• Home
  • »
  • News
  • »
  • state
  • »
  • Suicide: ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಹೆಂಡತಿ ಆತ್ಮಹತ್ಯೆಗೆ ಶರಣು..!

Suicide: ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಹೆಂಡತಿ ಆತ್ಮಹತ್ಯೆಗೆ ಶರಣು..!

ಆತ್ಮಹತ್ಯೆ ಮಾಡಿಕೊಂಡ  ಮಹಿಳೆ ವಿನೋದಾ

ಆತ್ಮಹತ್ಯೆ ಮಾಡಿಕೊಂಡ ಮಹಿಳೆ ವಿನೋದಾ

ಕೆ ಆರ್ ಪುರ ವ್ಯಾಪ್ತಿಯ ಬಸವನಪುರ ವಾರ್ಡ್ ಮಾಜಿ ಕಾರ್ಪೊರೇಟರ್ ಜಯಪ್ರಕಾಶ್ ಕಳೆದ ಮೂರು ವರ್ಷಗಳ ಹಿಂದೆ ವಿನೋದಾ ಅವರನ್ನ ಮದುವೆಯಾಗದ್ದರು. ಕೆ ಆರ್ ಪುರ ವ್ಯಾಪ್ತಿಯ ಶೀಗೆಹಳ್ಳಿ ಮಂಜುನಾಥ ಬಡಾವಣೆಯಲ್ಲಿ ವಾಸವಾಗಿದ್ದರು

  • Share this:

    ಬೆಂಗಳೂರು(ಅಕ್ಟೋಬರ್​. 27) : ಬಿಬಿಎಂಪಿ ಬಸವನಪುರ ವಾರ್ಡ್ ಮಾಜಿ ಕಾರ್ಪೊರೇಟರ್ ಜಯಪ್ರಕಾಶ್ ಅವರ ಹೆಂಡತಿ ವಿನೋದಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂದು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಳಗ್ಗೆ ಮನೆಯ ಹಾಲ್ ನಲ್ಲಿ ಮಗುವಿನ ಜೊತೆ ಆಟವಾಡುತ್ತಿದ್ದ ವಿನೋದಾ ಬಳಿಕ ಮಗುವನ್ನ ಹಾಲ್ ನಲ್ಲಿ ಬಿಟ್ಟು ತನ್ನ ಕೋಣೆಗೆ ತೆರಳಿ ಪ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ‌. ಕೆ ಆರ್ ಪುರ ವ್ಯಾಪ್ತಿಯ ಬಸವನಪುರ ವಾರ್ಡ್ ಮಾಜಿ ಕಾರ್ಪೊರೇಟರ್ ಜಯಪ್ರಕಾಶ್ ಕಳೆದ ಮೂರು ವರ್ಷಗಳ ಹಿಂದೆ ವಿನೋದಾ ಅವರನ್ನ ಮದುವೆಯಾಗದ್ದರು. ದಂಪತಿಗೆ ಓರ್ವ ಮಗಳು ಇದ್ದು ಕೆ ಆರ್ ಪುರ ವ್ಯಾಪ್ತಿಯ ಶೀಗೆಹಳ್ಳಿ ಮಂಜುನಾಥ ಬಡಾವಣೆಯಲ್ಲಿ ವಾಸವಾಗಿದ್ದರು. ಕಳೆದ ಎರಡು ದಿನಗಳಿಂದ ಹಬ್ಬದಲ್ಲಿ ತೊಡಗಿ ಮನೆಯಲ್ಲಿ ಆಯುಧ ಪೂಜೆ ಸೇರಿ ಹಬ್ಬವನ್ನ ಅದ್ದೂರಿಯಾಗಿ ಆಚರಣೆ ಮಾಡಿದ್ದರು.


    ಅಲ್ಲದೇ ನಿನ್ನೆ ಜಯಪ್ರಕಾಶ್ ಅವರ ಸಹೋದರನ ಮನೆ ಗೃಹ ಪ್ರವೇಶವಿತ್ತು. ಅಲ್ಲಿಯೂ ಓಡಾಡಿಕೊಂಡು ಇದ್ದರು. ಆದರೆ, ಇಂದು ಬೆಳಗ್ಗೆ ಏಕಾಏಕಿ ವಿನೋದ ಆತ್ಮಹತ್ಯೆ ಮುಂದಾಗಿದ್ದು ತನ್ನ ಕೋಣೆಗೆ ಹೋಗಿ ಎಷ್ಟೋತ್ತಾದರು ವಾಪಸ್ ಬರದೇ ಇದ್ದಾಗ ಮನೆಯವರು ಪರಿಶೀಲಿಸಿದ್ದಾರೆ.


    ಈ ವೇಳೆ ಪ್ಯಾನ್ ಗೆ ನೇಣು ಬಿಗಿದುಕೊಂಡಿರುವುದು ಪತ್ತೆಯಾಗಿದೆ. ಕೂಡಲೇ ಮೃತದೇಹವನ್ನ ಭಟ್ಟರಹಳ್ಳಿಯ ಸಾಯಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ಕೊನೆಗೆ ಚಿಕಿತ್ಸೆ ಫಲಿಸದೇ ವಿನೋದಾ ಸಾವನ್ನಪ್ಪಿದ್ದಾರೆ.


    ಇದನ್ನೂ ಓದಿ : ನೆರೆ ಪೀಡಿತ ಪ್ರದೇಶಗಳ ನಿರ್ಲಕ್ಷ್ಯ ಆರೋಪ ; ಕಲಬುರ್ಗಿಯಲ್ಲಿ ವಾಟಾಳ್ ನಾಗರಾಜ್ ಹೋರಾಟ


    ಇನ್ನೂ ಮಾಜಿ ಕಾರ್ಪೊರೇಟರ್ ಜಯಪ್ರಕಾಶ್ ಅವರ ಹೆಂಡತಿಯ ಆತ್ಮಹತ್ಯೆ ಬಗ್ಗೆ ಇನ್ನೂ ನಿಖರ ಕಾರಣ ಪತ್ತೆಯಾಗಿಲ್ಲ. ಕೆ ಆರ್ ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕುಟುಂಬದವರ ವಿಚಾರಣೆ ನಡೆಸಿದ್ದಾರೆ.


    ವಿನೋದಾ ಆತ್ಮಹತ್ಯೆಯ ಕಾರಣ ನಿಗೂಢವಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದೇ ವೇಳೆ ಹೆಂಡತಿಯ ಆತ್ಮಹತ್ಯೆ ಸುದ್ದಿ ತಿಳಿದು ಗಂಡ ಜಯಪ್ರಕಾಶ್ ಆಸ್ಪತ್ರೆಯಲ್ಲಿ ಕುಸಿದು ಬಿದ್ದಿದ್ದರು. ಬಳಿಕ ಸ್ನೇಹಿತರು ಅವರನ್ನ ಸಮಾಧಾನಗೊಳಿಸಿ ಧೈರ್ಯ ತುಂಬಿದ್ದಾರೆ.

    Published by:G Hareeshkumar
    First published: