• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Bengaluru: ಅಕ್ರಮ 'A' ಖಾತಾದಾರರಿಗೆ ಬಿಬಿಎಂಪಿ ಶಾಕ್; 'B' ಖಾತಾ ಬದಲು 'A' ಖಾತಾ ಪಡೆದಿದ್ರೆ ಗುನ್ನಾ!

Bengaluru: ಅಕ್ರಮ 'A' ಖಾತಾದಾರರಿಗೆ ಬಿಬಿಎಂಪಿ ಶಾಕ್; 'B' ಖಾತಾ ಬದಲು 'A' ಖಾತಾ ಪಡೆದಿದ್ರೆ ಗುನ್ನಾ!

ಬಿಬಿಎಂಪಿ

ಬಿಬಿಎಂಪಿ

ಜನರು ಬಿ ಖಾತಾ ಬದಲು ಎ ಖಾತಾ ಪಡೆದಿದ್ದರೆ, ಅದನ್ನು ಈಗ ಬಿ ಖಾತಾಗೆ ವರ್ಗಾವಣೆ ಮಾಡಲಾಗುತ್ತದೆ. ಆದರೆ ಬಿಬಿಎಂಪಿಯಲ್ಲಿ ಯಾವ ಅಧಿಕಾರಿ ತಪ್ಪು ಮಾಡಿದ್ದಾರೆ? ಜನರಿಗೆ ಶಿಕ್ಷೆ ಕೊಡುವುದಕ್ಕೆ ಸಿದ್ಧವಾಗಿದ್ದಾರೆ. ಅಧಿಕಾರಿಗಳಿಗೆ ಏನು ಶಿಕ್ಷೆ ಅನ್ನೋ ಪ್ರಶ್ನೆ ಎದುರಾಗಿದೆ.

  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru) ನಿಮ್ಮ ಸೈಟ್​ ಇದ್ಯಾ? ಅದೂ ಕೂಡ ಎ ಖಾತಾ ಇದ್ಯಾ? (A Khata & B Khata) ಹಾಗಿದರೆ ಅದು ಅಕ್ರಮ ಎ ಖಾತಾನಾ? ಸಕ್ರಮ ಎ ಖಾತಾನಾ? ಹೀಗೆ ಬಿಬಿಎಂಪಿ (BBMP) ಹೊಸ ಟೆನ್ಷನ್​ ಕೊಡುವುದಕ್ಕೆ ತಯಾರಾಗಿದೆ. ಬಿ ಖಾತಾ ಸ್ವತ್ತಿಗೆ ಎ ಖಾತಾ ಪಡೆದುಕೊಂಡಿದ್ದರೆ ಸಂಕಷ್ಟ ಗ್ಯಾರಂಟಿ. ಬೆಂಗಳೂರಿನ ಸ್ವತ್ತುಗಳ ಬೆಲೆ ನಿಗದಿ ಆಗುವುದೇ ಎ ಖಾತಾ, ಬಿ ಖಾತಾ ಅನ್ನೋದರ ಆಧಾರದ ಮೇಲೆ. ಇದೇ ಕಾರಣಕ್ಕೆ ಸಾಕಷ್ಟು ಜನ ಎ ಖಾತಾ ಸ್ವತ್ತುಗಳಿಗೆ ಇರಬೇಕಾದ ವ್ಯವಸ್ಥೆ ಇಲ್ಲದಿದ್ದರೂ ಎ ಖಾತಾ ಪಡೆಯಲಾಗಿದೆ ಎನ್ನಲಾಗಿದೆ. ಇದೀಗ ಎ ಖಾತಾ ಸ್ವತ್ತುಗಳ ಪರಿಶೀಲನೆಗೆ ಬಿಬಿಎಂಪಿ, ಐಎಎಸ್​ ಅಧಿಕಾರಿಗಳ ಸಮಿತಿ (Committee of IAS Officers) ರಚನೆ ಮಾಡಿದೆ. ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಂ ರಾಯ್ಪುರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಿದ್ದು, ಮುಂದಿನ ಒಂದು ತಿಂಗಳಲ್ಲಿ ಸ್ವತ್ತುಗಳ ಪರಿಶೀಲನೆ ನಡೆಯಲಿದೆ. 9 ಲಕ್ಷ ಪ್ರಾಪರ್ಟಿ (Property ) ಪರಿಶೀಲನೆ ನಡೆಯಲಿದ್ದು, ಸಂಪೂರ್ಣ ದಾಖಲೆಗಳು ಇಲ್ಲದಿದ್ದರೆ ಎ ಖಾತಾ ರಿಜೆಕ್ಟ್ ಆಗಲಿದೆ.


ಏನಿದು ಅನಧಿಕೃತ ಎ ಖಾತಾ?


ಬಿ ಖಾತಾಗೆ ಅರ್ಹವಾಗಿದ್ದರೂ ಎ ಖಾತಾ ಪಡೆದಿದ್ದರೆ
ಎ ಖಾತಾ ಪಡೆದಿದ್ದರೆ ತಿರಸ್ಕರಿಸಿ ಬಿ ಖಾತಾ ಕೊಡುವುದು
ಬಿ ಖಾತಾಗೆ ಯಾವುದೇ ಪ್ರಾಧಿಕಾರದ ಎನ್​​ಒಸಿ ಬೇಕಿಲ್ಲ
ಎ ಖಾತಾಗೆ ಕನ್ವರ್ಷನ್ ಲೆಟರ್, ಪ್ಲ್ಯಾನ್ ಅಪ್ರೂವಲ್ ಬೇಕು


ಏನಿದು ಅನಧಿಕೃತ ಎ ಖಾತಾ?


ಇದನ್ನೂ ಓದಿ: RBI Restrictions: ಗ್ರಾಹಕರಿಗೆ ಬಿಗ್​ ಶಾಕ್​! ಕರ್ನಾಟಕದ ಈ ಬ್ಯಾಂಕ್ ಇಂದಿನಿಂದ ಬಂದ್


BBMPಗೆ ಜನರ ಪ್ರಶ್ನೆ..!


ಬಿ ಖಾತಾ ಮಾನ್ಯತೆ ಇದ್ದಾಗಲೂ ಎ ಖಾತಾ ಕೊಟ್ಟಿದ್ಯಾಕೆ? ಎನ್ನುವ ಪ್ರಶ್ನೆ ಎದುರಾಗಿದೆ. ಜನರು ಬಿ ಖಾತಾ ಬದಲು ಎ ಖಾತಾ ಪಡೆದಿದ್ದರೆ, ಅದನ್ನು ಈಗ ಬಿ ಖಾತಾಗೆ ವರ್ಗಾವಣೆ ಮಾಡಲಾಗುತ್ತದೆ. ಆದರೆ ಬಿಬಿಎಂಪಿಯಲ್ಲಿ ಯಾವ ಅಧಿಕಾರಿ ತಪ್ಪು ಮಾಡಿದ್ದಾರೆ? ಜನರಿಗೆ ಶಿಕ್ಷೆ ಕೊಡುವುದಕ್ಕೆ ಸಿದ್ಧವಾಗಿದ್ದಾರೆ. ಅಧಿಕಾರಿಗಳಿಗೆ ಏನು ಶಿಕ್ಷೆ ಅನ್ನೋ ಪ್ರಶ್ನೆ ಎದುರಾಗಿದೆ. ಜನಪ್ರತಿನಿಧಿಗಳು ಇಲ್ಲದೆ ಇರುವಾಗ ಈ ನಿರ್ಧಾರ ಬೇಡ ಅನ್ನೋ ಆಗ್ರಹವೂ ಕೇಳಿ ಬಂದಿದೆ.


ಈ ಕುರಿತು ಮಾತನಾಡಿರುವ ಸಾಮಾಜಿಕ ಕಾರ್ಯಕರ್ತ ಅಮರೇಶ್ ಅವರು, ಇದನ್ನೂ ಅಧಿಕೃತ ಮಾಡಿಕೊಟ್ಟಿರುವುದೇ ಬಿಬಿಎಂಪಿ ಐಆರ್​ಓಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು. ಈಗಾಗಲೇ ಅಧಿಕೃತ ಅಂತ ಅಧಿಕಾರಿಗಳೇ ಕೊಟ್ಟಿರುವ ದಾಖಲೆಯನ್ನು ಅನಧಿಕೃತ ಅಂತ ಹೇಳುವುದು ಬಹಳ ವಿಚಿತ್ರ ಎನಿಸುತ್ತದೆ. ಆ ಮೂಲಕ ಜನರನ್ನು ಗೊಂದಲಕ್ಕೆ ತಳ್ಳುವ ಕೆಲಸ ಆಗ್ತಿದೆ. ಇದರಿಂದ ಬಿಬಿಎಂಪಿ ಅಧಿಕಾರಿಗಳು ಜನರಿಗೆ ಮತ್ತಷ್ಟು ತೊಂದರೆ ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಖಾತಾ ಅಂದೋಲನ


ಅಕ್ರಮ ಖಾತಾ ತಡೆಗೆ BBMP ಖಾತಾ ಆಂದೋಲನ!


ಬಿಬಿಎಂಪಿ ವ್ಯಾಪ್ತಿಯಲ್ಲಿ ಜನರಲ್ಲಿ ಖಾತಾ ಬಗ್ಗೆ ಸಾಕಷ್ಟು ಗೊಂದಲಗಳು ಶುರುವಾಗಿದೆ. ಇದಕ್ಕಾಗಿ ಬಿಬಿಎಂಪಿ ಖಾತಾ ಆಂದೋಲನ ನಡೆಸಲು ಮುಂದಾಗಿದೆ.‌ ಫೆಬ್ರವರಿ 27 ರಿಂದ ಖಾತಾ ಆಂದೋಲನಕ್ಕೆ ಚಾಲನೆ ಸಿಗಲಿದೆ. ಎಲ್ಲಾ ವಲಯಗಳಲ್ಲಿ ಹೆಲ್ಪ್ ಡೆಸ್ಕ್ ತೆರೆಯಲಿದ್ದು, ಬೆಳಗ್ಗೆ 11 ರಿಂದ 4 ಗಂಟೆವರೆಗೆ ಕಾರ್ಯ ನಿರ್ವಹಿಸಲಿವೆ.


ಇದನ್ನೂ ಓದಿ: Savitha Bai Malleshanaik: ಕಾಂಗ್ರೆಸ್​ ಟಿಕೆಟ್​​ ಆಕಾಂಕ್ಷಿಯ ಖಾಸಗಿ ಫೋಟೋ ವೈರಲ್​​; ದ್ವೇಷ ರಾಜಕಾರಣ ಅಂತ ಸವಿತಾ ಬಾಯಿ ತಿರುಗೇಟು


ಈ ಬಗ್ಗೆ ಮಾಹಿತಿ ನೀಡಿರುವ ಕಂದಾಯ ವಿಭಾಗದ ಬಿಬಿಎಂಪಿ ಸ್ಪೆಷಲ್ ಕಮಿಷನರ್ ದೀಪಕ್ ಅವರು, ಪ್ರತಿಯೊಂದು ಪ್ರಾರ್ಪಟಿಗೂ ಅದನ್ನು ಕ್ರಿಯೇಟ್ ಮಾಡುವ ಸಂದರ್ಭದಲ್ಲಿ ದಾಖಲೆಗಳನ್ನು ಹೊಂದಿರುತ್ತದೆ. ಇದು ಕೆಲವು ನಿಯಮಗಳಿಗೆ ಒಳಪಟ್ಟಿರುತ್ತದೆ. ಇದರ ಆಧಾರದ ಮೇಲೆ ಎ ಅಥವಾ ಬಿ ಅಂತ ಆಗಲೇ ನಿರ್ಧಾರ ಮಾಡಿರುತ್ತಾರೆ. ಅದನ್ನು ಬಿಬಿಎಂಪಿ ಆಗಲಿ ಅಥವಾ ಮಾಲೀಕರಾಗಲಿ ಬದಲಾವಣೆ ಮಾಡಲು ಆಗೋದಿಲ್ಲ ಎಂದು ಹೇಳಿದ್ದಾರೆ.




ಅಧಿಕಾರಿಗಳು ಕಾಸು ಪಡೆದು ಬಿ ಖಾತಾವನ್ನು ಎ ಖಾತಾ ಮಾಡಿದ್ದಾರೋ? ಅಥವಾ ರಾಜಕಾರಣಿಗಳ ಒತ್ತಡದಿಂದ ಮಾಡಿದ್ದರೋ ಎನ್ನುವುದು ನಗಣ್ಯ. ಆದರೆ ಜನರಿಗೆ ಶಿಕ್ಷೆ ಆಗ್ತಿದೆ. ಅಧಿಕಾರಿಗಳಿಗೂ ಶಿಕ್ಷೆ ಆಗಲಿ ಎನ್ನುವುದು ಕೂಡ ಸರಿಯಾಗಿದೆ.

Published by:Sumanth SN
First published: