HOME » NEWS » State » BBMP ACT 2020 KARNATAKA GOVERNOR VAJUBHAI VALA APPROVED BBMP ACT HERE IS THE BBMP ACT HIGHLIGHTS SCT

BBMP Act 2020: ಬಿಬಿಎಂಪಿ ಕಾಯ್ದೆಗೆ ರಾಜ್ಯಪಾಲರ ಅನುಮೋದನೆ; ಹೊಸ ಕಾನೂನಿನ ಮುಖ್ಯಾಂಶಗಳು ಇಲ್ಲಿವೆ

BBMP Act 2020 Highlights: ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಮಂಡಿಸಿದ್ದ ಬಿಬಿಎಂಪಿ ಮಸೂದೆಯನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿತ್ತು. ಇದೀಗ ಈ ಕಾಯ್ದೆಗೆ ರಾಜ್ಯಪಾಲರ ಅನುಮೋದನೆಯೂ ಸಿಕ್ಕಿದೆ.

news18-kannada
Updated:December 22, 2020, 11:22 AM IST
BBMP Act 2020: ಬಿಬಿಎಂಪಿ ಕಾಯ್ದೆಗೆ ರಾಜ್ಯಪಾಲರ ಅನುಮೋದನೆ; ಹೊಸ ಕಾನೂನಿನ ಮುಖ್ಯಾಂಶಗಳು ಇಲ್ಲಿವೆ
ಬಿಬಿಎಂಪಿ
  • Share this:
ಬೆಂಗಳೂರು (ಡಿ. 22): ಬಿಬಿಎಂಪಿ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ಸರ್ಕಾರ ಬಿಬಿಎಂಪಿ ಹೊಸ ಕಾಯ್ದೆಯನ್ನು ರೂಪಿಸಿತ್ತು. ಆ ಕಾಯ್ದೆಗೆ ರಾಜ್ಯಪಾಲ ವಜುಭಾಯಿ ವಾಲಾ ಅನುಮೋದನೆ ನೀಡಿದ್ದಾರೆ. ಈ ನೂತನ ಬಿಬಿಎಂಪಿ ಕಾಯ್ದೆಯ ಪ್ರಕಾರ ಬಿಬಿಎಂಪಿಯ ವ್ಯಾಪ್ತಿ ಮತ್ತಷ್ಟು ಹಿಗ್ಗಲಿದೆ. ಮೇಯರ್ ಮತ್ತು ಉಪಮೇಯರ್ ಅಧಿಕಾರಾವಧಿಯೂ ಹೆಚ್ಚಾಗಲಿದೆ. ರಾಜ್ಯಪಾಲರು ಅನುಮೋದನೆ ನೀಡಿರುವ ಬಿಬಿಎಂಪಿ ಕಾಯ್ದೆಯ ಪ್ರಮುಖ ಅಂಶಗಳು ಇಲ್ಲಿವೆ...

1. ನೂತನ ಕಾಯ್ದೆಯ ಪ್ರಕಾರ ಬಿಬಿಎಂಪಿ ವ್ಯಾಪ್ತಿ ಮತ್ತಷ್ಟು ಹಿಗ್ಗಲಿದೆ. ಬಿಬಿಎಂಪಿ ಸುತ್ತಲೂ ಇರುವ 1 ಕಿಲೋ ಮೀಟರ್‌ ವ್ಯಾಪ್ತಿಯ ಗ್ರಾಮ, ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ ಹಾಗೂ ನಗರಸಭೆಗೆ ಸೇರಿದ ಪ್ರದೇಶಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಯಾಗಲಿದೆ.

2. ಬಿಬಿಎಂಪಿ ಮೇಯರ್‌ ಹಾಗೂ ಉಪಮೇಯರ್‌ ಅಧಿಕಾರಾವಧಿಯನ್ನು 1 ವರ್ಷದಿಂದ ಎರಡೂವರೆ ವರ್ಷಗಳಿಗೆ ಹೆಚ್ಚಳ ಮಾಡಲಾಗುವುದು.

3. ಬಿಬಿಎಂಪಿ ವಾರ್ಡ್ ಗಳ ಸಂಖ್ಯೆಯನ್ನು 198ರಿಂದ 243ಕ್ಕೆ ಏರಿಕೆ ಮಾಡಲಾಗುವುದು.

4. ಬಡವರಿಗೆ ಶೇ. 50ರಷ್ಟು ಕಸ ಶುಲ್ಕ ರಿಯಾಯಿತಿ ನೀಡಲಾಗುವುದು.

5. ಮೇಯರ್‌ ಹಾಗೂ ಉಪ ಮೇಯರ್‌ ಕಾರ್ಯವ್ಯಾಪ್ತಿಗಳ ನಿಗದಿ ಮಾಡಲಾಗುವುದು. ಮೇಯರ್‌ ಯಾವುದಾದರೂ ವರದಿ ಅಥವಾ ಮಾಹಿತಿ ಕೇಳಿದರೆ 15 ದಿನಗಳೊಳಗಾಗಿ ಮುಖ್ಯ ಆಯುಕ್ತರು ನೀಡಬೇಕು.

6. ಬಿಬಿಎಂಪಿಗೆ ಪ್ರಸ್ತುತ ಇರುವ ಬಿಬಿಎಂಪಿ ಆಯುಕ್ತ ಹುದ್ದೆಯನ್ನು ಮುಖ್ಯ ಹುದ್ದೆಯಾಗಿ ಮಾಡಬೇಕು.7. ರಾಜ್ಯ ಸರ್ಕಾ​ರದ ಪ್ರಧಾನ ಕಾರ್ಯ​ದ​ರ್ಶಿಯ ಹುದ್ದೆಗಿಂತ ಕಡಿಮೆ ಇಲ್ಲ​ದ​ವ​ರ​ನ್ನು ಆಯುಕ್ತರಾಗಿ ನೇಮ​ಕ ಮಾಡಲಾಗುವುದು.

8. ಆಯುಕ್ತರ ಅಧಿ​ಕಾರಾವಧಿ ಎರ​ಡು ವರ್ಷ​ಗ​ಳಿ​ಗಿಂತ ಕಡಿಮೆ ಇಲ್ಲ​ದಂತೆ ನಿಯೋ​ಜನೆ ಮಾಡಬೇಕು.

9. ಎರಡು ವರ್ಷದೊಳಗಾಗಿ ಮುಖ್ಯ ಆಯು​ಕ್ತರ ಆಡ​ಳಿತ ಹಾಗೂ ನಿರ್ವ​ಹಣೆ ಸರ್ಕಾ​ರಕ್ಕೆ ತೃಪ್ತಿ​ಕ​ರ​ವಾದ​ರೆ, ಆಯುಕ್ತರ ಅಧಿ​ಕಾರ ಅವ​ಧಿ​ಯ​ನ್ನು ಮುಂದು​ವ​ರಿ​ಸುವ ಅಧಿ​ಕಾರ ಸರ್ಕಾ​ರಕ್ಕೆ ಇರ​ಲಿದೆ.

10. ಅವಧಿಗೆ ಮೊದಲು ವರ್ಗಾವಣೆ ಮಾಡಬೇಕಾದರೆ ಬಿಬಿಎಂಪಿ ಮೇಯರ್‌ ಅವರಿಗೆ ಕಾರಣಗಳನ್ನು ತಿಳಿಸಬೇಕು.

11. ವಲಯ ಆಯುಕ್ತರು ಸರ್ಕಾರದ ಕಾರ್ಯದರ್ಶಿ ಹಂತಕ್ಕಿಂತ ಕಡಿಮೆ ಇಲ್ಲದ ಅಧಿಕಾರಿಯಾಗಿರಬೇಕು.

12. ವಿಪತ್ತು ನಿರ್ವಹಣಾ ಸಮಿತಿ ರಚನೆಯಾಗಲಿದೆ. ನಗ​ರ​ದಲ್ಲಿ ಸಾರ್ವಜ​ನಿ​ಕರಿಗೆ ತುರ್ತಾಗಿ ಸ್ಪಂದಿ​ಸುವ ಉದ್ದೇ​ಶ​ದಿಂದ ವಿಪತ್ತು ನಿರ್ವ​ಹಣಾ ಸಮಿ​ತಿ​ ರಚನೆಯಾಗಲಿದೆ.

13.  ಏರಿಯಾ ಸಭಾ ಅಸ್ತಿತ್ವಕ್ಕೆ ಬರಲಿದೆ. ಪಾಲಿ​ಕೆಯ ವ್ಯಾಪ್ತಿ​ಯಲ್ಲಿ ಅಧಿ​ಕಾರ ವಿಕೇಂದ್ರೀ​ಕ​ರಣ ಮಾಡುವ ಉದ್ದೇ​ಶ​ದಿಂದ ವಿಧಾ​ನ​ಸಭಾ ಕ್ಷೇತ್ರ​ವಾರು ಹಾಗೂ ವಾರ್ಡ್‌​ನಲ್ಲಿ ‘ಪ್ರಾಂತ್ಯ ಸಭೆ’ಗಳು ಅಥವಾ ಏರಿಯಾ ಸಭಾಗಳ ರಚನೆಯಾಗಲಿದೆ.

14. ಏರಿಯಾ ಸಭಾಗಳಲ್ಲಿ ವಾರ್ಡಿನ ಪ್ರತಿಯೊಬ್ಬ ಮತದಾರರೂ ಸದಸ್ಯರಾಗಿರಲಿದ್ದಾರೆ. ಶಾಸ​ಕರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಲಿದೆ. ಪಾಲಿಕೆ ವ್ಯಾಪ್ತಿ​ಯಲ್ಲಿ ಇಲ್ಲಿ​ಯ​ವ​ರೆಗೆ ವಾರ್ಡ್‌ ಮಟ್ಟ​ದ ಸಮಿ​ತಿ​ಗಳು ಅಸ್ತಿ​ತ್ವ​ದಲ್ಲಿ ಇದ್ದವು. ಈಗ ಪ್ರತಿ ವಿಧಾ​ನ​ಸಭಾ ಕ್ಷೇತ್ರ​ವಾರು ಸಮಿ​ತಿ​ಗ​ಳನ್ನು ರಚನೆಗೆ ಅವಕಾಶ ನೀಡಲಾಗುವುದು.

15. ಹೊಸ ತೆರಿಗೆ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ‌ ಹಾಲಿ ಇರುವ ತೆರಿಗೆಗಳ ಜೊತೆಗೆ ಮನೋರಂಜನಾ ತೆರಿಗೆ ಹೇರಿಕೆ ಮಾಡಲಾಗುವುದು.

16. ಕ್ಷೇತ್ರ ಸಮಾ​ಲೋ​ಚನಾ ಸಮಿ​ತಿಗಳ ರಚನೆ ಮಾಡಲಾಗುವುದು. ಪಾಲಿ​ಕೆ ವ್ಯಾಪ್ತಿಯ ಪ್ರತಿ ವಿಧಾ​ನಸಭಾ ಕ್ಷೇತ್ರ ವ್ಯಾಪ್ತಿ​ಯಲ್ಲಿ ಒಂದು ವಿಧಾ​ನ​ಸಭಾ ಸಮಾಲೋ​ಚನಾ ಸಮಿ​ತಿ​ಯ​ನ್ನು ರಚ​ನೆ ಮಾಡಲಾಗುವುದು.

17. ಆಯಾ ವಿಧಾ​ನ​ಸಭಾ ಕ್ಷೇತ್ರದ ಶಾಸ​ಕರೇ ಈ ಸಮಿ​ತಿಯ ಅಧ್ಯ​ಕ್ಷ​ರಾಗಿರುತ್ತಾರೆ. ಆಯಾ ವಿಧಾ​ನ​ಸಭಾ ಕ್ಷೇತ್ರ ವ್ಯಾಪ್ತಿ​ಯ​ಲ್ಲಿನ ವಾರ್ಡ್‌​ಗಳ ವಾರ್ಡ್‌ ಸದ​ಸ್ಯರು ಈ ವಾರ್ಡ್‌​ನಲ್ಲಿ ಸದ​ಸ್ಯ​ರಾಗಿರುತ್ತಾರೆ. ಈ ಸಮಿ​ತಿಯ ಅಧಿ​ಕಾರಾವಧಿ 30 ತಿಂಗಳು ಇರ​ಲಿದೆ. ಪಾಲಿಕೆ ವ್ಯಾಪ್ತಿ​ಯಲ್ಲಿ ಪ್ರತಿ ವಲ​ಯಕ್ಕೂ ಒಂದು ಸಮಿ​ತಿ​ಯನ್ನು ರಚನೆ ಮಾಡಲಾಗುವುದು.

18. ಬಿಬಿಎಂಪಿ ಸ್ಥಾಯಿ ಸಮಿ​ತಿ​ಗಳ ಸಂಖ್ಯೆ 12ರಿಂದ 15ಕ್ಕೆ ಏರಿಕೆಯಾಗಲಿದೆ.

ಬೆಂಗಳೂರಿನ ಸಮಗ್ರ ಅಭಿವೃದ್ಧಿ ಮತ್ತು ಸುಗಮ ಆಡಳಿತಕ್ಕಾಗಿ ರೂಪಿಸಿರುವ ಪರಿಷ್ಕೃತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಸೂದೆಯನ್ನು ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಲಾಗಿತ್ತು. ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಮಂಡಿಸಿದ್ದ ಈ ಮಸೂದೆಯನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿತ್ತು. ಕಲಾಪ ಬಹಿಷ್ಕರಿಸಿದ್ದ ಕಾಂಗ್ರೆಸ್ ಸದಸ್ಯರ ಅನುಪಸ್ಥಿತಿಯಲ್ಲಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಬಿಬಿಎಂಪಿ ಮಸೂದೆಯನ್ನು ಮಂಡಿಸಿದ್ದರು. ಅದಕ್ಕೆ ಈಗ ರಾಜ್ಯಪಾಲರ ಅನುಮೋದನೆಯೂ ಸಿಕ್ಕಿದೆ.
Published by: Sushma Chakre
First published: December 22, 2020, 11:22 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories