KSRTC Bus: ಬಸ್ಸಿಗಾಗಿ ಸತತ ಐದು ವರ್ಷ ಹೋರಾಡಿ ಕೊನೆಗೂ ಜಯ ದಕ್ಕಿಸಿಕೊಂಡ ಮಹಿಳೆ; ಸಿಕ್ಕಿದ್ದು ಮಾತ್ರ 532ರೂ

ತಾವು ಪ್ರಯಾಣಿಸಬೇಕಿದ್ದ ಕೆಎಸ್‌ಆರ್‌ಟಿಸಿ ಬಸ್‌ ಅನ್ನು ಏಕಾಏಕಿ ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ ಕುಟುಂಬವೊಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ವಿರುದ್ಧ ಗ್ರಾಹಕ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. ಪ್ರಸ್ತುತ ಪ್ರಕರಣ ಇತ್ಯರ್ಥವಾಗಿದ್ದು, ಐದು ವರ್ಷಗಳ ನಂತರ ಪ್ರಕಟವಾದ ತೀರ್ಪಿನಲ್ಲಿ, ಕುಟುಂಬಕ್ಕೆ ಬಸ್ ಟಿಕೆಟ್ ರದ್ದತಿ ಶುಲ್ಕ 532 ರೂ.ಗಳನ್ನು 45 ದಿನಗಳಲ್ಲಿ ಪಾವತಿಸಲು ಪ್ರಧಾನ ವ್ಯವಸ್ಥಾಪಕರಿಗೆ ನ್ಯಾಯಾಲಯ ಆದೇಶ ನೀಡಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಬೆಂಗಳೂರು: ತಾವು ಪ್ರಯಾಣಿಸಬೇಕಿದ್ದ ಕೆಎಸ್‌ಆರ್‌ಟಿಸಿ ಬಸ್‌ (KSRTC Bus) ಅನ್ನು ಏಕಾಏಕಿ ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ ಕುಟುಂಬವೊಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ವಿರುದ್ಧ ಗ್ರಾಹಕ ನ್ಯಾಯಾಲಯದಲ್ಲಿ (Consumer Court) ದಾವೆ ಹೂಡಿತ್ತು. ಪ್ರಸ್ತುತ ಪ್ರಕರಣ ಇತ್ಯರ್ಥವಾಗಿದ್ದು, ಐದು ವರ್ಷಗಳ ನಂತರ ಪ್ರಕಟವಾದ ತೀರ್ಪಿನಲ್ಲಿ, ಕುಟುಂಬಕ್ಕೆ ಬಸ್ ಟಿಕೆಟ್ ರದ್ದತಿ (Bus ticket cancellation) ಶುಲ್ಕ 532 ರೂ.ಗಳನ್ನು 45 ದಿನಗಳಲ್ಲಿ ಪಾವತಿಸಲು ಪ್ರಧಾನ ವ್ಯವಸ್ಥಾಪಕರಿಗೆ ನ್ಯಾಯಾಲಯ ಆದೇಶ ನೀಡಿದೆ. ಅಡಚಣೆಗಳಿಂದ ಕುಪಿತಗೊಂಡ ಯುವತಿ (Women), ಪ್ರಯಾಣದ ದಿನಾಂಕದಂದು ಏಕಾಏಕಿ ಬಸ್ ರದ್ದುಗೊಳಿಸಿದ್ದಕ್ಕಾಗಿ ಸಾರಿಗೆ ನಿಗಮದ ವಿರುದ್ಧ ಮೊಕದ್ದಮೆ ಹೂಡಲು ನಿರ್ಧರಿಸಿದಳು. ಟಿಕೆಟ್ ವೆಚ್ಚ ಮತ್ತು ಆಟೋರಿಕ್ಷಾ ದರದಲ್ಲಿನ ವ್ಯತ್ಯಾಸವನ್ನು ಕುಟುಂಬವು ಪಡೆಯಬೇಕು ಮತ್ತು ಉಂಟಾದ ತೊಂದರೆಗಾಗಿ ರೂ 37,000 ಪರಿಹಾರವನ್ನು ಕೊಡಿಸಬೇಕೆಂದು ಕೋರ್ಟ್ ಮೊರೆ ಹೋಗಿದ್ದಳು.

ಏನಿದು ಪ್ರಕರಣ?
ಡಿಸೆಂಬರ್ 9, 2016ರಂದು, ತುಮಕೂರು ನಿವಾಸಿ ಸ್ವಾತಿ ಎಸ್, 24, ಬೆಂಗಳೂರಿನಿಂದ ತುಮಕೂರಿಗೆ ತೆರಳಲು ಕರ್ನಾಟಕ ವೈಭವ ಬಸ್‌ನಲ್ಲಿ ತನ್ನ ನಾಲ್ವರು ಕುಟುಂಬ ಸದಸ್ಯರಿಗೆ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಮಾಡಿದ್ದರು. ಪ್ರಯಾಣವನ್ನು ಡಿಸೆಂಬರ್ 11 ರಂದು ನಿಗದಿಪಡಿಸಲಾಗಿತ್ತು ಮತ್ತು ಟಿಕೆಟ್‌ಗಳ ಬೆಲೆ 1,460 ರೂ ಆಗಿತ್ತು. ಆದರೆ ಕೆಎಸ್‌ಆರ್‌ಟಿಸಿ ಸ್ವಾತಿ ಮತ್ತು ಕುಟುಂಬಕ್ಕೆ ಡಿಸೆಂಬರ್ 11 ರಂದು ಬೆಳಗ್ಗೆ ಎಸ್‌ಎಂಎಸ್ ಮೂಲಕ ನಿಮ್ಮ ಬುಕ್ಕಿಂಗ್ ರದ್ದುಗೊಳಿಸಲಾಗಿದೆ ಎಂದು ಸಂದೇಶ ಕಳುಹಿಸಿತ್ತು.

ಕೆಎಸ್‌ಆರ್‌ಟಿಸಿಯ ಕೊನೆ ಕ್ಷಣದ ನಿರ್ಧಾರದಿಂದಾಗಿ ಸ್ವಾತಿ ಕುಟುಂಬ ಪರ್ಯಾಯ ಟಿಕೆಟ್‌ಗಳನ್ನು ಹುಡುಕಲು ಸಹ ವಿಫಲವಾಯಿತು. ನಂತರ ಹಲವು ಪ್ರಯತ್ನಗಳ ಬಳಿಕ ಅಂತಿಮವಾಗಿ ಖಾಸಗಿ ಬಸ್ ಟ್ರಾನ್ಸ್‌ಪೋರ್ಟರ್‌ನಲ್ಲಿ 2,200 ರೂ. ಬೆಲೆ ತೆತ್ತು ಟಿಕೆಟ್ ಖರೀದಿಸಿ ಕುಟುಂಬವು ಬೆಂಗಳೂರಿನಿಂದ ತುಮಕೂರು ತಲುಪಿತು ಮತ್ತು ಬಸ್ ನಿಲ್ದಾಣದಿಂದ ಆಟೋರಿಕ್ಷಾದಲ್ಲಿ ಮನೆಗೆ ಮರಳಲು ಬಹಳಷ್ಟು ತೊಂದರೆಗಳನ್ನು ಎದುರಿಸಿತು.

ಸಾರಿಗೆ ನಿಗಮದ ವಿರುದ್ಧ ಮೊಕದ್ದಮೆ ಹೂಡಲು ನಿರ್ಧರಿಸಿದ ಯುವತಿ
ಈ ಎಲ್ಲಾ ಅಡಚಣೆಗಳಿಂದ ಕುಪಿತಗೊಂಡ ಯುವತಿ, ಪ್ರಯಾಣದ ದಿನಾಂಕದಂದು ಏಕಾಏಕಿ ಬಸ್ ರದ್ದುಗೊಳಿಸಿದ್ದಕ್ಕಾಗಿ ಸಾರಿಗೆ ನಿಗಮದ ವಿರುದ್ಧ ಮೊಕದ್ದಮೆ ಹೂಡಲು ನಿರ್ಧರಿಸಿದಳು. ಟಿಕೆಟ್ ವೆಚ್ಚ ಮತ್ತು ಆಟೋರಿಕ್ಷಾ ದರದಲ್ಲಿನ ವ್ಯತ್ಯಾಸವನ್ನು ಕುಟುಂಬವು ಪಡೆಯಬೇಕು ಮತ್ತು ಉಂಟಾದ ತೊಂದರೆಗಾಗಿ ರೂ 37,000 ಪರಿಹಾರವನ್ನು ಕೊಡಿಸಬೇಕೆಂದು ಕೋರ್ಟ್ ಮೊರೆ ಹೋಗಿದ್ದಳು.

ಇದನ್ನೂ ಓದಿ: Murder Case: ಬೆಂಗಳೂರಿನ ಮಹಿಳೆ ಕೊಲೆ ಪ್ರಕರಣ! ಸಿನಿಮೀಯ ಶೈಲಿಯಲ್ಲಿ ಸಿಕ್ಕಿಬಿದ್ದ ದಂಪತಿ

2017ರಲ್ಲಿ ಕೆಎಸ್‌ಆರ್‌ಟಿಸಿ ಸೇವೆಯಲ್ಲಿ ಲೋಪವಿದೆ ಎಂದು ದೂರಿ ತುಮಕೂರಿನ ಜಿಲ್ಲಾ ಗ್ರಾಹಕರ ವೇದಿಕೆಗೆ ಮೊಟ್ಟಮೊದಲ ಬಾರಿಗೆ ಅರ್ಜಿ ಸಲ್ಲಿಸಿದಾಗ, ಪ್ರಕರಣವನ್ನು ವಜಾಗೊಳಿಸಲಾಗಿತ್ತು. ನಂತರ ರಾಜ್ಯ ಗ್ರಾಹಕರ ವೇದಿಕೆಗೆ ಮನವಿ ಸಲ್ಲಿಸಿದರು. ನಂತರ ಪ್ರಕರಣವನ್ನು ಕೈಗೆತ್ತಿಕೊಂಡ ಶಾಂತಿನಗರದಲ್ಲಿರುವ ಬೆಂಗಳೂರು ನಗರ 2ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಪ್ರಕರಣವನ್ನು ಶಿಫಾರಸು ಮಾಡಿತು.

‘ಕೆಎಸ್‌ಆರ್‌ಟಿಸಿ ಸೇವೆಗಳನ್ನು ಸ್ಥಗಿತಗೊಳಿಸಲು ನಿಯಮಗಳು ಅವಕಾಶ ನೀಡುತ್ತವೆ'
ತುಮಕೂರು ಮತ್ತು ಕೋಲಾರದ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳ ವಕೀಲರು ಬಸ್‌ನ ಬ್ರೇಕ್ ವೈಫಲ್ಯದಿಂದ ಆ ದಿನದಂದು ಅದರ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು ಎಂದು ಹೇಳಿದರು. ನಿಯಮಗಳ ಪ್ರಕಾರ, ಆನ್‌ಲೈನ್‌ನಲ್ಲಿ ಟಿಕೆಟ್ ಕಾಯ್ದಿರಿಸುವವರನ್ನು ಸೇರಿದಂತೆ ಸೇವೆಗಳನ್ನು ಸ್ಥಗಿತಗೊಳಿಸುವ ಮತ್ತು ಪ್ರಯಾಣಿಕರಿಗೆ ಮರುಪಾವತಿ ಮಾಡುವ ಹಕ್ಕನ್ನು ಕೆಎಸ್ಆರ್ಟಿಸಿ ಹೊಂದಿದೆ ಎಂದು ಅವರು ಹೇಳಿದರು. ದೂರುದಾರರ ಪ್ರಕರಣದಲ್ಲಿ, ಅದನ್ನು ನೀಡಲು ಸಾಗಣೆದಾರರು ಸಿದ್ಧರಿದ್ದರೂ ಯಾವುದೇ ಮರುಪಾವತಿಯನ್ನು ಕೇಳಲಾಗಿಲ್ಲ ಮತ್ತು ಆದ್ದರಿಂದ ಸೇವೆಯಲ್ಲಿ ಯಾವುದೇ ಕೊರತೆಯಿಲ್ಲ ಎಂದು ಅವರು ಹೇಳಿದರು.

ಯಾಂತ್ರಿಕ ಸಮಸ್ಯೆಯಿಂದಾಗಿ ಬಸ್ ಪ್ರಯಾಣ ರದ್ದು
ಬಸ್‌ನಲ್ಲಿನ ಯಾಂತ್ರಿಕ ಸಮಸ್ಯೆಯಿಂದಾಗಿ ಪ್ರಯಾಣವನ್ನು ರದ್ದುಗೊಳಿಸಿರುವುದರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಎಸ್‌ಆರ್‌ಟಿಸಿಯ ಕಡೆಯಿಂದ ಯಾವುದೇ ಲೋಪವಿಲ್ಲ ಎಂದು ನ್ಯಾಯಾಧೀಶರು ಗಮನಿಸಿದರು. ಆದರೆ, ರದ್ದತಿಯಿಂದಾಗಿ ಕುಟುಂಬವು ಸ್ವಲ್ಪ ತೊಂದರೆ ಅನುಭವಿಸಬೇಕಾಯಿತು ಮತ್ತು ಆದ್ದರಿಂದ ಇತ್ತೀಚಿಗೆ ಹೊರಡಿಸಿದ ಆದೇಶದಲ್ಲಿ ನ್ಯಾಯಾಧೀಶರು ಕೆಎಸ್‌ಆರ್‌ಟಿಸಿ ಜಿಎಂ ಮತ್ತು ತುಮಕೂರು ಮತ್ತು ಕೋಲಾರ ವಿಭಾಗೀಯ ನಿಯಂತ್ರಣಾಧಿಕಾರಿಗಳು ಜಂಟಿಯಾಗಿ ಬಸ್ ಟಿಕೆಟ್ ರದ್ದತಿಯ ಹಣವನ್ನು ದೂರುದಾರರಿಗೆ ಪಾವತಿಸಬೇಕು ಎಂದು ತೀರ್ಪು ನೀಡಿದರು.

ಇದನ್ನೂ ಓದಿ: Sri Lanka Economic Crisis: ಶ್ರೀಲಂಕಾದ ಜನರಿಗೆ ಸಹಾಯ ಮಾಡಲು ಈ ಚಹಾ ಅಂಗಡಿ ಮಾಲೀಕ ಮಾಡಿದ್ದೇನು ನೋಡಿ

45 ದಿನಗಳೊಳಗೆ ರೂ. 532 ಶುಲ್ಕವನ್ನು ದೂರದಾರರಾದ ಸ್ವಾತಿ ಕುಟುಂಬಕ್ಕೆ ನೀಡಬೇಕು, ಒಂದು ವೇಳೆ ಹಣ ಮರುಪಾವತಿಸಲು ವಿಫಲವಾದರೆ ವಾರ್ಷಿಕ 10% ಬಡ್ಡಿಯನ್ನು ನೀಡಬೇಕೆಂದು ಕೋರ್ಟ್ ಕೆಎಸ್‌ಆರ್‌ಟಿಸಿ ಪ್ರಧಾನ ವ್ಯವಸ್ಥಾಪಕರಿಗೆ ಆದೇಶ ನೀಡಿದೆ.
Published by:Ashwini Prabhu
First published: