ಬೆಂಗಳೂರು (ಜು.07): ಕಳೆದ ಮೂರು-ನಾಲ್ಕು ದಿನಗಳಿಂದ ಎಸಿಬಿ ಬಲೆಗೆ ಭ್ರಷ್ಟ ಅಧಿಕಾರಿಗಳು ಸಿಲುಕಿಕೊಳ್ಳುತ್ತಿದ್ದಾರೆ. ಒಂದೇ ದಿನ IPS ಹಾಗೂ IAS ಅಧಿಕಾರಿಯನ್ನು ಬಂಧಿಸಿದ್ದ ಎಸಿಬಿ ಅಧಿಕಾರಿಗಳು, ಇವತ್ತು (ಜುಲೈ 7) ಬಿಬಿಎಂಪಿಯ (BBMP) ಬಿಎಂಟಿಎಫ್ ಅಧಿಕಾರಿ ಮೇಲೆ ಎಸಿಬಿ ದಾಳಿ ನಡೆಸಿದೆ. ಮಾಜಿ ಕಾರ್ಪೋರೇಟರ್ (Ex Corporator) ಬಳಿಯೇ ಲಂಚ ಪಡೆಯಲು ಮುಂದಾಗಿದ್ದ ಬಿಎಂಟಿಎಫ್ ಅಧಿಕಾರಿ ಬೇಬಿ ವಾಲೇಕರ್ ಅವರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
3 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟ ಬೇಬಿ ವಾಲೇಕರ್
ಹೊರಮಾವು ಅಗರ ಸರ್ವೆ ನಂಬರ್ 153ರ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಸಮಸ್ಯೆ ಬಗೆಹರಿಸಲು 3 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಸಬ್ ಇನ್ಸ್ ಪೆಕ್ಟ್ರ್ ಬೇಬಿ ವಾಲೇಕರ್. ಈ ಸಂಬಂಧ ಮಾಜಿ ಕಾರ್ಪೋರೇಟರ್ ಲಕ್ಷ್ಮೀ ನಾರಾಯಣ ದೂರು ನೀಡಿದ್ರು ದೂರಿನ ಮೇರೆಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಒಂದು ಲಕ್ಷ ಹಣ ಪಡೆಯುತ್ತಿರೋವಾಗ ಪಿ.ಎಸ್.ಐ ಬೇಬಿ ವಾಲೇಕರ್ ಸಿಕ್ಕಿಬಿದ್ದಿದ್ದು, ಎಸಿಬಿ ಅಧಿಕಾರಿಗಳು ಅವರನ್ನು ಬಂಧಿಸಿ ಕರೆದೊಯ್ಯದಿದ್ದಾರೆ.
ಗಲಾಟೆ ವಿಚಾರಕ್ಕೆ ಸಸ್ಪೆಂಡ್ ಆಗಿದ್ದ ವಾಲೇಕರ್
ಕೆಲ ವರ್ಷಗಳ ಹಿಂದೆ ಕುಡಿತದ ಅಮಲಿನಲ್ಲಿ ಗಲಾಟೆ ಮಾಡಿದ ಆರೋಪಿಯೊಬ್ಬನಿಗೆ ಮನಸೋ ಇಚ್ಛೆ ಥಳಿಸಿದ ಕಾರಣಕ್ಕೆ ಕರ್ತವ್ಯದಿಂದ ಅಮಾನತಿಗೆ ಒಳಗಾಗಿದ್ದ ಮಹಿಳಾ ಸಬ್ ಇನ್ಸ್ ಪೆಕ್ಟರ್ ಬೇಬಿ ವಾಲೇಕರ್ ಅವರಿಗೆ ರಿಲೀಫ್ ಸಿಕ್ಕಿತ್ತು. ಬೇಬಿ ವಾಲೇಕರ್ ಅವರ ಸಸ್ಪೆಂಡ್ ಆದೇಶ ರದ್ದುಗೊಳಿಸಲಾಗಿತ್ತು.
ಇದನ್ನೂ ಓದಿ: Mangaluru: ನಿಲ್ಲದ ಮಳೆಯ ಆರ್ಭಟ, ಕಾರ್ಮಿಕರು ವಾಸವಿದ್ದ ಶೆಡ್ ಮೇಲೆ ಗುಡ್ಡ ಕುಸಿತ: ಮೂವರ ಸಾವು
ಗಲಾಟೆ ಮಾಡಿದ್ದ ವ್ಯಕ್ತಿಗೆ ಥಳಿತ
ಈಶಾನ್ಯ ವಲಯದ ಐಜಿಪಿ ವಜೀದ್ ಅಹ್ಮದ್ ಅವರು ಬೇಬಿ ವಾಲೇಕರ್ ಅವರ ಅಮಾನತು ಆದೇಶವನ್ನು ರದ್ದುಗೊಳಿಸಿದ್ರು. ಬೇಬಿ ವಾಲೇಕರ್ ಅವರ ಅಮಾನತು ಆದೇಶವನ್ನು ಹಿಂಪಡೆಯುವಂತೆ ರಾಯಚೂರಿನ ಜನತೆ ಭಾರಿ ಪ್ರತಿಭಟನೆ ನಡೆದಿತ್ತು. ನಗರದ ಮಾರ್ಕೆಟ್ ಯಾರ್ಡ್ ಠಾಣೆಯ ಮಹಿಳಾ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಬೇಬಿ ವಾಲೇಕರ್ ಆರೋಪಿಯನ್ನು ಹಿಗ್ಗಾಮಗ್ಗ ಥಳಿಸಿ ಶಿಕ್ಷಿಸಿದ್ದರು.
ಹಲ್ಲೆ ಖಂಡಿಸಿದ್ದ ಜನರು
ಕುಡಿತದ ಅಮಲಿನಲ್ಲಿ ಗಲಾಟೆ ಮಾಡಿದ್ದ ವ್ಯಕ್ತಿಯೊಬ್ಬನನ್ನು ಠಾಣೆಗೆ ಕರೆತಂದು ಆತನ ಎರಡೂ ಕೈಗಳನ್ನು ಇಬ್ಬರು ಪೊಲೀಸ್ ಪೇದೆಗಳಿಗೆ ಬಲವಾಗಿ ಎಳೆದು ಹಿಡಿದುಕೊಳ್ಳಲು ಹೇಳಿ ಹಿಂಬಂದಿಯಿಂದ ಆತನಿಗೆ ಬಾಸುಂಡೆ ಬರುವ ರೀತಿಯಲ್ಲಿ ಥಳಿಸಿರುವ ವರ್ತನೆಯನ್ನು ಹಲವರು ಬೆಂಬಲಿಸಿದ್ದರೆ ಕೆಲವರು ಮಾತ್ರ ಇದು ಅಮಾನವೀಯ ಹೀಗೆಲ್ಲಾ ಥಳಿಸುವುದು ಸಲ್ಲದು ಎಂದಿದ್ದರು.
ಎರಡೆರಡು ಲಾಠಿ ಹಿಡಿದು ಹಲ್ಲೆ ಮಾಡಿದ್ದ ವಾಲೇಕರ್
ಮಹಿಳಾ ಪೊಲೀಸ್ ಅಧಿಕಾರಿ ಬೇಬಿ ವಾಲೇಕರ್ ಎರಡೆರಡು ಲಾಠಿಯನ್ನು ಒಟ್ಟಿಗೆ ಹಿಡಿದುಕೊಂಡು ಅಮಾನವೀಯವಾಗಿ ಥಳಿಸುತ್ತಿರುವ ದೃಶ್ಯ ಎಂಥವನನ್ನೂ ಬೆಚ್ಚಿ ಬೀಳಿಸುವಂತಿದ್ದು, ಈ ರೀತಿ ಚೆಚ್ಚುವ ವೇಳೆ ಅಚಾನಕ್ಕಾಗಿ ತಾಗಬಾರದ ಜಾಗಕ್ಕೆ ತಾಗಿ ಸಾವನ್ನಪ್ಪಿದ್ದರೆ ಅಥವಾ ಅಸ್ವಸ್ಥನಾಗಿ ಕುಸಿದು ಬಿದ್ದಿದ್ದರೆ ಕುಡಿತದ ಅಮಲಿನಿಂದ ವ್ಯಕ್ತಿ ದುರ್ಮರಣ ಎಂದು ಎಸ್ಕೇಪ್ ಆಗಿಬಿಡುತ್ತಿದ್ದರೇನೋ ಎಂಬ ಮಾತುಗಳು ಕೇಳಿಬಂದಿತ್ತು.
ಇದನ್ನೂ ಓದಿ: Gadaga: ನಗರಸಭೆಯ ಸಾಮಾನ್ಯ ಸಭೆಯಲ್ಲೇ ಕಣ್ಣೀರು ಹಾಕಿದ ಅಧ್ಯಕ್ಷೆ!
ಪೊಲೀಸ್ ಇನ್ಸ್ಪೆಕ್ಟರ್ ಸಸ್ಪೆಂಡ್
ಕರ್ತವ್ಯ ಲೋಪದ ಹಿನ್ನೆಲೆ ಬೆಂಗಳೂರಿನಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಅಮಾನತು ಮಾಡಲಾಗಿದೆ. ಕಲಾಸಿಪಾಳ್ಯ ಠಾಣೆ ಇನ್ಸ್ಪೆಕ್ಟರ್ ಚೇತನ್ ಅಮಾನತುಗೊಂಡು ಅಧಿಕಾರಿಗಯಾಗಿದ್ದಾರೆ. ವ್ಯಕ್ತಿಯೊಬ್ಬರು ರೌಡಿಶೀಟರ್ ನಿಂದ ತೊಂದರೆ ಆಗಿರುವ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಇನ್ಸ್ ಪೆಕ್ಟರ್ ಚೇತನ್ ರೌಡಿಶೀಟರ್ ವಿರುದ್ಧ ಯಾವುದೇ ಕ್ರಮ ಜರುಗಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಕರ್ತವ್ಯ ಲೋಪದ ಆರೋಪದಡಿ ಇನ್ಸ್ ಪೆಕ್ಟರ್ ಚೇತನ್ ಅವರನ್ನು ಅಮಾನತುಗೊಳಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ