ನಾನೀಗ ಇಲಿಯಾಗಿದ್ದೇನೆ.. ಬದಾಮಿಯಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ವೇದಿಕೆಯಲ್ಲೇ ಚಿಮ್ಮನಕಟ್ಟಿ ಅಸಮಾಧಾನ!

ಮೈಸೂರು ವರುಣಾ ಮತ್ತು ಚಾಮುಂಡಿ ಎರಡು ಕ್ಷೇತ್ರದಲ್ಲಿ ಅವರಿಗೆ ಅವಕಾಶ ಇದೆ. ಆದರೆ ನನಗೆ ಈ ಕ್ಷೇತ್ರ ಬಿಟ್ರೆ ಯಾವುದೇ ಅವಕಾಶ ಇಲ್ಲ. ಅವರಿಗಾಗಿ ನಾನು ಕ್ಷೇತ್ರ ತ್ಯಾಗ ಮಾಡಿದ್ದೀನಿ. ಅವರ ಕ್ಷೇತ್ರದಲ್ಲಿ ಅವರು ಗೆದ್ರೆ ಅವರಿಗೆ ಯೋಗ್ಯತೆ ಇರುತ್ತೆ ಎನ್ನುವ ಮೂಲಕ ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ, ಬಿ.ಬಿ.ಚಿಮ್ಮನಕಟ್ಟಿ

ಸಿದ್ದರಾಮಯ್ಯ, ಬಿ.ಬಿ.ಚಿಮ್ಮನಕಟ್ಟಿ

  • Share this:
ಬಾಗಲಕೋಟೆ: ವಿಧಾನ ಪರಿಷತ್​ ಚುನಾವಣೆ (MLC Election) ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಇಂದು ಸ್ವಕ್ಷೇತ್ರ ಬದಾಮಿಯಲ್ಲಿ ಪ್ರಚಾರ ನಡೆಸಿದರು. ನಗರದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತವಾಯಿತು. ಸಿದ್ದರಾಮಯ್ಯಗಾಗಿ ಕ್ಷೇತ್ರ ಬಿಟ್ಟು ಕೊಟ್ಟ ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ (B B Chimmanakatti) ಮಾತಿನಿಂದ ಇಡೀ ಸಭೆ ಗೊಂದಲದ ಗೂಡಾಯಿತು. ಸಿದ್ದರಾಮಯ್ಯ ವರುಣಾ ಬಿಟ್ಟು ಬಂದು ಬದಾಮಿಗೆ (Badami Constituency) ಬಂದು ಸ್ಪಧೆ೯ ಮಾಡಿರೋ ಬಗ್ಗೆ ಚಿಮ್ಮನಕಟ್ಟಿ ಪ್ರಸ್ತಾಪಿಸುತ್ತಲೇ ಸಭೆ ಗೊಂದಲ ಮಯವಾಯಿತು. ವರುಣಾ ಬಿಟ್ಟು ಬಾದಾಮಿಗೆ ಬಂದ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಚಿಮ್ಮನಕಟ್ಟಿ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದರು. ವರುಣಾ ಬಿಟ್ಟು ಬದಾಮಿಗೆ ಯಾಕೆ ಬಂದ್ರಿ ಎಂದು ವೇದಿಕೆಯಲ್ಲೇ ಪ್ರಶ್ನಿಸಿದರು. ಈ ಮಾತಿಗೆ ಚಿಮ್ಮನಕಟ್ಟಿ ಬೆಂಬಲಿಗರು ಜೈಕಾರ ಕೂಗಿದರೆ, ಸಿದ್ದರಾಮಯ್ಯ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿದರು.

ನಾನು ಹುಲಿಯಾನೇ, ಆದ್ರೆ ಈಗ ಇಲಿ ಆಗಿದ್ದೇನೆ

ಚಿಮ್ಮನಕಟ್ಟಿ ಭಾಷಣ ಆರಂಭಿಸುತ್ತಲೇ ಹೌದು ಹುಲಿಯಾ ಎಂದು ಬೆಂಬಲಿಗರು ಕೂಗಿದರು, ಇದಕ್ಕೆ ಚಿಮ್ಮನಕಟ್ಟಿ ಭಾವುಕಾರದರು. ನಾನು ಹುಲಿಯಾನೇ, ಆದ್ರೆ ಈಗ ಇಲಿ ಆಗಿದ್ದೇನೆ. ನೀವು ಮಾಡಿದ್ರೆ ಹುಲಿಯಾನೂ ಆಗ್ತೀನಿ, ಮಂತ್ರಿನೂ ಆಗ್ತೀನಿ ಮುಖ್ಯಮಂತ್ರಿನೂ ಆಗ್ತೀನಿ. ನೀವು ಮಾಡಿದ್ರೆ ಎಲ್ಲ ಆಗುತ್ತೆ ಎಂದು ಬೆಂಬಲಿಗರಿಗೆ ಹೇಳಿದರು. ತಮ್ಮದು ಮೈಸೂರು ವರುಣಾ ಮತ್ತು ಚಾಮುಂಡಿ ಎರಡು ಕ್ಷೇತ್ರದಲ್ಲಿ ಅವರಿಗೆ ಅವಕಾಶ ಇದೆ. ಆದರೆ ನನಗೆ ಈ ಕ್ಷೇತ್ರ ಬಿಟ್ರೆ ಯಾವುದೇ ಅವಕಾಶ ಇಲ್ಲ. ಅವರಿಗಾಗಿ ನಾನು ಕ್ಷೇತ್ರ ತ್ಯಾಗ ಮಾಡಿದ್ದೀನಿ. ಅವರ ಕ್ಷೇತ್ರದಲ್ಲಿ ಅವರು ಗೆದ್ರೆ ಅವರಿಗೆ ಯೋಗ್ಯತೆ ಇರುತ್ತೆ ಎನ್ನುವ ಮೂಲಕ ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ಇದನ್ನೂ ಓದಿ: ಸ್ವಾರ್ಥ, ಬೆದರಿಕೆಯ ರಾಜಕಾರಣ ಸರಿಯಲ್ಲ: ರಮೇಶ್ ಜಾರಕಿಹೊಳಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಚಿಮ್ಮನಕಟ್ಟಿರನ್ನು ಸಮಾಧಾನಪಡಿಸಲು ಪ್ರಯತ್ನ

ವೇದಿಕೆಯಲ್ಲಿದ್ದ ಸಿದ್ದರಾಮಯ್ಯಗೆ ಚಿಮ್ಮನಕಟ್ಟಿ ಮುಜಗರ ತಂದಿಟ್ಟಿತು. ಚಿಮ್ಮನಕಟ್ಟಿ ಅವರನ್ನು ಸಮಾಧಾನಪಡಿಸಲು ಹರಸಾಹಸ ಪಟ್ಟರು. ಚಿಮ್ಮನಕಟ್ಟಿ ಭಾಷಣ ನಿಲ್ಲಿಸಲು ಕೆಲ ಮುಖಂಡರು ಮುಂದಾದರು. ಕೆಲ ಸಮಯ ಮೈಕ್ ಬಂದ್ ಮಾಡಿ ಚಿಮ್ಮನಕಟ್ಟಿಗೆ ಅವರನ್ನು ಸಮಾಧಾನ ಮಾಡಲು ಯತ್ನಿಸಿದರು. ಇಡೀ ಸಭೆ ಗೊಂದಲ ಮಯವಾಗುತ್ತಿದ್ದಂತೆ ವೇದಿಕೆ ಮುಂದೆ ಜಮಾಯಿಸಿದ ಜನರನ್ನ ನಿಯಂತ್ರಿಸಲು ಪೊಲೀಸರು ಮುಂದಾದರು.

ಸಿದ್ದರಾಮಯ್ಯ ವಿರುದ್ಧ ರಮೇಶ್​ ಜಾರಕಿಹೊಳಿ ಕಿಡಿ

ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಈಗಲೂ ನಮ್ಮ ನಾಯಕರೇ ಎನ್ನುವ ಮೂಲಕ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಎಲ್ಲರ ಹುಬ್ಬೇರಿಸಿದರು. ರಮೇಶ್​ ಜಾರಕಿಹೊಳಿ ರಾಯಬಾಗ ಪಟ್ಟಣದಲ್ಲಿ ಪ್ರಚಾರ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ನನ್ನ ಗುರು, ಈಗಲೂ ಗುರುಗಳೇ. ಆದರೆ ಈಗ ಅವರು ಸುಳ್ಳು ಹೇಳುವುದನ್ನು ಕಲಿಯುತ್ತಿದ್ದಾರೆ. ಅವರನ್ನು ಬಹಳ ಬಹಳ ಟೀಕಿಸಲಾರೆ. ಸಿದ್ದರಾಮಯ್ಯ ಅವರು ನಮ್ಮ ಬಗ್ಗೆ ಮಾತನಾಡಿದ್ದು ಅದಕ್ಕೆ ಉತ್ತರ ಕೊಡಲು ಬಂದಿದ್ದೆ, ಆದರೆ ಅವರು ನನ್ನ ಗುರು. ಮನೆಯಲ್ಲಿ ಬಹಳ ಮಾತನಾಡಬೇಡಿ ಎಂದಾಗ ನಾನು ಟೀಕಿಸಲು ಹೋಗಲ್ಲ. ಮೊದಲಿನ ಸಿದ್ದರಾಮಯ್ಯ ನೇರ ನಿಷ್ಠುರ ಹಾಗೂ ಮಾತನಾಡಿದರೆ ಹೆದರುವಂತೆ ಇತ್ತು. ಈಗಿನ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ. ಅದು ಬದಲಾಗಬೇಕಿದೆ ಎಂದು ರಮೇಶ್ ಜಾರಕಿಹೊಳಿ ಮೃದು ಮಾತುಗಳಲ್ಲೇ ಮಾತಿನ ಚಾಟಿ ಬೀಸಿದರು. ಇನ್ನು ಪರೋಕ್ಷವಾಗಿ ಕಾಂಗ್ರೆಸ್​ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​​ ವಿರುದ್ಧ ರಮೇಶ್​ ಜಾರಕಿಹೊಳಿ ವಾಗ್ದಾಳಿ ನಡೆಸಿದರು. ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣರಾದವರಿಗೆ ಕಾಂಗ್ರೆಸ್​​ ಟಿಕೆಟ್ ನೀಡಿದೆ ಎಂದು ಹೆಬ್ಬಾಳ್ಕರ ವಿರುದ್ಧ ರಮೇಶ ಗುಡುಗಿದರು.
Published by:Kavya V
First published: