• Home
  • »
  • News
  • »
  • state
  • »
  • Bengaluru: ಮನೆಯಿಂದ ಹೊರ ಬಂದು ಬೇರೆ ಕಟ್ಟಡದಿಂದ ಜಿಗಿದ BBA ವಿದ್ಯಾರ್ಥಿ ಸಾವು

Bengaluru: ಮನೆಯಿಂದ ಹೊರ ಬಂದು ಬೇರೆ ಕಟ್ಟಡದಿಂದ ಜಿಗಿದ BBA ವಿದ್ಯಾರ್ಥಿ ಸಾವು

ಪವನ್, ಮೃತ ಯುವಕ

ಪವನ್, ಮೃತ ಯುವಕ

ಪವನ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಕಟ್ಟಡದೊಳಗೆ ಪವನ್ ಹೇಗೆ ಬಂದ ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಕಟ್ಟಡದೊಳಗೆ ಪ್ರವೇಶಿಸುವಾಗ ಆತನ ಜೊತೆ ಯಾರಾದ್ರೂ ಇದ್ದಾರ ಎಂಬುದರ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • Share this:

ಡಿಸೆಂಬರ್ 25ರಂದು 19ನೇ ಮಹಡಿಯಿಂದ ಜಿಗಿದು ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡಿದ್ದರು. ಈಗ ಅದೇ ರೀತಿಯ ಮತ್ತೊಂದು ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. 21 ವರ್ಷದ ಯುವಕನೋರ್ವ ಕಟ್ಟಡದಿಂದ (Building) ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಿಬಿಎ ಅಂತಿಮ ವರ್ಷದ ವಿದ್ಯಾರ್ಥಿ (BBA Student) ಆತ್ಮಹತ್ಯೆಗೆ ಶರಣಾಗಿದ್ದಾನೆ. ಬುಧವಾರ ರಾತ್ರಿ (ಡಿಸೆಂಬರ್ 28) ಸುಮಾರು 10.30ರ ವೇಳೆಗೆ ಈ ಘಟನೆ ನಡೆದಿದೆ. ಹೆಗ್ಗನಹಳ್ಳಿ (Hegganahalli) ನಿವಾಸಿ ಪವನ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಸುಬ್ರಮಣ್ಯ ನಗರದ ಮಿಲ್ಕ್ ಕಾಲೋನಿಯಲ್ಲಿರುವ ಕಟ್ಟಡದಿಂದ ಪವನ್ ಜಿಗಿದಿದ್ದಾನೆ.


ಎಎಸ್​ಸಿ ಕಾಲೇಜ್​​ನಲ್ಲಿ ವ್ಯಾಸಂಗ ಮಾಡ್ತಿದ್ದ ಪವನ್ ನಿನ್ನೆ ಸಂಜೆ ಹೆಗ್ಗನಹಳ್ಳಿಯ ಮನೆಗೆ ಬಂದಿದ್ದಾನೆ. ಬಳಿಕ ಮನೆಯಲ್ಲಿ ಬ್ಯಾಗ್ ಇಟ್ಟು ಸುಬ್ರಮಣ್ಯನಗರ ಮಿಲ್ಕ್ ಕಾಲೋನಿ ಬಳಿ ಬಂದಿದ್ದಾನೆ. ಮಿಲ್ಕ್ ಕಾಲೋನಿ ಮೈದಾನ ಸಮೀಪದ ಕಟ್ಟಡವೊಂದರಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.


ಪೊಲೀಸರ ತನಿಖೆ ಆರಂಭ


ಪವನ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಕಟ್ಟಡದೊಳಗೆ ಪವನ್ ಹೇಗೆ ಬಂದ ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಕಟ್ಟಡದೊಳಗೆ ಪ್ರವೇಶಿಸುವಾಗ ಆತನ ಜೊತೆ ಯಾರಾದ್ರೂ ಇದ್ದಾರ ಎಂಬುದರ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ಸದ್ಯ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸುಬ್ರಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಲಾರಿ ಪಲ್ಟಿಯಾಗಿ ಇಬ್ಬರು ಸಾವು


ಕಾಂಕ್ರಿಟ್ ಮಿಕ್ಸರ್ ಲಾರಿ ಪಲ್ಟಿಯಾಗಿ ಚಾಲಕ ಮತ್ತು ಸಹಾಯಕ ಸಾವನ್ನಪ್ಪಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಸೊಂಡೆಕೊಪ್ಪದಲ್ಲಿ ನಡೆದಿದೆ. ಚಾಲಕ ಸಿದ್ದಪ್ಪ (31) ಸ್ಥಳದಲ್ಲೇ ಸಾವನ್ನಪ್ಪಿದ್ದು, ಸಹಾಯಕ ಮುತ್ತು (25) ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತರಾಗಿದ್ದಾರೆ.


ಮೃತರಿಬ್ಬರು ಮಲ್ಲಾಪುರದ ಖಾಸಗಿ ಆರ್‌ಎಂ‌ಸಿ ಪ್ಲಾಂ‌ಟ್‌ನ ಕಾರ್ಮಿಕರು ಎಂಬ ಮಾಹಿತಿ ಲಭ್ಯವಾಗಿದೆ.  ಮಲ್ಲಾಪುದಿಂದ ಸೊಂಡೆಕೊಪ್ಪ ಮಾರ್ಗವಾಗಿ ಚಲಿಸುತ್ತಿದ್ದಾರಸ್ತೆ ತಿರುವಿನಲ್ಲಿ ಕಾಂಕ್ರೆಟ್ ಮಿಕ್ಸರ್ ಲಾರಿ ಪಲ್ಟಿ ಹೊಡೆದಿದೆ. ಅಪಘಾತದ ರಭಸಕ್ಕೆ ಲಾರಿ ಸಂಪೂರ್ಣ ಜಖಂ ಆಗಿದೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ವೈದ್ಯರ ನಿರ್ಲಕ್ಷ್ಯಕ್ಕೆ ಕಂದಮ್ಮ ಸಾವು?


ವೈದ್ಯರ ನಿರ್ಲಕ್ಷ್ಯಕ್ಕೆ ಪುಟ್ಟ ಕಂದಮ್ಮ ಸಾವನ್ನಪ್ಪಿರುವ ಆರೋಪ ಕೇಳಿ ಬಂದಿದೆ. ಚಿಕ್ಕಮಗಳೂರು ನಗರದ ಹೆರಿಗೆ ಆಸ್ಪತ್ರೆಯಲ್ಲಿ ಸೂರಾಪುರ ಗ್ರಾಮದ ಗೋಪಾಲ್, ಮೀನಾಕ್ಷಿ ದಂಪತಿಯ ಪುಟ್ಟ ಮಗು ಮೃತಪಟ್ಟಿದೆ.


ವೈದ್ಯರ ನಿರ್ಲಕ್ಷ್ಯವೇ ಮಗು ಸಾವಿಗೆ ಕಾರಣ ಅಂತ ಮಗುವಿನ ಪೋಷಕರು ಆರೋಪಿಸಿದ್ದಾರೆ. ಈ ವೇಳೆ ಆಸ್ಪತ್ರೆ ಸಿಬ್ಬಂದಿ ಹಾಗೂ ಮೃತ ಮಗುವಿನ ಕುಟುಂಬಸ್ಥರು ನಡುವೆ ಮಾತಿನ ಚಕಮಕಿ ನಡೆಯಿತು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಸ್ಥಿತಿಯನ್ನು ತಿಳಿಗೊಳಿಸಿದರು.


ಇದನ್ನೂ ಓದಿ:  New Year Guidelines: ಹೊಸ ವರ್ಷಕ್ಕೆ ಪಿಜಿ, ಬಾರ್ & ರೆಸ್ಟೋರೆಂಟ್, ಪಬ್ ಮಾಲೀಕರಿಗೆ ಮಾರ್ಗಸೂಚಿ ಪ್ರಕಟ


ಅನುಮನಾಸ್ಪದ ರೀತಿಯಲ್ಲಿ ವ್ಯಕ್ತಿ ಸಾವು, ಪತ್ನಿ ಮೇಲೆ ಶಂಕೆ!


ವ್ಯಕ್ತಿಯೋರ್ವ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ನೆಲಮಂಗಲದ (Nelamangala) ಮಾಚೋಹಳ್ಳಿಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಸುನೀಲ್ ಎಂದು ಗುರುತಿಸಲಾಗಿದ್ದು, ಹೃದಯಾಘಾತದರಿಂದ ಮೃತಪಟ್ಟಿದ್ದಾರೆ ಅಂತ ಮೃತನ ಪತ್ನಿ ಆಶಾ ಹೇಳಿದ್ದಾರೆ. ಆದರೆ ಮೃತ ವ್ಯಕ್ತಿಯ ಕುತ್ತಿಗೆ ಭಾಗದಲ್ಲಿ ನೇಣು ಬಿಗಿದ ಗುರುತು ಪತ್ತೆಯಾಗಿದೆ.


ಕಳೆದ 4 ವರ್ಷದ ಹಿಂದೆ ತನ್ನ ಸ್ನೇಹಿತನ ಪತ್ನಿ ಆಶಾಳನ್ನೇ ಸುನೀಲ್ ಮದುವೆಯಾಗಿದ್ದ. ಕುಡಿದು ಬಂದಾಗಲೆಲ್ಲ ಸುನೀಲ್ ಪ್ರತಿನಿತ್ಯ ಜಗಳ ಮಾಡ್ತಿದ್ನಂತೆ. ದಿನನಿತ್ಯ ನಾಯಿ ಗೂಡಿನಲ್ಲಿ ಮದ್ಯದ ನಶೆಯಲ್ಲಿ ಮಲಗುತ್ತಿದ್ದನಂತೆ. ಆದರೆ ಇದ್ದಕ್ಕಿದ್ದಂತೆ ನಾಯಿ ಗೂಡಿನಲ್ಲೇ ಸುನೀಲ ಸಾವನ್ನಪ್ಪಿದ್ದಾನೆ ಎಂದು ಆಶಾ ಹೇಳ್ತಿದ್ದಾರೆ.

Published by:Mahmadrafik K
First published: