸುತ್ತಿದೆ

ಕಿರಣ್ ಮಜುಂದಾರ್ ಷಾ

ಕಿರಣ್ ಮಜುಂದಾರ್ ಷಾ

  • Share this:
ಭಾನುವಾರ ರಾತ್ರಿ ಸುರಿದ ಮಳೆಗೆ ಬೆಂಗಳೂರಿನ (Bengaluru Rains) ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಇನ್ನು ನೀರು ಹೊರ ಹಾಕಲು ಬಿಬಿಎಂಪಿಯಿಂದ (BBMP) ಸಾಧ್ಯವಾಗುತ್ತಿಲ್ಲ. ಜನರು ಮನೆಗಳಲ್ಲಿ ಲಾಕ್ ಆಗಿದ್ದು, ಬೋಟ್ (Boat) ಮೂಲಕ ನೀರು ಮತ್ತು ಆಹಾರ (Food And Water) ವಿತರಿಸಲಾಗುತ್ತಿದೆ, ಬಿಬಿಎಂಪಿಯ ನಿರ್ಲಕ್ಷ್ಯದಿಂದ ಬೆಂಗಳೂರಿನ (Bengaluru) ಗೌರವ ಹರಾಜು ಆಗುತ್ತಿದೆ. ಒಂದು ತಿಂಗಳ ಹಿಂದೆ ವಿಮಾನ ನಿಲ್ದಾಣದ (Bengaluru Airport) ರಸ್ತೆಯೇ ಜಲಾವೃತ  (Flood) ಆಗಿದ್ದರಿಂದ ಪ್ರಯಾಣಿಕರು ಅನಿವಾರ್ಯವಾಗಿ ಟ್ರಾಕ್ಟರ್ ಗಳಲ್ಲಿ ಸಂಚರಿಸುವಂತಾಗಿತ್ತು. ಈ ವಿಡಿಯೋ ರಸ್ತೆ ಕಾಮಗಾರಿಗೆ ಹಿಡಿದ ಕೈಗನ್ನಡಿಯಾಗಿತ್ತು, ಮಾನ್ಯತಾ ಟೆಕ್ ಪಾರ್ಕ್, ಕೋಗಿಲು ಕ್ರಾಸ್, ಸಿಂಗಪುರ, ಯಲಹಂಕ ಸೇರಿದಂತೆ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ನೀರು ಆವರಿಸಿದೆ. ಬಯೋಕಾನ್ ಸಂಸ್ತೆ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ (Kiran Mazumdar-Shaw) ವ್ಯಂಗ್ಯವಾಗಿ ಟ್ವೀಟ್ ಮಾಡುವ ಮೂಲಕ ಚಾಟಿ ಬೀಸಿದ್ದಾರೆ.

ಟಿಪ್ಪು ಸುಲ್ತಾನ್ 1799ರಲ್ಲಿ ಸೋತ ಬಳಿಕ ತನ್ನ ಎಲ್ಲ ನಿಧಿಯನ್ನು ಬೆಂಗಳೂರಿನಲ್ಲಿ ಬಚ್ಚಿಟ್ಟಿದ್ದನು. ಹಾಗಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB), ಬೆಸ್ಕಾಂ (BESCOM) ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ( BBMP) ಇಂದೂ ಸಹ ಹುಡುಕಾಟ ನಡೆಸುತ್ತಿದೆ. ನಿಧಿಗಾಗಿ ಇಡೀ ನಗರದ ತುಂಬೆಲ್ಲಾ ಅಡ್ಡಾದಿಡ್ಡಿಯಾಗಿ ಭೂಮಿ ಅಗೆಯುತ್ತಿದೆ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.ಸಣ್ಣ ಮಳೆಗೂ ರಸ್ತೆಗಳು ಜಲಾವೃತ, ಕಳಪೆ ರಸ್ತ ಕಾಮಗಾರಿ

ಬೆಂಗಳೂರಿನಲ್ಲಿ ನಡೆದ ಅವೈಜ್ಞಾನಿಕ ಕಾಮಗಾರಿಯಿಂದಲೇ ಸಣ್ಣ ಮಳೆಗೂ ನಗರದ ರಸ್ತೆಗಳು ಜಲಾವೃತಗೊಳ್ಳುತ್ತವೆ. ಪರಿಣಾಮ ಕಾಮಗಾರಿಯಾದ ಹೊಸ ರಸ್ತೆಗಳು ಗುಂಡಿಗಳಿಂದ ತುಂಬಿಕೊಳ್ಳುತ್ತವೆ. ಭಾನುವಾರದ ಮಳೆಗೆ ರಸ್ತೆಗಳು ಜಲಾವೃತವಾದ ಪರಿಣಾಮ ಎಷ್ಟೋ ಆಟೋ, ಕ್ಯಾಬ್ ಚಾಲಕರು ವಾಹನ ನಿಲ್ಲಿಸಿ ಇಡೀ ರಾತ್ರಿ ಕಳೆದಿದ್ದರು.

ಮಳೆ ಹಾನಿ ವೀಕ್ಷಣೆ ಮಾಡಿದ ಸಿಎಂ ಬೊಮ್ಮಾಯಿ

ಮಳೆಯಿಂದ ತೀವ್ರ ಹಾನಿಗೆ (Heavy Rain Effect) ಒಳಗಾಗಿರುವ ಕೇಂದ್ರೀಯ ವಿಹಾರ್ (Kendriya Vihar), ಹಾಗೂ ಜವಾಹರಲಾಲ್ ನೆಹರು ಸೆಂಟರ್​ (Jawaharlal Nehar Study Center) ವೀಕ್ಷಣೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ (CM Basavaraja Bommai) ಅವರು ಆಗಿರುವ ಅವಘಡಗಳ ಪರಿಶೀಲನೆ ನಡೆಸಿದರು.

ಇದನ್ನೂ ಓದಿ:  Bengaluru Rains: ರಾತ್ರಿ ಸುರಿದ ಮಳೆಗೆ ಬೆಂಗಳೂರಿನ ರಸ್ತೆಗಳು ಮಾಯ; ಎಲ್ಲೆಲ್ಲಿ ಏನೇನಾಗಿದೆ?

ತೆರೆದ ಜೀಪ್​ ಹತ್ತಿ ಮಳೆ ಹಾನಿ ವೀಕ್ಷಣೆ ಮಾಡಿದರು. ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ಎರಡು ಕೋಡಿಗಳು ತುಂಬಿ ಹರಿದು ನೀರು ಬಂದಿದೆ. ರಾಜಕಾಲುವೆ ಗಾತ್ರ ತುಂಬಾ ಚಿಕ್ಕದಾಗಿದೆ. ರಾಜಕಾಲುವೆ ಕೆಲವು ಕಡೆ ಒತ್ತುವರಿಯಾಗಿದೆ. ಮಳೆ ನಿಂತ ಕೂಡಲೇ ರಾಜಕಾಲುವೆ ಅಗಲಿಕರಣ ಮಾಡಲು ಸೂಚನೆ ನೀಡಲಾಗಿದೆ.

ಎರಡು ರಾಜಕಾಲುವೆ ಯಾವುದೇ ರೀತಿಯ ಅಡಚಣೆಯಾಗದೆ ನೀರು ಬರಬೇಕು. ನೀರು ಹೊರ ಹಾಕಲು ಡ್ರೈನೇಜ್ ವ್ಯವಸ್ಥೆ ಮಾಡಬೇಕು. ಹೆದ್ದಾರಿ ಕೆಳಗಡೆ ಡ್ರೈನೇಜ್ ಹೋಗಲು ಅಧಿಕಾರಿಗಳ ಜೊತೆ ಚರ್ಚೆ ಮಾಡಲಾಗುತ್ತೆ. ಎಲ್ಲೆಲ್ಲಿ ರಾಜಕಾಲುವೆ ನೀರು ಹೊರ ಬರ್ತಿದೆ ಅದೆಲ್ಲಾ ತೆರವು ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇದನ್ನೂ ಓದಿ:  Karnataka Weather Today: ತಗ್ಗಿದ ಅಕಾಲಿಕ ಮಳೆಯ ಅಬ್ಬರ, ಚಳಿ ಆರಂಭ

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕಳೆದ ಕೆಲವು ದಿನಗಳಿಂದ ಧಾರಕಾರ ಮಳೆ ಸುರಿದ ಪರಿಣಾಮ ಎಲ್ಲೆಡೆ ಪ್ರವಾಹ ಸೃಷ್ಟಿಯಾಗಿದೆ. ಮಳೆಯಿಂದಾಗಿ ಬೆಂಗಳೂರು ಭಾಗಶಃ ನಲುಗಿಹೋಗಿದೆ. ತಗ್ಗು ಪ್ರದೇಶಗಳು ಸೇರಿದಂತೆ ಹಲವಾರು ಕಡೆ ನೀರು ಮನೆಗಳಿಗೆ, ಅಪಾರ್ಟ್​ಮೆಂಟ್​ಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

BBMP ವಿರುದ್ಧ ಕ್ರಮಕ್ಕೆ ಒತ್ತಾಯ

ಅಪಘಾತಗಳಿಗೆ ಕಾರಣವಾಗುವ ಅಸಂಖ್ಯಾತ ಗುಂಡಿಗಳಿಂದ ಬೇಸತ್ತ ನಗರದ ನಾಗರಿಕರು ಬಿಬಿಎಂಪಿಯ ನಿರ್ಲಕ್ಷ್ಯ (BBMP Negligence) ವಿರುದ್ಧ ಪೊಲೀಸ್ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಟ್ವಿಟ್ಟರ್ ಹ್ಯಾಶ್‌ಟ್ಯಾಗ್ #AskCPBlr ಅನ್ನು ಬಳಸಿಕೊಂಡು ಆನ್‌ಲೈನ್ ಪೊಲೀಸ್-ಸಾರ್ವಜನಿಕ ಸಂವಾದದ ಸಂದರ್ಭದಲ್ಲಿ ಈ ವಿಷಯವನ್ನು ಚರ್ಚಿಸಲಾಗಿದೆ.
Published by:Mahmadrafik K
First published: